ಪೂರ್ವಿಕಾ ಮೊಬೈಲ್ಸ್ನಿಂದ 5 ಕೋಟಿ ರೂ. ಮೌಲ್ಯದ ಗಿಫ್ಟ್!..ಖರೀದಿಗೆ ಇದು ಬೆಸ್ಟ್ ಟೈಮ್!!
ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಮೊಬೈಲ್ ರಿಟೇಲ್ ಸಂಸ್ಥೆಯಾದ 'ಪೂರ್ವಿಕಾ ಮೊಬೈಲ್ಸ್' ಸಂಸ್ಥೆ ದೀಪಾವಳಿ ಸಂಭ್ರಮದಲ್ಲಿ ಗ್ರಾಹಕರಿಗೆ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ. ನಮ್ಮ ಮನೆ ದೀಪಾವಳಿ - ಸ್ಲೋಗನ್ ಕಂಟೆಸ್ಟ್ ಆಯೋಜಿಸಿರುವ ಪೂರ್ವಿಕಾ ಮೊಬೈಲ್ಸ್, ತನ್ನಲ್ಲಿ ಮೊಬೈಲ್ ಖರೀದಿಸಿದರೆ ಕನಸಿನ ಕಾರು ಬೈಕ್ಗಳನ್ನು ಮನೆಗೆ ಒಯ್ಯುವ ಅವಕಾಶ ಒದಗಿಸಿದೆ.
ಹಬ್ಬದ ಪ್ರಯುಕ್ತ ದೇಶದ ಅತಿದೊಡ್ಡ ಮೊಬೈಲ್ ರಿಟೇಲರ್ನಲ್ಲಿ ಪ್ರತಿ ಖರೀದಿಗೂ ಗ್ರಾಹಕರಿಗೆ ಗಿಫ್ಟ್ ಖಚಿತವಾಗಿದ್ದು, ಒಟ್ಟು 5 ಕೋಟಿ ರೂ. ಮೌಲ್ಯದ ಉಡುಗೊರೆಗಳು ಗ್ರಾಹಕರಿಗೆ ದೊರೆಯಲಿದೆ. ಈಗಾಗಲೇ ಈ ಅದ್ಧೂರಿ ಕೊಡುಗೆ ಪೂರ್ವಿಕಾ ಮೊಬೈಲ್ಸ್ ಮಳಿಗೆಯಲ್ಲಿ ಲಭ್ಯವಾಗುತ್ತಿದ್ದು, ನ.7ರವರೆಗೂ ಮುಂದುವರಿಯಲಿದೆ ಎಂದು ಪೂರ್ವಿಕ ಮೊಬೈಲ್ಸ್ ತಿಳಿಸಿದೆ.

ಕಳೆದ 13 ವರ್ಷಗಳಿಂದ ಮೊಬೈಲ್ ಮಾರಾಟ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರವ ಪೂರ್ವಿಕಾ ಮೊಬೈಲ್ಸ್ ಸಂಸ್ಥೆಯು ಈ ದೀಪಾವಳಿ ಕೊಡುಗೆಯಾಗಿ ಘೋಷಿಸಿರುವ ಆಕರ್ಷಕ ಕೊಡುಗೆಗಳು ಗ್ರಾಹಕರ ಕಣ್ಣು ಕುಕ್ಕುತ್ತಿವೆ. ಹಾಗಾದರೆ, ಪೂರ್ವಿಕಾ ಮೊಬೈಲ್ಸ್ ಘೋಷಿಸಿರುವ ಕೊಡುಗೆಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯೋಣ.

ಖರೀದಿಗೆ ಖಚಿತ ಉಡುಗೊರೆ
ಪೂರ್ವಿಕಾ ಮಳಿಗೆಯಲ್ಲಿ ಪ್ರತಿ ಖರೀದಿ ಮೇಲೂ ಗ್ರಾಹಕರಿಗೆ ಉಡುಗೊರೆ ಖಚಿತ ಎಂದು ಪೂರ್ವಿಕಾ ಮೊಬೈಲ್ಸ್ ಸಂಸ್ಥೆ ತಿಳಿಸಿದೆ. ಕುಕ್ಕರ್, ಮಿಕ್ಸರ್ ಗ್ರೈಂಡರ್, ಟೇಬಲ್ ಫ್ಯಾನ್, ಇಂಡಕ್ಷನ್ ಸ್ಟೌ, ಬ್ಲೂಟೂತ್, ಸ್ಪೀಕರ್, ಹೆಡ್ಫೋನ್, ಟ್ರಾವೆಲ್ ಬ್ಯಾಗ್, ಲಂಚ್ ಬಾಕ್ಸ್, ಬೆಳ್ಳಿ ನಾಣ್ಯಗಳು ಉಡುಗೊರೆಯಾಗಿ ಗ್ರಾಹಕರಿಗೆ ದೊರೆಯುತ್ತಿದೆ.ಹೀಗಾಗಿ ಅತಿ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಪೂರ್ವಿಕಾ ಯಶಸ್ವಿಯಾಗಿದೆ.

ಅದೃಷ್ಟ ಶಾಲಿ ಗ್ರಾಹಕರಿಗೆ ರಾಯಲ್ ಎನ್ಫೀಲ್ಡ್
ಪೂರ್ವಿಕಾ ಮೊಬೈಲ್ಸ್ ಪ್ರತಿ ವಾರ 6 ಅದೃಷ್ಟ ಶಾಲಿ ಗ್ರಾಹಕರಿಗೆ ರಾಯಲ್ ಎನ್ಫೀಲ್ಡ್ ಅಥವಾ ಆಕ್ಟಿವಾ ಉಡುಗೊರೆಯಾಗಿ ನೀಡಲಿದೆ. . ದಿನ ನಿತ್ಯದ ಸ್ಪರ್ಧೆಯಲ್ಲಿ ಒಬ್ಬ ಅದೃಷ್ಟಶಾಲಿ ಗ್ರಾಹಕನಿಗೆ 32 ಅಂಗುಲದ ಟಿವಿ ಬಹುಮಾನವಾಗಿ ಸಿಕ್ಕಲಿದೆ. ಇಷ್ಟು ಮಾತ್ರ ಅಲ್ಲದೇ, ಪ್ರತಿ ಗಂಟೆಯ ಅದೃಷ್ಟಶಾಲಿ ಗ್ರಾಹಕರಿಗೆ ಚಿನ್ನದ ನಾಣ್ಯ, ಹೋಂ ಥಿಯೇಟರ್, ಕ್ಯಾಮರಾ ಮೊಬೈಲ್, ಬ್ಯಾಕ್ ಬಾಗ್, ಬ್ಲೂಟೂತ್ ಸ್ಪೀಕರ್, ಬ್ಲೂಟೂತ್ ಹೆಡ್ಸೆಟ್ ಪೈಕಿ ಒಂದು ಯಾವುದಾದರೂ ಒಂದನ್ನು ಬಹುಮಾನವಾಗಿ ಪಡೆಯಲಿದ್ದಾರೆ.

ಲಾಭದಾಯಕ ಆಫರ್ಗಳು!
ಇಷ್ಟು ಮಾತ್ರ ಅಲ್ಲ ದೀಪಾವಳಿ ಕೊಡುಗೆಯಾಗಿ ಗ್ರಾಹಕರಿಗೆ ಲಾಭದಾಯಕ ಆಫರ್‌ಗಳನ್ನು ಘೋಷಿಸಿದೆ. ಆಯ್ದ ಮೊಬೈಲ್ಗಳಿಗೆ ಯಾವುದೇ ಆರಂಭಿಕ ಹಣ ನೀಡದೇ(0% ಡೌನ್ಪೇಮೆಂಟ್) ಇಎಂಐ, 15 ಸಾವಿರ ರೂ. ಹೆಚ್ಚಿನ ಬೆಲೆಯ ಮೊಬೈಲ್ಗಳಿಗೆ 1500 ರೂ. ಕ್ಯಾಶ್ ಬ್ಯಾಕ್, 1999 ರೂ.ಗಳಿಗೆ ಮೂರು ಬೇಸಿಕ್ ಮೊಬೈಲ್ ಫೋನ್‌ಗಳು (ಕಾಂಬೋ ಆಫರ್), ಗರಿಷ್ಠ ಶೇ.50 ರಿಯಾಯಿತಿ, ಬೈ ಒನ್ ಗೆಟ್ ಒನ್ ಆಫರ್ ಹಾಗೂ ಎಕ್ಸ್ಚೇಂಜ್ ಆಫರ್ಗಳೂ ಇರಲಿದೆ.

ಒಂದು ಕೊಂಡರೆ ಒಂದು ಉಚಿತ
ಪೂರ್ವಿಕಾ ಮೊಬೈಲ್ಸ್ನಲ್ಲಿ ಗ್ರಾಹಕರಿಗೆ ಪೇಟಿಎಂನಲ್ಲಿ ಶೇ.20 ಕ್ಯಾಶ್ಬ್ಯಾಕ್, ಒಂದು ಕೊಂಡರೆ ಒಂದು ಉಚಿತ, ಶೇ.60ರವರೆಗೆ ರಿಯಾಯಿತಿ ನೀಡಿರುವ ಆಫರ್‌ಗಳನ್ನು ನೀಡಿದೆ. ಕೆಲ ಮೊಬೈಲ್ ಮಾಡೆಲ್ ಮೇಲೆ ಗರಿಷ್ಠ 6 ಸಾವಿರ ರೂ.ರಿಯಾಯಿತಿ, ಎಕ್ಸ್ಚೇಂಜ್ ಸೌಲಭ್ಯ, ಒನ್ ಟೈಂ ಸ್ಕ್ರೀನ್ ರಿಪ್ಲೇಸ್ವೆುಂಟ್ ಕೊಡುಗೆಯೂ ಲಭ್ಯವಿದ್ದು, 10 ಸಾವಿರ ರೂ.ಗಿಂತ ಅಧಿಕ ಮೌಲ್ಯದ ಸ್ಮಾರ್ಟ್ಫೋನ್ ಖರೀದಿಸಿದ ಗ್ರಾಹಕರುಪೂರ್ವಿಕಾ ಆಯೋಜಿಸಿರುವ ಸ್ಲೋಗನ್ ಸ್ಪರ್ಧೆಯಲ್ಲೂ ಭಾಗವಹಿಸಬಹುದಾಗಿದೆ.

ಕಡಿಮೆ ಬಡ್ಡಿ ದರದ ಇಎಂಐ ಸೌಲಭ್ಯ
ಬಜಾಜ್ ಕ್ಯಾಪಿಟಲ್, ಟಿವಿಎಸ್, ಎಚ್ಡಿಬಿ, ಎಚ್ಡಿಎಫ್ಸಿ, ಹೋಮ್ ಕ್ರೆಡಿಟ್ ಮತ್ತು ಐಸಿಐಸಿಐ ಕಾರ್ಡ್ ಮೇಲೆ ಶೂನ್ಯ ಡೌನ್ ಪೇಮೆಂಟ್ ಮತ್ತು ಸುಲಭ ಕಂತು ಪಾವತಿ ಸೌಲಭವಿದೆ. ಎಚ್ಡಿಎಫ್ಸಿ, ಐಸಿಐಸಿಐ, ಆಕ್ಸಿಸ್, ಕೋಟಕ್, ಎಸ್ಸಿಬಿ, ಎಸ್ಬಿಐ, ಏಮೆಕ್ಸ್ ಮತ್ತು ಸಿಟಿ ಕಾರ್ಡ್ ಮೇಲೆ ಕಡಿಮೆ ಬಡ್ಡಿ ದರದ ಇಎಂಐ ಸೌಲಭ್ಯ, ಎಲ್ಲ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ ಸುಲಭ ಇಎಂಐ ಸೌಲಭ್ಯವನ್ನು ಪೂರ್ವಿಕ ಮೊಬೈಲ್ಸ್ ಒದಗಿಸಿದೆ.


Click it and Unblock the Notifications








