ಜಿಯೋವಿನ 199 ರೂ. ಪೋಸ್ಟ್‌ಪೇಡ್ ಆಫರ್‌ಗಿಂತ ಇವು ಉತ್ತಮವೇ?..ಚೆಕ್ ಮಾಡಿ ನೋಡಿ!
ಭಾರತದ ಸ್ಪರ್ಧಾತ್ಮಕ ದೂರಸಂಪರ್ಕ ಕ್ಷೇತ್ರದಲ್ಲಿ ಪ್ರಸ್ತುತ ಪೋಸ್ಟ್‌ಪೇಡ್ ಗ್ರಾಹಕರನ್ನು ಹೊಂದುವುದು ಸುಲಭವಲ್ಲ. ಆದರೆ, ಪೋಸ್ಟ್‌ಪೇಡ್ ಗ್ರಾಹಕರಿದ್ದರೆ ನಿರ್ದಿಷ್ಟ ಆದಾಯ ಖಚಿತ ಎಂದು ತಿಳಿದಿರುವ ಬಹುತೇಕ ಎಲ್ಲಾ ಟೆಲಿಕಾಂ ಕಂಪೆನಿಗಳು ಉತ್ತಮ ಪೋಸ್ಟ್‌ಪೇಡ್ ಆಫರ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಅದರಲ್ಲೂ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ಐಡಿಯಾದಂತಹ ಪ್ರಮುಖ ಟೆಲಿಕಾಂ ಕಂಪೆನಿಗಳು ಪೋಸ್ಟ್‌ಪೇಡ್ ಗ್ರಾಹಕರಿಗೆ ಅಮೆಜಾನ್ ಪ್ರೈಮ್ ವೀಡಿಯೊ ಮತ್ತು ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ಸೇವೆಯನ್ನು ಸಹ ಉಚಿತವಾಗಿ ನೀಡುತ್ತಿವೆ.

ಅನಿಯಮಿತ ಕರೆ ಮತ್ತು ಸಾಕಷ್ಟು ಡೇಟಾದ ಪ್ರಯೋಜನಗಳ ಜೊತೆಗೆ ಪೋಸ್ಟ್‌ಪೇಡ್ ಗ್ರಾಹಕರಿಗೆ ಇನ್ನಿತರ ಆಫರ್‌ಗಳನ್ನು ನೀಡುವ ಮೂಲಕ ಚಂದಾದಾರರ ಬೇಸ್ ಅನ್ನು ಹೆಚ್ಚಿಸಲು ಇದು ಟೆಲಿಕಾಂ ಸಂಸ್ಥೆಗಳಿಗೆ ಸಹಾಯಕವಾಗಲಿದೆ. ಹಾಗೆಯೇ, ಟೆಲಿಕಾಂ ಕ್ಷೇತ್ರದಲ್ಲಿ ಅಪಾರ ಸ್ಪರ್ಧೆಗೆ ಸಾಕ್ಷಿಯಾಗಿರುವ ಈ ವೇಳೆಯಲ್ಲಿ ಗ್ರಾಹಕರಿಗೆ ಈ ಆಫರ್‌ಗಳು ಅತ್ಯುತ್ತಮವಾಗಿ ಕಾಣುತ್ತಿವೆ. ಹಾಗಾಗಿ, ಈ ಲೇಖನದಲ್ಲಿ ಜಿಯೋ, ಏರ್‌ಟೆಲ್ ಸೇರಿದಂತೆ ವೊಡಾಫೋನ್ ಐಡಿಯಾ ನೀಡುತ್ತಿರುವ ಬೆಸ್ಟ್ ಪೋಸ್ಟ್ ಪೇಯ್ಡ್ ಯೋಜನೆಗಳ ಮಾಹಿತಿಯನ್ನು ನಾವಿಲ್ಲಿ ಮಾಡಿದ್ದೇವೆ.

ಜಿಯೋ 199 ರೂ. ಪೋಸ್ಟ್‌ಪೇಡ್ ಆಫರ್
ಅನಿಯಮಿತ ಕರೆ ಮತ್ತು ತಿಂಗಳಿಗೆ 25 ಜಿಬಿ ಡೇಟಾವನ್ನು ಹೊಂದಿರುವ ಈ ಪೋಸ್ಟ್‌ಪೇಡ್ ಆಫರ್ ಒಂದು ತಿಂಗಳ ಚಂದಾದಾರಿಕೆಯನ್ನು ಹೊಂದಿದೆ. ಈ ಆಫರ್‌ನಲ್ಲಿನ 25 ಜಿಬಿ ಬಳಕೆಯ ನಂತರ, ಪ್ರತಿ ಜಿಬಿ ಡೇಟಾಗೆ ಜಿಯೋ ರೂ 20 .ರೂ.ಗಳನ್ನು ನಿಗದಿ ಮಾಡಿದೆ. ಗ್ರಾಹಕರು ಜಿಯೋ ಅಪ್ಲಿಕೇಶನ್‌ಗಳ ಪೂರಕ ಚಂದಾದಾರಿಕೆ ಮತ್ತು ದಿನಕ್ಕೆ 100 SMS ಗಳನ್ನು ಪಡೆಯುತ್ತಾರೆ.

ಏರ್‌ಟೆಲ್ 399 ರೂ. ಪೋಸ್ಟ್‌ಪೇಡ್ ಆಫರ್
ಅನಿಯಮಿತ ಕರೆ, 40 ಜಿಬಿ 3ಜಿ / 4ಜಿ ಡೇಟಾವನ್ನು ಹೊಂದಿರುವ ಈ ಪೋಸ್ಟ್‌ಪೇಡ್ ಆಫರ್ ಒಂದು ತಿಂಗಳ ಚಂದಾದಾರಿಕೆಯನ್ನು ಹೊಂದಿದೆ. ಈ ಆಫರ್‌ನಲ್ಲಿನ ಮುಖ್ಯ ಲಾಭ ಎಂದರೆ ಬಳಕೆಯಾಗದ ಡೇಟಾವನ್ನು ಮುಂದಿನ ತಿಂಗಳು ಬಳಸಬಹುದಾಗಿದೆ. ಇನ್ನು ಒಂದು ವರ್ಷದವರೆಗೆ ಏರ್‌ಟೆಲ್ ಟಿವಿ ಮತ್ತು ಅಮೆಜಾನ್ ಪ್ರೈಮ್ ವಿಡಿಯೊಗಳ ಚಂದಾದಾರಿಕೆ ಉಚಿತವಾಗಿದೆ.

ಏರ್‌ಟೆಲ್ 499 ರೂ. ಪೋಸ್ಟ್‌ಪೇಡ್ ಆಫರ್
ಅನಿಯಮಿತ ಕರೆ, 75 ಜಿಬಿ 3ಜಿ / 4ಜಿ ಡೇಟಾ ಹೊಂದಿರುವ ಈ ಪೋಸ್ಟ್‌ಪೇಡ್ ಆಫರ್ ಒಂದು ತಿಂಗಳ ಚಂದಾದಾರಿಕೆಯನ್ನು ಹೊಂದಿದೆ. ಈ ಆಫರ್‌ನಲ್ಲಿ ಬಳಕೆದಾರರು ಏರ್‌ಟೆಲ್ ಟಿವಿ, ನೆಟ್‌ಫ್ಲಿಕ್ಸ್ ಮೂರು ತಿಂಗಳು ಮತ್ತು ಅಮೆಜಾನ್ ಪ್ರೈಮ್ ವಿಡಿಯೋಗೆ ಒಂದು ವರ್ಷದವರೆಗೆ ಚಂದಾದಾರರಾಗುತ್ತಾರೆ. ಜೊತೆಗೆ ಹ್ಯಾಂಡ್ಸೆಟ್ ರಕ್ಷಣೆಯೂ ಸಹ ಯೋಜನೆಯೊಂದಿಗೆ ಬಂದಿದೆ.

ವೊಡಾಫೋನ್ 399 ರೂ.ಪೋಸ್ಟ್‌ಪೇಡ್ ಆಫರ್
ಅನಿಯಮಿತ ಕರೆ, 40 ಜಿಬಿ 4G ಡೇಟಾವನ್ನು ಹೊಂದಿರುವ ಈ ಪೋಸ್ಟ್‌ಪೇಡ್ ಆಫರ್ ಒಂದು ತಿಂಗಳ ಚಂದಾದಾರಿಕೆಯನ್ನು ಹೊಂದಿದೆ. ಈ ಆಫರ್‌ನಲ್ಲಿ ವೊಡಾಪೋನ್ 200 ಜಿಬಿ ವರೆಗೆ ರೋಲ್ ಓವರ್ ಪ್ರಯೋಜನವನ್ನು ನೀಡುತ್ತದೆ. ಜೊತೆಗೆ ವೊಡಾಫೋನ್ ಪ್ಲೇ ಮತ್ತು ಒಂದು ವರ್ಷದಅಮೆಜಾನ್ ಪ್ರೈಮ್ ಸೇರಿದಂತೆ ಗ್ರಾಹಕರು ಹಲವು ಸೌಲಭ್ಯಗಳನ್ನು ಪಡೆಯಬಹುದು.

ವೊಡಾಫೋನ್ 499 ರೂ. ಪೋಸ್ಟ್‌ಪೇಡ್ ಆಫರ್
ಅನಿಯಮಿತ ಕರೆ, 75 ಜಿಬಿ 4G ಡೇಟಾವನ್ನು ಹೊಂದಿರುವ ಈ ಪೋಸ್ಟ್‌ಪೇಡ್ ಆಫರ್ ಒಂದು ತಿಂಗಳ ಚಂದಾದಾರಿಕೆಯನ್ನು ಹೊಂದಿದೆ. ಈ ಪ್ಯಾಕ್ ಕೂಡ ಬಿಲ್ ಖಾತರಿಯೊಂದಿಗೆ ಬರುತ್ತದೆ. ಜೊತೆಗೆ ವೊಡಾಫೋನ್ ಪ್ಲೇಗೆ ಮತ್ತು ಒಂದು ವರ್ಷದ ಅಮೆಜಾನ್ ಪ್ರೈಮ್ ಉಚಿತವಾಗಿರುವ ಈ ಆಫರ್ ಲಾಭವು ವೊಡಾಫೋನ್ ರೆಡ್ ಮೊಬೈಲ್ ಶೀಲ್ಡ್ ಜೊತೆಗೆ ಬರುತ್ತದೆ.


Click it and Unblock the Notifications








