Home
ಸುದ್ದಿಜಾಲ

ಭಾರತದಲ್ಲಿ Spotify ನಿಂದ ಹೊಸ ಸಬ್ಸ್ಕ್ರಿಪ್ಷನ್ ಪ್ಲ್ಯಾನ್‌ಗಳು ಬಿಡುಗಡೆ!

ಭಾರತದಲ್ಲಿ ಮ್ಯೂಸಿಕ್‌ ಸ್ಟ್ರೀಮಿಂಗ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನಪ್ರಿಯ ಆಡಿಯೋ ತಾಣ Spotify ತನ್ನ ಚಂದಾದಾರಿಕೆ ಯೋಜನೆಗಳನ್ನು ಮತ್ತೊಮ್ಮೆ ವಿಸ್ತರಿಸಿದೆ. ದೇಶದ ಗ್ರಾಹಕರು ಈಗ Premium Lite, Premium Standard ಮತ್ತು Premium Platinum ಎಂಬ ಹೊಸ ಮೂರು ಚಂದಾದಾರಿಕೆ ಪ್ಲ್ಯಾನ್‌ಗಳನ್ನು ಪಡೆದಿದ್ದು, ಈ ಪ್ಲ್ಯಾನ್‌ಗಳು ಬಳಕೆದಾರರಿಗೆ ಇನ್ನಷ್ಟು ಆಯ್ಕೆ ಮತ್ತು ಪ್ರಯೋಜನಗಳನ್ನು ನೀಡುತ್ತವೆ. ಹೊಸದಾಗಿ ಪರಿಚಯಿಸಲಾಗಿರುವ ಪ್ರತಿ ಪ್ಲ್ಯಾನ್ ಕೂಡ ಕೇಳುವ ಅಭ್ಯಾಸ, ಬಜೆಟ್ ಮತ್ತು ತಂತ್ರಜ್ಞಾನ ಬಳಕೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ ಎಂದು Spotify ಕಂಪೆನಿ ತಿಳಿಸಿದೆ. ಹಾಗಾದರೆ, Spotify ಪರಿಚಯಿಸಿರುವ ಹೊಸ ಚಂದಾದಾರಿಕೆ ಯೋಜನೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Premium Lite: ಜಾಹೀರಾತು ಇಲ್ಲದ ಸಂಗೀತ ಮತ್ತು ಕಡಿಮೆ ಬೆಲೆ
ಹೊಸದಾಗಿ ತಿಂಗಳಿಗೆ ₹139 ರೂ.ಗೆ Premium Lite Spotify ಎಂಬ ಎಂಟ್ರಿ-ಲೆವಲ್ ಪ್ಲ್ಯಾನ್ ಬಂದಿದೆ. ಈ ಯೋಜನೆಯಲ್ಲಿ ಜಾಹೀರಾತಿಗಳಿಲ್ಲದ ನಿರಂತರ ಸ್ಟ್ರೀಮಿಂಗ್ ಇರಲಿದೆ. ಆದರೆ, ಈ ಪ್ಲ್ಯಾನ್ನಲ್ಲಿ ಡೌನ್‌ಲೋಡ್‌ ಸೌಲಭ್ಯ ಇಲ್ಲ ಪ್ರತಿ ದಿನ ಹಾಡು ಕೇಳೋಕೆ ಬಯಸುವ, ಆದರೆ ಹೆಚ್ಚಿನ ವೈಶಿಷ್ಟ್ಯಗಳ ಅಗತ್ಯವಿಲ್ಲದ ಬಳಕೆದಾರರಿಗೆ ಇದು ಸರಿಯಾದ ಆಯ್ಕೆಯಾಗಬಹುದು.

Premium Standard: ಹೆಚ್ಚು ಸಮತೋಲನದ ಪ್ಲ್ಯಾನ್
ನೀವು ಸ್ವಲ್ಪ ಹೆಚ್ಚಿನ ಸೌಲಭ್ಯಗಳನ್ನು ಪಡೆಯಲು ₹199 ಬೆಲೆಯ Premium Standard ಚಂದಾದಾರಿಕೆಯನ್ನು ಆರಿಸಿಕೊಳ್ಳಬಹುದು. ಇದರಲ್ಲಿ ಹೈ-ಕ್ವಾಲಿಟಿ ಆಡಿಯೋ, ಜಾಹೀರಾತಿ ರಹಿತ ಅನುಭವ ಮತ್ತು ಆಫ್‌ಲೈನ್‌ ಡೌನ್‌ಲೋಡ್‌ ನಂತರಹ ಉತ್ತಮ ಸೌಲಭ್ಯಗಳು ದೊರೆಯುತ್ತವೆ. ವಿದ್ಯಾರ್ಥಿಗಳು Student Plan ಮೂಲಕ ಇದೇ ಅನುಭವವನ್ನು ಕೇವಲ ₹99ಕ್ಕೆ ಪಡೆಯಬಹುದು.

ಭಾರತದಲ್ಲಿ Spotify ನಿಂದ ಹೊಸ ಸಬ್ಸ್ಕ್ರಿಪ್ಷನ್ ಪ್ಲ್ಯಾನ್‌ಗಳು ಬಿಡುಗಡೆ!

Premium Platinum: AI ಪ್ರೀಮಿಯಂ ಮ್ಯೂಸಿಕ್ ಅನುಭವ
Spotify ಪರಿಚಯಿಸಿರುವ ಮೂರನೇ ಹೊಸ Platinum ಪ್ಲ್ಯಾನ್ ತಿಂಗಳಿಗೆ ₹299 ರೂ.ಗೆ ಲಭ್ಯವಿವೆ. ಇದು ಆಪ್ಲಿಕೇಶನ್‌ನಲ್ಲಿರುವ ಅತ್ಯುತ್ತಮ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಇದರಲ್ಲಿ,
AI DJ: ನಿಮ್ಮ ರುಚಿಗೆ ತಕ್ಕಂತೆ AI ಹಾಡುಗಳನ್ನು ನೇರವಾಗಿ ಮಿಕ್ಸ್ ಮಾಡಿ ಪ್ಲೇ ಮಾಡುತ್ತದೆ
AI Playlist Generator: ಸ್ವಯಂಚಾಲಿತವಾಗಿ ಹೊಸ ಪ್ಲೇಲಿಸ್ಟ್‌ಗಳು
Lossless Audio: CD ಮಟ್ಟದ ಶಬ್ದ ಗುಣಮಟ್ಟ
DJ Software Integration: DJs ಬಳಸುವ ತೃತೀಯ ಪಕ್ಷದ ಸಾಧನಗಳೊಂದಿಗೆ ಸಂಪರ್ಕ
ಒಂದು ಪ್ಲ್ಯಾನ್‌ನಲ್ಲಿ ಮುಂದುವರಿದಂತೆ ಇನ್ನೂ 2 ಸದಸ್ಯರಿಗೆ ಪ್ರತ್ಯೇಕ ಖಾತೆಗಳು ದೊರೆಯಲಿವೆ.
ಈ ಪ್ಲ್ಯಾನ್‌ನಲ್ಲಿ ಚಂದಾದಾರರು ಅತ್ಯುನ್ನತ ಗುಣಮಟ್ಟದ ಕೇಳುವ ಅನುಭವ ಪಡೆಯಲಿದ್ದಾರೆ. AI ಆಧಾರಿತ ಕ್ಯೂರೆಷನ್ ಬೇಕಿರುವ ಸಂಗೀತ ಪ್ರಿಯರಿಗೆ ಇದು ಪರಿಪೂರ್ಣ ಆಯ್ಕೆಯಾಗಿದೆ.

ಸಿಹಿಸುದ್ದಿ: Smarter Shuffle ಬಂದಿದೆ.
ಈ ಚಂದಾದಾರಿಕೆಗಳ ಜೊತೆಗೆ Spotify ಹೊಸ Shuffle Mode ಅನ್ನು ಪರಿಚಯಿಸಿದೆ. ಇದು ಹಾಡುಗಳ ಪುನರಾವರ್ತನೆ ಕಡಿಮೆಮಾಡಿ, ಹೊಸ ಹಾಡುಗಳನ್ನು ಕಂಡುಹಿಡಿಯುವ ಅವಕಾಶ ಹೆಚ್ಚಿಸುತ್ತದೆ. ಹಳೆಯ Shuffle ಇಷ್ಟವಿರುವವರು ಈ ತಮ್ಮ ಸೆಟ್ಟಿಂಗ್ಸ್ ಅನ್ನು Settings > Playback > Shuffle Mode > Standard ಎಂದು ಬದಲಾಯಿಸಬಹುದು. ಇದು ನಿಮ್ಮ ಅನುಭವವನ್ನು ಬದಲಾಯಿಸುವ ನಿರೀಕ್ಷೆ ನೀಡಿದೆ.

Spotify ಚಂದಾದಾರಿಕೆ ಪ್ಲ್ಯಾನ್‌ಗಳು(2025)

  • Premium Lite : ₹139
  • Premium Standard: ₹199
  • Premium Platinum: ₹299
  • Student Plan: ₹99
  • Individual: ₹119
  • Duo: ₹149
  • Family ₹179

ಯಾವ ಪ್ಲ್ಯಾನ್ ಆಯ್ಕೆ ಮಾಡಬೇಕು?
ಸಾಧಾರಣ ಕೇಳುವವರಿಗೆ: Premium Lite
ಸಂಗೀತವನ್ನು ಪ್ರತಿದಿನ ಬಳಸುವವರಿಗೆ: Premium Standard
AI, Lossless Audio ಮತ್ತು ಹೆಚ್ಚುವರಿ ಖಾತೆಗಳು ಬೇಕಾದವರಿಗೆ: Premium Platinum

Best Mobiles in India

English summary
Spotify has expanded its subscription plans once again. Customers in the india now have access to three new subscription plans: Premium Lite, Premium Standard and Premium Platinum, which offer users even more choice and benefits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+