ದೇಶದಲ್ಲೇ ಪ್ರಥಮ 'ಮೊಬೈಲ್ ಆಡಳಿತ ವೇದಿಕೆ'

  By Shwetha
  |

  ದೇಶದಲ್ಲೇ ಪ್ರಥಮವಾಗಿರುವ ಮತ್ತು 4500 ಕ್ಕೂ ಅಧಿಕ ಸೇವೆ ಒದಗಿಸುವ ವಿಶ್ವದ ಬೃಹತ್ ಬಹು ಮಾದರಿಯ 'ಮೊಬೈಲ್ ಆಡಳಿತ ವೇದಿಕೆ' ಗೆ ಪ್ರಧಾನ ಮಂತ್ರಿ ಪ್ರಣಬ್ ಮುಖರ್ಜಿ ಚಾಲನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರೂ ಉಪಸ್ಥಿತರಿದ್ದರು.

  'ಕರ್ನಾಟಕ ಮೊಬೈಲ್ ಒನ್' ಎಂಬ ಈ ಸೇವೆಯು 24*7*365 ದಿನಗಳೂ ಕಾರ್ಯನಿರತವಾಗಿದ್ದು ಸೇವೆಯನ್ನು ಯಾವುದೇ ಮೊಬೈಲ್‌ನಿಂದ ಪಡೆಯಬಹುದಾಗಿದೆ.
  ಈ ಸೇವೆಯು ಸರಳವಾದ ಫೋನ್‌ಗಳಲ್ಲೂ ಇಂಟಿಗ್ರೇಟೆಡ್ ವಾಯ್ಸ್ ರೆಸ್ಪಾನ್ಸ್ (ಐವಿಆರ್), ಎಸ್‌ಎಮ್‌ಎಸ್ ಅಥವಾ ಮೊಬೈಲ್ ವೆಬ್ ಮೂಲಕ ಲಭ್ಯವಿದ್ದು ಸಾಮಾನ್ಯರೂ ಸರಳವಾಗಿ ಬಳಸಬಹುದು.

  ಜನರ ಸಮಸ್ಯೆಗೆ ಸ್ಪಂದಿಸುವ ಮೊಬೈಲ್ ಒನ್ ರಾಜ್ಯದಲ್ಲಿ

  ಇದನ್ನೂ ಓದಿ: ವಾಟ್ಸಾಪ್ ಸಮಸ್ಯೆಯೇ ಇಲ್ಲಿದೆ ಪರಿಹಾರ

  ಈ ಸೇವೆಯನ್ನು ಬಳಸಿ ಜನ ಸಾಮಾನ್ಯರು ಬಿಲ್‌ಗಳ ಪಾವತಿ, ತೆರಿಗೆ ಪಾವತಿ, ರೈಲ್ವೇ, ಬಸ್ ಟಿಕೆಟ್‌ಗಳನ್ನು ನೋಂದಾಯಿಸಬಹುದು. ಆದಾಯ ತೆರಿಗೆ ಪಾವತಿ, ಎಮ್‌ - ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಮತ್ತು ಇತರ ಸೇವೆಗಳನ್ನು ತಮ್ಮ ಸ್ಮಾರ್ಟ್‌ಫೋನ್ ಮೂಲಕ ಪಡೆಯಬಹುದಾಗಿದೆ. ಜಿ2ಸಿ, ಬಿ2ಸಿ, ಜಿ2ಬಿ ಸೇರಿದಂತೆ 4500 ಕ್ಕೂ ಅಧಿಕ ಸೇವೆಗಳು ಕರ್ನಾಟಕದ ಜನರಿಗೆ ಈ ವೇದಿಕೆಯಡಿ ದೊರೆಯಲಿದೆ.

  ನಾಗರೀಕರು ತಮ್ಮ ಸ್ಥಳದಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳಾದ ಬೀದಿದೀಪ ಸಮಸ್ಯೆ, ರಸ್ತೆಯಲ್ಲಿನ ಗುಂಡಿಗಳ ಸಮಸ್ಯೆ ಮೊದಲಾದವುಗಳ ಚಿತ್ರ ತೆಗೆದು ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡಬಹುದು. 'ಐಕೇರ್' ಎಂಬ ಈ ಸೇವೆಯು ಜನರು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತದೆ.

  ಈ ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್ ಮತ್ತು ಐಓಎಸ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಏರ್‌ಟೆಲ್, ವೊಡಾಫೋನ್, ಬಿಎಸ್‌ಎನ್‌ಎಲ್, ಏರ್‌ಸೆಲ್, ಐಡಿಯಾ, ರಿಲಾಯನ್ಸ್ ಸೇರಿದಂತೆ ಎಲ್ಲಾ ಮೊಬೈಲ್ ಸೇವಾ ಸಂಸ್ಥೆಗಳು ಇದರೊಂದಿಗೆ ಒಗ್ಗೂಡಿವೆ. ನಾಗರೀಕರು #161 ಸಂಖ್ಯೆಗೆ ಡಯಲ್ ಮಾಡಿ ಈ ವೇದಿಕೆಯಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು.

  English summary
  This article tells about Mobile One the e-governance project in Karnataka is being labelled as the first of its kind in the country and brings a whole range of government services that are currently spread across hundreds of government websites into one common easily accessible location.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more