ತಂತ್ರಜ್ಞಾನ ಕ್ಷೇತ್ರಕ್ಕೆ ಹೂಡಿಕೆ ಮಾಡುವ ಬಾಲಿವುಡ್ ನಟಿ ಪ್ರಿಯಾಂಕ

By Gizbot Bureau
|

ಬಾಲಿವುಡ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಇತ್ತೀಚೆಗೆ ಸ್ಯಾನ್ ಫ್ರ್ಯಾನ್ಸಿಸ್ಕೋ ಮೂಲದ ಹಾಲ್ಬರ್ಟನ್ ಸ್ಕೂಲ್ ಗೆ ಪ್ರವಾಸ ಕೈಗೊಂಡಿದ್ದರು. ಇದು ಕೋಡಿಂಗ್ ಎಜುಕೇಷನಲ್ ಸ್ಕೂಲ್ ಆಗಿದೆ. ಇದು ಆಕೆಯ ಹೊಸ ಬಂಡವಾಳ ಹೂಡಿಕೆಯ ಸಂಸ್ಥೆ ಕೂಡ ಆಗಿದೆ.

ಏನಿದು ಸಂಸ್ಥೆ:

ಏನಿದು ಸಂಸ್ಥೆ:

ಹಾಲ್ಬರ್ಟನ್ ಸ್ಕೂಲ್ ಕ್ಯಾಂಪಸ್ ಶಾಲೆಗಿಂತ ಹೆಚ್ಚು ಕೆಲಸವನ್ನು ಮಾಡುತ್ತದೆ. ಇದು ತೆರೆದ ಯೋಜನೆಗಳನ್ನು ಹೊಂದಿದೆ ಮತ್ತು ಅಲಂಕಾರಿಕ ನಿಯಾನ್ ದೀಪಗಳು ಮತ್ತು ಮೀಟಿಂಗ್ ರೂಮ್ ಗಳನ್ನು ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ಹೊಂದಿದೆ. ಈ ಸ್ಕೂಲಿನಲ್ಲಿ ಹಳೆಯ ಮಾದರಿಯ ಸಾಂಪ್ರದಾಯಿಕ ಕಲಿಕೆಯ ಬದಲಾಗಿ ಪ್ರೊಜೆಕ್ಟ್ ವರ್ಕ್ ಮತ್ತು ಗುಂಪುಗಾರಿಕೆಯ ಕಲಿಕೆಗೆ ಮಹತ್ವ ನೀಡಲಾಗುತ್ತಿದ್ದು ಸಾಫ್ಟ ವೇರ್ ಡೆವಲಪ್ ಮೆಂಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪ್ರಿಯಾಂಕ ಅಭಿಪ್ರಾಯ:

ಪ್ರಿಯಾಂಕ ಅಭಿಪ್ರಾಯ:

ಇಲ್ಲಿ ನೀವು ಹೆಚ್ಚು ಕಲಿಯುತ್ತೀರಿ ಮತ್ತು ಇದು ಬಹಳ ಆಶ್ಚರ್ಯಕರವಾಗಿದೆ ಎಂದು ಪ್ರಿಯಾಂಕ ಅಭಿಪ್ರಾಯ ಪಟ್ಟಿದ್ದಾರೆ. ನಂತರ ಸ್ವತಃ ಪ್ರಿಯಾಂಕ ಇಲ್ಲಿ ಸಾಕಷ್ಟು ತಾಂತ್ರಿಕ ವಿಚಾರಗಳನ್ನು ಅಧ್ಯಯನ ಮಾಡಿದ್ದಾರೆ. ಭವಿಷ್ಯದ ಹೂಡಿಕೆದಾರರು ಮತ್ತು ಸಂಸ್ಥೆಯ ಆರಂಭಿಕ ಸಂಸ್ಥಾಪಕರ ಜೊತೆಗೆ ಆಕೆ ಸಭೆ ನಡೆಸಿದ್ದಾರೆ.

ಇತರೆ ಸೆಲೆಬ್ರಿಟಿಗಳು:

ಇತರೆ ಸೆಲೆಬ್ರಿಟಿಗಳು:

ಕೇವಲ ಪ್ರಿಯಾಂಕ ಚೋಪ್ರಾ ಮಾತ್ರವಲ್ಲ ತಂತ್ರಜ್ಞಾನ ಕ್ಷೇತ್ರದ ಮೇಲೆ ಹೂಡಿಕೆ ಮಾಡುವುದಕ್ಕೆ ಮಹಿಳಾ ಸೆಲೆಬ್ರಿಟಿಗಳಿಗಿಂತ ಪುರುಷ ಸೆಲೆಬ್ರೆಟಿಗಳು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಆಯ್ಸ್ಟನ್ ಕುಚರ್, ಕಾರ್ಮೆಲೋ ಆಂಟೋನಿ, ನಾಸ್ ಮತ್ತು ಲಿಯೊನಾರ್ಡೊ ಡಿಕಾಪ್ರಿಯೊ ಕೂಡ ಈಗಾಗಲೇ ಹೂಡಿಕೆ ತಂತ್ರಜ್ಞಾನದ ಹೂಡಿಕೆ ಕ್ಷೇತ್ರದ ಪಟ್ಟಿಯನ್ನು ಸೇರಿದ್ದಾರೆ. ಇನ್ನು ಮಹಿಳೆಯರಲ್ಲಿ ಬೆಯಾನ್ಸ್, ಟೈರಾ ಬ್ಯಾಂಕ್ಸ್ ಮತ್ತು ಡೆಮಿ ಲೋವಟೋರನ್ನು ಈ ಪಟ್ಟಿಯಲ್ಲಿ ಕಾಣಬಹುದು.

ಒಟ್ಟು ಪ್ರಿಯಾಂಕ ಹೂಡಿಕೆ ಎಷ್ಟು?

ಒಟ್ಟು ಪ್ರಿಯಾಂಕ ಹೂಡಿಕೆ ಎಷ್ಟು?

ಎಷ್ಟು ಹಣವನ್ನು ಹೂಡಿಕೆ ಮಾಡುತ್ತಾರೆ ಅಥವಾ ಎಷ್ಟು ಡೀಲ್ ಗಳನ್ನು ಆಕೆ ಇದರಲ್ಲಿ ಪಡೆದುಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಆಲೋಚಿಸಿಲ್ಲ ಆದರೆ ಹೂಡಿಕೆ ಮಾಡುವ ಬಗ್ಗೆ ಪ್ಲಾನ್ ಗಳಿವೆ ಎಂದಷ್ಟೇ ಪ್ರಿಯಾಂಕ ತಿಳಿಸಿದ್ದಾರೆ. ಇನ್ನು ಭಾರತದಲ್ಲಿ ಬಂಬಲ್ ಬಿಡುಗಡೆ ಕೂಡ ಆಕೆ ಯೋಜಿಸುತ್ತಿದ್ದು ಅದರ ಪ್ರೊಮೋಷನ್ ನ್ನು ನಡೆಸಲಿದ್ದಾರೆ ಜೊತೆಗೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೂಡಿಕೆಗೆ ಕಾರಣ:

ಹೂಡಿಕೆಗೆ ಕಾರಣ:

ತಾಂತ್ರಿಕ ಕ್ಷೇತ್ರದಲ್ಲಿ ಪುರುಷರೇ ಮೇಲುಗೈ ಸಾಧಿಸುತ್ತಿರುವಾಗ ಲಿಂಗ ತಾರತಮ್ಯವು ಈ ಕ್ಷೇತ್ರದಲ್ಲಿ ಕಡಿಮೆ ಆಗಬೇಕು ಎಂಬ ಉದ್ದೇಶವನ್ನೂ ಕೂಡ ಪ್ರಿಯಾಂಕ ಹೊಂದಿದ್ದು ಆ ನಿಟ್ಟಿನಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಕ್ಕೆ ಪ್ರಿಯಾಂಕ ಆಲೋಚಿಸುತ್ತಿದ್ದಾರಂತೆ.

ಸಂಸ್ಥೆಯ ನಿಯಮ:

ಸಂಸ್ಥೆಯ ನಿಯಮ:

ಹಾಲ್ಬರ್ಟನ್ 2015 ರಲ್ಲಿ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಶುಲ್ಕವಿಲ್ಲದೆ ಕಲಿಕೆ ನೀಡಲಾಗುತ್ತಿದೆ.ಅವರ ವಿದ್ಯಾಭ್ಯಾಸ ಪೂರ್ಣಗೊಂಡು ಸಂಬಳ ಬರಲು ಆರಂಭವಾದ ನಂತರ ಅವರ ಸಂಪಾದನೆಯ 17%ವನ್ನು ಸಂಸ್ಥೆಗೆ ಮೂರುವರೆ ವರ್ಷಗಳ ಕಾಲ ಒದಗಿಸಬೇಕು ಎಂಬ ಷರತ್ತಿರುತ್ತದೆ. ಇದುವರೆಗೂ ಈ ಸಂಸ್ಥೆಯಲ್ಲಿ ಪದವೀಧರರಾದ ಎಲ್ಲರೂ ಕೂಡ ಕೆಲಸ ಪಡೆದಿದ್ದಾರೆ.

ಎಪ್ರಿಲ್ ತಿಂಗಳಲ್ಲಿ ಸುಮಾರು 8.2 ಮಿಲಿಯನ್ ಡಾಲರ್ ಹಣವನ್ನು ಪ್ರಿಯಾಂಕ ಅಂತಿಮಗೊಳಿಸಿದ್ದಾರೆ ಮತ್ತು ಆಕೆ ಕಂಪೆನಿಯ ಮಂಡಳಿಯಲ್ಲಿ ಸಲಹೆಗಾರರಾಗಿದ್ದಾರೆ.

ಹೇಗೆ ಲಾಭ:

ಹೇಗೆ ಲಾಭ:

ಸಾಮಾಜಿಕ ಪರಿಣಾಮವನ್ನುಂಟುಮಾಡುವುದಕ್ಕೆ ಮತ್ತು ಹಿಂದುಳಿದ ಹಿನ್ನೆಲೆಯ ಜನರಿಗೆ ಶೈಕ್ಷಣಿಕ ಪ್ರಗತಿ ಒದಗಿಸಲು ಪ್ರಿಯಾಂಕ ಚೋಪ್ರಾರ ಹಾಲ್ಬರ್ಟನ್ ಮಿಷನ್ ಹೆಚ್ಚು ಸಹಕಾರಿಯಾಗಲಿದೆ ಎಂದು ಆಕೆ ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಾರೆ ಮಹಿಳಾ ಸೆಲೆಬ್ರಿಟಿಯೊಬ್ಬರು ತಾಂತ್ರಿಕ ಕ್ಷೇತ್ರದ ಹೂಡಿಕೆಯಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ.

Best Mobiles in India

English summary
Priyanka Chopra Bollywood Diva is a tech investor too!!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X