Just In
Don't Miss
- News
ಕರ್ನಾಟಕದ 18 ಜಿಲ್ಲೆಗಳಲ್ಲಿ ಒಂದಂಕಿ ಕೊರೊನಾವೈರಸ್ ಪ್ರಕರಣ
- Sports
ಅಸಾಧಾರಣ ಆಟಗಾರರಿಂದಾಗಿ ಭಾರತದ ವಿರುದ್ಧ ಇಂಗ್ಲೆಂಡ್ ಗೆಲ್ಲಲಿದೆ: ಆ್ಯಂಡಿ ಫ್ಲವರ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 28ರ ದರ
- Automobiles
ಮೆಕ್ಸಿಕೋ ಮಾರುಕಟ್ಟೆಗೆ ಕಾಲಿಡಲಿದೆ ಹೀರೋ ಮೋಟೊಕಾರ್ಪ್
- Movies
ರಾಬರ್ಟ್, ಪೊಗರು, ಕೋಟಿಗೊಬ್ಬ 3 ಬಗ್ಗೆ ಪುನೀತ್ ರಾಜ್ಕುಮಾರ್ ಮಾತು
- Lifestyle
ಶನಿ ಸಂಚಾರ 2021: ನಿಮ್ಮ ರಾಶಿಯ ಮೇಲೆ ವರ್ಷ ಪೂರ್ತಿ ಇರಲಿದೆ ಶನಿಯ ಪ್ರಭಾವ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪೋರ್ಟ್ರಾನಿಕ್ಸ್ ಕಂಪೆನಿಯಿಂದ ವೈಯಾರ್‌ಲೆಸ್ ಇಯರ್‌ಬಡ್ ಬಿಡುಗಡೆ!
ಟೆಕ್ ಮಾರುಕಟ್ಟೆಯಲ್ಲಿ ವೈರ್‌ಲೆಸ್ ಇಯರ್‌ಬಡ್‌ಗಳಿಗೆ ಇದೀಗ ಸಿಕ್ಕಾಪಟ್ಟೆ ಬೇಡಿಕೆ ಇದೆ. ಸ್ಮಾರ್ಟ್‌ಫೋನ್‌ಗಳ ಭರಾಟೆ ಹೆಚ್ಚಾದಂತೆ ವೈರ್‌ಲೆಸ್ ಇಯರ್‌ಬಡ್‌ಗಳ ಮಾರುಕಟ್ಟೆ ಕೂಡ ವಿಸ್ತಾರವಾಗ್ತಿದೆ. ಈಗಾಗ್ಲೆ ಹಲವಾರು ಕಂಪೆನಿಗಳ ಇಯರ್‌ಬಡ್‌ಗಳು ಖರೀದಿಗೆ ಲಭ್ಯವಿದೆ. ಇದೀಗ ಸ್ಮಾರ್ಟ್‌ಪ್ರಾಡಕ್ಟ್‌ಗಳ ಜನಪ್ರಿಯ ಕಂಪೆನಿ ಪೋರ್ಟೋನಿಕ್ಸ್ ಹೊಸ ಮಾದರಿಯ ವೈರ್‌ಲೆಸ್ ಇಯರ್‌ಬಡ್‌ಗಳನ್ನು ಭಾದರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಹೌದು, ಜನಪ್ರಿಯ ಕಂಪೆನಿ ಪೋರ್ಟೋನಿಕ್ಸ್ ತನ್ನ ಹೊಸ ಮಾದರಿಯ ವೈಯಾರ್ ಲೆಸ್ ಇಯರ್‌ಬಡ್‌ಗಳನ್ನ ಲಾಂಚ್ ಮಾಡಿದೆ. ಸದ್ಯ ಹೊಸದಾಗಿ ಬಿಡುಗಡೆಯಾದ ಪೋರ್ಟ್ರಾನಿಕ್ಸ್ ಕಂಪೆನಿಯ ಇಯರ್‌ಬಡ್‌ಗಳನ್ನ ಹಾರ್ಮೋನಿಕ್ಸ್ ಟ್ವಿನ್ಸ್ ಮಿನಿ ಇಯರ್‌ಬಡ್‌ಗಳು ಎಂದು ಹೆಸರಿಸಲಾಗಿದ್ದು, ಇದು ಇಂದಿನ ಯುವಜನತೆಯೆ ಆಶಯಗಳಿಗೆ ತಕ್ಕಂತೆ ವಿನ್ಯಾಸಗೊಂಡಿದ್ದು ಕಿವಿಯಲ್ಲಿ ಧರಿಸಲು ಉತ್ತಮ ಆಕಾರವನ್ನ ಹೊಂದಿದೆ. ಇನ್ನು ಈ ವೈಯಾರ್ ಲೆಸ್ ಇಯರ್‌ಬಡ್‌ಗಳು ಭಾರತದಲ್ಲಿ 3,499 ರೂ.ಬೆಲೆಯನ್ನ ಹೊಂದಿದೆ.

ಇನ್ನು ಈ ಹೊಸ ವಿನ್ಯಾಸದ ಪೋರ್ಟ್ರಾನಿಕ್ಸ್ ಇಯರ್‌ಬಡ್‌ಗಳು ಸೆಟ್ ಟ್ರೂ ವೈರ್‌ಲೆಸ್ ಸ್ಟಿರಿಯೊ (ಟಿಡಬ್ಲ್ಯೂಎಸ್) ಧ್ವನಿಯನ್ನು ಹೊಂದಿದ್ದು, 8 ಎಂಎಂ ಸ್ಪೀಕರ್ ಡ್ರೈವರ್‌ಗಳ ಮೂಲಕ ಶಕ್ತಿಯುತವಾದ ಬಾಸ್ ಕಾರ್ಯಕ್ಷಮತೆಯನ್ನ ಒಳಗೊಂಡಿದೆ. ಅಲ್ಲದೆ ಉತ್ತಮ ಸೌಂಡ್ ಸಿಸ್ಟಂ ಅನ್ನ ಹೊಂದಿರುವುದರಿಂದ ಬಳಕೆದಾರರಿಗೆ ಎಚ್‌ಡಿ ಸ್ಟಿರಿಯೊ ಧ್ವನಿ ಅನುಭವಸಿಗಲಿದೆ. ಅಲ್ಲದೆ ಈ ಇಯರ್ ಬಡ್‌ಗಳಿಂದ ಉತ್ತಮ ಧ್ವನಿ ಮಾದರಿಯನ್ನ ಕೇಳಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಸದ್ಯ ಪೋರ್ಟ್ರಾನಿಕ್ಸ್ ಕಂಪೆನಿಯ ಈ ಟ್ವಿನ್ಸ್ ಇಯರ್‌ಬಡ್‌ಗಳು ಇನ್‌ಬಿಲ್ಟ್ 320mAh ಬ್ಯಾಟರಿ ಪ್ಯಾಕ್‌ಆಪ್ ಅನ್ನ ಹೊಂದಿದೆ. ಅಲ್ಲದೆ ಈ ಇಯರ್‌ಬಡ್‌ಗಳು 40mAh ಬ್ಯಾಟರಿಯನ್ನು ಹೊಂದಿದ್ದು, ಅದು 12 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಎಂದು ಪೋರ್ಟ್ರೋನಿಕ್ಸ್ ಕಂಪೆನಿ ಹೇಳಿದೆ. ಜೊತೆಗೆ ಈ ವೈಯರ್‌ಲೆಸ್ ಇಯರ್‌ಬಡ್‌ಗಳು ಗಾತ್ರದಲ್ಲಿ ತುಂಬಾ ಹಗುರವಾಗಿದ್ದು ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ.

ಈ ವೈಯಾರ್‌ಲೆಸ್ ಇಯರ್‌ಬಡ್‌ಗಳು ತುಂಬಾ ಆಕರ್ಷಕವಾಗಿದ್ದು ಒಂದು ವರ್ಷದ ಗ್ಯಾರಂಟಿಯನ್ನು ಸಹ ಹೊಂದಿದೆ. ಉತ್ತಮ ಪ್ಲೇಬ್ಯಾಕ್ ಮ್ಯೂಸಿಕ್ ಕೂಡ ಲಭ್ಯವಿರುವುದರಿಂದ ಮಾರುಕಟ್ಟೆಯಲ್ಲಿ ಸಖತ್ ಸೌಂಡ್ ಮಾಡ್ತಿದೆ. ಅಷ್ಟೇ ಅಲ್ಲ ಈ ಇಯರ್ ಬಡ್‌ನ ವಿನ್ಯಾಸ ಕೂಡ ಉತ್ತಮವಾಗಿರೊದ್ರಿಂದ ಬಳಕೆದಾರರನ್ನ ಆಕರ್ಷಿಸುವ ಸೂಚನೆ ಕೂಡ ನೀಡಿದೆ. ಇದರ ಸ್ಟೀರಿಯೋ ಧ್ವನಿ ಮಾದರಿ ಕೂಡ ಇಂಪಾಗಿರುವುದರಿಂದ ಉತ್ತಮ ಸಂಗೀತದ ಅನುಭವ ನೀಡುತ್ತದೆ.

ಇನ್ನು ಈ ಇಯರ್‌ಬಡ್‌ಗಳು ಬ್ಲೂಟೂತ್ 5.0 ಸಂಪರ್ಕಕ್ಕೆ ಬೆಂಬಲವನ್ನು ನೀಡಲಿದ್ದು, ಎಲ್ಇಡಿ ಬೆಳಕಿನ ಸೂಚಕ ಫಲಕವನ್ನು ಸಹ ಹೊಂದಿದೆ. ಅಲ್ಲದೆ ಪೋರ್ಟ್ರೋನಿಕ್ಸ್‌ನ ವೈರ್‌ಲೆಸ್ ಇಯರ್‌ಬಡ್‌ಗಳು ಮೂರು ವಿಭಿನ್ನ ಗಾತ್ರಗಳಲ್ಲಿ ಲಭ್ಯವಿದೆ. ಸದ್ಯ ಹಾರ್ಮೋನಿಕ್ಸ್ ಟ್ವಿನ್ಸ್ ಮಿನಿ ಇಯರ್‌ಬಡ್‌ಗಳನ್ನು ಕೇವಲ ಕಪ್ಪು ಬಣ್ಣದ ರೂಪಾಂತರದಲ್ಲಿ ಮಾತ್ರ ಲಾಂಚ್ ಮಾಡಲಾಗಿದ್ದು, ಇಯರ್‌ಫೋನ್‌ಗಳು ಆನ್‌ಲೈನ್ ಮತ್ತು ಆಫ್‌ಲೈನ್ ಮಳಿಗೆಗಳ ಮೂಲಕ ಖರೀದಿಗೆ ಲಭ್ಯವಿದೆ. ಸದ್ಯ ಇದರ ಬೆಲೆ 3,499 ರೂ ಆಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190