Just In
Don't Miss
- Automobiles
ಅತ್ಯಾಧುನಿಕ ಫೀಚರ್ಸ್ಗಳೊಂದಿಗೆ ಹೀರೋ ಪ್ಯಾಶನ್ ಎಕ್ಸ್ಟೆಕ್ ಬೈಕ್ ಬಿಡುಗಡೆ
- Sports
ENG vs NZ 2ನೇ ಟೆಸ್ಟ್: ನೆಲಕಚ್ಚಿದ್ದ ಇಂಗ್ಲೆಂಡ್ಗೆ ಬೈರ್ಸ್ಟೋ, ಓವರ್ಟನ್ ಆಸರೆ; 3ನೇ ದಿನದ ಲೈವ್ ಸ್ಕೋರ್
- Lifestyle
ಅಪಘಾತದಿಂದ ಕ್ಷಣಾರ್ಧದಲ್ಲಿ ಮಗುವಿನ ರಕ್ಷಿಸಿ, ತಾಯಿಯ ಮೊಬೈಲ್ ಪುಡಿ ಮಾಡಿದ ಸೈನಿಕ: ಸೈನಿಕನ ಕಾರ್ಯಕ್ಕೆ ನೆಟ್ಟಿಗರು ಫುಲ್ ಫಿದಾ
- News
ಉಪಯೋಗಿಸಿದ ಕಾರು ಮಾರಾಟ ನಿಲ್ಲಿಸಿದ ಓಲಾ!
- Movies
ಕನ್ನಡದ 'ಯುವರಾಜ್'ಗಾಗಿ ಬಂದಳು ಮಿಸ್ವರ್ಲ್ಡ್ ಮಾನುಷಿ ಚಿಲ್ಲರ್!
- Finance
ಪಿಎಂ ಕಿಸಾನ್ 12ನೇ ಕಂತು: ಶೀಘ್ರ ಈ ಕಾರ್ಯ ಮಾಡಿ
- Education
Vijayapura District Court Recruitment 2022 : 28 ಜವಾನ, ಆದೇಶ ಜಾರಿಕಾರ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಪಿಟ್ರಾನ್ ಸಂಸ್ಥೆಯಿಂದ ನೆಕ್‌ಬ್ಯಾಂಡ್ ಶೈಲಿಯ ಹೊಸ ಇಯರ್‌ಫೋನ್ ಲಾಂಚ್!
ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಹೆಚ್ಚಾದಂತೆ ಇಯರ್‌ಫೋನ್ ಮಾರುಕಟ್ಟೆ ಕೂಡ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳು ವಿಧವಿದವಾದ ಇಯರ್‌ಫೋನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಪಿಟ್ರಾನ್ ಕಂಪೆನಿ ಕೂಡ ಒಂದಾಗಿದೆ. ಈಗಾಗಲೇ ಹಲವು ಮಾದರಿಯ ಇಯರ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಇದೀಗ ಹೊಸ ಪಿಟ್ರಾನ್ ಟ್ಯಾಂಜೆಂಟ್ ಪ್ಲಸ್ ವಿ2 ವಾಯರ್‌ಲೆಸ್ ನೆಕ್‌ಬ್ಯಾಂಡ್ ಶೈಲಿಯ ಹೆಡ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಹೌದು, ಪಿಟ್ರಾನ್ ಕಂಪೆನಿ ಹೊಸ ಪಿಟ್ರಾನ್ ಟ್ಯಾಂಜೆಂಟ್ ಪ್ಲಸ್ ವಿ2 ವಾಯರ್‌ಲೆಸ್ ಇಯರ್‌ಫೋನ್ ಬಿಡುಗಡೆ ಮಾಡಿದೆ. ಇದು 220mAh ಬ್ಯಾಟರಿಯನ್ನು ಹೊಂದಿದ್ದು, ಯುಎಸ್‌ಬಿ ಟೈಪ್-ಸಿ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಒಂದು ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಪಿಟ್ರಾನ್ ಟ್ಯಾಂಜೆಂಟ್ ಪ್ಲಸ್ ವಿ 2 ಒಂದೇ ಚಾರ್ಜ್‌ನಲ್ಲಿ 18 ಗಂಟೆಗಳ ಪ್ಲೇಬ್ಯಾಕ್ ನೀಡುತ್ತದೆ ಎನ್ನಲಾಗಿದೆ. ಇನ್ನುಳಿದಂತೆ ಈ ಇಯರ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪಿಟ್ರಾನ್ ಟ್ಯಾಂಜೆಂಟ್ ಪ್ಲಸ್ ವಿ2 ವಾಯರ್‌ಲೆಸ್ ಇಯರ್‌ಫೋನ್ ನೆಕ್‌ಬ್ಯಾಂಡ್-ಶೈಲಿಯನ್ನು ಹೊಂದಿದೆ. ಇನ್ನು ಈ ಹೆಡ್‌ಫೋನ್ 10ಎಂಎಂ ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಇದು ಹೈ-ಫೈ ಸ್ಟಿರಿಯೊ ವಾಯ್ಸ್ ಅನ್ನು ಡೀಪ್ ಬಾಸ್‌ನೊಂದಿಗೆ ತಲುಪಿಸುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ, ಕೇವಲ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ ಆರು ಗಂಟೆಗಳ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಅಲ್ಲದೆ ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ ಹೆಡ್‌ಫೋನ್ ಅನ್ನು ಒಂದು ಗಂಟೆಯಲ್ಲಿ 0 ರಿಂದ 100%ವರೆಗೆ ಚಾರ್ಜ್ ಮಾಡಬಹುದು. ಇದು 18 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ. ಇನ್ನು ಈ ಇಯರ್‌ಫೋನ್ ಗೂಗಲ್ ಅಸಿಸ್ಟೆಂಟ್, ಅಮೆಜಾನ್ ಅಲೆಕ್ಸಾ ಮತ್ತು ಆಪಲ್ ಸಿರಿ ಬೆಂಬಲವನ್ನು ಒಳಗೊಂಡಿದೆ. ಇದಲ್ಲದೆ ಈ ಹೆಡ್‌ಫೋನ್ 10 ಮೀಟರ್ ವರೆಗೆ ವಾಯರ್‌ಲೆಸ್ ಕನೆಕ್ಟಿವಿಟಿಯೊಂದಿಗೆ ಬ್ಲೂಟೂತ್ ವಿ 5.0 ಅನ್ನು ಬೆಂಬಲಿಸಲಿದೆ. ಅಲ್ಲದೆ ಕರೆಗಳಿಗಾಗಿ ಇಂಟರ್‌ಬಿಲ್ಟ್ ಹೆಚ್‌ಡಿ ಮೈಕ್ ಅನ್ನು ಹೊಂದಿವೆ.

ಸದ್ಯ ಪಿಟ್ರಾನ್ ಟ್ಯಾಂಜೆಂಟ್ ಪ್ಲಸ್ ವಿ 2 ಇಯರ್‌ಫೋನ್ ಬೆಲೆ 999.ರೂ ಹೊಂದಿದೆ. ಈ ವಾಯರ್‌ಲೆಸ್ ನೆಕ್‌ಬ್ಯಾಂಡ್ ಶೈಲಿಯ ಹೆಡ್‌ಫೋನ್‌ಗಳು ಪ್ರಸ್ತುತ ಅಮೆಜಾನ್ ಮೂಲಕ 899.ರೂ ಗೆ ಲಭ್ಯವಾಗಲಿದೆ. ಇನ್ನು ಈ ಹೆಡ್‌ಫೋನ್‌ಗಳು ಬ್ಲೀಡಿಂಗ್ ಬ್ಲೂ, ರಡ್ಡಿ ರೆಡ್ ಮತ್ತು ಟೈಟಾನಿಯಂ ಗ್ರೇ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999