ಅತ್ಯಾಧುನಿಕ ತಂತ್ರಜ್ಞಾನದಿಂದ ನೌಕರಿ ಹಾಗೂ ಕೌಟುಂಬಿಕ ಭಾದ್ಯತೆಗಳಿಗೆ ಅಡಚಣೆ!!

|

ಆಧುನಿಕ ಕಾಲದಲ್ಲಿ ಬೆಳೆಯುತ್ತಿರುವ ಅತ್ಯಾಧುನಿಕ ತಂತ್ರಜ್ಞಾನದಿಂದ ನೌಕರರಿಗೆ ತುಂಬಾ ಅನುಕೂಲವಾಗುತ್ತಿದೆ ಹೇಳಲಾಗುತ್ತದೆ. ಆದರೆ, ಇತ್ತೀಚಿನ ಸಮೀಕ್ಷಾ ರಿಪೋರ್ಟ್ ಒಂದು ಅತ್ಯಾಧುನಿಕ ತಂತ್ರಜ್ಞಾನವು ನೌಕರಿ ಹಾಗೂ ಕೌಟುಂಬಿಕ ಭಾದ್ಯತೆಗಳಿಗೆ ಅಡಚಣೆ ಉಂಟು ಮಾಡುತ್ತಿದೆ ಎಂದು ಹೇಳಿದೆ. ಈ ಸಮೀಕ್ಷೆಯಲ್ಲಿ ಭಾರತದ ಶೇ.33 ರಷ್ಟು ಯುವ ವೃತ್ತಿಪರರ ಅಭಿಪ್ರಾಯ ಇದೇ ಆಗಿದೆ ಎಂದು ಮಾನ್‌ಸ್ಟರ್.ಕಾಮ್ ಎಂಬ ಸಂಸ್ಥೆಯು ಸಿದ್ಧಪಡಿಸಿರುವ ವರದಿಯೊಂದರಲ್ಲಿ ಹೇಳಲಾಗಿದೆ.

ಹೌದು, ಮಾನ್‌ಸ್ಟರ್. ಕಾಮ್‌ ಎಂಬ ಆನ್‌ಲೈನ್ ಸಂಸ್ಥೆ 18 ರಿಂದ 55 ವರ್ಷದೊಳಗಿನ 2ಸಾವಿರ ನೌಕರರನ್ನು ಸಮೀಕ್ಷೆಗೆ ಒಳಪಡಿಸಿ ಇಂತಹದೊಂದು ರಿಪೋರ್ಟ್ ತಯಾರಿಸಿದೆ. ಸಮೀಕ್ಷೆಯಲ್ಲಿ ಟೆಕ್ನಾಲಜಿ ಅನುಕೂಲಕರವಾಗಿದೆ ಎಂಬ ನಂಬಿಕೆಗೆ ವಿರುದ್ಧವಾಗಿ, ಯುವ ವೃತ್ತಿಪರರಲ್ಲಿ ಮೂರನೇ ಒಂದು ಭಾಗದಷ್ಟು ಜನರು ತಂತ್ರಜ್ಞಾನದಿಂದಾಗಿ (ಲ್ಯಾಪ್‌ಟಾಪ್‌ ಮತ್ತು ಮೊಬೈಲ್ ಫೋನ್‌ಗಳು) ಕೆಲಸದ ಬದ್ಧತೆಗಳೊಂದಿಗೆ ಕುಟುಂಬವನ್ನು ನಿರ್ವಹಿಸುವಲ್ಲಿ ಅಡಚಣೆಯಾಗುತ್ತಿದೆ ಎಂದು ವರದಿ ಮಾಡಿದೆ.

 ಅತ್ಯಾಧುನಿಕ ತಂತ್ರಜ್ಞಾನದಿಂದ ನೌಕರಿ ಹಾಗೂ ಕೌಟುಂಬಿಕ ಭಾದ್ಯತೆಗಳಿಗೆ ಅಡಚಣೆ!!

ಮೊಬೈಲ್ ಲ್ಯಾಪ್ ಟಾಪ್ ಮುಂತಾದ ಆಧುನಿಕ ಉಪಕರಣಗಳಿಂದ ನೌಕರಿ ಹಾಗೂ ಕೌಟುಂಬಿಕ ಕೆಲಸಗಳನ್ನು ನಿರ್ವಹಿಸಲು ಆಗುತ್ತಿಲ್ಲ. ಮೀಟಿಂಗ್, ಕರೆಗಳು ಹಾಗೂ ತರಬೇತಿಗಳಿಂದ ಕಚೇರಿ ಅವಧಿ ಹಾಗೂ ಮೇಲ್ವಿಚಾರಕರ ನೆಗೆಟಿವ್ ವರ್ತನೆ ಸಮತೋಲಕರ ಜೀವನಕ್ಕೆ ಅಡ್ಡಿ ಉಂಟು ಮಾಡುತ್ತವೆ ಎಂದು ಹೆಚ್ಚು ನೌಕರರು ಭಾವಿಸಿದ್ದಾರೆ. ಭಾರತದ ಕೆಲಸದ ವೃತ್ತಿಪರರಲ್ಲಿ ಶೇ. 67 ರಷ್ಟು ಜನರು ಕೆಲಸ ಮಾಡದಿದ್ದರೂ ಕೆಲಸದ ಬಗ್ಗೆ ಯೋಚಿಸುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಶೇ.,67 ರಷ್ಟು ವೃತ್ತಿನಿರತ ನೌಕರರು, ಕೆಲಸದ ಅವಧಿ ನಂತರವೂ, ನೌಕರಿ ಮುಗಿದ ನಂತರವೂ ತಮ್ಮ ಕೆಲಸದ ಬಗ್ಗೆಯೇ ಚಿಂತಿಸುತ್ತಿದ್ದಾರೆ. ತಮ್ಮ ಕೆಲಸದ ಹಿನ್ನೆಡೆಯಿಂದಾಗಿ ಅರ್ಧದಷ್ಟು ವೃತ್ತಿ ನಿರತ ಕೆಲಸಗಾರರು ತಮ್ಮ ಸಂಗಾತಿಗಳಿಗೆ ಸಮಯ ಕೊಡಲಾಗುತ್ತಿಲ್ಲ, ಈ ಸಂಬಂದ ತಮಗೆ ಪಶ್ಚಾತ್ತಾಪವಿದೆ ಎಂದು ಹೇಳಿದ್ದಾರೆಂದು ಸಮೀಕ್ಷೆ ತಿಳಿಸಿದೆ. ಸಂಗಾತಿಗಳೊಂದಿಗೆ ಕೆರಳಿಸುವ, ಕೆಟ್ಟ ಮನೋಭಾವವನ್ನುಂಟುಮಾಡುತ್ತದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.

 ಅತ್ಯಾಧುನಿಕ ತಂತ್ರಜ್ಞಾನದಿಂದ ನೌಕರಿ ಹಾಗೂ ಕೌಟುಂಬಿಕ ಭಾದ್ಯತೆಗಳಿಗೆ ಅಡಚಣೆ!!

ಕಚೇರಿಯ ಸಮಯದ ನಂತರವೂ (18 ಶೇಕಡ) ಸಭೆಗಳು, ಕರೆಗಳು ಮತ್ತು ತರಬೇತಿಗಳು ಮತ್ತು ಕೆಲಸ-ಜೀವಿತ ಸಮತೋಲನದ (11 ಶೇಕಡ) ಮೇಲ್ವಿಚಾರಕರ ಋಣಾತ್ಮಕ ವರ್ತನೆ ಎಂದು ವರದಿ ತಿಳಿಸಿದೆ. ಹಾಗಾಗಿ, ಬೆಳೆಯುತ್ತಿರುವ ಅತ್ಯಾಧುನಿಕ ತಂತ್ರಜ್ಞಾನ ನೌಕರಿ ಹಾಗೂ ಕೌಟುಂಬಿಕ ಭಾದ್ಯತೆಗಳಿಗೆ ಅಡಚಣೆ ಉಂಟು ಮಾಡುತ್ತಿದೆ ಎಂದು ಭಾರತದ ಶೇ.33 ರಷ್ಟು ಯುವ ವೃತ್ತಿಪರರ ಅಭಿಪ್ರಾಯವಾಗಿದೆ ಎಂದು ಮಾನ್ ಸ್ಟರ್.ಕಾಮ್ ತಿಳಿಸಿದೆ.

Best Mobiles in India

English summary
According to the survey, 67 per cent of the India's working professionals think about work, even when they are not at work.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X