Home
ಸುದ್ದಿಜಾಲ

pTron ಸಂಸ್ಥೆಯಿಂದ ಹೊಸ ಮಾದರಿಯ ಸ್ಮಾರ್ಟ್‌ವಾಚ್‌ ಅನಾವರಣ! 2.5D ಕರ್ವ್ಡ್ ಡಿಸ್‌ಪ್ಲೇ ವಿಶೇಷ!

ಜನಪ್ರಿಯ ಸ್ಮಾರ್ಟ್‌ವಾಚ್‌ ತಯಾರಕ ಕಂಪೆನಿಗಳಲ್ಲಿ pTron ಕೂಡ ಒಂದಾಗಿದೆ. ತನ್ನ ವಿಭಿನ್ನ ಶೈಲಿ ಹಾಗೂ ಸ್ಟೈಲಿಶ್‌ ಸ್ಮಾರ್ಟ್‌ವಾಚ್‌ಗಳ ಮೂಲಕ ಸೈ ಎನಿಸಿಕೊಂಡಿದೆ. ಇದೀಗ ಭಾರತದಲ್ಲಿ ರೆಫ್ಲೆಕ್ಟ್‌ ಮ್ಯಾಕ್ಸ್‌ಪ್ರೊ ಮತ್ತು ರೆಫ್ಲೆಕ್ಟ್‌ ಫ್ಲ್ಯಾಶ್‌ ಎಂಬ ಎರಡು ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ಗಳು ನಯವಾದ ವಿನ್ಯಾಸದಲ್ಲಿ ಬರಲಿದೆ.

ಹೌದು, pTron ಕಂಪೆನಿ ಭಾರತದಲ್ಲಿ ರೆಫ್ಲೆಕ್ಟ್‌ ಮ್ಯಾಕ್ಸ್‌ಪ್ರೊ ಮತ್ತು ರೆಫ್ಲೆಕ್ಟ್‌ ಫ್ಲ್ಯಾಶ್‌ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣಗೊಳಿಸಿದೆ. ಇವು 'ಮೇಡ್ ಇನ್ ಇಂಡಿಯಾ' ಸ್ಮಾರ್ಟ್ ವಾಚ್‌ಗಳು ಆಗಿದ್ದು, ಹಲವು ವೈವಿಧ್ಯಮಯ ಬಣ್ಣದ ಆಯ್ಕೆಗಳೊಂದಿಗೆ ಬರುತ್ತವೆ. ಇದಲ್ಲದೆ ಈ ಎರಡೂ ಸ್ಮಾರ್ಟ್‌ವಾಚ್‌ಗಳ ಬೆಲೆ ಭಾರತದಲ್ಲಿ 1,500 ರೂ.ಗಿಂತ ಕಡಿಮೆ ಇರಲಿದೆ ಎನ್ನಲಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್‌ಗಳಲ್ಲಿ ಯಾವೆಲ್ಲಾ ಫೀಚರ್ಸ್‌ಗಳನ್ನು ನಿರೀಕ್ಷಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

pTron ಸಂಸ್ಥೆಯಿಂದ ಹೊಸ ಮಾದರಿಯ ವಾಚ್‌ ಅನಾವರಣ! 2.5D ಕರ್ವ್ಡ್ ಡಿಸ್‌ಪ್ಲೇ ವಿಶೇಷ

pTron ರಿಫ್ಲೆಕ್ಟ್ ಮ್ಯಾಕ್ಸ್‌ಪ್ರೊ ಸ್ಮಾರ್ಟ್‌ವಾಚ್‌ ಫೀಚರ್ಸ್‌ ಹೇಗಿದೆ?

pTron ರಿಫ್ಲೆಕ್ಟ್ ಮ್ಯಾಕ್ಸ್‌ಪ್ರೊ ಸ್ಮಾರ್ಟ್‌ವಾಚ್‌ 2.05 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ಅನ್ನು ಪಡೆದುಕೊಂಡಿವೆ. ಇದರಿಂದ ಸ್ಮಾರ್ಟ್‌ಫೋನ್‌ ಕರೆಗಳನ್ನು ವಾಚ್‌ ಮೂಲಕವೇ ನಿಯಂತ್ರಿಸಬಹುದಾಗಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ನಲ್ಲಿ 24×7 ಆರೋಗ್ಯ ಟ್ರ್ಯಾಕಿಂಗ್, ಕ್ರೀಡಾ ವಿಧಾನಗಳು ಮತ್ತು ಸ್ಲೀಪ್ ಟ್ರ್ಯಾಕರ್ ಅನ್ನು ಒಳಗೊಂಡಿದೆ. ಇದರೊಂದಿಗೆ ಈ ವಾಚ್‌ನಲ್ಲಿರುವ ಕ್ರಿಯಾತ್ಮಕ ಕಿರೀಟವು ಸ್ಮಾರ್ಟ್ ವಾಚ್‌ನೊಂದಿಗೆ ವರ್ಧಿತ ಸಂವಹನವನ್ನು ಸಕ್ರಿಯಗೊಳಿಸುತ್ತದೆ.

pTron ಸಂಸ್ಥೆಯಿಂದ ಹೊಸ ಮಾದರಿಯ ವಾಚ್‌ ಅನಾವರಣ! 2.5D ಕರ್ವ್ಡ್ ಡಿಸ್‌ಪ್ಲೇ ವಿಶೇಷ

pTron ರಿಫ್ಲೆಕ್ಟ್ ಫ್ಲ್ಯಾಶ್ ಫೀಚರ್ಸ್‌ ಹೇಗಿದೆ?

pTron ರಿಫ್ಲೆಕ್ಟ್ ಫ್ಲ್ಯಾಶ್ ಸ್ಮಾರ್ಟ್‌ವಾಚ್‌ 1.32 ಇಂಚಿನ ಫುಲ್‌ ಟಚ್‌ 2.5D ಕರ್ವ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 600 ನಿಟ್ಸ್ ಪೀಕ್ ಬ್ರೈಟ್‌ನೆಸ್ ಅನ್ನು ಒಳಗೊಂಡಿದೆ. ಇದು 60 Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ವಾಚ್‌ 3 ಗಂಟೆಗಳ ಪೂರ್ಣ ಚಾರ್ಜ್‌ನಲ್ಲಿ 10 ದಿನಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ . ಜೊತೆಗೆ ಬ್ಲೂಟೂತ್ ಕರೆ, 24/7 ಆರೋಗ್ಯ ಮೇಲ್ವಿಚಾರಣೆ, ಕ್ರೀಡಾ ವಿಧಾನಗಳು, ನಿದ್ರೆ ಟ್ರ್ಯಾಕರ್ ಮತ್ತು 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಒಳಗೊಂಡಿದೆ.

pTron ಸಂಸ್ಥೆಯಿಂದ ಹೊಸ ಮಾದರಿಯ ವಾಚ್‌ ಅನಾವರಣ! 2.5D ಕರ್ವ್ಡ್ ಡಿಸ್‌ಪ್ಲೇ ವಿಶೇಷ

pTron ರಿಫ್ಲೆಕ್ಟ್ ಮ್ಯಾಕ್ಸ್‌ಪ್ರೊ ಮತ್ತು ಫ್ಲ್ಯಾಶ್ ವಾಚ್‌ಗಳ ಬೆಲೆ ಮತ್ತು ಲಭ್ಯತೆ

pTron ರಿಫ್ಲೆಕ್ಟ್ ಮ್ಯಾಕ್ಸ್‌ಪ್ರೊ ಸ್ಮಾರ್ಟ್‌ವಾಚ್‌ ಭಾರತದಲ್ಲಿ 999ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಇದು ಕಪ್ಪು, ಚಿನ್ನ, ನೀಲಿ, ಬೆಳ್ಳಿ, ಗುಲಾಬಿ ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಇನ್ನು ರಿಫ್ಲೆಕ್ಟ್ ಫ್ಲ್ಯಾಶ್ ಸ್ಮಾರ್ಟ್‌ವಾಚ್‌ನ ಬೆಲೆ 1,399 ರೂ. ಆಗಿದ್ದು, ಕಪ್ಪು, ನೀಲಿ, ಚಿನ್ನ ಮತ್ತು ಬೆಳ್ಳಿ ಸೇರಿದಂತೆ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಇದನ್ನು ಖರೀದಿಸಬಹುದು. ಈ ಎರಡೂ ಸ್ಮಾರ್ಟ್‌ವಾಚ್‌ಗಳು ಇಂದಿನಿಂದ ಭಾರತದಲ್ಲಿ ಖರೀದಿಗೆ ಲಭ್ಯವಿದೆ.

ಇನ್ನು pTron ಕಂಪೆನಿ ಇದೇ ವರ್ಷ ತನ್ನ ಪ್ರಿಟ್ರಾನ್‌ ಬೇಸ್‌ಪಾಡ್ಸ್‌ ಎನ್ಕೋರ್ ಇಯರ್‌ಬಡ್ಸ್‌ ಅನ್ನು ಬಿಡುಗಡೆ ಮಾಡಿತ್ತು. ಈ ಇಯರ್‌ಬಡ್ಸ್‌ ಆರಾಮದಾಯಕವಾದ ಅನುಭವ ನೀಡಲಿದ್ದು, ಇದಕ್ಕಾಗಿ ಉತ್ತಮ ಶೈಲಿಯನ್ನು ಪಡೆದುಕೊಂಡಿದೆ. ಹಾಗೆಯೇ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಇರುವುದರಿಂದ 90% ರಷ್ಟು ಹಿನ್ನೆಲೆ ಶಬ್ದವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ನೀವು ಎಷ್ಟೇ ಗದ್ದಲದ ವಾತಾವರಣದಲ್ಲಿ ಇದ್ದರೂ ಸಹ ಸ್ಪಷ್ಟ ಧ್ವನಿ ಗುಣಮಟ್ಟವನ್ನು ಇದು ನೀಡುತ್ತದೆ.

ಇದರೊಂದಿಗೆ ಇನ್‌ಬಿಲ್ಟ್‌ ಟ್ರೂಟಾಕ್ ENC ತಂತ್ರಜ್ಞಾನ ಹೊಂದಿದ್ದು, ಇದು ನಿಮ್ಮ ದವಡೆಯ ಚಲನೆಯ ಕಂಪನಗಳನ್ನು ಗ್ರಹಿಸಿಕೊಳ್ಳುತ್ತದೆ. ಜೊತೆಗೆ ಗಾಳಿ ಹಾಗೂ ಟ್ರಾಫಿಕ್‌ನಂತಹ ಸಮಸ್ಯೆ ಎದುರಾದಾಗ ಸುತ್ತುವರಿದ ಹಿನ್ನೆಲೆ ಶಬ್ದಗಳನ್ನು ಆಟೋಮ್ಯಾಟಿಕ್‌ ಆಗಿ ಕಡಿಮೆ ಮಾಡಿ, ಈ ಮೂಲಕ ಉತ್ತಮ ಅನುಭವವನ್ನು ನೀಡುತ್ತದೆ. ಹಾಗೂ ಕರೆ ಉದ್ದೇಶಕ್ಕೆ ನಾಲ್ಕು ಮೈಕ್ರೊಫೋನ್‌ಆಯ್ಕೆಗಳನ್ನು ಈ ಬಡ್ಸ್‌ಗಳಲ್ಲಿ ನೀಡಲಾಗಿದೆ.

Best Mobiles in India

English summary
PTron reflect MaxPro and Reflect Flash Smartwatches Launched In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+