ನಿಮ್ಮ ಮೊಬೈಲ್‌ನಲ್ಲಿ ಈ ರೀತಿಯ 'ಭಯಾನಕ ಆಪ್‌' ಇದ್ದರೆ ಈಗಲೇ ಡಿಲೀಟ್ ಮಾಡಿ!!

|

ಗೂಗಲ್‌ ಮತ್ತು ಆಪಲ್‌ಗೂ ಸಹ ನಿಯಂತ್ರಿಸಲು ಸಾಧ್ಯವಾಗದ ಭಯಾನಕ ಸಮಸ್ಯೆ ಎಂದರೆ, ದುರುದ್ದೇಶವನ್ನು ಹೊಂದಿರುವ ಆಪ್‌ಗಳು ಯಾವುವು ಎಂದು ಗುರುತಿಸಲು ಸಾಧ್ಯವಾಗುದೇ ಇರುವುದು ಮತ್ತು ನೋಡಲು ಉಪಕಾರ ಮಾಡುವಂತೆ ಕಂಡುಬರುವ ಆಪ್‌ಗಳು ಕೂಡ ಜನರನ್ನು ಸುಲಿಗೆ ಮಾಡುತ್ತಿರುವುದನ್ನು ಈ ಎರಡೂ ಕಂಪೆನಿಗಳು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಇದಕ್ಕೆ ಉದಾಹರಣೆ ಎಂದರೆ, ಕೆಲವು ಜನಪ್ರಿಯ ಸ್ಮಾರ್ಟ್‌ಪೋನ್ ಅಪ್ಲಿಕೇಶನ್‌ಗಳು ರಹಸ್ಯವಾಗಿ ಮೊಬೈಲ್‌ ಚಟುವಟಿಕೆಯನ್ನು ಸ್ಕ್ರೀನ್‌ಶಾಟ್ ತೆಗೆದುಕೊಂಡು ಅವುಗಳನ್ನು ಮೂರನೇ ವ್ಯಕ್ತಿಗಳಿಗೆ ಕಳುಹಿಸುತ್ತಿವೆ ಎಂದು ಒಂದು ಅಧ್ಯಯನವು ಕಂಡುಹಿಡಿದಿದೆ. ಇದರಿಂದ ಬಳಕೆದಾರರ ವೈಯಕ್ಯಿಕ ಮಾಹಿತಿಗಳೆಲ್ಲವೂ ಖದೀಮರ ಪಾಲಾಗುತ್ತಿವೆ ಎಂದು ಅಧ್ಯಯನ ಎಚ್ಚರಿಸಿದೆ.

ನಿಮ್ಮ ಮೊಬೈಲ್‌ನಲ್ಲಿ ಈ ರೀತಿಯ 'ಭಯಾನಕ ಆಪ್‌' ಇದ್ದರೆ ಈಗಲೇ ಡಿಲೀಟ್ ಮಾಡಿ!!

ಹೌದು, ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅರಿವಿಲ್ಲದಂತೆಯೇ, ಅವರ ಸ್ಮಾರ್ಟ್‌ಫೋನ್ ಪರದೆಯ ಮೇಲಿನ ಎಲ್ಲಾ ಚಟುವಟಿಕೆಗಳನ್ನು ದಾಖಲಿಸಿಕೊಳ್ಳುವ ಕುತಂತ್ರವನ್ನು ಈ ಆಪ್‌ಗಳು ಹೊಂದಿವೆಯಂತೆ. ಹಾಗಾದರೆ, ಏನಿದು ಶಾಕಿಂಗ್ ಮಾಹಿತಿ?, ನಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿರುವ ಆಪ್‌ಗಳು ಯಾವುವು? ಎಂಬ ಪೂರ್ಣ ಮಾಹಿತಯನ್ನು ಮುಂದೆ ತಿಳಿಯಿರಿ.

ಏನಿದು ಶಾಕಿಂಗ್ ವಿಷಯ?

ಏನಿದು ಶಾಕಿಂಗ್ ವಿಷಯ?

'ಸಾವಿರಾರು ಜನಪ್ರಿಯ ಅಪ್ಲಿಕೇಶನ್‌ಗಳು ನಿಮ್ಮ ಸ್ಮಾರ್ಟ್‌ಫೋನ್ ಪರದೆಯನ್ನು ಮತ್ತು ನೀವು ಟೈಪ್ ಮಾಡಿದ ಯಾವುದನ್ನಾದರೂ ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ನಾವು ಕಂಡುಕೊಂಡಿದ್ದೇವೆ' ಎಂದು ಅಮೆರಿಕಾದ ನಾರ್ತ್ ಈಸ್ಟನ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡೇವಿಡ್ ಚಫನ್ಸ್ ಅವರು ಭಯಾನಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಅಧ್ಯಯನ ಹೇಳಿದ್ದೇನು?

ಅಧ್ಯಯನ ಹೇಳಿದ್ದೇನು?

ಬಳಕೆದಾರ ಹೆಸರುಗಳು, ಪಾಸ್‌ವರ್ಡ್‌ಗಳು, ಕ್ರೆಡಿಟ್ ಕಾರ್ಡ್ ಸಂಖ್ಯೆಗಳನ್ನು ಆಪ್ ಸೃಷ್ಟಿಕರ್ತನಿಗೆ ಕಳುಹಿಸಿಕೊಡುತ್ತಿರುವ ನೂರಾರು ಅಪ್ಲಿಕೇಶನ್‌ಗಳು ವಾಸ್ತವವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಬಳಕೆಯಲ್ಲಿರುವ 17,000 ಅಪ್ಲಿಕೇಶನ್‌ಳಲ್ಲಿ 9,000 ಆಪ್‌ಗಳೂ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅಧ್ಯಯನ ಎಚ್ಚರಿಸಿದೆ.

ಸಹಾಯದ ಸೋಗಿನಲ್ಲಿ ಇರುತ್ತವೆ!!

ಸಹಾಯದ ಸೋಗಿನಲ್ಲಿ ಇರುತ್ತವೆ!!

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಹಾಯ ನೀಡುವಂತಹ ಉದ್ದೇಶವನ್ನು ಮಾತ್ರ ತೋರಿಸಿಕೊಳ್ಳುವ ಈ ಅಪ್‌ಗಳು ವಾಸ್ತವವಾಗಿ ದುರುದ್ದೇಶವನ್ನು ಹೊಂದಿರುತ್ತವೆ. ಬಳಕೆದಾರರಿಗೆ ಹೆಚ್ಚು ಉಪಯೋಗವಾಗುವಂತಹ ಸೇವೆಗಳನ್ನು ನಿಡುತ್ತಲೇ, ಅವರಿಗೆ ತಿಳಿಯದಂತೆಯೇ ಅವರ ಹೆಸರುಗಳು, ಪಾಸ್‌ವರ್ಡ್‌ಗಳು, ಕ್ರೆಡಿಟ್ ಕಾರ್ಡ್ ಸಂಖ್ಯೆಗಳನ್ನು ಕದ್ದು ಮಾರಿಕೊಳ್ಳುತ್ತಿವೆ.

ಹೇಗೆ ಸೇರಿಕೊಳ್ಳುತ್ತವೆ ಆಪ್‌ಗಳು?

ಹೇಗೆ ಸೇರಿಕೊಳ್ಳುತ್ತವೆ ಆಪ್‌ಗಳು?

ತನ್ನ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಜಾಹಿರಾತನ್ನು ನೀಡುವ ಆಪ್‌ ಸೃಷ್ಟಿಕರ್ತರು, ಆ ಆಪ್‌ನಿಂದ ಗ್ರಾಹಕರಿಗೆ ಆಗುವ ಲಾಭಗಳ ಬಗ್ಗೆ ತಿಳಿಸುತ್ತಾರೆ. ಫಿಟ್‌ನೆಸ್, ಬ್ಯಾಟರಿ ಬಾಳಿಕೆ, ಡಯೆಟ್ ಸಲಹೆ, ವಾಲ್‌ಪೇಪರ್, ಗೇಮ್ಸ್ ಹೀಗೆ ಹಲವು ರೂಪದಲ್ಲಿ ಆಪ್‌ಗಳು ಬಳಕೆದಾರರ ಮೊಬೈಲ್ ಒಳಗೆ ಸೇರಿ ಅವರಿಂದ ಕೆಲವು ಒಪ್ಪಿಗೆಗಳನ್ನು ಪಡೆಯುತ್ತವೆ.

ಮಾಹಿತಿಯನ್ನು ಕದಿಯುತ್ತಿರುವ ಆಪ್‌?

ಮಾಹಿತಿಯನ್ನು ಕದಿಯುತ್ತಿರುವ ಆಪ್‌?

ವೇಗದ ಆಹಾರ ವಿತರಣಾ ಸೇವೆ ನೀಡುವ ಸಲುವಾರಿ ರೂಪಿತವಾಗಿರುವ ಗೂ ಪಫ್ 'GoPuff'ಮತ್ತು ಲಿಪಿಝಾನ್ (Lipizzan) ಎಂಬ ಅಪ್ಲಿಕೇಶನ್‌ಗಳು ಮೊಬೈಲ್ ಸ್ಕ್ರೀನ್ ಅನ್ನು ರೆಕಾರ್ಡ್ ಮಾಡಿಕೊಂಡು ತನ್ನ ಸೃಷ್ಟಿಕರ್ತರಿಗೆ ಕಳುಹಿಸುತ್ತಿದ್ದವು ಎಂದು ಅಧ್ಯಯನ ತಿಳಿಸಿದೆ. ಇದೇ ರೀತಿಯ ಹಲವು ಆಪ್‌ಗಳ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿಯನ್ನು ಹೊರಹಾಕುವುದಾಗಿ ಅಧ್ಯಯನ ತಿಳಿಸಿದೆ.

ನಾವು ಎಚ್ಚರಿಕೆ ಹೊಂದಿರಬೇಕು!

ನಾವು ಎಚ್ಚರಿಕೆ ಹೊಂದಿರಬೇಕು!

ಯಾವುದೇ ಒಂದು ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮುನ್ನ ಆ ಆಪ್‌ನ ಪೂರ್ವಾಪರ ಮಾಹಿತಿಯನ್ನು ತಿಳಿದುಕೊಳ್ಳಿ. ಜನಪ್ರಿಯವಲ್ಲದ ಆಪ್‌ಗಳ ಬಗ್ಗೆ ಎಚ್ಚರಿಕೆ ಇರಲಿ. ಒಂದು ವೇಳೆ ಆಪ್‌ಗಳನ್ನು ಡೌನ್‌ಲೋಡ್ ಮಾಡಿದರೂ ಸಹ ಅವುಗಳು ಕೇಳುವ ಒಪ್ಪಿಗೆ ನೀಡಬೇಡಿ. ಇನ್ನು ಸಿಕ್ಕಸಿಕ್ಕ ಆಪ್‌ಗಳನ್ನು ಡೌನ್‌ಲೋಡ್ ಮಾಡುವ ಮುನ್ನ ಎಚ್ಚರವಿರಲಿ.

ವಿಶ್ವದ ಅತಿದೊಡ್ಡ ಮೊಬೈಲ್ ತಯಾರಿಕಾ ಘಟಕ ಏನೆಲ್ಲಾ ವಿಶೇಷತೆ ಹೊಂದಿದೆ ಗೊತ್ತಾ..!

ವಿಶ್ವದ ಅತಿದೊಡ್ಡ ಮೊಬೈಲ್ ತಯಾರಿಕಾ ಘಟಕ ಏನೆಲ್ಲಾ ವಿಶೇಷತೆ ಹೊಂದಿದೆ ಗೊತ್ತಾ..!

ವಿಶ್ವದಲ್ಲಿಯೇ ಅತಿಹೆಚ್ಚು ಮೊಬೈಲ್ ಬಳಸುವವರ ಸಂಖ್ಯೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಮೊಬೈಲ್ ಅಥವಾ ಗ್ಯಾಜೆಟ್ ತಯಾರಕರಿಗೆ ಭಾರತವೂ ಬಹುದೊಡ್ಡ ಮಾರುಕಟ್ಟೆ ಕೂಡ ಆಗಿದೆ. ಆದ್ದರಿಂದ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಮತ್ತು ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಲೆ ಇರುತ್ತದೆ. ಹೀಗ್ಯಾಕಪ್ಪ ಈ ಮಾತುಗಳು ಎಂದರೆ, ಇದೆ ಜಗತ್ತಿನಲ್ಲಿಯೇ ಅತಿದೊಡ್ಡ್ ಮೊಬೈಲ್ ಕಾರ್ಖಾನೆ ಭಾರತದಲ್ಲಿ ಸ್ಥಾಪನೆಯಾಗಿದೆ.

ಹೌದು, ರಾಷ್ಟ್ರ ರಾಜಧಾನಿ ದೆಹಲಿಯಿಂದ ಅಣತಿ ದೂರದಲ್ಲಿರುವ ಕೈಗಾರಿಕಾ ಪ್ರದೇಶ ನೋಯ್ಡಾದ ಸೆಕ್ಟರ್ 81ರಲ್ಲಿ ತಲೆಎತ್ತಿರುವ ಸ್ಯಾಮ್‌ಸಂಗ್‌ನ ಮೊಬೈಲ್ ತಯಾರಿಕಾ ಘಟಕ ವಿಶ್ವದಲ್ಲಿಯೇ ಅತಿ ದೊಡ್ಡ ತಯಾರಿಕಾ ಘಟಕ ಎನಿಸಿಕೊಂಡಿದೆ. ಸೋಮವಾರ ಸಂಜೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷ ಮೋನ್‌ ಜೇ ನೋಯ್ಡಾದಲ್ಲಿನ ತಯಾರಿಕಾ ಘಟಕಕ್ಕೆ ಜಂಟಿಯಾಗಿ ಚಾಲನೆ ನೀಡಿದರು. ಈ ಸ್ಯಾಮ್‌ಸಂಗ್ ಘಟಕ ಹಲವು ಅಂಶಗಳಿಂದ ಜಗತ್ತನ್ನು ಸೆಳೆಯುತ್ತಿದೆ.

ಮೇಕ್‌ ಇನ್‌ ಇಂಡಿಯಾಕ್ಕೆ ವೇಗ

ಮೇಕ್‌ ಇನ್‌ ಇಂಡಿಯಾಕ್ಕೆ ವೇಗ

ಸ್ಯಾಮ್‌ಸಂಗ್‌ನ ಈ ಮೊಬೈಲ್ ಘಟಕ ಜನರಿಗೆ ಶಕ್ತಿ ತುಂಬಿರುವುದಷ್ಟೇ ಅಲ್ಲ, ಮೇಕ್‌ ಇನ್ ಇಂಡಿಯಾ ಯೋಜನೆಗೆ ವೇಗ ದಕ್ಕಿಸಿಕೊಟ್ಟಿದ್ದು, ಉತ್ತರ ಪ್ರದೇಶ ಹಾಗೂ ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.

ನೋಯ್ಡಾ ಮೊಬೈಲ್ ತಯಾರಿಕಾ ಘಟಕ

ನೋಯ್ಡಾ ಮೊಬೈಲ್ ತಯಾರಿಕಾ ಘಟಕ

ನೋಯ್ಡಾದ ಸೆಕ್ಟರ್ 81ರಲ್ಲಿ ಸ್ಥಾಪನೆಯಾಗಿರುವ ಸ್ಯಾಮ್‌ಸಂಗ್ ಮೊಬೈಲ್ ತಯಾರಿಕಾ ಘಟಕ 35 ಎಕರೆ ಭೂಮಿ ವಿಸ್ತೀರ್ಣ ಹೊಂದಿದೆ. 1995 ರಲ್ಲಿಯೇ ನೋಯ್ಡಾದಲ್ಲಿ ಸ್ಯಾಮ್‌ಸಂಗ್ ತನ್ನ ತಯಾರಿಕೆ ಘಟಕವನ್ನು ಪ್ರಾರಂಭಿಸಿತ್ತು. 2017ರ ಜೂನ್‌ನಲ್ಲಿ ಈ ಘಟಕವನ್ನು ವಿಸ್ತರಣೆ ಮಾಡಲು ಸ್ಯಾಮ್‌ಸಂಗ್ ನಿರ್ಧರಿಸಿ, ಸುಮಾರು 4,915 ಕೋಟಿ ರೂ. ಬಂಡವಾಳ ಹೂಡಿ ಉತ್ಪಾದನೆಯನ್ನು ದ್ವಿಗುಣಗೊಳಿಸುವತ್ತ ಹೆಜ್ಜೆ ಹಾಕಿತು.

ಉತ್ಪಾದನೆ ದ್ವಿಗುಣ

ಉತ್ಪಾದನೆ ದ್ವಿಗುಣ

ಸ್ಯಾಮ್‌ಸಂಗ್‌ನ ಉತ್ಪಾದನಾ ಘಟಕದ ಉತ್ಪಾದನೆ ಪ್ರಮಾಣ ಇನ್ಮುಂದೆ ದ್ವಿಗುಣಗೊಳ್ಳಲಿದೆ. ಭಾರತದಲ್ಲಿ 67 ಮಿಲಿಯನ್ ಇದ್ದ ಮೊಬೈಲ್ ತನ್ನ ಉತ್ಪಾದನೆಯನ್ನು 120 ಮಿಲಿಯನ್‌ಗೆ ದ್ವಿಗುಣಗೊಳಿಸುತ್ತಿದೆ. ಇಲ್ಲಿ ಉತ್ಪಾದನೆಯಾಗುವ ಶೇ. 70ರಷ್ಟು ಮೊಬೈಲ್‌ಗಳು ದೇಶಿಯ ಮಾರುಕಟ್ಟೆಯಲ್ಲಿಯೇ ಮಾರಾಟವಾಗಲಿವೆ. ಇಲ್ಲಿ ಕೇವಲ ಮೊಬೈಲ್ ಅಷ್ಟೇ ಅಲ್ಲದೇ ಸ್ಯಾಮ್‌ಸಂಗ್ ಕಂಪನಿಯ ಇತರೆ ಎಲೆಕ್ಟ್ರಾನಿಕ್ ವಸ್ತುಗಳಾದ ಟಿವಿ, ಫ್ರಿಡ್ಜ್ ಮತ್ತು ಏರ್ ಕಂಡೀಷನರ್‌ಗಳಂತಹ ಬೇರೆ ಉತ್ಪನ್ನಗಳು ಸಹ ನಿರ್ಮಾಣವಾಗುತ್ತವೆ. ಅವುಗಳ ಉತ್ಪಾದನೆ ಪ್ರಮಾಣದಲ್ಲಿಯೂ ಏರಿಕೆ ಕಾಣಲಿದೆ.

70 ಸಾವಿರ ಉದ್ಯೋಗಾವಕಾಶ

70 ಸಾವಿರ ಉದ್ಯೋಗಾವಕಾಶ

ಸ್ಯಾಮ್‌ಸಂಗ್ ನೋಯ್ಡಾದಲ್ಲಿ ಸ್ಥಾಪಿಸಿರುವ ಬೃಹತ್ ಮೊಬೈಲ್ ತಯಾರಿಕಾ ಘಟಕದಿಂದ 70 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಉದ್ಯೋಗಾಂಕ್ಷಿಗಳಿಗೆ ಬಂಪರ್ ಆಫರ್‌ಗಳು ಬರುವ ಸಾಧ್ಯತೆ ಇದೆ.

ಸ್ಯಾಮ್‌ಸಂಗ್‌ನ ಭಾರತದ ಹಾದಿ

ಸ್ಯಾಮ್‌ಸಂಗ್‌ನ ಭಾರತದ ಹಾದಿ

1995ರಲ್ಲಿ ನೋಯ್ಡಾದಲ್ಲಿ ಸ್ಯಾಮ್‌ಸಂಗ್ ಘಟಕ ಸ್ಥಾಪಿಸಲಾಯಿತು. ಈ ಘಟಕದಲ್ಲಿ 1997ರಲ್ಲಿ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆ ಆರಂಭವಾಯಿತು. ಮೊದಲ ಟೆಲಿವಿಷನ್ 2003ರಲ್ಲಿ ಈ ಘಟಕದಿಂದ ಭಾರತದ ಮಾರುಕಟ್ಟೆಗೆ ಬಂತು. 2005ರ ಸಮಯಕ್ಕೆ ಸ್ಯಾಮ್‌ಸಂಗ್ ಭಾರತದಲ್ಲಿ ಟಿವಿ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿತು. 2007ರಲ್ಲಿ ನೋಯ್ಡಾ ಕಾರ್ಖಾನೆಯಲ್ಲಿ ಮೊಬೈಲ್‌ ಫೋನ್ ಉತ್ಪಾದನೆಯನ್ನು ಆರಂಭಿಸಿ, 2012ರ ಹೊತ್ತಿಗೆ ಭಾರತದ ಮೊಬೈಲ್‌ ಮಾರುಕಟ್ಟೆಯ ಮೇಲೆ ಸ್ಯಾಮ್‌ಸಂಗ್ ಹಿಡಿತ ಸಾಧಿಸಿತು.

ಕೇವಲ ಶೇ.10ರಷ್ಟು ಉತ್ಪಾದನೆ

ಕೇವಲ ಶೇ.10ರಷ್ಟು ಉತ್ಪಾದನೆ

ಸ್ಯಾಮ್‌ಸಂಗ್ ಭಾರತದಲ್ಲಿರುವ ತನ್ನ ತಯಾರಿಕಾ ಘಟಕಗಳಲ್ಲಿ ತನ್ನ ಉತ್ಪಾದನೆಯ ಶೇ.10ರಷ್ಟು ಉತ್ಪಾದನೆ ಮಾತ್ರ ಮಾಡುತ್ತಿದ್ದು, ಈ ಪ್ರಮಾಣವನ್ನು ಮುಂದಿನ 3 ವರ್ಷಗಳ ಅವಧಿಯಲ್ಲಿ ಶೇ.50ಕ್ಕೆ ಏರಿಕೆ ಮಾಡಲು ಸ್ಯಾಮ್‌ಸಂಗ್ ನಿರ್ಧರಿಸಿದೆ. 2016-17ರ ಆರ್ಥಿಕ ವರ್ಷದಲ್ಲಿ ಸ್ಯಾಮ್‌ಸಂಗ್‌ ಮೊಬೈಲ್ ವಹಿವಾಟು ಭಾರತದಲ್ಲಿ ಶೇ. 27ರಷ್ಟು ಹೆಚ್ಚಾಗಿದ್ದು, ಭಾರತದಲ್ಲಿನ ವ್ಯವಹಾರ 50 ಸಾವಿರ ಕೋಟಿ ರೂ. ಇದರಲ್ಲಿ ಮೊಬೈಲ್ ಕ್ಷೇತ್ರದ ಪಾಲೇ 34 ಸಾವಿರ ಕೋಟಿ ರೂ.

4 ವರ್ಷದಲ್ಲಿ 120 ಕಾರ್ಖಾನೆ

4 ವರ್ಷದಲ್ಲಿ 120 ಕಾರ್ಖಾನೆ

ಕಳೆದ ನಾಲ್ಕು ವರ್ಷದಲ್ಲಿ ದೇಶದಲ್ಲಿ ಸುಮಾರು 120 ಕಾರ್ಖಾನೆಗಳು ಸ್ಥಾಪನೆಯಾಗಿದ್ದು, 4 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿವೆ. ಡಿಜಿಟಲ್ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಅಭಿವೃದ್ಧಿಯಾಗಿದೆ. ದೇಶದಲ್ಲಿ ಸುಮಾರು 40 ಕೋಟಿ ಸ್ಮಾರ್ಟ್‌ಪೋನ್ ಬಳಕೆದಾರರು ಹಾಗೂ 32 ಕೋಟಿ ಬ್ರಾಡ್‌ಬ್ಯಾಂಡ್ ಗ್ರಾಹಕರು ಇದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತದಲ್ಲಿಯೇ ಏಕೆ?

ಭಾರತದಲ್ಲಿಯೇ ಏಕೆ?

ಸ್ಯಾಮ್‌ಸಂಗ್ ತನ್ನ ತಯಾರಿಕಾ ಘಟಕವನ್ನು ಭಾರತದಲ್ಲಿ ವಿಸ್ತರಿಸುತ್ತಿರುವುದಕ್ಕೆ ಹಲವು ಕಾರಣಗಳಿವೆ. ದಿನದಿಂದ ದಿನಕ್ಕೆ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಿದೆ. ಚೀನಾದ ನಂತರ ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆ ಭಾರತವೇ ಆಗಿರುವುದರಿಂದ ಸ್ಯಾಮ್‌ಸಂಗ್ ಭಾರತವನ್ನು ಆಯ್ದುಕೊಂಡಿದೆ. ಮುಂದಿನ ದಿನಗಳಲ್ಲಿ ಮೊಬೈಲ್ ಉತ್ಪಾದನೆಯಲ್ಲಿ ಅಮೇರಿಕವನ್ನು ಮೀರಿ ಎರಡನೇ ಸ್ಥಾನಕ್ಕೇರುವ ಅವಕಾಶ ಭಾರತ ಹೊಂದಿದೆ.

ಯುವ ರಾಷ್ಟ್ರ ಭಾರತ

ಯುವ ರಾಷ್ಟ್ರ ಭಾರತ

ಸ್ಯಾಮ್‌ಸಂಗ್‌ನಂತಹ ಮೊಬೈಲ್ ತಯಾರಿಕಾ ಕಂಪನಿಗಳಿಗೆ ಭಾರತದಲ್ಲಿ ಉತ್ಪಾದನಾ ಸಾಮರ್ಥ್ಯ‌ದ ವಿಸ್ತರಣೆಗೆ ಮಾರುಕಟ್ಟೆ ಹಾಗೂ ಭವಿಷ್ಯದ ಅವಕಾಶಗಳು ಪ್ರೇರಣೆಯಾಗಿದ್ದು, ಭಾರತದ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಯುವಜನತೆಯೇ ಹೆಚ್ಚಿರುವುದರಿಂದ ಸ್ಯಾಮ್‌ಸಂಗ್‌ಗೆ ಭಾರತ ಬಹುದೊಡ್ಡ ಆಯ್ಕೆಯಾಯಿತು. 2022ರ ವೇಳೆಗೆ ಮೊಬೈಲ್ ಬಳಕೆದಾರರ ಪ್ರಮಾಣ 44 ಕೋಟಿ ದಾಟುವ ಸಾಧ್ಯತೆ ಇರುವುದರಿಂದ ಭಾರತವನ್ನು ಆಯ್ಕೆ ಮಾಡಿಕೊಂಡಿದೆ.

ಸರಳ ವಿದೇಶಿ ನೇರ ಬಂಡವಾಳ

ಸರಳ ವಿದೇಶಿ ನೇರ ಬಂಡವಾಳ

ಇತ್ತೀಚಿನ ವರ್ಷಗಳಲ್ಲಿ ಮೊಬೈಲ್‌ ಉತ್ಪಾದನಾ ವಲಯಕ್ಕೆ ಎಫ್‌ಡಿಐ ಹೂಡಿಕೆ ನಿಯಮಗಳನ್ನು ಭಾರತ ಸಡಿಲಗೊಳಿಸಿದೆ. ಈ ನಿಯಮಗಳಿಂದ ಕಂಪನಿಗಳಿಗೆ ಇ-ಕಾಮರ್ಸ್‌, ಸಗಟು ಮತ್ತು ರಿಟೇಲ್‌ ವಿಭಾಗದಲ್ಲಿ ಸರ್ಕಾರದ ಅನುಮತಿ ಇಲ್ಲದೆ ಸುಲಭವಾಗಿ ಸ್ಮಾರ್ಟ್‌ಫೋನ್‌ ಮಾರಾಟ ಮಾಡಬಹುದಿತ್ತು. ಅದಲ್ಲದೇ, ಇಷ್ಟು ವರ್ಷ ಭಾರತಕ್ಕೆ ಶೇ.90ರಷ್ಟು ಮೊಬೈಲ್‌ ಬಿಡಿ ಭಾಗಗಳು ಆಮದಾಗಿ, ಇಲ್ಲಿ ಜೋಡಣೆಯಾಗುತ್ತಿತ್ತು. ಆದ್ದರಿಂದ ಇಲ್ಲಿ ಉತ್ಪಾದನೆಗೆ ಹಿನ್ನಡೆಯಾಗಿತ್ತು. ಆದ್ದರಿಂದ ಮೊಬೈಲ್‌ ಬಿಡಿ ಭಾಗಗಳ ತೆರಿಗೆ ಪದ್ಧತಿಯಲ್ಲಿ ಸರ್ಕಾರ ಸುಧಾರಣೆ ತಂದಿತ್ತು.ಈ ಕಾರಣಕ್ಕೂ ಸ್ಯಾಮ್‌ಸಂಗ್ ಭಾರತವನ್ನು ತನ್ನ ತಯಾರಿಕಾ ಘಟಕದ ವಿಸ್ತರಣೆಗೆ ಆಯ್ದುಕೊಂಡಿತು.

Best Mobiles in India

English summary
Some popular smartphone apps may be secretly taking screenshots of your activity and sending them to third parties, a study has found.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X