ಪಬ್‍ಜಿ ಆಡುವ ಭರದಲ್ಲಿ ನೀರೆಂದು ತಿಳಿದು ಆಸಿಡ್ ಕುಡಿದ ಯುವಕ!!

|

ಜನಪ್ರಿಯ ಆನ್‌ಲೈನ್ ಗೇಮ್ ಪಬ್‌ಜಿಗೆ ವ್ಯಸಿನಿ ಯುವಕನೋರ್ವ ಪಬ್‍ಜಿ ಆಡುವ ಭರದಲ್ಲಿ ನೀರು ಅಂತ ಭಾವಿಸಿ ಆಸಿಡ್ ಕುಡಿದಿರುವ ಆತಂಕಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪಬ್‌ಜಿ ಆಟದಲ್ಲಿ ತಲ್ಲೀನನಾಗಿದ್ದ 25 ವರ್ಷ ವಯಸ್ಸಿನ ಯುವಕನೋರ್ವ ಪಬ್​ಜಿ​ ಗೇಮ್​ ಆಡುತ್ತಿದ್ದ ವೇಳೆ ಬಾಯಾರಿಕೆಯಾಗಿ ಹತ್ತಿರವಿದ್ದ ನೀರಿನ ಬಾಟಲಿ ಎಂದು ಆಸಿಡ್​ ಕುಡಿದಿದ್ದಾನೆ ಎಂದು ಇತ್ತೀಚನ ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

ಕಳೆದ ತಿಂಗಳು ಫೆಬ್ರವರಿ 19ರಂದೇ ಈ ಘಟನೆ ನಡೆದಿದ್ದು, ಮೊಬೈಲ್‌ನಲ್ಲಿ ಪಬ್‍ಜಿ ಆಡುತ್ತಿದ್ದ ಯುವಕನೋರ್ವನಿಗೆ ಬಾಯಾರಿಕೆ ಆಗಿದೆ. ಈ ವೇಳೆ ಆಟದಲ್ಲಿ ಮುಳುಗಿದ್ದ ಯುವಕ ನೀರೆಂದು ಭಾವಿಸಿ ಆಸಿಡ್ ಕುಡಿದಿದ್ದಾನೆ. ಈ ವೇಳೆ ಆತನಿಗೆ ತಕ್ಷಣ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಸರಿಯಾದ ಸಮಯಕ್ಕೆ ವೈದ್ಯರು ಚಿಕಿತ್ಸೆ ನೀಡಿದ್ದರಿಂದ ಅದೃಷ್ಟವಶಾತ್ ಆ ಯುವಕನು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವರದಿಗಳಲ್ಲಿ ಹೇಳಲಾಗಿದೆ.

 ಪಬ್‍ಜಿ ಆಡುವ ಭರದಲ್ಲಿ ನೀರೆಂದು ತಿಳಿದು ಆಸಿಡ್ ಕುಡಿದ ಯುವಕ!!

ಈ ಬಗ್ಗೆ ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು ಪ್ರತಿಕ್ರಿಯಿಸಿದ್ದು, ಆಟದ ಗುಂಗಿನಲ್ಲಿ ಆತ ಈ ರೀತಿ ಮಾಡಿಕೊಂಡಿದ್ದಾನೆ. ಆಸಿಡ್ ಕುಡಿದಿದ್ದರಿಂದ ಆತನಿಗೆ ಏನನ್ನು ಸೇವಿಸಲು ಆಗುತ್ತಿರಲಿಲ್ಲ. ಆದರೆ, ಈಗ ಸ್ವಲ್ಪ ಚೇತರಿಸಿಕೊಂಡಿದ್ದಾನೆ. ವಿಚಿತ್ರವೆಂದರೆ. ನಾನು ಚಿಕಿತ್ಸೆ ನೀಡುತ್ತಿದ್ದ ವೇಳೆ ಕೂಡ ಆತ ಮೊಬೈಲ್‍ನಲ್ಲಿಯೇ ವ್ಯಸ್ಥನಾಗಿದ್ದ. ಯಾವಾಗಲೂ ಗೇಮ್ಸ್ ಆಡುವುದು ಇಲ್ಲ ವಿಡಿಯೋಗಳನ್ನು ನೋಡುತ್ತ ಮೊಬೈಲ್‍ನಲ್ಲಿಯೇ ಮುಳುಗಿರುತ್ತಿದ್ದ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಆಟಗಾರನ್ನು ತನ್ನತ್ತ ಸೆಳೆದುಕೊಳ್ಳುತ್ತಿರುವ ಪಬ್​ಜಿ ಗೇಮ್​ ವ್ಯಸನ ಮಿತಿಮೀರುತ್ತಿದ್ದು, ಗೇಮ್ ಆಡುವ ಭರದಲ್ಲಿ ಹಲವರು ತಮ್ಮ ಜೀವಕ್ಕೆ ಯುವಕ ಆಪತ್ತು ತಂದುಕೊಳ್ಳುತ್ತಿದ್ದಾರೆ. ಪಬ್‌ಜಿ ಗೇಮ್ ಆಡುವುದರಿಂದ ಯುವಕರು ಆತಂಕಕಾರಿಯಾಗಿ ಬದಲಾಗುತ್ತಿದ್ದಾರೆ. ಪಬ್‌ಜಿ ಗೇಮ್‌ಗೆ ವ್ಯಸನಿಯಾಗಿದ್ದ ಹಲವರು ಬೆಂಗಳೂರಿನ ನಿಮಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣಗಳನ್ನು ನಾವು ನೋಡಬಹುದಾಗಿದೆ.

 ಪಬ್‍ಜಿ ಆಡುವ ಭರದಲ್ಲಿ ನೀರೆಂದು ತಿಳಿದು ಆಸಿಡ್ ಕುಡಿದ ಯುವಕ!!

ನೆನ್ನೆಯಷ್ಟೇ ವರದಿಯಾಂದಂತೆ, 13 ವರ್ಷದ ಮಕ್ಕಳು ಪಬ್‌ಜಿ ಆಡಲು ಸಾಧ್ಯವಾಗದಂತೆ ಚೀನಾದಲ್ಲಿ ಡಿಜಿಟಲ್​ ಲಾಕ್ ಅನ್ನು ಅಳವಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಚೀನಾದ ಗೇಮಿಂಗ್​ ಗೈಂಟ್​ ಟೆನ್​ಸೆಂಟ್​ ಕಂಪೆನಿ ನೀಡಿದ ವರದಿ ಪ್ರಕಾರ, ವಿಡಿಯೋ ಗೇಮಿಂಗ್​ ಬಳಕೆಯ ಯುವಕರು ಆಟದ ಚಟಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಗೇಮಿಂಗ್ ಕಂಪೆನಿಗಳಿಗೆ ಹೆಚ್ಚು ಆದಾಯವು ಸಹ ದೊರೆಯುತ್ತಿದೆ ಎಂದು ತಿಳಿಸಿದೆ.

Best Mobiles in India

English summary
PUBG Addiction: Youth in Madhya Pradesh Drinks Acid Instead of Water, While Playing Game. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X