ಮಕ್ಕಳು 'ಪಬ್‌ಜಿ' ಗೇಮ್ ಆಡಲಾಗದಂತೆ ಹೊಸ ಫೀಚರ್ ಅಳವಡಿಕೆ!!

|

ಜನಪ್ರಿಯ ಆನ್‌ಲೈನ್‌ ಗೇಮ್ ಪಬ್‌ಜಿ(PUBG) ಚಟಕ್ಕೆ ಮಕ್ಕಳು ಬಲಿಯಾಗುವುದನ್ನು ತಡೆಯಲು ಚೀನಾದಲ್ಲಿ ಡಿಜಿಟಲ್ ಲಾಕ್ ವ್ಯವಸ್ಥೆ ಪರಿಚಯಿಸಲಾಗಿದೆ. ಪಬ್‌ಜಿ ಚಟಕ್ಕೆ ಮಕ್ಕಳು ಬಲಿಯಾಗುತ್ತಿದ್ದು, ಅದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಚೀನಾ ಎಚ್ಚರಿಕೆ ನೀಡಿದ್ದರಿಂದ ಪಬ್‌ಜಿ ಮಾತೃ ಸಂಸ್ಥೆ ಟೆನ್ಸೆಂಟ್ ಗೇಮ್ಸ್ ನೂತನ ಫೀಚರ್ ಅನ್ನು ಪರಿಚಯಿಸಿದೆ.

ಚೀನಾದಲ್ಲಿ ಪಬ್‌ಜಿ ಗೇಮ್ ಚಟಕ್ಕೆ ಹೆಚ್ಚು ಮಕ್ಕಳು ಬಲಿಯಾಗುತ್ತಿರುವುದನ್ನು ತಡೆಯಲು, ಅಲ್ಲಿನ ಸರಕಾರ ಗೇಮ್ ನಿಷೇಧಿಸಲು ಮುಂದಾಗಿತ್ತು. ಜತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಚೀನಾದಲ್ಲಿ ಪಬ್‌ಜಿ ಚೈಲ್ಡ್ ಲಾಕ್ ಪರಿಚಯಿಸಿದೆ. ಇದರಿಂದ 13 ವರ್ಷದೊಳಗಿನ ಮಕ್ಕಳು ಪಬ್‌ಜಿ ಆಡದಂತೆ ತಡೆಯಬಹುದು ಎಂದು ಹೇಳಲಾಗಿದೆ.

ಮಕ್ಕಳು 'ಪಬ್‌ಜಿ' ಗೇಮ್ ಆಡಲಾಗದಂತೆ ಹೊಸ ಫೀಚರ್ ಅಳವಡಿಕೆ!!

ಪಬ್‌ಜಿ ಚಟಕ್ಕೆ ಬಿದ್ದ ಮಕ್ಕಳು ನಿರಂತರ ಆಟದಲ್ಲಿ ತೊಡಗುತ್ತಾ ಹಿಂಸಾ ಪ್ರವೃತ್ತಿಗಿಳಿಯುತ್ತಿದ್ದಾರೆ. ಹಾಗಾಗಿ, ಪಬ್‌ಜಿ ಗೇಮ್ ನಿಷೇಧಿಸಿ ಇಲ್ಲವೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದು ಭಾರತ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹೇಳಲಾಗಿತ್ತು.ಇನ್ನು ಮಕ್ಕಳು ಪಬ್‌ಜಿಯಂತಹ ಗೇಮ್‌ಗೆ ಬಲಿಯಾಗುವುದನ್ನು ತಡೆಯಲು ಪೋಷಕರಿಗೂ ಅರಿವು ಮೂಡಿಸುವ ಕೆಲಸವನ್ನು ಮಾಡಲಾಗಿತ್ತು. ಹಾಗಾದರೆ, ಗೇಮಿಂಗ್ ವ್ಯಸನ ಎಂಬ ಕರಾಳ ಲೋಕ ಮತ್ತು ಜನಪ್ರಿಯ ಗೇಮ್ ಪಬ್‌ಜಿ ಪಾತ್ರ ಏನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

‘ಸೆಕ್ಸ್‌’ಗಿಂತ ಜನಪ್ರಿಯ ಈ ಗೇಮ್!

‘ಸೆಕ್ಸ್‌’ಗಿಂತ ಜನಪ್ರಿಯ ಈ ಗೇಮ್!

ಆನ್‌ಲೈನಿನಲ್ಲಿ ಹೆಚ್ಚು ಮಾರಾಟವಾಗುವುದು ‘ಸೆಕ್ಸ್‌' ಎಂಬ ಜನಪ್ರಿಯ ಮಾತೊಂದಿದೆ. ಇದನ್ನು ಎಲ್ಲಾ ವಯೋಮಾನದವರು ಆನ್‌ಲೈನಿನಲ್ಲಿ ಬಯಸುವ ಕಂಟೆಂಟ್ ಅನ್ನಿಸಿಕೊಂಡಿದೆ. ಆದರೆ, 16-25ರ ನಡುವಿನ ಯುವ ಜನತೆಯ ವಿಚಾರಕ್ಕೆ ಬಂದರೆ ಅವರು ಹೆಚ್ಚು ಕಾಲ ಕಳೆಯುವುದು ಗೇಮಿಂಗ್‌ ಎಂಬ ಕೆಟಗರಿಯಲ್ಲಿ ಎಂಬುದನ್ನು ನಂಬಲು ನೀವು ತಯಾರಾಗಬೇಕಿದೆ.

ಬೇಕೇ ಬೇಕು ಗೇಮ್!

ಬೇಕೇ ಬೇಕು ಗೇಮ್!

ಪೋಷಕರಿಗೆ ತಮ್ಮ ಮಕ್ಕಳು ಎಲ್ಲಾ ಈ ಸೆಕ್ಸ್ ಎಂಬ ಮಾಯೆಗೆ ಸಿಲುಕುತ್ತಾರೆ ಎಂಬ ಭಯ ಯಾವಾಗಲೂ ಕಾಡುತ್ತಿರುತ್ತದೆ. ಚಿಕ್ಕವಯಸ್ಸು ಸೆಕ್ಸ್‌ಗೆ ಆಕರ್ಷಣೆ ಎಂದುಕೊಳ್ಳುತ್ತಾರೆ. ಆದರೆ, ಅಂಕಿಅಂಶಗಳು 16-25ರ ನಡುವಿನ ಯುವ ಜನತೆಯ ಆಕರ್ಷಣೆಯನ್ನು ಗೇಮಿಂಗ್ ಎಂದು ದೃಢಪಡಿಸಿವೆ. 16 ರಿಂದ 25 ನೇ ವಯಸ್ಸು ಹೆಚ್ಚು ಗೇಮಿಂಗ್ ಪ್ರಪಂಚಕ್ಕೆ ಆಕರ್ಷಿತವಾಗುತ್ತದೆ.

ವಾರದಲ್ಲಿ ಕನಿಷ್ಠ 6 ಗಂಟೆ ಗೇಮಿಂಗ್‌ನಲ್ಲಿ.

ವಾರದಲ್ಲಿ ಕನಿಷ್ಠ 6 ಗಂಟೆ ಗೇಮಿಂಗ್‌ನಲ್ಲಿ.

ಹಲವು ಅಧ್ಯಯನಗಳು ಆನ್‌ಲೈನ್‌ ಗೇಮಿಂಗ್ ಎಂಬ ಕೆಟಗರಿಯ ಕುರಿತು ಅಂಕಿ ಅಂಶಗಳನ್ನು ಮುಂದಿಟ್ಟಿವೆ. ಸುಮಾರು 1.2 ಬಿಲಿಯನ್ ಜನ ಗೇಮಿಂಗ್‌ನಲ್ಲಿ ಮುಳುಗಿ ಹೋಗಿದ್ದಾರೆ ಎಂದು ಹೇಳುತ್ತವೆ ಅಧ್ಯಯನಗಳು. ವಾರದಲ್ಲಿ ಕನಿಷ್ಠ 6 ಗಂಟೆಗಳನ್ನು ಗೇಮಿಂಗ್‌ನಲ್ಲಿಯೇ ಕಳೆಯುವ ಸಂಖ್ಯೆ ಇದಾಗಿದೆ. ಹೊಸ ಹೊಸ ಗೇಮ್‌ಗಳು ಅವರನ್ನು ಮತ್ತಷ್ಟು ಆಕರ್ಷಿಸುತ್ತಿವೆ.

ಕೋಟ್ಯಾಂತರ ಮಾರುಕಟ್ಟೆ!

ಕೋಟ್ಯಾಂತರ ಮಾರುಕಟ್ಟೆ!

1970ರಲ್ಲಿ ಆರಂಭವಾದ ಆನ್‌ಲೈನ್‌ ಗೇಮ್ ಸುತ್ತ ಕೋಟ್ಯಾಂತರ ರೂಪಾಯಿಗಳ ಮಾರುಕಟ್ಟೆಯೊಂದು ಹುಟ್ಟಿಕೊಂಡಿದೆ. ಮಹತ್ವದ ವಿಚಾರದಿಂದ ಜನರನ್ನು ದೂರ ಇಟ್ಟು, ಕೃತಕ ಪರಿಸರದಲ್ಲಿ ಅವರನ್ನು ಎಂಗೇಜ್ ಮಾಡಿ ಇಡುವ ಕೆಲಸವನ್ನು ಈ ಗೇಮ್‌ಗಳು ಮಾಡುತ್ತಿವೆ. ಹೀಗೆ ತಾವು ಹಣಗಳಿಸಿಕೊಳ್ಳಲು ಹೊಸ ಹೊಸ ಗೇಮ್‌ಗಳನ್ನು ಸೃಷ್ಟಿಮಾಡುತ್ತಾರೆ.

ಗೇಮಿಂಗ್ ಎಂಬ ಕರಾಳ ಲೋಕ!

ಗೇಮಿಂಗ್ ಎಂಬ ಕರಾಳ ಲೋಕ!

ನೇರವಾಗಿ ಇದನ್ನು ಒಂದು ಸಮಸ್ಯೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ನೀವೊಮ್ಮೆ ಗೂಗಲ್ ಮಾಡಿದರೆ ಆನ್‌ಲೈನ್‌ ಗೇಮಿಂಗ್ ಗಂಭೀರತೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಅವು ಬೀರುತ್ತಿರುವ ಸಾಮಾಜಿಕ ಸಮಸ್ಯೆಯ ಚಿತ್ರಣ ಕಣ್ಣನ್ನು ರಾಚುತ್ತದೆ. ಜನರನ್ನು ಆಕರ್ಷಿಸುವ ಸಲುವಾಗಿಯೇ ಇಂತಹ ಹೊಸ ಹೊಸ ಗೇಮ್‌ಗಳು ಪ್ರತಿ ವರ್ಷ ಮಾರುಕಟ್ಟೆಗೆ ಬರುತ್ತಿವೆ.

ಆನ್‌ಲೈನ್‌ ಗೇಮ್ ಈಗ ಗೇಮ್ ಅಲ್ಲ!

ಆನ್‌ಲೈನ್‌ ಗೇಮ್ ಈಗ ಗೇಮ್ ಅಲ್ಲ!

ಈ ಗೇಮ್‌ಗಳು ಮನರಂಜನೆಗೆ ಸೀಮಿತವಾಗಬೇಕಿತ್ತು. ಆದರೆ, ಗೇಮ್‌ಗಳು ಈಗ ಜನರ, ಯುವಕರ ಮನಸ್ಸನ್ನು ಕದಡುತ್ತಿವೆ. ಜನರು ಕಲ್ಪನೆಯನ್ನು ತಮ್ಮ ಗೇಮ್‌ ಮೂಲಕ ಸಾಕಾರಪಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ತಮ್ಮನ್ನು ತಾವು ಮರೆಯುತ್ತಿದ್ದಾರೆ. ಗೇಮ್ ಅಲ್ಲದ ಗೇಮ್ ಈಗ ಅವರನ್ನು ಬಹುದೂರ ಕರೆದೊಯ್ಯುತ್ತಿದೆ.

ಸಮಸ್ಯೆ ಬಹಳಷ್ಟಿದೆ.

ಸಮಸ್ಯೆ ಬಹಳಷ್ಟಿದೆ.

ಕೋಟ್ಯಾಂತರ ಜನ ನಿರರ್ಥಕವಾಗಿ ಸಮಯ ಕಳೆಯಲು ಗೇಮ್‌ಗಳು ಪ್ರೇರೇಪಿಸುತ್ತಿವೆ. ಹೆಚ್ಚಾಗಿ ಮಧ್ಯಮ ವರ್ಗದ ಜನ ಮಕ್ಕಳು ಗೇಮ್‌ಗಳಿಗೆ ಅಡಿಕ್ಟ್ ಆಗುತ್ತಿದ್ದಾರೆ. ಮಕ್ಕಳಿಗೆ ಪ್ರೀತಿಯಿಂದ ಬುದ್ದಿಹೇಳದ ಪೋಷಕರು ಅವರ ಕೈಗೆ ಕಂಪ್ಯೂಟರ್, ಮೊಬೈಲ್‌ ಕೊಟ್ಟು ಅವರನ್ನು ಹಾಳುಮಾಡುತ್ತಿದ್ದಾರೆ. ಇದಕ್ಕೆಲ್ಲಾ ಫುಲ್‌ಸ್ಟಾಪ್ ಇಡಬೇಕಿದೆ. ಆದರೆ, ಇದು ಸಾಧ್ಯವೇ.?

Best Mobiles in India

English summary
Online multi-player battle royale game PlayerUnknown's Battlegrounds, popularly known as PUBG, has been imposed with a digital lock and now users under 13 years of age would have to ask their guardians to open the game for them. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X