ಕೇಬಲ್ ಮತ್ತು ಡಿಟಿಹೆಚ್ ಆಪರೇಟರ್‌ಗಳಿಗೆ ಸರ್ಕಾರದಿಂದ ಮತ್ತೊಂದು ಬಿಗ್‌ಶಾಕ್!!

|

ಭಾರತದ ಟೆಲಿಕಾಂ ಪ್ರಪಂಚದ ಮೇಲೆ ಗಧಪ್ರಹಾರ ನಡೆಸಿದ ನಂತರ ಇದೀಗ ಕೇಂದ್ರ ಸರ್ಕಾರದ ಕಣ್ಣು ಕೇಬಲ್ ಮತ್ತು ಡಿಟಿಹೆಚ್ ಆಪರೇಟರ್‌ಗಳ ಮೇಲೆ ಬಿದ್ದಿದೆ. ಇತ್ತೀಚಿಗಷ್ಟೇ ಕೇಬಲ್ ನಿಯಮಗಳನ್ನು ಬದಲಾಯಿಸಿ ಆದೇಶ ಹೊರಡಿಸಿದ್ದ ಟ್ರಾಯ್, ಇದೇ ವರ್ಷಾಂತ್ಯದ ವೇಳೆಗೆ ಸೆಟ್‌ ಟಾಟ್‌ಬಾಕ್ಸ್‌ಗೂ ಪೋರ್ಟಬಿಲಿಟಿ ಸೌಲಭ್ಯವನ್ನು ತರಲಿದೆ ಎಂಬ ಸುದ್ದಿ ಹೊರಬಿದ್ದಿದೆ.

ಹೌದು, ಮೊಬೈಲ್‌ ನಂಬರ್‌ ಅನ್ನು ಒಂದು ಸೇವಾ ಕಂಪನಿಯಿಂದ ಇನ್ನೊಂದು ಬದಲಿಸಲು ಅವಕಾಶವಿರುವಂತೆಯೇ, ಟಿ.ವಿಯ ಸೆಟ್‌ಟಾಪ್‌ ಬಾಕ್ಸ್‌ಗೂ ವರ್ಷಾಂತ್ಯದ ವೇಳೆಗೆ ಪೋರ್ಟಬಿಲಿಟಿ ಸೌಲಭ್ಯ ಸಿಗಲಿದೆ. ದೂರಸಂಪರ್ಕ ನಿಯಂತ್ರಕ ಟ್ರಾಯ್‌ ಈ ಸಂಬಂಧ ಕಾರ್ಯಪ್ರವೃತ್ತವಾಗಿದ್ದು, ವರ್ಷಾಂತ್ಯಕ್ಕೆ ಈ ಅನುಕೂಲ ಲಭ್ಯವಾಗಲಿದೆ ಎಂದು ಟ್ರಾಯ್ ಸಂಸ್ಥೆ ಅಧ್ಯಕ್ಷರು ತಿಳಿಸಿದ್ದಾರೆ.

ಕೇಬಲ್ ಮತ್ತು ಡಿಟಿಹೆಚ್ ಆಪರೇಟರ್‌ಗಳಿಗೆ ಸರ್ಕಾರದಿಂದ ಮತ್ತೊಂದು ಬಿಗ್‌ಶಾಕ್!!

ಇದರಿಂದಾಗಿ ಜನರು ಸೆಟ್‌ಟಾಪ್‌ ಬಾಕ್ಸ್‌ ಬಗ್ಗೆ ಯೋಚನೆಯೇ ಇಲ್ಲದೆ, ಬೇರೆ ಡಿಟಿಎಚ್ ಅಥವಾ ಕೇಬಲ್‌ ಆಪರೇಟರ್‌ ಸೇವೆಗೆ ಯಾವುದೇ ವೆಚ್ಚ ಇಲ್ಲದೆಯೇ ಬದಲಾಗಬಹುದು ಎಂದು ತಿಳಿದುಬಂದಿದೆ. ಹಾಗಾದರೆ, ಟ್ರಾಯ್ ಜಾರಿಗೆ ತರುತ್ತಿರುವ ನೂತನ ನಿಯಮ ಯಾವುದು? ಕೇಬಲ್ ಮತ್ತು ಡಿಟಿಹೆಚ್‌ಗಳಿಗೆ ಬಿಗ್ ಶಾಕ್ ಏಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಸೆಟ್‌ಟಾಪ್‌ ಬಾಕ್ಸ್‌ ಪೋರ್ಟಬಿಲಿಟಿ

ಸೆಟ್‌ಟಾಪ್‌ ಬಾಕ್ಸ್‌ ಪೋರ್ಟಬಿಲಿಟಿ

ಮೊಬೈಲ್‌ ನಂಬರ್‌ ಅನ್ನು ಒಂದು ಸೇವಾ ಕಂಪನಿಯಿಂದ ಇನ್ನೊಂದು ಬದಲಿಸಲು ಅವಕಾಶವಿರುವಂತೆಯೇ, ಟಿ.ವಿಯ ಸೆಟ್‌ಟಾಪ್‌ ಬಾಕ್ಸ್‌ ಸೇವೆಯನ್ನು ಸಹ ಬದಲಾಯಿಸಿಕೊಳ್ಳಬಹುದಾದ ಆಯ್ಕೆಯನ್ನು ಈ ವರ್ಷಾಂತ್ಯಂದ ವೇಳೆಗೆ ತರಲು ಟ್ರಾಯ್ ತಯಾರಾಗಿದೆ. ಈ ಬಗ್ಗೆ ಕಾರ್ಯ ಯೋಜನೆ ತಯಾರಾಗುತ್ತಿದೆ ಎಂದು ಟ್ರಾಯ್ ಆರ್‌.ಎಸ್‌ ಶರ್ಮಾ ಅವರು ತಿಳಿಸಿದ್ದಾರೆ.

ಕೋಟ್ಯಂತರ ಗ್ರಾಹಕರಿಗೆ ಅನುಕೂಲ

ಕೋಟ್ಯಂತರ ಗ್ರಾಹಕರಿಗೆ ಅನುಕೂಲ

ಪ್ರಸ್ತುತ ಒಂದು ಸೆಟ್‌ಟಾಪ್‌ ಬಾಕ್ಸ್‌ಗೆ 1,400 ರೂ.ಗಳಿಂದ 1,600 ರೂ.ಗಳ ವರೆಗೂ ವೆಚ್ಚವಾಗುತ್ತದೆ. ಇದಕ್ಕೆ ತಗಲುವ ವೆಚ್ಚ ಕೂಡ ರಿಫಂಡ್ ಆಗುತ್ತಿಲ್ಲ. ಆದರೂ ಅದು 500 ಗಳಿಂಗಿಂತ ಹೆಚ್ಚಿಲ್ಲ ಎನ್ನುತ್ತವೆ ವರದಿಗಳು. ಹಾಗಾಗಿ, ಈ ಪೋರ್ಟಬಿಲಿಟಿ ನಿಯಮ ಸಾಧ್ಯವಾದರೆ ಗ್ರಾಹಕರಿಗೆ ಈ ವೆಚ್ಚ ಉಳಿತಾಯವಾಗಲಿದೆ. ಇದು ಕೋಟ್ಯಂತರ ಗ್ರಾಹಕರಿಗೆ ಅನುಕೂಲವಾಗಲಿದೆ.

ಒಂದು ಎಸ್‌ಎಂಎಸ್‌ಗೆ ಸೇವೆ ಬದಲು!

ಒಂದು ಎಸ್‌ಎಂಎಸ್‌ಗೆ ಸೇವೆ ಬದಲು!

ಪ್ರಸ್ತುತ ಇರುವ ನಂಬರ್ ಅನ್ನೇ ಯಾವುದೇ ಟೆಲಿಕಾಂ ಕಂಪೆನಿಗಳ ಸೇವೆ ಪಡೆಯಲು ಇದೀಗ ಒಂದು ಎಸ್‌ಎಂಎಸ್ ಸಾಕು. ಹಾಗೆಯೇ, ಡಿಟಿಎಚ್ ಅಥವಾ ಕೇಬಲ್‌ ಗ್ರಾಹಕರು ತಮ್ಮ ಸೇವೆಯನ್ನು ಒಂದು ಎಸ್‌ಎಂಎಸ್‌ನಿಂದ ಇನ್ಮುಂದೆ ಬದಲಾಯಿಸಿಕೊಳ್ಳಬಹುದಾಗಿದೆ. ಟ್ರಾಯ್ ನೀಡುವ ಮಾರ್ಗದರ್ಶನದ ಪ್ರಕಾರ ಈ ಹೊಸ ಸೇವೆ ಜಾರಿಗೊಳ್ಳಲಿದೆ ಎಂದು ಹೇಳಲಾಗಿದೆ.

ಆದರೆ ಸಮಸ್ಯೆ ಎದುರಾಗಿದೆ!

ಆದರೆ ಸಮಸ್ಯೆ ಎದುರಾಗಿದೆ!

ಟ್ರಾಯ್‌ನ ನೂತನ ನಿಯಮ ತರಲು ಕೆಲವೊಂದು ಸಮಸ್ಯೆಗಳು ಎದುರಾಗಿದೆ. ಪ್ರತಿಯೊಂದು ನಿರ್ವಾಹಕರ ಸೆಟ್‌ ಟಾಪ್‌ ಬಾಕ್ಸ್‌ನಲ್ಲಿರುವ ಸಾಫ್ಟ್‌ವೇರ್‌ ವಿನ್ಯಾಸಗಳು ಭಿನ್ನವಾಗಿವೆ. ಇದನ್ನು ಭೇದಿಸುವುದರಿಂದ ಪೈರಸಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂಥ ಸವಾಲುಗಳ ಬಗ್ಗೆ ಟ್ರಾಯ್‌ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ತಿಳಿದುಬಂದಿದೆ.

ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ

ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ

ಹೀಗಿದ್ದರೂ, ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ಇದೆ ಎನ್ನುತ್ತಿದ್ದಾರೆ ಶರ್ಮಾ. ಸೆಟ್‌ ಟಾಪ್‌ ಬಾಕ್ಸ್‌ಗಳನ್ನು ಖರೀದಿಸಿದ ನಂತರ, ಅದರ ಸಾಫ್ಟ್‌ವೇರ್‌ ಅನ್ನು ಬಳಕೆದಾರರೇ ಡೌನ್‌ಲೋಡ್‌ ಮಾಡಬಹುದಾದ ಪದ್ಧತಿಯನ್ನು ಪರಿಚಯಿಸುವುದರಿಂದ ಸಮಸ್ಯೆ ಬಗೆಹರಿಸಬಹುದು ಎಂದು ಶರ್ಮಾ ಹೇಳಿದ್ದಾರೆ. ಸಮಸ್ಯೆಗಳ ಪರಿಹಾರಕ್ಕಾಗಿ ಟ್ರಾಯ್ ಇತರ ಕನ್ಸಲ್ಟೆನ್ಸಿಗಳ ಹಿಂದೆ ಬಿದ್ದಿದೆ.

ಸಿಡಿಒಟಿ ಜತೆ ಸಂಪರ್ಕ

ಸಿಡಿಒಟಿ ಜತೆ ಸಂಪರ್ಕ

ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಟ್ರಾಯ್‌, ಈಗಾಗಲೇ ದೂರಸಂಪರ್ಕ ಇಲಾಖೆಯ ಅಧೀನದಲ್ಲಿರುವ ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಟೆಲಿಮ್ಯಾಟಿಕ್ಸ್‌ (ಸಿಡಿಒಟಿ) ಜತೆ ಸಂಪರ್ಕದಲ್ಲಿದೆ. ಸೆಟ್‌ ಟಾಪ್ ಬಾಕ್ಸ್‌ನಲ್ಲಿ ಸಾಫ್ಟ್‌ವೇರ್‌ ತಂತ್ರಜ್ಞಾನ ಬದಲಾವಣೆಯ ಮಾದರಿ ಸಿದ್ಧಪಡಿಸಲು ಯತ್ನಿಸಲಾಗುತ್ತಿದೆ ಎಂದು ಟ್ರಾಯ್ ಮೂಲಗಳಿಂದ ತಿಳಿದುಬಂದಿದೆ.

ವೆಚ್ಚ ಉಳಿಸುವ ಜೊತೆಗೆ ಉತ್ತಮ ಸೇವೆ!

ವೆಚ್ಚ ಉಳಿಸುವ ಜೊತೆಗೆ ಉತ್ತಮ ಸೇವೆ!

ಪ್ರಸ್ತುತ ಟಿ.ವಿ ಬಳಕೆದಾರರು ನಿರ್ದಿಷ್ಟ ಕಂಪನಿಯ ಸೆಟ್‌ ಟಾಪ್‌ ಬಾಕ್ಸ್‌ ಅಳವಡಿಸಿದ ನಂತರ, ಸೇವೆಯ ಗುಣಮಟ್ಟ ಹಿಡಿಸದಿದ್ದರೆ ಬೇರೆ ಕಂಪನಿಯ ಸೇವೆಗೆ ಬದಲಾಯಿಸುವಾಗ ಹೊಸ ಸೆಟ್‌ ಟಾಪ್‌ ಬಾಕ್ಸ್‌ ಕೊಂಡುಕೊಳ್ಳಬೇಕಾಗುತ್ತದೆ. ಆಗ ಹಳೆ ಕಂಪನಿಯದ್ದು ವ್ಯರ್ಥವಾಗುತ್ತದೆ. ಆದರೆ, ಈ ಪೋರ್ಟಬಿಲಿಟಿಯಿಂದ ಅದನ್ನು ತಪ್ಪಿಸಬಹುದು ಮತ್ತು ಉತ್ತಮ ಸೇವೆ ಪಡೆಯಬಹುದು.

Best Mobiles in India

English summary
Troubled by your cable operator or DTH company, but unable to change your service provider as you are locked into your set-top box (STB)? Things may soon change as broadcast regulator Trai plans to make digital boxes inter-operable by the end of this year. to knw more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X