ದೇಶದಲ್ಲಿ 80 ಸಾವಿರ ಉದ್ಯೋಗ ಸೃಷ್ಟಿಸಲಿದೆ ಪವರ್‌ಬ್ಯಾಂಕ್ ಉದ್ಯಮ!!
ಬೀದಿಬೀದಿಯಲ್ಲಿ ನೂರು ಇನ್ನೂರಕ್ಕೆ ಮಾರಾಟವಾಗುತ್ತಿರುವ ಪವರ್‌ಬ್ಯಾಂಕ್‌ಗಳ ಉದ್ಯಮವು 80 ಸಾವಿರ ಉದ್ಯೋಗ ಸೃಷ್ಟಿಸಲಿದೆ ಎಂದು ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್(ಐಸಿಇಎ) ಹೇಳಿದೆ. ಸರಿಯಾದ ನಿಯಮಗಳನ್ನು ಜಾರಿಗೊಳಿಸಿದರೆ ಭಾರತದಲ್ಲಿ ಪವರ್ ಬ್ಯಾಂಕ್ ಉದ್ಯಮ ಭಾರೀ ಬೆಳವಣಿಗೆ ಕಾಣಿಲಿದೆ ಎಂದು ಐಸಿಇಎ ತಿಳಿಸಿದೆ.
ಹೌದು, ಸರಿಯಾದ ನಿಯಮಗಳನ್ನು ಜಾರಿಗೊಳಿಸಿದರೆ ಭಾರತದಲ್ಲಿ 2025ರ ವೇಳೆಗೆ ಪವರ್ ಬ್ಯಾಂಕ್ ಗಳ ಉದ್ಯಮ ಒಂಬತ್ತು ಪಟ್ಟು ಹೆಚ್ಚು ಬೆಳೆಯಲಿದ್ದು, 18 ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗುವ ಸಾಧ್ಯತೆ ಇದೆ ಮತ್ತು ದೇಶದಲ್ಲಿ 80 ಸಾವಿರ ಉದ್ಯೋಗ ಸೃಷ್ಟಿಸಲಿದೆ ಎಂದು ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್(ಐಸಿಇಎ) ಅಂದಾಜಿಸಿದೆ.

ಭಾರತಕ್ಕೆ ಪ್ರತಿ ವರ್ಷ ಅಗತ್ಯವಿರುವ ಸುಮಾರು 2 ಸಾವಿರ ಕೋಟಿ ರೂಪಾಯಿ ಮೌಲ್ಯದ 33 ಮಿಲಿಯನ್ ಪವರ್ ಬ್ಯಾಂಕ್‌ಗಳಲ್ಲಿ ಬಹುತೇಕ ಆಮದು ಮಾಡಿಕೊಳ್ಳಲಾಗುತ್ತಿದ್ದು, ದೇಶದಲ್ಲಿ ಪವರ್‌ಬ್ಯಾಂಕ್‌ಗಳನ್ನು ತಯಾರಿಸಲು ಹಂತ ಹಂತವಾಗಿ ನಿರ್ಮಾಣ ಯೋಜನೆ ತರಬೇಕು. ಆಗ ದೇಶದಲ್ಲಿ ಪವರ್‌ಬ್ಯಾಂಕ್‌ಗಳ ಉತ್ಪಾದನೆ ಹೆಚ್ಚಾಗುತ್ತದೆ ಎಂದು ಐಸಿಇಎ ಸಲಹೆ ನೀಡಿದೆ.
ಆಮದು ಪವರ್‌ಬ್ಯಾಂಕ್‌ಗಳ ಮೇಲೆ ತೆರಿಗೆ ವಿಧಿಸುವ ಬದಲು ದೇಶದಲ್ಲೇ ಪವರ್‌ಬ್ಯಾಂಕ್‌ಗಳನ್ನು ಉತ್ಪಾದನೆ ಮಾಡುವುದರಿಂದ ಈ ಉದ್ಯಮ ಒಂಬತ್ತು ಪಟ್ಟು ಹೆಚ್ಚು ಬೆಳೆಯಲಿದೆ. ಸರಿಯಾದ ನಿಯಮಗಳನ್ನು ಜಾರಿಗೊಳಿಸಿದರೆ ಈ ಉದ್ಯಮದಲ್ಲಿ 18 ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗಿ 80 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಮೊಬೈಲ್ ಫೋನ್ ಮತ್ತು ಬಿಡಿಭಾಗಗಳ ಸಂಸ್ಥೆಯ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 2 ಸಾವಿರ ಕೋಟಿ ಮೌಲ್ಯದ ಪವರ್ ಬ್ಯಾಂಕ್‌ಗಳ ಅಗತ್ಯವಿದೆ. ಪವರ್‌ಬ್ಯಾಂಕ್ ನಿರ್ಮಾಣಕ್ಕೆ ಸಂಬಂಧಿದಂತೆ ಸರಿಯಾದ ನಿಯಮಗಳನ್ನು ಜಾರಿಗೊಳಿಸಿದರೆ ರಫ್ತು ಪ್ರಮಾಣ ಸಹ 5,800 ಕೋಟಿಗೆ ತಲುಪಲಿದೆ ಎಂದು ಐಸಿಇಎ ಅಧ್ಯಕ್ಷ ಪಂಕಜ್ ಮೋಹಿಂದ್ರೂ ಅವರು ಹೇಳಿದ್ದಾರೆ.


Click it and Unblock the Notifications