ಭಾರತದಲ್ಲಿ ಪಿಟ್ರಾನ್ ಬಾಸ್‌ಬಡ್ಸ್ ಜೆಟ್ಸ್ ಇಯರ್‌ಫೋನ್‌ ಬಿಡುಗಡೆ!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಜೊತೆಗೆ ಪ್ರತಿಯೊಬ್ಬರೂ ಇಯರ್‌ಫೋನ್‌ ಹೊಂದುವುದಕ್ಕೆ ಬಯಸುತ್ತಾರೆ. ಇಯರ್‌ಫೋನ್‌ ಇಲ್ಲದೆ ಮ್ಯೂಸಿಕ್‌ ಪ್ರಿಯರು ಕಾಲ ಕಳೆಯುವುದಕ್ಕೆ ಇಷ್ಟ ಪಡುವುದೇ ಇಲ್ಲ. ಸ್ಮಾರ್ಟ್‌ಫೋನ್‌ ಮ್ಯೂಸಿಕ್‌ ಆನಂದಿಸುವುದಕ್ಕೆ ಇಯರ್‌ಫೋನ್‌ ಬೇಕೆ ಬೇಕು. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ವೈವಿಧ್ಯಮಯವಾದ ಇಯರ್‌ಫೋನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಪಿಟ್ರಾನ್‌ ಸಂಸ್ಥೆ ಕೂಡ ಒಂದು. ತನ್ನ ಬಿನ್ನ ಮಾದರಿಯ ಇಯರ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಪಿಟ್ರಾನ್‌ ಸಂಸ್ಥೆ ಇದೀಗ ಹೊಸ ಇಯರ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ.

ಪಿಟ್ರಾನ್‌

ಹೌದು, ಪಿಟ್ರಾನ್‌ ಸಂಸ್ಥೆ ಹೊಸ ಪಿಟ್ರಾನ್ ಬಾಸ್‌ಬಡ್ಸ್ ಜೆಟ್ಸ್ ಟ್ರೂ ವಾಯರ್‌‌ಲೆಸ್ ಸ್ಟಿರಿಯೊ ಇಯರ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಬಾಸ್‌ಬಡ್ಸ್ ಸರಣಿಯ ಜೊತೆಗೆ, ಪಿಟ್ರಾನ್ ಬಾಸ್‌ಬಡ್ಸ್ ಜೆಟ್ಸ್ ಕೇಸ್‌ ಡಿಜಿಟಲ್ ಸೂಚಕವನ್ನು ಹೊಂದಿದೆ. ಇದು ಉಳಿದ ಬ್ಯಾಟರಿಯನ್ನು ಡಿಸ್‌ಪ್ಲೇ ಮಾಡಲಿದೆ. ಇನ್ನು ಈ ಇಯರ್‌ಬಡ್ಸ್‌ ಕೈಗೆಟುಕುವ ಬೆಲೆಯನ್ನು ಹೊಂದಿದ್ದು, ಇದರ ಬೆಲೆ 999 ರೂ ಆಗಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪಿಟ್ರಾನ್

ಪಿಟ್ರಾನ್ ಬಾಸ್‌ಬಡ್ಸ್ ಜೆಟ್ಸ್ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳು ಎರಡೂ ಇಯರ್‌ಬಡ್‌ಗಳಲ್ಲಿ ಫ್ಲಾಟ್ ಟಚ್ ಸೆನ್ಸಿಟಿವ್ ಪ್ರದೇಶವನ್ನು ಹೊಂದಿವೆ. ಇದು ಕರೆಗಳನ್ನು ನಿಯಂತ್ರಿಸಲು, ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ಸೇರಿದಂತೆ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಪ್ರತಿ ಇಯರ್‌ಬಡ್‌ನಲ್ಲಿ ಹೈ-ಫೈ ಸ್ಟಿರಿಯೊ ಧ್ವನಿಯನ್ನು ಡೀಪ್ ಬಾಸ್‌ನೊಂದಿಗೆ ತಲುಪಿಸಲು 10mm ಡೈನಾಮಿಕ್ ಡ್ರೈವರ್ ಅನ್ನು ಹೊಂದಿದೆ. ಜೊತೆಗೆ ಈ ಇಯರ್‌ಫೋನ್‌ಗಳು ಟಚ್‌ ಸೆನ್ಸಿಟಿವ್‌ ಏರಿಯಾವನ್ನು ಹೊಂದಿದೆ.

ಇಯರ್‌ಬಡ್ಸ್‌

ಇನ್ನು ಈ ಇಯರ್‌ಬಡ್ಸ್‌ IPX4 ವಾಟರ್ ಮತ್ತು ಬೆವರು ನಿರೋಧಕ ರೇಟಿಂಗ್ ಅನ್ನು ಹೊಂದಿದೆ. ಅಲ್ಲದೆ ಈ ಇಯರ್‌ಫೋನ್‌ಗಳು ಬ್ಲೂಟೂತ್ ವಿ 5.0 ಕನೆಕ್ಟಿವಿಟಿಯನ್ನು ಹೊಂದಿದ್ದು,ಇದು 10 ಮೀಟರ್ ದೂರದಲ್ಲಿ ಬಲವಾದ ಸಂಪರ್ಕವನ್ನು ನೀಡುತ್ತದೆ. ಇದಲ್ಲದೆ ಈ ಇಯರ್‌ಬಡ್ಸ್‌ ನಿಷ್ಕ್ರಿಯ ಶಬ್ದ ರದ್ದತಿಯನ್ನು ಒದಗಿಸುತ್ತದೆ. ಸ್ಮಾರ್ಟ್‌ಫೋನ್‌ನೊಂದಿಗೆ ಜೋಡಿಸಲು ಸುಮಾರು 3-5 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಇದಲ್ಲದೆ ಬ್ಯಾಟರಿಗೆ ಸಂಬಂಧಿಸಿದಂತೆ, ಪಿಟ್ರಾನ್ ಬಾಸ್ಬಡ್ಸ್ ಜೆಟ್ಸ್ ಮ್ಯಾಗ್ನೆಟಿಕ್ ಕೇಸ್ 400mAh ಬ್ಯಾಟರಿಯನ್ನು ಹೊಂದಿದ್ದು, ಇದನ್ನು 2 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು. ಇಯರ್‌ಬಡ್‌ಗಳು 5 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ಒದಗಿಸುತ್ತವೆ ಎಂದು ಹೇಳಲಾಗುತ್ತದೆ.

ಇಯರ್‌ಬಡ್ಸ್‌

ಇದಲ್ಲದೆ ಈ ಇಯರ್‌ಬಡ್ಸ್‌ ಬಳಕೆದಾರರಿಗೆ ಕರೆ ಮಾಡಲು ಸ್ಟಿರಿಯೊ ಅಥವಾ ಮೊನೊ ಮೋಡ್‌ನಿಂದ ಆಯ್ಕೆ ಮಾಡಲು ಅವಕಾಶ ನೀಡುತ್ತವೆ. ಪ್ರತಿ ಇಯರ್‌ಬಡ್ ಇಂಟರ್‌ಬಿಲ್ಟ್‌ ಮೈಕ್‌ಗಳನ್ನು ಹೊಂದಿದೆ. ಜೊತೆಗೆ ಇದು ನೀರು ಮತ್ತು ಬೆವರು ನಿರೋಧಕತೆಗಾಗಿ ಐಪಿಎಕ್ಸ್ 4 ರೇಟಿಂಗ್ ಅನ್ನು ಹೊಂದಿರುತ್ತದೆ. ಇನ್ನು ಪಿಟ್ರಾನ್ ಬಾಸ್‌ಬಡ್ಸ್ ಜೆಟ್ಸ್ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳ ಬೆಲೆ 999,ರೂ ಹೊಂದಿದ್ದು, ಈಗ ಅಮೆಜಾನ್‌ನಲ್ಲಿ ಲಭ್ಯವಾಗಲಿದೆ. ಇದು ನೀಲಿ, ರವಿಶಿಂಗ್ ವೈಟ್ ಮತ್ತು ಕ್ಲಾಸಿ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ.

Most Read Articles
Best Mobiles in India

English summary
PTron Bassbuds Jets true wireless stereo earphones launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X