Home
ಸುದ್ದಿಜಾಲ

ಭಾರತದಲ್ಲಿ pTron ಸಂಸ್ಥೆಯಿಂದ ಹೊಸ ಸೌಂಡ್‌ಬಾರ್‌ ಲಾಂಚ್‌! ಮೈ ಜುಮ್ಮೆನಿಸುವ ಸೌಂಡ್‌ ಸಿಸ್ಟಂ!

ಸೌಂಡ್‌ಬಾರ್‌ ವಿಭಾಗದಲ್ಲಿ ಪಿಟ್ರಾನ್‌ (pTron) ಕಂಪೆನಿಯು ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ತನ್ನ ವಿಭಿನ್ನ ಸೌಂಡ್‌ಬಾರ್‌ಗಳ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಅನುಗುಣವಾಗಿ ಇದೀಗ ಎರಡು ಹೊಸ ಸೌಂಡ್‌ಬಾರ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು pTron Jazz ಮತ್ತು pTron Jazz Pro ಎಂದು ಹೆಸರಿಸಲಾಗಿದೆ.

ಹೌದು, ಭಾರತದಲ್ಲಿ pTron Jazz ಮತ್ತು pTron Jazz Pro ಸೌಂಡ್‌ಬಾರ್‌ಗಳು ಭಾರತದಲ್ಲಿ ಲಾಂಚ್‌ ಆಗಿವೆ. ಈ ಸ್ಪೀಕರ್ ಸಿಸ್ಟಮ್‌ಗಳು 50 ಎಂಎಂ ಆಡಿಯೋ ಡ್ಯುಯಲ್ ಡ್ರೈವರ್‌ಗಳನ್ನು ಹೊಂದಿವೆ. ಇದರಲ್ಲಿ ಪ್ರೊ ಮಾದರಿಯು 6 ಇಂಚಿನ ವೂಫರ್ ಅನ್ನು ಹೊಂದಿದೆ. ಇನ್ನು ಗೋಡೆಯ ಆರೋಹಣಕ್ಕೆ ಬೆಂಬಲ ನೀಡಲಿದ್ದು, ಕಾಂಪ್ಯಾಕ್ಟ್ ವಿನ್ಯಾಸವನ್ನು ಸಹ ಹೊಂದಿವೆ. ಹಾಗಾದ್ರೆ pTron Jazz ಮತ್ತು pTron Jazz Pro ಸೌಂಡ್‌ಬಾರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

pTron ಸಂಸ್ಥೆಯಿಂದ ಹೊಸ ಸೌಂಡ್‌ಬಾರ್‌ ಲಾಂಚ್‌! ಮೈ ಜುಮ್ಮೆನಿಸುವ ಸೌಂಡ್‌ ಸಿಸ್ಟಂ!

pTron ಜಾಝ್ ಸೌಂಡ್‌ಬಾರ್ ಫೀಚರ್ಸ್‌ ಹೇಗಿದೆ?
pTron ಜಾಝ್ ಸೌಂಡ್‌ಬಾರ್‌ 40W ಸೌಂಡ್‌ಬಾರ್ ಆಗಿದ್ದು, 50mm ಡ್ಯುಯಲ್ ಡ್ರೈವರ್‌ಗಳನ್ನು ಹೊಂದಿದೆ. ಇದು ಸೌಂಡ್‌ ಡೆಲಿವರಿಗಾಗಿ 2.0 ಚಾನಲ್ ಅನ್ನು ಬಳಸುತ್ತದೆ. ಈ ಸೌಂಡ್‌ಬಾರ್‌ ನಿಮ್ಮ ಮೌಂಟೆಡ್ ಟಿವಿ ಸೆಟ್‌ಗಳ ಅಡಿಯಲ್ಲಿ ಸುಲಭವಾಗಿ ಹೊಂದಿಕೊಳ್ಳಲಿದೆ. ಜೊತೆಗೆ pTron ಜಾಝ್ ಸೌಂಡ್‌ಬಾರ್ ಬ್ಲೂಟೂತ್ 5.3 ಬೆಂಬಲಿಸಲಿದ್ದು, 10 ಮೀಟರ್‌ಗಳವರೆಗೆ ಕನೆಕ್ಟಿವಿಟಿ ರೇಂಜ್‌ ಅನ್ನು ಹೊಂದಿದೆ. ಇದಲ್ಲದೆ ಆಪ್ಟಿಕಲ್ ಆಡಿಯೋ, AUX, USB ಮತ್ತು HDMI ARC ನಿಂದ ಇನ್‌ಪುಟ್ ಅನ್ನು ಬೆಂಬಲಿಸಲಿದೆ.

ಈ ಸೌಂಡ್‌ಬಾರ್ ನಿಮ್ಮ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಮತ್ತು ಇತರ ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಬಹುದಾಗಿದೆ. ಆದರೆ ಇದರಲ್ಲಿ ವೈಫೈ ಅನ್ನು ಸಕ್ರಿಯಗೊಳಿಸಿಲ್ಲ ಆದ್ದರಿಂದ ಇದು ಸ್ಮಾರ್ಟ್ ಕನೆಕ್ಟಿವಿಟಿಯನ್ನು ಹೊಂದಿಲ್ಲ. ಇದಲ್ಲದೆ ಕನೆಕ್ಟಿವಿಟಿ ಸ್ಟೇಟಸ್‌ ಮತ್ತು ಇತರ ಫೀಚರ್ಸ್‌ಗಳಿಗೆ ವಿವಿಧೋದ್ದೇಶ ಲೈಟ್‌ನಂತೆ ಕಾರ್ಯನಿರ್ವಹಿಸುವ ಸ್ಮಾಲ್‌ LED ಸೂಚಕವನ್ನು ಸಹ ಹೊಂದಿದೆ.

pTron ಸಂಸ್ಥೆಯಿಂದ ಹೊಸ ಸೌಂಡ್‌ಬಾರ್‌ ಲಾಂಚ್‌! ಮೈ ಜುಮ್ಮೆನಿಸುವ ಸೌಂಡ್‌ ಸಿಸ್ಟಂ!

pTron ಜಾಝ್ ಪ್ರೊ ಸೌಂಡ್‌ಬಾರ್ ಫೀಚರ್ಸ್‌ ಹೇಗಿದೆ?
pTron Jazz Pro ಸೌಂಡ್‌ಬಾರ್ 50mm ಡ್ಯುಯಲ್ ಡ್ರೈವರ್‌ಗಳೊಂದಿಗೆ ಬರಲಿದೆ. ಇದು 120W ಸ್ಪೀಕರ್ ಆಗಿದ್ದು, 6 ಇಂಚಿನ ವೂಫರ್ ಅನ್ನು ಒಳಗೊಂಡಿದೆ. ಇದರೊಂದಿಗೆ 2.1 ಚಾನಲ್ ಮೂಲಕ ಧ್ವನಿಯನ್ನು ನೀಡಲು ಸೌಂಡ್‌ಬಾರ್‌ಗೆ ಸಹಾಯ ಮಾಡಲಿದೆ. ಇದಲ್ಲದೆ pTron Jazz Pro ಸಾಮಾನ್ಯ ರೂಪಾಂತರದ ಮಾದರಿಯಲ್ಲಿಯೇ ಎಲ್ಲಾ ಸಂಪರ್ಕ ಆಯ್ಕೆಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಇದು ಸೌಂಡ್‌ಬಾರ್‌ನಲ್ಲಿ ನೇರವಾಗಿ ಇರುವ ಕಂಟ್ರೋಲ್‌ಗಳೊಂದಿಗೆ ಕಸ್ಟಮ್ ಈಕ್ವಲೈಜರ್ ಅನ್ನು ಪಡೆದುಕೊಂಡಿದೆ.

ಇನ್ನು pTron Jazz ಮತ್ತು pTron Jazz Pro ಸೌಂಡ್‌ಬಾರ್‌ಗಳು 1 ವರ್ಷದ ವಾರಂಟಿಯೊಂದಿಗೆ ಬರುತ್ತವೆ. ಇದೇ ಸಂದರ್ಭದಲ್ಲಿ ಪಿಟ್ರಾನ್‌ ಕಂಪನಿಯು pTron Jazz Pro X1 240W ಸೌಂಡ್‌ಬಾರ್ ಅನ್ನು ಸಹ ಘೋಷಿಸಿದ್ದು, ಸದ್ಯದಲ್ಲೇ ಬಿಡುಗಡೆ ಆಗಲಿದೆ. ಇದು 6.5 ಇಂಚಿನ ಬಿಗ್‌ ವೂಫರ್ ಅನ್ನು ಹೊಂದಿರಲಿದ್ದು, pTron ಜಾಝ್ ಪ್ರೊಗಿಂತ ಎರಡು ಪಟ್ಟು ಹೆಚ್ಚು ಪವರ್‌ಫುಲ್‌ ಆಗಿರಲಿದೆ ಎನ್ನಲಾಗಿದೆ.

pTron ಸಂಸ್ಥೆಯಿಂದ ಹೊಸ ಸೌಂಡ್‌ಬಾರ್‌ ಲಾಂಚ್‌! ಮೈ ಜುಮ್ಮೆನಿಸುವ ಸೌಂಡ್‌ ಸಿಸ್ಟಂ!

pTron Jazz ಸರಣಿ ಸೌಂಡ್‌ಬಾರ್‌ಗಳ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ pTron ಜಾಝ್ ಸೌಂಡ್‌ಬಾರ್ ಬೆಲೆ 2799ರೂ ಆಗಿದೆ. ಇನ್ನು pTron Jazz Pro ಬೆಲೆ 4999ರೂ ಹೊಂದಿದೆ. ಇನ್ನು ಈ ಎರಡೂ ಸೌಂಡ್‌ಬಾರ್‌ಗಳು ಇಂದಿನಿಂದ Amazon ನಲ್ಲಿ ಖರೀದಿಗೆ ಲಭ್ಯವಿವೆ. ಆದರೆ ಲಾಂಚ್‌ ಆಫರ್‌ನಲ್ಲಿ pTron pTron ಜಾಝ್ ಮೇಲೆ 200ರೂ ಮತ್ತು pTron Jazz Pro ಸೌಂಡ್‌ಬಾರ್‌ನಲ್ಲಿ 500ರೂ ರಿಯಾಯಿತಿಯನ್ನು ಸೀಮಿತ ಅವಧಿಗೆ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
pTron JazzSeries Soundbars With 50mm Dual Drivers Launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+