Home
ಸುದ್ದಿಜಾಲ

ರೂ.50ಗೆ ರಿಚಾರ್ಜ್ ಮಾಡ್ಸಿದ್ರೆ ಸಾಕು 28 ದಿನ ನಿತ್ಯ 1 GB ಡೇಟಾ: ಇಲ್ಲಿದೆ ಒಟ್ಟು 6 ಪ್ಲಾನ್‌ಗಳು...!

By Srinidhi

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯ ಭಾರೀ ಬದಲಾವಣೆಗಳು ಜರುಗುತ್ತಿದೆ. ದುಬಾರಿ ಬೆಲೆಯ ಪ್ಲಾನ್‌ಗಳು ಇಂದು ಅತೀ ಕಡಿಮೆ ಬೆಲೆಗೆ ಲಭ್ಯವಿದೆ. ಜಿಯೋ ಆರಂಭವಾದ ನಂತರದಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ಹೆಚ್ಚು ಲಾಭವನ್ನು ಮಾಡಿಕೊಡುವಂತಹ ಆಫರ್‌ಗಳನ್ನು ಲಾಂಚ್ ಮಾಡುತ್ತಿವೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಪ್ಲಾನ್‌ಗಳ ಬಗ್ಗೆ ಮಾಹಿತಿಯೂ ಮುಂದಿದೆ.

ರೂ.50ಗೆ ರಿಚಾರ್ಜ್ ಮಾಡ್ಸಿದ್ರೆ ಸಾಕು 28 ದಿನ ನಿತ್ಯ 1 GB ಡೇಟಾ

ಮಾರುಕಟ್ಟೆಯಲ್ಲಿ ಟಾಪ್ ಬ್ರಾಂಡ್ ಎನ್ನಿಸಿಕೊಂಡಿರುವ ಭಾರ್ತಿ ಏರ್‌ಟೆಲ್, ಜಿಯೋ, ವೊಡಾಫೋನ್ ಸೇರುದಂತೆ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರಿಗೆ ರೂ.50ಕ್ಕೆ ಬೆಸ್ಟ್ ಪ್ಲಾನ್‌ಗಳನ್ನು ನೀಡುತ್ತಿದೆ. ಇದರಿಂದಾಗಿ ನಿಮಗೆ ಬೇಕಾದ ಪ್ಲಾನ್‌ಗಳ ಕುರಿತು ಮಾಹಿತಿಯೂ ಇಲ್ಲದೆ. ಮುಂದಿನ ಬಾರಿ ನೀಡುವ ರಿಚಾರ್ಜ್ ಮಾಡಿಸುವ ಸಂದರ್ಭದಲ್ಲಿ ಈ ಮಾಹಿತಿಯೂ ಸಾಕಷ್ಟು ಸಹಾಯವನ್ನು ಮಾಡಲಿದೆ.

ಜಿಯೋ ಪ್ಲಾನ್‌ಗಳು:

ಜಿಯೋ ಪ್ಲಾನ್‌ಗಳು:

ರೂ.50ಕ್ಕೆ ಕೆಳಗಿನ ಪ್ಲಾನ್‌ಗಳಲ್ಲಿ ಜಿಯೋ ನೀಡಿರುವ ರೂ.49 ಪ್ಲಾನ್‌ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದೆ. ಇದು ಬಳಕೆದಾರರಿಗೆ ನಿತ್ಯ 1 GB ಡೇಟಾದೊಂದಿಗೆ ಬಳಕೆದಾರರಿಗೆ ಅನ್‌ಲಿಮಿಟೆಡ್ ಲೋಕಲ್ ಮತ್ತು ರೋಮಿಂಗ್ ಕರೆಗಳನ್ನು ನೀಡಲಿದೆ. ಇದಲ್ಲದೇ 50 ಮೇಸೆಜ್ ಗಳನ್ನು ಕಳುಹಿಸಲು ಅವಕಾಶವನ್ನು ನೀಡಿದೆ. ಆದರೆ ಇದು ಜಿಯೋ ಫೋನ್ ಬಳಕೆದಾರರಿಗೆ ಮಾತ್ರವೇ ದೊರೆಯುತ್ತಿದೆ.

ಜಿಯೋ ರೂ.19ರ ಪ್ಲಾನ್:

ಜಿಯೋ ರೂ.19ರ ಪ್ಲಾನ್:

ಇದಲ್ಲದೇ ನಿತ್ಯ 0.15 GB ಡೇಟಾವನ್ನು ಒಂದು ದಿನಕ್ಕೆ ನೀಡುವ ರೂ.19 ಪ್ಲಾನ್‌ ಅನ್ನು ಜಿಯೋದಲ್ಲಿ ಕಾಣಬಹುದಾಗಿದೆ. ಇದರಲ್ಲಿಯೂ ಬಳಕೆದಾರರಿಗೆ ಅನ್‌ಲಿಮಿಟೆಡ್ ಲೋಕಲ್ ಮತ್ತು ರೋಮಿಂಗ್ ಕರೆಗಳನ್ನು ನೀಡಲಿದೆ. ಮತ್ತು 20 SMS ಗಳನ್ನು ಕಳುಹಿಸುವ ಅವಕಾಶವು ಇದೆ.

ವೊಡಾಫೋನ್ ಪ್ಲಾನ್:

ವೊಡಾಫೋನ್ ಪ್ಲಾನ್:

ಇದೇ ಮಾದರಿಯಲ್ಲಿ ವೊಡಾಫೋನ್ ಸಹ ಕ್ರಾಂತಿಕಾರಕ ಮೂರು ಆಫರ್‌ಗಳನ್ನು ಲಾಂಚ್ ಮಾಡಿದೆ. ಇದರಲ್ಲಿ ರೂ.11ಕ್ಕೆ ಒಂದು ದಿನದ ವ್ಯಾಲಿಡಿಟಿಗೆ 60 MB ಡೇಟಾವನ್ನು ನೀಡಲಿದೆ. ಇದೇ ಮಾದರಿಯಲ್ಲಿ ರೂ.21ಕ್ಕೆ ಒಂದು ದಿನಕ್ಕೆ ಅನ್‌ಲಿಮಿಡೆಟ್ ಡೇಟಾವನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ವೊಡಾಫೋನ್ ರೂ.47 ಆಫರ್:

ವೊಡಾಫೋನ್ ರೂ.47 ಆಫರ್:

ಮಾರುಕಟ್ಟೆಯಲ್ಲಿ ಕ್ರಾಂತಿಗೆ ಕಾರಣವಾದ ಆಫರ್ ಇದಾಗಿದ್ದು, 28 ದಿನಗಳ ಅವಧಿಗೆ 500MB ಡೇಟಾವನ್ನು ಬಳಕೆಗೆ ನೀಡಲಿದ್ದು, 28 ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅಲ್ಲದೇ 125 ನಿಮಿಷಗಳಷ್ಟು ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಜೊತೆಗೆ 50 SMS ಸಹ ಇದರಲ್ಲಿ ಉಚಿತವಾಗಿ ಕಳುಹಿಸಬಹುದಾಗಿದೆ.

ಏರ್‌ಟೆಲ್‌ ಪ್ಲಾನ್‌ಗಳು;

ಏರ್‌ಟೆಲ್‌ ಪ್ಲಾನ್‌ಗಳು;

ಏರ್‌ಟೆಲ್ ರೂ.49ಕ್ಕೆ ಎಲ್ಲಾ ಫೋನ್‌ಗಳಲ್ಲಿ ಬಳಕೆಯಾಗುವಂತೆ ಪ್ಲಾನ್ ಲಾಂಚ್ ಮಾಡಿದೆ. ಇದರಲ್ಲಿ ಒಂದು ದಿನದ ವ್ಯಾಲಿಡಿಟಿಗೆ 3GB ಡೇಟಾವನ್ನು ನೀಡಲಿದೆ. ಇದಲ್ಲದೇ ರೂ.9 ಪ್ಲಾನ್ ನೀಡುತ್ತಿದ್ದು, ಇದರಲ್ಲಿ ಅನ್‌ಲಿಮಿಟೆಡ್ ಕರೆಗಳು ಸೇರಿದಂತೆ ಒಂದು ದಿನದ ವ್ಯಾಲಿಡಿಟಿಗೆ 100 MB ಡೇಟಾವನ್ನು ನೀಡಲಿದೆ.

ಏರ್‌ಟೆಲ್ ರೂ.47 ಪ್ಲಾನ್:

ಏರ್‌ಟೆಲ್ ರೂ.47 ಪ್ಲಾನ್:

ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 28 ದಿನಗಳ ವ್ಯಾಲಿಡಿಟಿಯೂ ದೊರೆಯಲಿದ್ದು, 500MB ಡೇಟಾ ಸಹ ಲಭವಿರಲಿದೆ. ಇದರೊಂದಿಗೆ 125 ನಿಮಿಷಗಳ ಕಾಲ ಕರೆ ಮಾಡುವ ಅವಕಾಶವು ಇದರಲ್ಲಿದೆ.

Best Mobiles in India

English summary
Prepaid Plans Under Rs 50 By Bharti Airtel, Jio and Vodafone India. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+