ಪಬ್‌ಜಿ ಆಡಬೇಡ ಎಂದು ತಾಯಿ ಬೈದಿದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ!..ನೀವು ಎಚ್ಚರ!

|

ಪಬ್‌ಜಿ ಗೇಮ್ ಆಡುತ್ತಿದ್ದ ಎಂದು ಪೋಷಕರು ಬೈದಿದಕ್ಕೆ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಮತ್ತೊಂದು ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. 10ನೇ ತರಗತಿ ಪರೀಕ್ಷೆಗೆ ತಯಾರಿ ಆಗುವ ಬದಲು ಪಬ್‌ಜಿ ವೀಡಿಯೋ ಗೇಮ್‌ ಆಡುತ್ತಿದ್ದ ಕಾರಣ ಪೋಷಕರು ಬೈದಿದ್ದು, ಇದರಿಂದ ಮನನೊಂದ ಸಾಂಬಶಿವ ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ನೀಡಲಾಗಿರುವ ಹೇಳಿಕೆಯಿಂದ ತಿಳಿದುಬಂದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಸಾಂಬಶಿವ ತೆಲಂಗಾಣದ ಮಲ್ಕಾಜ್‌ಗಿರಿಯ ವಿಷ್ಣುಪುರಿ ಎಕ್ಸ್‌ಟೆನ್ಶನ್ ನಿವಾಸಿಯಾಗಿರುವ ಅರ್ಚಕ ಭರತ್ ರಾಜ್‌ ಮತ್ತು ಉಮಾದೇವಿ ಎಂಬುವವರ ಪುತ್ರನಾಗಿದ್ದು, ಈ ಸಂಬಂಧ ಆತ್ಮಹತ್ಯೆಗೀಡಾದ ವಿದ್ಯಾರ್ಥಿ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಮೊಬೈಲ್‌ ಫೋನ್‌ನಲ್ಲಿ ಪಬ್‌ಜಿ ಗೇಮ್‌ ಆಡುತ್ತಿದ್ದ ಕಾರಣ ಸಾಂಬಶಿವನ ತಾಯಿ ಉಮಾದೇವಿ ಬೈದಿದ್ದಕ್ಕೆ ನೊಂದು ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪಬ್‌ಜಿ ಆಡಬೇಡ ಎಂದು ತಾಯಿ ಬೈದಿದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ!..ನೀವು ಎಚ್ಚರ!

ಫೋನ್‌ನಲ್ಲಿ ಸಾಂಬಶಿವ ವೀಡಿಯೋ ಗೇಮ್‌ಗಳನ್ನು ಆಡುತ್ತಿದ್ದ ಬಗ್ಗೆ ಪೋಷಕರು ಹಲವು ಬಾರಿ ಬೈದು ಸುಮ್ಮನಾಗಿದ್ದರು. ಆದರೆ, 10ನೇ ತರಗತಿ ಇಂಗ್ಲೀಷ್‌ ಪರೀಕ್ಷೆ ಇದ್ದಾಗಲೂ ಪಬ್ ಜಿ ಗೇಮ್‌ ಆಡುತ್ತಿದ್ದನ್ನು ಕಂಡ ಆತನ ತಾಯಿ ಸರಿಯಾಗಿ ಬೈದಿದ್ದರು. ಇದರಿಂದ ಮನನೊಂದ ಸಾಂಬಶಿವ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಇದೇ ರೀತಿಯಲ್ಲಿ ಪಬ್‌ಜಿ ಸೇರಿದಂತೆ ಗೇಮಿಂಗ್ ಲೋಕದಲ್ಲಿ ಹಲವು ಮಕ್ಕಳು ಸಿಲುಕಿ ನಲುಗುತ್ತಿದ್ದಾರೆ. ಹಾಗಾದರೆ, ನಿಮ್ಮ ಮಕ್ಕಳನ್ನು ಈ ಗೇಮಿಂಗ್ ಎಂಬ ಕರಾಳ ಲೋಕದಿಂದ ಹೊರತರುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

‘ಸೆಕ್ಸ್‌’ಗಿಂತ ಜನಪ್ರಿಯ ಈ ಗೇಮ್!

‘ಸೆಕ್ಸ್‌’ಗಿಂತ ಜನಪ್ರಿಯ ಈ ಗೇಮ್!

ಆನ್‌ಲೈನಿನಲ್ಲಿ ಹೆಚ್ಚು ಮಾರಾಟವಾಗುವುದು ‘ಸೆಕ್ಸ್‌' ಎಂಬ ಜನಪ್ರಿಯ ಮಾತೊಂದಿದೆ. ಇದನ್ನು ಎಲ್ಲಾ ವಯೋಮಾನದವರು ಆನ್‌ಲೈನಿನಲ್ಲಿ ಬಯಸುವ ಕಂಟೆಂಟ್ ಅನ್ನಿಸಿಕೊಂಡಿದೆ. ಆದರೆ, 16-25ರ ನಡುವಿನ ಯುವ ಜನತೆಯ ವಿಚಾರಕ್ಕೆ ಬಂದರೆ ಅವರು ಹೆಚ್ಚು ಕಾಲ ಕಳೆಯುವುದು ಗೇಮಿಂಗ್‌ ಎಂಬ ಕೆಟಗರಿಯಲ್ಲಿ ಎಂಬುದನ್ನು ನಂಬಲು ನೀವು ತಯಾರಾಗಬೇಕಿದೆ.

ಬೇಕೇ ಬೇಕು ಗೇಮ್!

ಬೇಕೇ ಬೇಕು ಗೇಮ್!

ಪೋಷಕರಿಗೆ ತಮ್ಮ ಮಕ್ಕಳು ಎಲ್ಲಾ ಈ ಸೆಕ್ಸ್ ಎಂಬ ಮಾಯೆಗೆ ಸಿಲುಕುತ್ತಾರೆ ಎಂಬ ಭಯ ಯಾವಾಗಲೂ ಕಾಡುತ್ತಿರುತ್ತದೆ. ಚಿಕ್ಕವಯಸ್ಸು ಸೆಕ್ಸ್‌ಗೆ ಆಕರ್ಷಣೆ ಎಂದುಕೊಳ್ಳುತ್ತಾರೆ. ಆದರೆ, ಅಂಕಿಅಂಶಗಳು 16-25ರ ನಡುವಿನ ಯುವ ಜನತೆಯ ಆಕರ್ಷಣೆಯನ್ನು ಗೇಮಿಂಗ್ ಎಂದು ದೃಢಪಡಿಸಿವೆ. 16 ರಿಂದ 25 ನೇ ವಯಸ್ಸು ಹೆಚ್ಚು ಗೇಮಿಂಗ್ ಪ್ರಪಂಚಕ್ಕೆ ಆಕರ್ಷಿತವಾಗುತ್ತದೆ.

ವಾರದಲ್ಲಿ ಕನಿಷ್ಠ 6 ಗಂಟೆ ಗೇಮಿಂಗ್‌ನಲ್ಲಿ.

ವಾರದಲ್ಲಿ ಕನಿಷ್ಠ 6 ಗಂಟೆ ಗೇಮಿಂಗ್‌ನಲ್ಲಿ.

ಹಲವು ಅಧ್ಯಯನಗಳು ಆನ್‌ಲೈನ್‌ ಗೇಮಿಂಗ್ ಎಂಬ ಕೆಟಗರಿಯ ಕುರಿತು ಅಂಕಿ ಅಂಶಗಳನ್ನು ಮುಂದಿಟ್ಟಿವೆ. ಸುಮಾರು 1.2 ಬಿಲಿಯನ್ ಜನ ಗೇಮಿಂಗ್‌ನಲ್ಲಿ ಮುಳುಗಿ ಹೋಗಿದ್ದಾರೆ ಎಂದು ಹೇಳುತ್ತವೆ ಅಧ್ಯಯನಗಳು. ವಾರದಲ್ಲಿ ಕನಿಷ್ಠ 6 ಗಂಟೆಗಳನ್ನು ಗೇಮಿಂಗ್‌ನಲ್ಲಿಯೇ ಕಳೆಯುವ ಸಂಖ್ಯೆ ಇದಾಗಿದೆ. ಹೊಸ ಹೊಸ ಗೇಮ್‌ಗಳು ಅವರನ್ನು ಮತ್ತಷ್ಟು ಆಕರ್ಷಿಸುತ್ತಿವೆ.

ಕೋಟ್ಯಾಂತರ ಮಾರುಕಟ್ಟೆ!

ಕೋಟ್ಯಾಂತರ ಮಾರುಕಟ್ಟೆ!

1970ರಲ್ಲಿ ಆರಂಭವಾದ ಆನ್‌ಲೈನ್‌ ಗೇಮ್ ಸುತ್ತ ಕೋಟ್ಯಾಂತರ ರೂಪಾಯಿಗಳ ಮಾರುಕಟ್ಟೆಯೊಂದು ಹುಟ್ಟಿಕೊಂಡಿದೆ. ಮಹತ್ವದ ವಿಚಾರದಿಂದ ಜನರನ್ನು ದೂರ ಇಟ್ಟು, ಕೃತಕ ಪರಿಸರದಲ್ಲಿ ಅವರನ್ನು ಎಂಗೇಜ್ ಮಾಡಿ ಇಡುವ ಕೆಲಸವನ್ನು ಈ ಗೇಮ್‌ಗಳು ಮಾಡುತ್ತಿವೆ. ಹೀಗೆ ತಾವು ಹಣಗಳಿಸಿಕೊಳ್ಳಲು ಹೊಸ ಹೊಸ ಗೇಮ್‌ಗಳನ್ನು ಸೃಷ್ಟಿಮಾಡುತ್ತಾರೆ.

ಗೇಮಿಂಗ್ ಎಂಬ ಕರಾಳ ಲೋಕ!

ಗೇಮಿಂಗ್ ಎಂಬ ಕರಾಳ ಲೋಕ!

ನೇರವಾಗಿ ಇದನ್ನು ಒಂದು ಸಮಸ್ಯೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ನೀವೊಮ್ಮೆ ಗೂಗಲ್ ಮಾಡಿದರೆ ಆನ್‌ಲೈನ್‌ ಗೇಮಿಂಗ್ ಗಂಭೀರತೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಅವು ಬೀರುತ್ತಿರುವ ಸಾಮಾಜಿಕ ಸಮಸ್ಯೆಯ ಚಿತ್ರಣ ಕಣ್ಣನ್ನು ರಾಚುತ್ತದೆ. ಜನರನ್ನು ಆಕರ್ಷಿಸುವ ಸಲುವಾಗಿಯೇ ಇಂತಹ ಹೊಸ ಹೊಸ ಗೇಮ್‌ಗಳು ಪ್ರತಿ ವರ್ಷ ಮಾರುಕಟ್ಟೆಗೆ ಬರುತ್ತಿವೆ.

ಆನ್‌ಲೈನ್‌ ಗೇಮ್ ಈಗ ಗೇಮ್ ಅಲ್ಲ!

ಆನ್‌ಲೈನ್‌ ಗೇಮ್ ಈಗ ಗೇಮ್ ಅಲ್ಲ!

ಈ ಗೇಮ್‌ಗಳು ಮನರಂಜನೆಗೆ ಸೀಮಿತವಾಗಬೇಕಿತ್ತು. ಆದರೆ, ಗೇಮ್‌ಗಳು ಈಗ ಜನರ, ಯುವಕರ ಮನಸ್ಸನ್ನು ಕದಡುತ್ತಿವೆ. ಜನರು ಕಲ್ಪನೆಯನ್ನು ತಮ್ಮ ಗೇಮ್‌ ಮೂಲಕ ಸಾಕಾರಪಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ತಮ್ಮನ್ನು ತಾವು ಮರೆಯುತ್ತಿದ್ದಾರೆ. ಗೇಮ್ ಅಲ್ಲದ ಗೇಮ್ ಈಗ ಅವರನ್ನು ಬಹುದೂರ ಕರೆದೊಯ್ಯುತ್ತಿದೆ.

ಸಮಸ್ಯೆ ಬಹಳಷ್ಟಿದೆ.

ಸಮಸ್ಯೆ ಬಹಳಷ್ಟಿದೆ.

ಕೋಟ್ಯಾಂತರ ಜನ ಸಮಯ ಕಳೆಯಲು ಗೇಮ್‌ಗಳು ಪ್ರೇರೇಪಿಸುತ್ತಿವೆ. ಹೆಚ್ಚಾಗಿ ಮಧ್ಯಮ ವರ್ಗದ ಜನ ಮಕ್ಕಳು ಗೇಮ್‌ಗಳಿಗೆ ಅಡಿಕ್ಟ್ ಆಗುತ್ತಿದ್ದಾರೆ. ಮಕ್ಕಳಿಗೆ ಪ್ರೀತಿಯಿಂದ ಬುದ್ದಿಹೇಳದ ಪೋಷಕರು ಅವರ ಕೈಗೆ ಕಂಪ್ಯೂಟರ್, ಮೊಬೈಲ್‌ ಕೊಟ್ಟು ಅವರನ್ನು ಹಾಳುಮಾಡುತ್ತಿದ್ದಾರೆ. ಇದಕ್ಕೆಲ್ಲಾ ಫುಲ್‌ಸ್ಟಾಪ್ ಇಡಬೇಕಿದೆ. ಆದರೆ, ಇದು ನಿಮ್ಮಿಂದ ಸಾಧ್ಯವೇ.?

ಆಧಾರ್ ಕಾರ್ಡ್ ಕಳೆದುಕೊಂಡರೆ ಏನಾಗಬಹುದು?..ಈ ಆಘಾತಕಾರಿ ಘಟನೆ ನೋಡಿ!!

ಆಧಾರ್ ಕಾರ್ಡ್ ಕಳೆದುಕೊಂಡರೆ ಏನಾಗಬಹುದು?..ಈ ಆಘಾತಕಾರಿ ಘಟನೆ ನೋಡಿ!!

ಸೈಬರ್ ಕಳ್ಳರು ಏನೆಲ್ಲಾ ಪ್ಲಾನ್ ಮಾಡಿ ಹಣ ದೋಚುತ್ತಾರೆ ಎಂಬುದಕ್ಕೆ ರಾಜಧಾನಿ ದೆಹಲಿಯಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದು ಸಾಕ್ಷಿಯಾಗಿದೆ. ದೆಹಲಿಯ ನರೇಂದ್ರ ಬಿಶ್ತ್ ಎಂಬ ಯುವಕನ ಆಧಾರ್ ಕಾರ್ಡ್‌ಗೆ ನಕಲಿ ಫೋಟೋ ಹಾಕಿದ ವಂಚಕನೋರ್ವ ಆತನ ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ದೋಚಿರುವುದು ಇದೀಗ ವರದಿಯಾಗಿದೆ.

ಹೌದು, ನರೇಂದ್ರ ಬಿಶ್ತ್ಗೆ ಮಾರ್ಚ್ 16 ರಂದು ಮೊಬೈಲ್ ಗೆ ಒಟಿಪಿಯೊಂದು ಬಂದಿತ್ತಂತೆ. ಈ ವೇಳೆಯಲ್ಲಿ ಮೊಬೈಲ್ ಕಂಪನಿ ತಪ್ಪಿನಿಂದ ಒಟಿಪಿ ಬಂದಿದೆ ಎಂದುಕೊಂಡನಂತೆ. ಆದರೆ, ಇದಾದ ಕೆಲವೇ ಕ್ಷಣಗಳಲ್ಲಿ ಆ ಅಕೌಂಟ್‌ನಿಂದ ಒಂದು ಲಕ್ಷ ರೂಪಾಯಿ ಡ್ರಾ ಆಗಿದೆ ಎಂಬ ಸಂದೇಶ ಬಂದಿದೆ. ಇದಾದ ನಂತರ ದೂರು ನೀಡಿದಾಗ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಬಿಶ್ತ್ ಖಾತೆಯಿಂದ ಹಣ ಕದ್ದಿರುವ ಕಳ್ಳನು ಬ್ಯಾಂಕ್ ವಾಲೆಟ್ ಮೂಲಕ ಹಣವನ್ನು ದೋಚಿದ್ದಾನೆ. ಇದಕ್ಕಾಗಿ ಆತ ನರೇಂದ್ರನ ಸಿಮ್ ಅನ್ನು ನಕಲಿಸಿಕೊಂಡಿರುವು ಗೊತ್ತಾಗಿದೆ. ಮೊಬೈಲ್ ಕಂಪನಿಯವರು ಕೆಲ ದಿನಗಳ ಹಿಂದೆ ಆತನಿಗೆ ನಕಲಿ ಸಿಮ್ ನೀಡಿದ್ದಾರೆ. ಈ ಎಲ್ಲಾ ವಿಷಯಗಳು ಪೊಲೀಸರಿಗೂ ತಲೆನೋವಾಗಿದ್ದು, ಕ್ರಿಮಿನಲ್ ಬಳಸಿದ ಐಡಿಯಾ ಅವರನ್ನು ಬೆಚ್ಚಿಬೀಳಿಸಿದೆ.

ಆಧಾರ್ ಕಾರ್ಡ್‌ಗೆ ನಕಲಿ ಫೋಟೋ

ಆಧಾರ್ ಕಾರ್ಡ್‌ಗೆ ನಕಲಿ ಫೋಟೋ

ನರೇಂದ್ರನ ಸಿಮ್ ಅನ್ನು ನಕಲಿಸಿಕೊಂಡಿರುವ ಕ್ರಿಮಿನಲ್ ಅದಕ್ಕಾಗಿ ಆಡಿರುವುದು ಆಧಾರ್ ಕಾರ್ಡ್‌ಗೆ ನಕಲಿ ಫೋಟೋ ಹಾಕಿರುವುದು.! ನರೇಂದ್ರನ ಆಧಾರ್ ಅನ್ನು ಕದ್ದಿರುವ ಆತ ಆ ಆಧಾರ್ ಕಾರ್ಡ್ ಮೇಲೆ ತನ್ನ ಪೋಟೋ ಬರುವಂತೆ ಲ್ಯಾಮಿನೇಟ್ ಮಾಡಿದ್ದಾನೆ. ಇದಾದ ನಂತರ 'ಸ್ವಿಮ್ ಸ್ವಾಪ್' ನಡೆಸಿ ವಾಲೆಟ್ ಮೂಲಕ ನರೇಂದ್ರ ಬಿಶ್ತ್ ಹಣವನ್ನು ದೋಚಿದ್ದಾನೆ.

ಏನಿದು 'ಸಿಮ್ ಸ್ವ್ಯಾಪ್' '?

ಏನಿದು 'ಸಿಮ್ ಸ್ವ್ಯಾಪ್' '?

'ಸಿಮ್ ಸ್ವ್ಯಾಪ್' ಎಂದರೇ, 'ನಿಮ್ಮ ಬಳಿ ಈಗಾಗಲೇ ಇರುವ ಫೋನ್‌ ನಂಬರ್‌ ಅನ್ನು ಹೊಸ ಸಿಮ್ ಕಾರ್ಡ್‌ಗೆ ನೋಂದಣಿ ಮಾಡಿಸುವುದು' ಎಂದರ್ಥ. ಈ ಕೆಲಸವನ್ನು ನೀವೇ ಮಾಡಿದ್ದರೆ ಯಾವ ತೊಂದರೆಯಿಲ್ಲ. ಆದರೆ, ನಿಮ್ಮ ಮಾಹಿತಿಯನ್ನು ಕದ್ದಿರುವ ಅಪರಿಚಿತರು ಈ ಕೆಲಸ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗುವ ಹಗರಣ ಇದಾಗಿದೆ.!

ಹಗರಣ ಹೇಗೆ ನಡೆಯುತ್ತದೆ?

ಹಗರಣ ಹೇಗೆ ನಡೆಯುತ್ತದೆ?

ಸಿಮ್ ಬಳಸಿಕೊಂಡು ನಡೆಯುತ್ತಿರುವ ಮೊಬೈಲ್ ವಾಲೆಟ್ ಸೇವೆ ಹೆಚ್ಚು ಬಳಕೆಗೆ ಬಂದ ನಂತರ ಸೈಬರ್ ಕ್ರಿಮಿನಲ್‌ಗಳು ಈಗ ಸಿಮ್ ಅನ್ನು ಸಹ ನಕಲು ಮಾಡಹೊರಟಿದ್ದಾರೆ. ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ಹೇಗಾದರೂ ಪಡೆದುಕೊಂಡಿರುವ ಅವರಿಗೆ ಬೇಕಾಗಿರುವುದು ಒಟಿಪಿ ಮಾತ್ರ. ಅದಕ್ಕಾಗಿಯೇ ನಡೆಯುತ್ತಿರುವುದು 'ಸಿಮ್ ಸ್ವ್ಯಾಪ್' ಹಗರಣ.

ಈ ಘಟನೆಯಲ್ಲಿ ಹಣ ಕದ್ದಿದ್ದು ಹೇಗೆ?

ಈ ಘಟನೆಯಲ್ಲಿ ಹಣ ಕದ್ದಿದ್ದು ಹೇಗೆ?

ನರೇಂದ್ರನ ಆಧಾರ್ಕಾರ್ಡ್ ಅನ್ನು ಕದ್ದಿರುವ ಕ್ರಿಮಿನಲ್, ನಂತರ ಆ ಆಧಾರ್‌ಗೆ ತನ್ನ ಫೋಟೋ( ಸರಿಯಾಗಿಯೂ ಕಾಣದಂತೆ) ಹಾಕಿದ್ದಾನೆ. ಇದನ್ನು ಮೊಬೈಲ್‌ ಕಂಪೆನಿಗೆ ನೀಡಿ ನರೇಂದ್ರ ಬಿಶ್ತ್ ಅವರ ನಕಲಿ ಸಿಮ್ ಅನ್ನು ಪಡೆದುಕೊಂಡಿದ್ದಾನೆ. ಇದಾದ ನಂತರ ನಕಲಿ ಸಿಮ್‌ಗೆ ಬಂದ ಒಟಿಪಿ ಮೂಲಕ ಮೊಬೈಲ್ ವಾಲೆಟ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ.

'ಸಿಮ್ ಸ್ವ್ಯಾಪ್'ನ ಹೆಜ್ಜೆಗಳು!

'ಸಿಮ್ ಸ್ವ್ಯಾಪ್'ನ ಹೆಜ್ಜೆಗಳು!

ನಿಮ್ಮ ಫೋನ್ ನಂಬರ್ ಅನ್ನು ಬ್ಲಾಕ್ ಮಾಡಿ, ಅದೇ ನಂಬರ್‌ನ ಹೊಸ ಸಿಮ್ ಖರೀದಿಸುವುದು ವಂಚಕರ ಮೊದಲ ಹೆಜ್ಜೆಯಾಗಿರುತ್ತದೆ. ಅದಕ್ಕಾಗಿ ಅವರು ನಿಮ್ಮ ದಾಖಲೆಗಳನ್ನು ಹುಡುಕಬಹುದು ಅಥವಾ ನಿಮ್ಮಿಂದಲೇ ಸಿಮ್ ಅನ್ನು ಅವರು ನಕಲಿಸಿಕೊಳ್ಳಬಹುದು. ಈ ಎರಡೂ ರೀತಿಯಿಂದಲೂ ಅವರು ನಿಮ್ಮನ್ನು ಕ್ಷಣಾರ್ಧದಲ್ಲಿ ಮೋಸಗೊಳಿಸಬಹುದು.

ವಿಶಿಷ್ಟ 20 ಡಿಜಿಟ್ ನಂಬರ್‌

ವಿಶಿಷ್ಟ 20 ಡಿಜಿಟ್ ನಂಬರ್‌

ಕಾಲ್‌ಡ್ರಾಫ್ಸ್ ಸೇರಿದಂತೆ ಕರೆ ಸೇವೆಯವನ್ನು ಮತ್ತಷ್ಟು ಸುಲಭಗೊಳಿಸುತ್ತೇವೆ ಎಂದು ನಿಮಗೊಂದು ಕರೆ ಬರುತ್ತದೆ. ಕಸ್ಟಮರ್ ಕೇರ್‌ ಸೂಗಿನಲ್ಲಿ ಕರೆ ಮಾಡುವ ಇವರು ಕರೆ ಮಾಡುವುದೇ ನಿಮ್ಮ ಸಿಮ್ ಹಿಂಬದಿಯ ನಂಬರ್‌ ಯಾವುದೆಂದು ತಿಳಿದುಕೊಳ್ಳಲು. ಒಮ್ಮೆ ನೀವು ಅವರ ಆದೇಶವನ್ನು ಚಾಚು ತಪ್ಪದೆ ಪಾಲಿಸಿದರೆ ನಿಮ್ಮ ಬ್ಯಾಂಕ್ ಅಂಕೌಂಟ್ ಖಾಲಿ ಖಾಲಿ.!

ಒಂದನ್ನು ಪ್ರೆಸ್‌ ಮಾಡಲು ಹೇಳುತ್ತಾರೆ!

ಒಂದನ್ನು ಪ್ರೆಸ್‌ ಮಾಡಲು ಹೇಳುತ್ತಾರೆ!

ನಿಮ್ಮ ಸಿಮ್‌ನ 20 ಡಿಜಿಟ್ ಸಂಖ್ಯೆ ಪಡೆದ ವಂಚಕ, ಅಧಿಕೃತವಾಗಿಹೊಸ ಸಿಮ್ ಪಡೆಯಲು ಮುಂದಾಗುತ್ತಾನೆ. ಆಗ, ನಿಮ್ಮ ಫೋನ್‌ಗೆ ಟೆಲಿಕಾಂ ಕಂಪೆನಿಯಿಂದ ಕನ್ಫರ್ಮೇಷನ್ ಎಸ್‌ಎಂಎಸ್‌ ಬರುತ್ತದೆ. ಆಗ ವಂಚಕ, ನಿಮಗೆ ಕರೆ ಮಾಡಿ ಒಂದನ್ನು ಪ್ರೆಸ್‌ ಮಾಡಲು ಸೂಚಿಸುತ್ತಾನೆ. ನೀವು ಒತ್ತಿದರೆ, ನಿಮ್ಮ ಸಿಮ್ ಬ್ಲಾಕ್ ಆಗಿ ಅವನ ಬಳಿ ನಿಮ್ಮ ಸಿಮ್ ಇರುತ್ತದೆ.

ಹಣ ಹೇಗೆ ಕಳೆದುಕೊಳ್ಳುತ್ತೀರಾ?

ಹಣ ಹೇಗೆ ಕಳೆದುಕೊಳ್ಳುತ್ತೀರಾ?

ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ಪಡೆದ ವಂಚಕರು ಎಟಿಎಂ ಕಾರ್ಡ್‌ನಲ್ಲಿರುವ "ಸಿವಿವಿ" ನಂಬರ್ ಮೂಲಕ ಆನ್‌ಲೈನ್ ವ್ಯವಹಾರ ಮಾಡುತ್ತಾರೆ. ಈಗ ಸಿವಿವಿ ನಂಬರ್ ಮತ್ತು ಮೊಬೈಲ್ ಒಟಿಪಿ ಇದ್ದರೆ ಆನ್‌ಲೈನಿನಲ್ಲಿ ಹಣ ವರ್ಗಾವಣೆ ಕ್ಷಣಾರ್ಧದಲ್ಲಿ ನಡೆಯುತ್ತದೆ. ಈ ಎರಡು ಮಾಹಿತಿಗಳನ್ನು ನಿಮ್ಮಿಂದ ಪಡೆದ ಅವರು ನಿಮ್ಮ ಹಣ ದೋಚುತ್ತಾರೆ.

ಸಿಗುವುದು

ಸಿಗುವುದು

ನಕಲಿ ವೆಬ್‌ಸೈಟ್‌ ಅನ್ನು ತೆರೆಯುವ ಕ್ರಿಮಿನಲ್‌ಗಳು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಲು ಪ್ರೇರೇಪಿಸುತ್ತಾರೆ. ಒಮ್ಮೆ ವ್ಯವಹಾರ ನಡೆದರೆ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿ ಪಡೆಯುತ್ತಾರೆ. ಅಥವಾ ಕರೆ ಮಾಡಿ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬ್ಲಾಕ್ ಆಗಿದೆ, ತೆರೆಯಲು ಕಾರ್ಡ್ ಮಾಹಿತಿ ನೀಡಿ ಎಂದು ಹೇಳುತ್ತಾರೆ.

ಟೆಲಿಕಾಂ ಕಂಪನಿಯ ಪ್ರತಿನಿಧಿ

ಟೆಲಿಕಾಂ ಕಂಪನಿಯ ಪ್ರತಿನಿಧಿ

ವಂಚಕರು ಟೆಲಿಕಾಂ ಕಂಪನಿಯ ಪ್ರತಿನಿಧಿಗಳೆಂದು ಹೇಳಿಕೊಂಡು ನಿಮಗೆ ಕರೆ ಮಾಡುತ್ತಾರೆ. ಕಾಲ್‌ ಡ್ರಾಪ್‌ ಪ್ಲಾಬ್ಲೆಮ್ ಅಥವಾ ಸಿಗ್ನಲ್‌ ಪ್ರಾಬ್ಲೆಮ್ ಸರಿಪಡಿಸಲು ಕಾಲ್‌ ಮಾಡುತ್ತಿರುವುದಾಗಿ ಹೇಳುತ್ತಾರೆ. ಅಥವಾ 4ಜಿ ಸಿಮ್ ಕಾರ್ಡ್‌ಗೆ ಬದಲಾಗಲು ನಿಮ್ಮ ಸಿಮ್ ಸಂಖ್ಯೆ ನೀಡಲು ಕೇಳುತ್ತಾರೆ. ಇಂತಹ ಕರೆಗಳನ್ನು ನಂಬಬೇಡಿ.

ಸಿಮ್ ತೆಗೆದಿಟ್ಟುಕೊಳ್ಳಿ!

ಸಿಮ್ ತೆಗೆದಿಟ್ಟುಕೊಳ್ಳಿ!

ಕ್ರೆಡಿಟ್ ಕಾರ್ಡ್- ಡೆಬಿಟ್ ಕಾರ್ಡುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವಂತೆ, ನಾವು ಬಳಸುವ ಸಿಮ್ ಬಗೆಗೂ ಅಷ್ಟೇ ಎಚ್ಚರಿಕೆ ವಹಿಸುವುದು ಒಳ್ಳೆಯದು. ಸಿಮ್ ಅನ್ನು ಮೊಬೈಲಿನಿಂದ ಹೊರತೆಗೆದಾಗ ಅದನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟಿರುವುದು ಮತ್ತು ಮೊಬೈಲ್ ಫೋನನ್ನು ರಿಪೇರಿಗೆಂದು ಕೊಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಸಿಮ್ ತೆಗೆದಿಟ್ಟುಕೊಳ್ಳುವುದು ಅಪೇಕ್ಷಣೀಯ. ಈ ಮೂಲಕ ನಮ್ಮ ಸಿಮ್ ಮಾಹಿತಿಯನ್ನು ಬೇರೊಬ್ಬರು ನಕಲಿಸಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಬಹುದು.

ಪಾರಾಗುವುದು ಸಾಧ್ಯವಿದೆ!

ಪಾರಾಗುವುದು ಸಾಧ್ಯವಿದೆ!

ಮೊಬೈಲ್‌ನ ಎಲ್ಲಾ ಚಟುವಟಿಕೆಗಳ ಬಗ್ಗೆ ನಿಗಾವಹಿಸುವ ಮೂಲಕ ಇಂತಹ ಹಗರಣದಿಂದ ಪಾರಾಗುವುದು ಸಾಧ್ಯ. ಯಾವುದೇ ಸಂದರ್ಭದಲ್ಲಿ ನಮ್ಮ ಸಂಪರ್ಕ ಸ್ಥಗಿತವಾದರೆ, ಬಿಲ್‌ನಲ್ಲಿ ಅಪರಿಚಿತ ಚಟುವಟಿಕೆಗಳು ಕಾಣಿಸಿಕೊಂಡರೆ ತಕ್ಷಣವೇ ಮೊಬೈಲ್ ಟೆಲಿಕಾಂ ಕಂಪೆನಿ ಸಂಪರ್ಕಿಸಿ ಸಿಮ್ ಬ್ಲಾಕ್ ಮಾಡಿಸಿ. ಮತ್ತು ಎಟಿಎಂ ಅನ್ನು ಸಹ ಬ್ಲಾಕ್ ಮಾಡಿಬಿಡಿ.

ಸಿಮ್ ಸ್ವ್ಯಾಪ್ ಅನ್ನು ನೀವು ಮಾಡಿರುತ್ತೀರಿ!

ಸಿಮ್ ಸ್ವ್ಯಾಪ್ ಅನ್ನು ನೀವು ಮಾಡಿರುತ್ತೀರಿ!

ಹಾಗೆ ನೋಡಿದರೆ, ಮೇಲೆ ಹೇಳಿದ ಸಿಮ್ ಸ್ವ್ಯಾಪ್ ಎಂದರೆ ಹಗರಣ ಎಂದು ತಿಳಿಯುತ್ತಿರಲಿಲ್ಲ. ನೀವು 2ಜಿಯಿಂದ 3ಜಿ ಅಥವಾ 4ಜಿ ಸಿಮ್‌ ಬದಲಾಯಿಸಿಕೊಂಡಿದ್ದನ್ನು ಸಹ ಸಿಮ್ ಸ್ವ್ಯಾಪ್ ಎಂದು ಕರೆಯುತ್ತಾರೆ. ಆದರೆ, ಇಲ್ಲಿ ವಂಚಕರು ನಿಮ್ಮ ಸಿಮ್ ಅನ್ನು ಸ್ವ್ಯಾಪ್ ಮಾಡುತ್ತಿರುವುದಕ್ಕೆ ಇದು ಸಿಮ್ ಸ್ವ್ಯಾಪ್ ಹಗರಣ ಎಂದು ಬದಲಾಗಿದೆ.

Best Mobiles in India

English summary
10th standard student allegedly committed suicide by hanging himself,parents scolded him for playing online game ‘PUBG’. ro know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X