Home
ಸುದ್ದಿಜಾಲ

ಪ್ರೀಪೆಯ್ಡ್ ಬಿಟ್ಟು ಪೋಸ್ಟ್‌ಪೇಯ್ಡ್ ಶುರು ಮಾಡಲು ಬೆಸ್ಟ್ ಪ್ಲಾನ್‌ಗಳು...!

By Srinidhi

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಪೋಸ್ಟ್‌ಪೇಯ್ಡ್ ಬಳಕೆದಾರರನ್ನು ಸೆಳೆಯುವ ಸಲುವಾಗಿ ಸಾಕಷ್ಟು ಹೊಸ ಪ್ಲಾನ್‌ಗಳನ್ನು ಲಾಂಚ್ ಮಾಡಲು ಯೋಜನೆಯನ್ನು ತಯಾರಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಜಿಯೋ, ಏರ್‌ಟೆಲ್, ವೊಡಾಫೋನ್ ಮತ್ತು BSNLಗಳು ತಮ್ಮದೇ ಆದ ನೂತನ ಪ್ಲಾನ್ ಗಳನ್ನು ಲಾಂಚ್ ಮಾಡುತ್ತಿವೆ. ಬಳಕೆದಾರರಿಗೆ ಯಾವುದು ಬೆಸ್ಟ್ ಆಫರ್ ಎಂದು ಆಯ್ಕೆಯನ್ನು ಮಾಡಿಕೊಳ್ಳಲು ಕಷ್ಟವಾಗುತ್ತಿರುವ ಹಿನ್ನಲೆಯಲ್ಲಿ ಬೆಸ್ಟ್ ಫೋಸ್ಟ್ ಪೇಯ್ಡ್ ಪ್ಲಾನ್ ಗಳ ಕುರಿತು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಪ್ರೀಪೆಯ್ಡ್ ಬಿಟ್ಟು ಪೋಸ್ಟ್‌ಪೇಯ್ಡ್ ಶುರು ಮಾಡಲು ಬೆಸ್ಟ್ ಪ್ಲಾನ್‌ಗಳು...!

ಮಾರುಕಟ್ಟೆಯಲ್ಲಿ ಪೋಸ್ಟ್ ಪೇಯ್ಡ್ ಬಳಕೆದಾರರು ಹೆಚ್ಚಿನ ನಿಷ್ಠೆಯನ್ನು ಹೊಂದಿರುವ ಕಾರಣ ಅವರನ್ನು ಸೆಳೆಯಲು ಎಲ್ಲಾ ಟೆಲಿಕಾಂ ಕಂಪನಿಗಳು ಮುಂದಾಗಿವೆ. ಅಲ್ಲದೇ ಪೋಸ್ಟ್‌ಪೇಯ್ಡ್ ಬಳಕೆದಾರರು ಕಾರಣವಿಲ್ಲದೇ ತಮ್ಮ ಸೇವೆಯನ್ನು ಬಿಟ್ಟು ಹೋಗುವುದಿಲ್ಲ ಎಂಬುದನ್ನು ತಿಳಿದುಕೊಂಡಿರುವ ಟೆಲಿಕಾಂ ಕಂಪನಿಗಳು, ಹೊಸ ಮಾದರಿಯಲ್ಲಿ ಸೇವೆ ಆರಂಭಿಸಲು, ಹೆಚ್ಚು ಆಫರ್ ಗಳನ್ನು ನೀಡಲು ಮುಂದಾಗಿವೆ. ಈ ಹಿನ್ನಲೆಯಲ್ಲಿ ಪೋಸ್ಟ್ ಪೇಯ್ಡ್ ಪ್ಲಾನ್ ಗಳು ಕುರಿತ ಮಾಹಿತಿ ಇಲ್ಲಿದೆ.

ಜಿಯೋ ಪ್ಲಾನ್ ರೂ.199:

ಜಿಯೋ ಪ್ಲಾನ್ ರೂ.199:

ಪೋಸ್ಟ್ ಪೇಯ್ಡ್ ಮಾರುಕಟ್ಟೆಯಲ್ಲಿಯೂ ಹೊಸದಾಗಿ ಸ್ಪರ್ಧೆಯನ್ನು ಆರಂಭಿಸಿದ ಜಿಯೋ, ಇಲ್ಲಿಯೂ ರೂ.199 ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಳಕೆದಾರರಿಗೆ ತಿಂಗಳಿಗೆ 25GB ಡೇಟಾವನ್ನು ಬಳಕೆಗೆ ನೀಡಲಿದೆ. ಅಲ್ಲದೇ ಉಚಿತವಾಗಿ ಅನ್‌ಲಿಮಿಟೆಡ್ ಕರೆಗಳನ್ನು ಮಾಡುವ ಅವಕಾಶವನ್ನು ಕಲ್ಪಿಸಿದೆ. ಇದಲ್ಲದೇ ಇಲ್ಲಿ ಬಳಕೆದಾರರಿಗೆ ಇಂಟರ್ ನ್ಯಾಷಿನಲ್ ಕರೆಗಳನ್ನು ಮಾಡುವ ಅವಕಾಶವು ಲಭ್ಯವಿದೆ. ಇದುವೇ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ಎನ್ನುವುದು ಮತ್ತೊಂದು ವಿಶೇಷ.

ವೊಡಾಫೋನ್ ರೂ,299 ಪ್ಲಾನ್:

ವೊಡಾಫೋನ್ ರೂ,299 ಪ್ಲಾನ್:

ವೊಡಾಫೋನ್ ಸಹ ಉತ್ತಮವಾದ ಆಫರ್ ವೊಂದನ್ನು ಲಾಂಚ್ ಮಾಡಿದ್ದು, ರೂ.299 ಬೆಸಿಕ್ ಪ್ಲಾನ್ ನಲ್ಲಿ ಬಳಕೆದಾರರಿಗೆ 20GB ಡೇಟಾವನ್ನು ನೀಡಲಿದೆ. ಇದರೊಂದಿಗೆ ಉಚಿತವಾಗಿ ಕರೆ ಮಾಡುವ ಮತ್ತು ರೋಮಿಂಗ್ ಅನ್ನು ಉಚಿತವಾಗಿಸಿದೆ. ಅಲ್ಲದೇ ವೊಡಾಫೋನ್ ಪೇ ಮೂಲಕ ಪ್ಲಾನ್ ಖರೀದಿಸಿದರೆ ಹೆಚ್ಚಿನ ಲಾಭ ದೊರೆಯಲಿದೆ.

ಐಡಿಯಾ ರೂ.398 ಪ್ಲಾನ್:

ಐಡಿಯಾ ರೂ.398 ಪ್ಲಾನ್:

ಪೋಸ್ಟ್ ಪೇಯ್ಡ್ ಮಾರುಕಟ್ಟೆಯಲ್ಲಿ ಐಡಿಯಾ ಸಹ ಹೊಸ ಮಾದರಿಯ ಪ್ರಯತ್ನಕ್ಕೆ ಕೈ ಹಾಕಿದೆ. ರೂ.398 ಪ್ಲಾನ್ ನಲ್ಲಿ ಬಳಕೆದಾರರಿಗೆ ತಿಂಗಳಿಗೆ 20GB ಡೇಟಾವನ್ನು ಬಳಕೆಗೆ ನೀಡಲಿದ್ದು, ಇದು ಸಹ ಡೇಟಾ ಕ್ಯಾರಿ ಮಾಡುವ ಆಯ್ಕೆಯನ್ನು ಹೊಂದಿದೆ. ಇದರೊಂದಿಗೆ ಬಳಕೆದಾರರಿಗೆ ಉಚಿತವಾಗಿ ಕರೆ ಮಾಡುವ ಮತ್ತು ರೋಮಿಂಗ್ ಆಯ್ಕೆಯನ್ನು ನೀಡಿದೆ. ಅಲ್ಲದೇ ಐಡಿಯಾ ನೀಡುತ್ತಿರುವ ಎಲ್ಲಾ ಆಪ್ ಸೇವೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

BSNL ಪೋಸ್ಟ್ ಪೇಯ್ಡ್ ಪ್ಲಾನ್ 399:

BSNL ಪೋಸ್ಟ್ ಪೇಯ್ಡ್ ಪ್ಲಾನ್ 399:

ಸರ್ಕಾರಿ ಸ್ವಾಮ್ಯದ BSNL ತನ್ನ ಬಳಕೆದಾರರಿಗೆ ನೀಡಿರುವ ಪೋಸ್ಟ್ ಪೇಯ್ಡ್ ಪ್ಲಾನ್ ರೂ.399ನಲ್ಲಿ 30GB ಡೇಟಾವನ್ನು ಪ್ರತಿ ತಿಂಗಳು ನೀಡಲಿದೆ. ಅಲ್ಲದೇ ಅನ್ ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಅಲ್ಲದೇ ಇನ್ನು ಹೆಚ್ಚಿನ ಲಾಭವನ್ನು ಈ ಪ್ಲಾನ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಏರ್‌ಟೆಲ್ ರೂ.399 ಪ್ಲಾನ್:

ಏರ್‌ಟೆಲ್ ರೂ.399 ಪ್ಲಾನ್:

ಪ್ರತಿ ತಿಂಗಳು 20GB ಡೇಟಾವನ್ನು ಈ ಪ್ಲಾನ್ ನಲ್ಲಿ ಏರ್‌ಟೆಲ್ ನೀಡಲಿದೆ. ಅಲ್ಲದೇ ಹೆಚ್ಚವರಿ ಡೇಟಾವನ್ನು ಮುಂದಿನ ತಿಂಗಳಿಗೆ ಕ್ಯಾರಿ ಮಾಡುವ ಅವಕಾಶವನ್ನು ನೀಡಿದೆ. ಇದಲ್ಲದೇ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ಇದರಲ್ಲಿದೆ. ಜೊತೆಗೆ ಏರ್‌ಟೆಲ್ ಮೂಸಿಕ್ ಆಪ್‌ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Postpaid Plans Under Rs 400 Being Offered by Telcos. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+