Home
ಸುದ್ದಿಜಾಲ

'ಬಿಬಿಸಿ'ಯಿಂದ ಶಾಕಿಂಗ್ ಸುದ್ದಿ!..6.42 ರೂ.ಗೆ ಸೇಲ್ ಆಗುತ್ತಿದೆ 'ಫೇಸ್​ಬುಕ್​'!!

ವಿಶ್ವದ ಅತಿದೊಡ್ಡ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಿಂದ ಸೋರಿಕೆಯಾಗಿರುವ ಫೇಸ್​ಬುಕ್​ನ ಖಾತೆದಾರರ ಖಾಸಗಿ ಮಾಹಿತಿಗಳನ್ನು ಮಾರಾಟಕ್ಕಿಡಲಾಗಿದೆ ಎಂಬ ಶಾಕಿಂಗ್ ಸುದ್ದಿಯೊಂದು ಈಗ ಹೊರಬಿದ್ದಿದೆ. ಪ್ರಖ್ಯಾತ ಬಿಬಿಸಿ ವಾಹಿನಿ ನಡೆಸಿರುವ ತನಿಖೆ ಪ್ರಕಾರ, ಸದ್ಯಕ್ಕೆ 81 ಸಾವಿರ ಖಾತೆಗಳ ಖಾಸಗಿ ಮಾಹಿತಿಗಳನ್ನು ಹ್ಯಾಕರ್​ಗಳು ಮಾರಾಟಕ್ಕಿಟ್ಟಿದ್ದಾರೆ.

ಹೌದು, ಫೇಸ್​ಬುಕ್​ನ 12 ಕೋಟಿ ಗ್ರಾಹಕರ ಖಾತೆ ಮಾಹಿತಿ ಹ್ಯಾಕರ್​ಗಳ ಕೈ ಸೇರಿದ್ದು, 81 ಸಾವಿರ ಖಾತೆದಾರರ ಖಾಸಗಿ ಮಾಹಿತಿಗಳನ್ನು ಮಾರಾಟಕ್ಕಿಡಲಾಗಿದೆ. ರಷ್ಯಾದ ಹ್ಯಾಕರ್​ಗಳು ಪ್ರತ್ಯೇಕ ಬ್ರೌಸರ್​ಗಳಲ್ಲಿ ಮಾಲ್​ವೇರ್​ಗಳನ್ನು ಬಿಟ್ಟು ಮಾಹಿತಿ ಕದ್ದಿದ್ದಾರೆ. ಭಾರತೀಯ ಕರೆನ್ಸಿ ಬೆಲೆಯ ಪ್ರಕಾರ ಒಂದು ಖಾತೆಯ ಮಾಹಿತಿಗೆ ಕೇವಲ 6.42 ರೂಪಾಯಿ ಪಡೆಯಲಾಗುತ್ತಿದೆ.

'ಬಿಬಿಸಿ'ಯಿಂದ ಶಾಕಿಂಗ್ ಸುದ್ದಿ!..6.42 ರೂ.ಗೆ ಸೇಲ್ ಆಗುತ್ತಿದೆ 'ಫೇಸ್​ಬುಕ್​'!!

ಕೋಟ್ಯಾಂತರ ಖಾತೆದಾರರ ಖಾಸಗಿ ಮಾಹಿತಿಯು ಸೋರಿಕೆಯಾಗಿದೆ ಎಂಬುದನ್ನು ಈಗಾಗಲೇ ಫೇಸ್​ಬುಕ್ ಒಪ್ಪಿಕೊಂಡಿದ್ದ ಫೇಸ್‌ಬುಕ್‌ಗೂ ಕೂಡ ಈಗ ಬಿಬಿಸಿ ತನಿಖೆ ಶಾಕ್ ನೀಡಿದೆ. ಹಾಗಾದರೆ, ಬಿಬಿಸಿ ವಾಹಿನಿ ತನಿಖೆಯಿಂದ ತಿಳಿದುಬಂದ ಇನ್ನಿತರ ಶಾಕಿಂಗ್ ಅಂಶಗಳು ಯಾವುವು? ನಿಮ್ಮ ಸುರಕ್ಷತೆ ಹೇಗಿರಬೇಕು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಯಾವೆಲ್ಲಾ ಮಾಹಿತಿ ಕಳ್ಳತನವಾಗಿದೆ?

ಯಾವೆಲ್ಲಾ ಮಾಹಿತಿ ಕಳ್ಳತನವಾಗಿದೆ?

ರಷ್ಯಾ ಹ್ಯಾಕರ್​ಗಳು ಬ್ರೌಸರ್​ಗಳಲ್ಲಿ ಮಾಲ್​ವೇರ್​ಗಳನ್ನು ಹರಿಬಿಟ್ಟಿದ್ದಾರೆ. ಈ ಬ್ರೌಸರ್ ಕ್ಲಿಕ್ಕಿಸಿದ ಫೇಸ್​ಬುಕ್ ಖಾತೆದಾರರ ಮಾಹಿತಿಯನ್ನು ಮಾಲ್​ವೇರ್​ಗಳ ಮೂಲಕ ಕದಿಯಲಾಗಿದೆ. ಖಾತೆದಾರರ ಸ್ಥಳ ಶೈಕ್ಷಣಿಕ ಹಾಗೂ ಸಂಪರ್ಕದ ಮಾಹಿತಿಗಳು ಹ್ಯಾಕರ್​ಗಳ ಕೈ ಸೇರಿವೆ. ಬಿಬಿಸಿ ಪ್ರಕಾರ ಫೇಸ್​ಬುಕ್ ಪ್ರೊಫೈಲ್​ನಲ್ಲಿ ಹೈಡ್ ಮಾಡಿರದ ಎಲ್ಲ ಮಾಹಿತಿ ಕಳ್ಳತನವಾಗಿದೆ.

ಆನ್‌ಲೈನಿನಲ್ಲಿ ಹರಾಜು!

ಆನ್‌ಲೈನಿನಲ್ಲಿ ಹರಾಜು!

ಎಫ್​ಬಿ-ಸೇಲರ್ ವೆಬ್​ಪುಟದಲ್ಲಿ 81 ಸಾವಿರ ಖಾತೆದಾರರ ಮಾಹಿತಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ಖಾತೆಯ ಖಾಸಗಿ ಮಾಹಿತಿಗಳಿಗೆ 10 ಸೆಂಟ್ ಹಣ ಪಡೆಯ ಲಾಗುತ್ತಿದೆ. ಅಂದರೆ 1 ಡಾಲರ್​ಗೆ 10 ಖಾತೆಗಳ ಮಾಹಿತಿ ನೀಡಲಾಗಿದೆ. ಇನ್ನು ಎರಡನೇ ಹಂತದಲ್ಲಿ 1.76 ಲಕ್ಷ ಖಾತೆಗಳ ಮಾಹಿತಿ ಬಹಿರಂಗಪಡಿಸಿ ಹರಾಜು ಮಾಡಲಾಗುತ್ತಿದೆ ಎಂದು ಹ್ಯಾಕರ್​ಗಳು ಹೇಳಿದ್ದಾರೆ.

ನಮಗೂ ಕಾದಿದೆಯೇ ಆತಂಕ?

ನಮಗೂ ಕಾದಿದೆಯೇ ಆತಂಕ?

ಭಾರತೀಯ ಖಾತೆದಾರರ ಮಾಹಿತಿ ಸೋರಿಕೆಯಾಗಿರುವ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಆದರೆ 12 ಕೋಟಿ ಖಾತೆಗಳ ಮಾಹಿತಿಗಳನ್ನು ಮತ್ತೆ ಬಹಿರಂಗಪಡಿಸುವುದಾಗಿ ಹ್ಯಾಕರ್​ಗಳು ಹೇಳಿಕೊಂಡಿದ್ದಾರೆ. ಸೋರಿಕೆಯಾಗುತ್ತಿರುವ ಮಾಹಿತಿಗಳು ತೀರಾ ಖಾಸಗಿ ವಿಚಾರ ಆಗಿರುವ ಕಾರಣ ಭವಿಷ್ಯದಲ್ಲಿ ಏನಾಗಬಹುದು ಎನ್ನುವ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಎಷ್ಟು ಸುರಕ್ಷಿತ ಆನ್‌ಲೈನ್?

ಎಷ್ಟು ಸುರಕ್ಷಿತ ಆನ್‌ಲೈನ್?

ಫೇಸ್‌ಬುಕ್‌ನಲ್ಲಿ 50 ಮಿಲಿಯನ್‌ ಖಾತೆಗಳ ಮಾಹಿತಿ ಸೋರಿಕೆಯಾಗಿದ್ದು ಭಯ ಮುಡಿಸಿದೆ. ಇದಕ್ಕಿಂತಲೂ ಇನ್​ಸ್ಟಾಗ್ರಾಂ ,ಇಮೇಲ್ ಸೇರಿದಂತೆ ಎಲ್ಲಾ ಆನ್‌ಲೈನ್ ಖಾತೆಗಳ ವಿವರ ಡಾರ್ಕ್​ ವೆಬ್​ನಲ್ಲಿ ಮಾರಾಟವಾಗುತ್ತಿರುವ ಸುದ್ದಿ ಎಚ್ಚರಿಕೆ ಗಂಟೆಯಾಗಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ಆನ್‌ಲೈನ್ ಪ್ರಪಂಚ ಎಷ್ಟು ಸುರಕ್ಷಿತ ಎಂಬ ಚರ್ಚೆಯನ್ನು ಮತ್ತೆ ಹುಟ್ಟು ಹಾಕಿದೆ.

ಖಾತೆಯನ್ನು ಸುರಕ್ಷಿತಗೊಳಿಸಿ!

ಖಾತೆಯನ್ನು ಸುರಕ್ಷಿತಗೊಳಿಸಿ!

ಸಾಮಾಜಿಕ ಜಾಲತಾಣಗಳೇ ಇರಬಹುದು ಅತವಾ ಇನ್ನಾವುದೇ ಆನ್‌ಲೈನ್ ತಾಣಗಳಿರಬಹುದು ಅವುಗಳ ಖಾತೆಯನ್ನು ನೀವು ಸುರಕ್ಷಿತವಾಗಿ ಇಡಬೇಕಿದೆ. ಇವು ಕೂಡ ನಿಮ್ಮನ್ನು ಸೇಫ್ ಮಾಡುತ್ತವೆ ಎಂಬ ನಂಬಿಕೆಯತೂ ಈಗ ಇಲ್ಲ.! ಆದರೂ ಬಲವಾದ ಪಾಸ್‌ವರ್ಡ್ ಹಾಗೂ ಹಲವು ಮಾರ್ಗಗಳಿಂದ ನಿಮ್ಮ ಖಾತೆ ಸುರಕ್ಷಿತವಾಗಿರುವಂತೆ ನೀವು ಮಾಡಬಹುದು.

ಆಪ್‌ಗಳನ್ನು ಡಿಲಿಂಕ್ ಮಾಡಿ

ಆಪ್‌ಗಳನ್ನು ಡಿಲಿಂಕ್ ಮಾಡಿ

ಫೇಸ್‌ಬುಕ್ ಖಾತೆಗೆ ಹಲವು ಆಪ್‌ಗಳು ಲಿಂಕ್ ಆಗಿರುತ್ತವೆ. ಅವೆಲ್ಲವನ್ನೂ ಡಿಲಿಂಕ್ ಮಾಡುವುದು ಪ್ರಮುಖ ಕೆಲಸ. ಸೆಟಿಂಗ್ಸ್ ತೆರೆದು ಆಪ್ ಅಂಡ್ ವೆಬ್‌ಸೈಟ್‌ಗೆ ಹೋದರೆ, ಅಲ್ಲಿ ಲಿಂಕ್ ಆಗಿರುವ ಆಪ್‌ಗಳ ಪಟ್ಟಿ ದೊರೆಯುತ್ತದೆ. ಅವುಗಳನ್ನು ಟಿಕ್ ಮಾಡಿ, ಫೇಸ್‌ಬುಕ್‌ನಿಂದ ಹೊರಗೆ ಹಾಕಬಹುದು. ಜತೆಗೆ, ಉಪಯೋಗಿಸದೇ ಇರುವ ವೆಬ್‌ಸೈಟ್‌ಗಳನ್ನು ಡಿಲೀಟ್ ಮಾಡಿ.

ಫೇಸ್‌ಬುಕ್‌ನಲ್ಲಿ ಕ್ವಿಜ್ ಆಡಬೇಡಿ

ಫೇಸ್‌ಬುಕ್‌ನಲ್ಲಿ ಕ್ವಿಜ್ ಆಡಬೇಡಿ

ಫೇಸ್‌ಬುಕ್ ನಲ್ಲಿ ಮೂಡಿಬರುವ ಯಾವುದೇ ಕ್ವಿಜ್‌ಗಳನ್ನು ಅಪ್ಪಿತಪ್ಪಿಯೂ ಮುಟ್ಟಲು ಹೋಗಬೇಡಿ. ಫೇಸ್‌ಬುಕ್‌ನಿಂದ ಮಾಹಿತಿ ಕದಿಯಲು ಕೇಂಬ್ರಿಜ್ ಅನಾಲಿಟಿಕಾ ಉಪಯೋಗಿಸಿದ್ದೇ ಕ್ವಿಜ್‌ಗಳನ್ನು. ಹಾಗಾಗಿ, ನೀವು ಯಾವ ಸ್ಟಾರ್‌ನಂತೆ ಕಾಣುತ್ತೀರಾ, ನೀವು ಹಿಂದಿನ ಜನ್ಮದಲ್ಲಿ ಏನಾಗಿದ್ದೇ ಎಂಬ ಪ್ರಶ್ನೆಗಳನ್ನು ಕ್ಲಿಕ್ಕಿಸುವುದು ಅತ್ಯಂತ ಅಪಾಯಕಾರಿ ಕೆಲಸ.

ಖಾಸಾಗಿಯಾಗಿ ಬದಲಾಯಿಸಿ!

ಖಾಸಾಗಿಯಾಗಿ ಬದಲಾಯಿಸಿ!

ಖಾಸಗಿ ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ಖಾಸಗಿಯಾಗಿಯೇ ಇಡುವ ಅವಕಾಶ ಇದೆ. ವಯಸ್ಸು, ವಾಸಸ್ಥಳ, ವಿಳಾಸ, ಹುಟ್ಟಿದ ದಿನಾಂಕ, ಒಟ್ಟು ಫ್ರೆಂಡ್ಸ್ ಸಂಖ್ಯೆ ಮೊದಲಾದವುಗಳನ್ನು ಎಲ್ಲರಿಗೂ ಕಾಣಿಸುವಂತೆ ಪಬ್ಲಿಕ್ ಇಡಬೇಡಿ. ಅದನ್ನು ಖಾಸಗಿ ಮಾಡಲು ಫೇಸ್‌ಬುಕ್‌ನಲ್ಲಿ ಅವಕಾಶ ಇದೆ. ಇಂತಹ ಮಾಹಿತಿ ಹೆಚ್ಚು ಹೆಚ್ಚು ಖಾಸಗಿಯಾಗಿದ್ದಷ್ಟೂ ಒಳ್ಳೆಯದು.

ಇದು ಒಂದು ದುರಂತ!

ಇದು ಒಂದು ದುರಂತ!

ಫೇಸ್‌ಬುಕ್ ಮಾಹಿತಿ ಸೋರಿಕೆಯಾಗುವುದು ಎಲ್ಲರಿಗೂ ಒಂದು ತೀರಾ ಸಾಮಾನ್ಯ ಸಮಸ್ಯೆ ಎನಿಸಿರುವುದು ಇಂದಿನ ಒಂದು ದುರಂತವಾಗಿದೆ. ನಂಬಿಸಿ ಮೋಸ ಮಾಡುವುದನ್ನು ಮರೆತು ಅವರ ಹಿಂದೆಯೇ ಹೋದಂತೆ ಜನರು ಫೇಸ್‌ಬುಕ್‌ ಅನ್ನು ಬಿಟ್ಟು ಹೊರಬರುತ್ತಿಲ್ಲ. ಇದು ಒಂತರ ಜನರು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಬಿಟ್ಟು ಹೊರಬಾರದಂತೆ ಕಾಣುತ್ತಿದೆ.!

Best Mobiles in India

English summary
Facebook has experienced a number of security-related issues lately, including a breach disclosed in September that compromised at least 30 million accounts. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+