ಸರ್ಕಾರದಿಂದ ಟೆಲಿಕಾಂ ಕಂಪೆನಿಗಳಿಗೆ ಮತ್ತೊಂದು ಬಿಗ್ ಶಾಕ್!..ಸಾರ್ವಜನಿಕರಿಗೆ ಸಿಹಿಸುದ್ದಿ!!

|

ಟೆಲಿಕಾಂ ಕಂಪೆನಿಗಳ ಮೂಗುದಾರ ಹಿಡಿದಿರುವ ಭಾರತ ಸರ್ಕಾರದ ಟೆಲಿಕಾಂ ನಿಯಂತ್ರಣ ಮಂಡಳಿ 'ಟ್ರಾಯ್' ಸಾರ್ವಜನಿಕರಿಗೆ ಮತ್ತೊಂದು ಸಿಹಿಸುದ್ದಿಯನ್ನು ನೀಡಿದೆ. ಈ ಮೊದಲು ಮೊಬೈಲ್ ಬಳಕೆದಾರರಿಗೆ ಒಂದು ಟೆಲಿಕಾಂ ಕಂಪೆನಿಯಿಂದ ಮತ್ತೊಂದು ಟೆಲಿಕಾಂ ಕಂಪೆನಿಗೆ ಜಿಗಿಯಲು ಅವಕಾಶ ಮಾಡಿಕೊಟ್ಟಿದ್ದ ಟ್ರಾಯ್, ಇದೀಗ ತನ್ನ ಈ ಪೋರ್ಟಬಲಿಟಿ ನಿಯಮದಲ್ಲಿ ಸ್ವಲ್ಪ ಬದಲಾವಣೆಯನ್ನು ತರುವ ಮೂಲಕ ಮತ್ತೊಮ್ಮೆ ಟೆಲಿಕಾಂ ಕಂಪೆನಿಗಳಿಗೆ ಬಿಗ್ ಶಾಕ್ ನೀಡಿದೆ.

ಹೌದು, ಮೊಬೈಲ್ ಬಳಕೆದಾರರು ಹೆಚ್ಚಾದಂತೆಲ್ಲಾ, ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ಕೂಡ ಜೋರಾಗಿಯೇ ಇದೆ. ಹೀಗಾಗಿ ಬಳಕೆದಾರರೂ, ಒಂದು ನೆಟ್​ವರ್ಕ್​ನಿಂದ ಮತ್ತೊಂದು ನೆಟ್​ವರ್ಕ್​​ಗೆ ಶಿಫ್ಟ್ ಆಗ್ತಿರ್ತಾರೆ. ಇಂಥವರಿಗೆ ತಮ್ಮ ಮೊಬೈಲ್ ನಂಬರ್ ಬದಲಿಸಿಕೊಳ್ಳುವ ಸಮಸ್ಯೆ ಎದುರಾಗಬಾರದು ಅಂತಲೇ, ಮೊಬೈಲ್ ನಂಬರ್ ಪೋರ್ಟಿಂಗ್ ನಿಯಮವನ್ನ ಜಾರಿಗೆ ತರಲಾಗಿತ್ತು. ಇದೀಗ ಈ ನಿಯಮದಲ್ಲಿ ಒಂದಷ್ಟು ಮಾರ್ಪಾಡುಗಳನ್ನ ಮಾಡಿದ್ದು, ಪೋರ್ಟಿಂಗ್ ಇನ್ನೂ ಸುಲುಭವಾಗಲಿದೆ.

 ಸರ್ಕಾರದಿಂದ ಟೆಲಿಕಾಂ ಕಂಪೆನಿಗಳಿಗೆ ಮತ್ತೊಂದು ಬಿಗ್ ಶಾಕ್!

ಪೋರ್ಟಬಿಲಿಟಿ ನಿಯಮದಲ್ಲಿ ಬದಲಾವಣೆ ತರಲಾಗಿರುವುದರಿಂದ ಈಗ ಕೇವಲ ಎರಡೇ ದಿನಗಳಲ್ಲಿ ನೆಟ್​ವರ್ಕ್ ಬದಲಿಸಿಕೊಳ್ಳಬಹುದಾಗಿದೆ. ಇಲ್ಲಿಯವರೆಗೂ ಪೋರ್ಟ್ ಮಾಡಿಸುವ ವೇಳೆ ಸೇವೆ ಸ್ಥಗಿತದ ಭಯ ಹೊಂದಿದ್ದ ಗ್ರಾಹಕರಿಗೆ ಇದು ನಿರಾಳತೆಯನ್ನು ತಂದಿದೆ. ಹೊಸ ನಿಯಮದ ಪ್ರಕಾರ, ಎಂಎನ್​ಪಿ ಸರ್ವೀಸ್ ಪ್ರೊವೈಡರ್ ಪ್ರಕ್ರಿಯೆಯಲ್ಲಿ ಎರಡೇ ದಿನಗಳಲ್ಲಿ ಹೊಸ ನೆಟ್​ವರ್ಕ್​​ಗೆ ಗ್ರಾಹಕರು ಶಿಫ್ಟ್ ಆಗಬಹುದು. ಹಾಗಾದರೆ, ಒಂದು ಟೆಲಿಕಾಂ ಕಂಪೆನಿಯಿಂದ ಮತ್ತೊಂದು ಟೆಲಿಕಾಂ ಕಂಪೆನಿಗೆ ಪೋರ್ಟ್ ಆಗುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

"1900" ಗೆ ಮೆಸೇಜ್ ಮಾಡಿ.

ಒಂದು ಟೆಲಿಕಾಂ ಕಂಪೆನಿಯಿಂದ ಮತ್ತೊಂದು ಟೆಲಿಕಾಂ ಕಂಪೆನಿಗೆ ಪೋರ್ಟ್ ಆಗಲು, ನಿಮ್ಮ ಮೊಬೈಲ್ ಸಂಖ್ಯೆಯಿಂದ 'PORT' ಎಂದು ದಪ್ಪ ಅಕ್ಷರಗಳಲ್ಲಿ ಟೈಪ್‌ ಮಾಡಿ. ನಂತರ ಒಂದು ಸ್ಪೇಸ್ ಬಿಟ್ಟು ನಿಮ್ಮ ಪ್ರಸ್ತುತ ಬಳಸುತ್ತಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ. ನಂತರ "1900"ಗೆ ಮೆಸೇಜ್ ಮಾಡಿ. ಉದಾ: (PORT 84960**522)

"1901" ನಂಬರ್‌ನಿಂದ ನಿಮಗೆ ಮೆಸೇಜ್ ಬರುತ್ತದೆ.

ನೀವು ಹೀಗೆ (PORT 84960**522) ಪೋರ್ಟ್ ಎಂದು ''1900"ಗೆ ಮೆಸೇಜ್ ಮಾಡಿದ ನಂತರ, ನಿಮ್ಮ ಮಾಹಿತಿ ಸರಿಯಾಗಿದ್ದಲ್ಲಿ ನಿಮ್ಮ ಮೊಬೈಲ್‌ಗೆ ತಕ್ಷಣವೇ ಸಂದೇಶವೊಂದು ವಾಪಸ್ ಬರಲಿದೆ. ನೀವು ''1900" ಮೆಸೇಜ್ ಸೆಂಡ್ ಮಾಡಿದರೆ, "1901" ನಂಬರ್‌ನಿಂದ ನಿಮ್ಮ ಮನವಿಯನ್ನು ವೆರಿಫೈ ಮಾಡಲು ಟೆಲಿಕಾಂ ಕಂಪೆನಿಯು ಸಂದೇಶದ ಮೂಲಕ ತಿಳಿಸುತ್ತದೆ.

ಯುನಿಕ್ ಪೋರ್ಟಲ್ ಕೋಡ್ ಪಡೆಯಿರಿ.

ಯುನಿಕ್ ಪೋರ್ಟಲ್ ಕೋಡ್ ಪಡೆಯಿರಿ.

ನೀವು ಸಿಮ್ ಬಳಸುತ್ತಿರುವ ಟೆಲಿಕಾಂ ನಿಮ್ಮ ಮನವಿಯನ್ನು ವೆರಿಫೈ ಮಾಡಿದ ನಂತರ, ನಿಮಗೆ ಕೆಲವು ಗಂಟೆಗಳ ಒಳಗಾಗಿ ಯುನಿಕ್ ಪೋರ್ಟಲ್ ಕೋಡ್ ಬರುತ್ತದೆ. ಈ ಕೋಡ್ ಮೂಲಕ ನೀವು ನಿಮ್ಮ ಸಿಮ್ ಅನ್ನು ಇತರೆ ಯಾವುದೇ ಟೆಲಿಕಾಂ ಕಂಪೆನಿಯೊಂದಿಗೆ ಬದಲಾಯಿಸಿಕೊಳ್ಳಬಹುದಾಗಿದೆ. ಈಗ ಈ ಪ್ರಕ್ರಿಯೆ ಅತ್ಯಂತ ಸುಲಭವಾಗಿದೆ.

ಟೆಲಿಕಾಂ ಸ್ಟೋರ್‌ಗೆ ಭೇಟಿ ನೀಡಿ.

ಟೆಲಿಕಾಂ ಸ್ಟೋರ್‌ಗೆ ಭೇಟಿ ನೀಡಿ.

ಒಮ್ಮೆ ನೀವು ಈ ಯುನಿಕ್ ಪೋರ್ಟಲ್ ಕೋಡ್ ಪಡೆದ ನಂತರ, ನಿಮ್ಮ ಎರಡು ಭಾವಚಿತ್ರ ಮತ್ತು ನಿಮ್ಮ ಆಧಾರ್ ಐಡಿ ತೆಗೆದುಕೊಂಡು ನೀವು ಪೋರ್ಟ್ ಆಗಬೇಕಿರುವ ಯಾವುದೇ ಟೆಲಿಕಾಂ ಸ್ಟೋರ್‌ಗೆ ಭೇಟಿ ನೀಡಿ( ಸಾಮಾನ್ಯ ಅಂಗಡಿಗಳಲ್ಲೂ ಸಾಧ್ಯ). ನಂತರ ಅವರಿಗೆ ನೀವು ಪಡೆದಿರುವ ಯುನಿಕ್ ಪೋರ್ಟಲ್ ಕೋಡ್ ನೀಡಿ ಪೋರ್ಟ್ ಮಾಡುವಂತೆ ಕೇಳಿಕೊಳ್ಳಿ.

ನೀವು ಪೋರ್ಟ್ ಆಗುತ್ತೀರಾ!

ನೀವು ಪೋರ್ಟ್ ಆಗುತ್ತೀರಾ!

ನೀವು ಸೂಚಿಸಿದ ಬೇರೊಂದು ಟೆಲಿಕಾಂ ಕಂಪೆನಿಗೆ ಬದಲಾಯಿಸಲು ಯುನಿಕ್ ಪೋರ್ಟಲ್ ಕೋಡ್ ಮತ್ತು ನಿಮ್ಮ ಆಧಾರ್ ಐಡಿಯನ್ನು ನೀಡಿದ ನಂತರ ನಿಮ್ಮ ಮೊಬೈಲ್ ನಂಬರ್ ಬೇರೊಂದು ಟೆಲಿಕಾಂ ಕಂಪೆನಿಗೆ ಪೋರ್ಟ್ ಆಗುತ್ತದೆ. ಮೊದಲು ಈ ಪ್ರಕ್ರಿಯೆ ಮುಗಿಯಲು ಹೆಚ್ಚು ದಿನ ಬೇಕಾಗುತ್ತಿದ್ದು, ಆದರೆ, ಈಗ ಕೇವಲ ಎರಡು ದಿನಗಳು ಸಾಕು.!

Best Mobiles in India

English summary
TRAI has issued new regulations for Mobile Number Portability that it claims will make the process almost three times faster. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X