ಗೂಗಲ್ ನಮ್ಮೆಲ್ಲಾ ಮಾಹಿತಿಗಳನ್ನು ಹೇಗೆ ಸಂಗ್ರಹಿಸುತ್ತದೆ ಗೊತ್ತಾ?..ಪ್ರೈವೆಸಿ ಎಲ್ಲಿದೆ?!

ನಮ್ಮ ಜೀವನವು ನೈಜ ಪ್ರಪಂಚಕ್ಕಿಂತ ಗೂಗಲ್ ಮೂಲಕ ಇತರರ ವ್ಯಾಪಾರದ ಪಾಲಾಗುತ್ತಿದೆಯೇ ಎಂಬ ಅನುಮಾನ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಕಾಡುತ್ತಿದೆ.!

|

ನಮಗೆ ತಿಳಿಯದಂತೆ ನಮ್ಮ ಡೇಟಾವನ್ನು ಫೇಸ್‌ಬುಕ್ ಮೂಲಕ ಸಂಗ್ರಹಿಸಿ ದುರ್ಬಳಕೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದ ನಂತರ ಇದೀಗ ಗೂಗಲ್ ಕಂಪೆನಿಯತ್ತ ಜನರ ದೃಷ್ಟಿ ಬಿದ್ದಿದೆ.! ನಮ್ಮ ಜೀವನವು ನೈಜ ಪ್ರಪಂಚಕ್ಕಿಂತ ಗೂಗಲ್ ಮೂಲಕ ಇತರರ ವ್ಯಾಪಾರದ ಪಾಲಾಗುತ್ತಿದೆಯೇ ಎಂಬ ಅನುಮಾನ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಕಾಡುತ್ತಿದೆ.!

ಹೊಸದಾಗಿ ಏನಾದರೂ ಖರೀದಿಯಾಗಲು, ಟಿಕೆಟ್ ಬುಕ್ಕಿಂಗ್ ಆಗಲಿ, ನಮ್ಮ ವೈಯಕ್ತಿಕ ಭೇಟಿಗಳು, ವೃತ್ತಿಪರ ಭೇಟಿಗಳು ಮತ್ತು ಸಿನಿಮಾ ಸಮಯಗಳೆಲ್ಲವೂ ಸೇರಿದಂತೆ ಪ್ರತಿಯೋರ್ವನ ಎಲ್ಲಾ ಇಂಟರ್‌ನೆಟ್ ಚಟುವಟಿಕೆಗಳು ಬೇಹುಗಾರಿಕೆಯ ಪಾಲಾಗುತ್ತಿದೆ. ಇಂಟರ್‌ನೆಟ್‌ನಲ್ಲಿ ಯಾರೊಬ್ಬರೂ ನಮ್ಮ ವೈಯಕ್ತಿಕ ವಿವರಗಳನ್ನು ಹೊಂದಿದ್ದಾರೆ ಎಂಬ ಅನುಭವವಾಗುತ್ತಿದೆ.!

ಗೂಗಲ್ ನಮ್ಮೆಲ್ಲಾ ಮಾಹಿತಿಗಳನ್ನು ಹೇಗೆ ಸಂಗ್ರಹಿಸುತ್ತದೆ ಗೊತ್ತಾ?

ಇದರಿಂದ ನಮ್ಮ ಗೌಪ್ಯತೆಯ ಪ್ರಾಮುಖ್ಯತೆ ಟೆಕ್ ಕಂಪೆನಿಗಳಿಂದ ಹೇಗೆಲ್ಲಾ ದುರುಪಯೋಗಗೊಳ್ಳುತ್ತಿದೆ ಎಂಬುದನ್ನು ನಾವು ಸುಲಭವಾಗಿ ತಿಳಿಯಬಹುದು.! ಹಾಗಾಗಿ, ಪ್ರತಿಯೋರ್ವ ಇಂಟರ್‌ನೆಟ್ ಬಳಕೆದಾರ ಬಳಸುತ್ತಿರುವ ಟೆಕ್ ದೈತ್ಯ ಗೂಗಲ್ ನಮ್ಮ ಡೇಟಾವನ್ನು ಹೇಗೆಲ್ಲಾ ಕಲೆಹಾಕುತ್ತಿದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ನೀವಿರುವ ಎಲ್ಲಾ ಸ್ಥಳವನ್ನು ಗೂಗಲ್ ಸಂಗ್ರಹಿಸುತ್ತದೆ!!

ನೀವಿರುವ ಎಲ್ಲಾ ಸ್ಥಳವನ್ನು ಗೂಗಲ್ ಸಂಗ್ರಹಿಸುತ್ತದೆ!!

ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದಲ್ಲಿ ಗೂಗಲ್ ಕಂಪೆನಿ ನಿಮ್ಮ ಸ್ಥಳವನ್ನು ಟ್ಯಾಪ್ ಮಾಡುತ್ತದೆ. ನೀವು ಸ್ಮಾಟ್‌ಫೋನ್ ಬಳಸಲು ಶುರು ಮಾಡಿದ ದಿನದಿಂದ ನೀವು ಸ್ಮಾರ್ಟ್‌ಫೋನ್ ಬಳಕೆಯನ್ನು ನಿಲ್ಲಿಸುವವರೆಗೂ ನಮ್ಮ ಎಲ್ಲಾ ಸ್ಥಳಗಳ ಟೈಮ್ಲೈನ್ ​​ಅನ್ನು ಗೂಗಲ್ ರಚಿಸಿಕೊಳ್ಳುತ್ತದೆ ಎಂದರೆ ಆಶ್ಚರ್ಯವಾಗದೇ ಇರುವುದಿಲ್ಲ.!

ಗೂಗಲ್ ನಮ್ಮ ಎಲ್ಲಾ ಹುಡುಕಾಟಗಳನ್ನು ಸಂಗ್ರಹಿಸುತ್ತದೆ!

ಗೂಗಲ್ ನಮ್ಮ ಎಲ್ಲಾ ಹುಡುಕಾಟಗಳನ್ನು ಸಂಗ್ರಹಿಸುತ್ತದೆ!

ನಾವು ಇಂಟರ್‌ನೆಟ್ ಮೂಲಕ ಹುಡುಕುವ ಪ್ರತಿಯೊಂದು ವಿಷಯವನ್ನು ಕೂಡ ಗೂಗಲ್ ತನ್ನ ಸಾಧನಗಳಲ್ಲಿ ಸಂಗ್ರಹಿಸುತ್ತಿದೆ. ಈ ಡೇಟಾವೆಲ್ಲ ಗೂಗಲ್ ಕಂಪೆನಿಯ ಪ್ರತ್ಯೇಕ ಡೇಟಾಬೇಸ್‌ನಲ್ಲಿ ಸಂಗ್ರಹಿಸಲಾಗುತ್ತದೆ ಎನ್ನಲಾಗಿದೆ. ಇದರಿಂದಾಗಿ, ನಮ್ಮ ಫೋನ್ ಇತಿಹಾಸವನ್ನು ನಾವು ತೆರವುಗೊಳಿಸಲು ಸಾಧ್ಯವಿಲ್ಲ.!!

ಪ್ರತಿ ಆಪ್ ಮಾಹಿತಿ ಸಂಗ್ರಹಿಸುತ್ತದೆ!!

ಪ್ರತಿ ಆಪ್ ಮಾಹಿತಿ ಸಂಗ್ರಹಿಸುತ್ತದೆ!!

ನಾವು ನಮ್ಮ ಸ್ಮಾರ್ಟ್‌ಫೋನಿನಲ್ಲಿ ಬಳಸುವ ಪ್ರತಿಯೊಂದು ಆಪ್ ಮಾಹಿತಿಯನ್ನು ಗೂಗಲ್ ಸಂಗ್ರಹಿಸುತ್ತದೆ ಎನ್ನಲಾಗಿದೆ. ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಯಾವ ಆಪ್‌ಗಳನ್ನು ಎಷ್ಟು ಬಾರಿ ಬಳಸುತ್ತೇವೆ, ನಾವು ಯಾವಾಗ ಆ ಆಪ್‌ಅನ್ನು ಬಳಸುತ್ತೇವೆ, ನಾವು ಯಾವ ಜಾಗದಲ್ಲಿ ಆ ಆಪ್‌ ಅನ್ನು ಬಳಸುತ್ತೇವೆ ಎಂಬ ಮಾಹಿತಿಗಳನ್ನು ಗೂಗಲ್ ಸಂಗ್ರಹಿಸುತ್ತದೆ.!!

ಯೂಟ್ಯೂಬ್ ಹುಡುಕಾಟ ಸಂಗ್ರಹ!!

ಯೂಟ್ಯೂಬ್ ಹುಡುಕಾಟ ಸಂಗ್ರಹ!!

ಇಂಟರ್‌ನೆಟ್ ಬಳಸುಗ ಶೇ 80 ರಷ್ಟು ಜನರು ಯೂಟ್ಯೂಬ್ ವಿಡಿಯೋ ತಾಣವನ್ನು ಬಳಸುತ್ತಾರೆ ಎಂದು ಹೇಳಲಾಗಿದೆ. ನಿಮಗೆ ಗೊತ್ತಾ? ನಮ್ಮ ಎಲ್ಲಾ ಯೂಟ್ಯೂಬ್ ಹುಡುಕಾಟದ ಇತಿಹಾಸವನ್ನು ಗೂಗಲ್ ಸಂಗ್ರಹಿಸಿ ವಿಶ್ಲೇಷಿಸುತ್ತದೆ. ನಮ್ಮ ರಾಜಕೀಯ ಆದ್ಯತೆಗಳು, ಧಾರ್ಮಿಕ ನಂಬಿಕೆಗಳು, ನಮ್ಮ ವ್ಯಕ್ತಿತ್ವ ಪ್ರಕಾರ ವಿಡಿಯೋಗಳನ್ನು ತೋರಿಸುತ್ತದೆ.!!

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ಗೂಗಲ್ ಟೇಕ್ಔಟ್ ಡಾಕ್ಯುಮೆಂಟ್!!

ಗೂಗಲ್ ಟೇಕ್ಔಟ್ ಡಾಕ್ಯುಮೆಂಟ್!!

ಫೇಸ್‌ಬುಕ್‌ನಂತೆಯೇ ಗೂಗಲ್ ಕೂಡ ನಮ್ಮಲ್ಲಿ ಸಂಗ್ರಹಿಸಿದ ಎಲ್ಲ ಡೇಟಾವನ್ನು ಡೌನ್ಲೋಡ್ ಮಾಡಲು ಒಂದು ಆಯ್ಕೆಯನ್ನು ಒದಗಿಸುತ್ತದೆ. ಈ ಟೇಕ್ಔಟ್ ಡಾಕ್ಯುಮೆಂಟ್ ಎಲ್ಲಾ ನಮ್ಮ ಇಮೇಲ್‌ಗಳು ಬುಕ್ಮಾರ್ಕ್ಗಳು, ಸಂಪರ್ಕಗಳು, ಗೂಗಲ್ ಡ್ರೈವ್ ಫೈಲ್ಗಳು, ಗೂಗಲ್ನಿಂದ ನೀವು ತಂದ ಉತ್ಪನ್ನಗಳನ್ನು, ನೀವು ಡೌನ್ಲೋಡ್ ಮಾಡಿದ ಎಲ್ಲಾ ಚಿತ್ರಗಳನ್ನು ಹೊಂದಿರುತ್ತದೆ.

Best Mobiles in India

English summary
There's someone constantly spying on our lives and has all our personal details. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X