Home
ಸುದ್ದಿಜಾಲ

ಪೊಲೈಟ್ ರಿಮೈಂಡರ್: ಮರೆಗುಳಿ ವ್ಯಕ್ತಿಗಳಿಗೆ ಸೂಕ್ತ ಮದ್ದು ಈ ಅಪ್ಲಿಕೇಶನ್

By Shwetha

ಮರೆತು ಹೋಗುವ ಅಭ್ಯಾಸ ಉಳ್ಳವರಿಗೆ ವರದಾಯಕವಾಗಿ ಪೊಲೈಟ್ ರಿಮೈಂಡರ್ ಅಪ್ಲಿಕೇಶನ್ ಬಿಡುಗಡೆಯಾಗಿದ್ದು ಮರೆಯುವ ಚಾಳಿ ಇದ್ದವರು ಈ ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ಕೆಲಸವನ್ನು ಇನ್ನಷ್ಟು ಸರಳ ಮತ್ತು ವೇಗವಾಗಿಸಬಹುದು. ಈ ಅಪ್ಲಿಕೇಶನ್‌ನಲ್ಲಿ ನಿಮ್ಮೆಲ್ಲಾ ಫಾಲೋ ಅಪ್ಸ್‌ಗಳನ್ನು ಇರಿಸಿದರೆ ಸಾಕು ಇದು ಸ್ವಯಂಚಾಲಿತವಾಗಿ ಎಸ್‌ಎಮ್‌ಎಸ್ ಪಠ್ಯವನ್ನು ಕಳುಹಿಸಿ ಅವರಿಗೆ ಸಂದೇಶವನ್ನು ವಿತರಿಸುತ್ತದೆ.

ಪೊಲೈಟ್ ರಿಮೈಂಡರ್: ಮರೆಗುಳಿ ವ್ಯಕ್ತಿಗಳಿಗೆ ಸೂಕ್ತ ಮದ್ದು ಈ ಅಪ್ಲಿಕೇಶನ್

ವ್ಯವಹಾರಸ್ಥರು ಮತ್ತು ವೈಯಕ್ತಿಕ ಬಳಕೆದಾರರು ಈ ಹೊಸ ಅಪ್ಲಿಕೇಶನ್‌ನ ಪ್ರಯೋಜವನ್ನು ಪಡೆದುಕೊಳ್ಳಬಹುದಾಗಿದೆ. ಸ್ಯಾಮ್ ಡೇವಿಸ್ ಹೆಸರಿನ ವ್ಯವಹಾರಸ್ಥರ ಪ್ರಕಾರ, ನನ್ನ ತಂಡದಿಂದ ವಾರದ ವರದಿ ಪಡೆದುಕೊಳ್ಳುವುದು ಮೊದಲೆಲ್ಲಾ ಕಷ್ಟಾಸಾಧ್ಯವಾಗಿತ್ತು ಆದರೆ ಇದೀಗ ಪ್ರತೀ ಶುಕ್ರವಾರ ಬೆಳಗ್ಗೆ ನನ್ನ ಮೊಬೈಲ್ ಸ್ವಯಂಚಾಲಿತವಾಗಿ ಎಸ್‌ಎಮ್‌ಎಸ್ ಪಠ್ಯವನ್ನು ಕಳುಹಿಸುತ್ತದೆ ಮತ್ತು ತಂಡದ ಸದಸ್ಯರಲ್ಲಿ ತಮ್ಮ ವಾರದ ವರದಿಯನ್ನು ಸಲ್ಲಿಸುವಂತೆ ಕೋರುತ್ತದೆ. ಈ ರಿಮೈಂಡರ್ ಅಪ್ಲಿಕೇಶನ್ ನಿಜಕ್ಕೂ ಅಮೋಘವಾಗಿ ಕಾರ್ಯನಿರ್ವಹಿಸುತ್ತಿದೆ.

ಪೊಲೈಟ್ ರಿಮೈಂಡರ್: ಮರೆಗುಳಿ ವ್ಯಕ್ತಿಗಳಿಗೆ ಸೂಕ್ತ ಮದ್ದು ಈ ಅಪ್ಲಿಕೇಶನ್

ಸರಿಯಾದ ಸಮಯಕ್ಕೆ ನಿಮ್ಮ ಕೆಲಸವನ್ನು ನೆನಪಿಸುವ ಈ ಅಪ್ಲಿಕೇಶನ್ ವಾರದ ಮಾಸಿಕ ಮತ್ತು ವಾರ್ಷಿಕವಾಗಿ ರಿಮೈಂಡರ್ ಹೊಂದಿಸಬಹುದು. ಇತರರಿಗೆ ಮಾತ್ರವಲ್ಲದೆ ನಿಮ್ಮಷ್ಟಕ್ಕೇ ಇದರಲ್ಲಿ ರಿಮೈಂಡರ್ ಅನ್ನು ಹೊಂದಿಸಬಹುದಾಗಿದೆ. ಈ ಉಚಿತ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು www.politereminder.com ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಪೊಲೈಟ್ ರಿಮೈಂಡರ್ ಅಪ್ಲಿಕೇಶನ್ ಅಕ್ಮಿನ್ ತಂತ್ರಜ್ಞಾನದಿಂದ ಬಂದಿರುವಂಥದ್ದಾಗಿದೆ. ಇದರ ಕ್ಲೈಂಟ್‌ಗಳು ಏರ್‌ಟೆಲ್, ಎಮ್‌ಟಿಎಸ್, ವೊಡಾಫೋನ್ ಅನ್ನು ಒಳಗೊಂಡಿದೆ.

Best Mobiles in India

English summary
You can now simply put all your follow-ups in the Polite Reminder App and the app automatically sends SMS text messages to them at the right time.This new app is well received by both business executives and personal users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+