ಶಾಕಿಂಗ್!..ಪಬ್‌ಜಿ ವ್ಯಸನದಿಂದಾಗಿ ಯುವಕನ ಜೀವನವಾಯ್ತು ಕಠೋರ!

|

ಜನಪ್ರಿಯ ಆನ್‌ಲೈನ್ ಆಟಗಳಲ್ಲಿ ಒಂದಾದ ಪಬ್‌ಜಿ ಇತ್ತೀಚಿಗೆ ಯಾವಾಗಲೂ ಕೆಟ್ಟ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿದೆ. ಪಬ್‌ಜಿ ಆಟಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಇತರೆ ವ್ಯಸನಗಳಿಗೆ ತುತ್ತಾಗಿದ್ದಾರೆ ಎಂಬ ಅನೇಕ ಪ್ರಕರಣಗಳು ದಾಖಲಾಗಿವೆ. ಇಂತಹುದೇ ಮತ್ತೊಂದು ಪ್ರಕರಣ ಹೈದರಾಬಾದ್‌ನಲ್ಲಿ ವರದಿಯಾಗಿದೆ. ಹೌದು, ಪಬ್‌ಜಿ ಆಟದ ಕಾರಣದಿಂದಾಗಿ ಹೈದರಾಬಾದ್‌ನ 19 ವರ್ಷದ ಯುವಕನೋರ್ವ ಪಾರ್ಶ್ವವಾಯುವಿಗೆ ಒಳಗಾಗಿದ್ದಾನೆ ಎಂದು ತಿಳಿದುಬಂದಿದೆ.

.

ಹೌದು, ಕಳೆದ ಆಗಸ್ಟ್ 26 ರಂದು ಈ ಘಟನೆ ನಡೆದಿದ್ದು, ಪಬ್‌ಜಿಗೆ ವ್ಯಸನಿಯಾಗಿದ್ದ ಹೈದರಾಬಾದ್‌ನ ಯುವಕನಿಗೆ ಪಾರ್ಶ್ವವಾಯು ಅಪ್ಪಳಿಸಿದೆ. ಐಸಿಯುಗೆ ಕರೆದೊಯ್ಯಲಾಗಿರುವ ಆತ ತನ್ನ ಬಲಗೈ ಮತ್ತು ಕಾಲು ಸರಿಸಲು ಸಾಧ್ಯವಾಗುತ್ತಿಲ್ಲ ಎಂದು ಐಸಿಯು ವೈದ್ಯರು ತಿಳಿಸಿದ್ದಾರೆ. ವೈದ್ಯರ ಪ್ರಕಾರ, ಆತನ ಮೆದುಳಿನ ಹೊಡೆತಕ್ಕೆ ಅನುಗುಣವಾದ ಚಿಹ್ನೆಗಳಿವೆಯಂತೆ.ಆತನ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುದ್ದು, ಅದು ಅವನ ಕೈ ಮತ್ತು ಕಾಲುಗಳ ಚಲನೆಯನ್ನು ವಿಫಲಗೊಳಿಸುತ್ತದೆ ಎಂದು ಅವರು ಧೃಡೀಕರಿಸಿದ್ದಾರೆ.

.

ಪಾರ್ಶ್ವವಾಯು ಹೊಡೆತವನ್ನು ಈ ಹಂತದ ಯುವಕರಲ್ಲಿ ನೋಡುವುದು ಬಹಳ ಅಪರೂಪ. ಆತ ದಿನಕ್ಕೆ ಕನಿಷ್ಠ 8 ರಿಂದ 10 ಗಂಟೆಗಳ ಕಾಲ ಆಟವಾಡುತ್ತಿದ್ದ ಎಂದು ಪೋಷಕರು ನಮಗೆ ತಿಳಿಸಿದ್ದಾರೆ. ಸರಿಯಾಗಿ ತಿನ್ನುವುದು, ಮಲಗುವುದು ಅಥವಾ ನೀರನ್ನು ಕುಡಿಯದೆ ಆತ ಪಬ್‌ಜಿ ಆಡುತ್ತಿದ್ದನಂತೆ. ಈ ಎಲ್ಲ ಅಂಶಗಳು ಸೇರಿ ಅವನ ಸ್ಥಿತಿಗೆ ಕಾರಣವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ಗೇಮಿಂಗ್ ಲೋಕದ ಕರಾಳತೆಯನ್ನು ತೆರೆದಿಟ್ಟಿದ್ದು, ಒಮ್ಮೆ ವ್ಯಸನವಾದರೆ ಬಿಟ್ಟುಬಿಡದೆ ಕಾಡುವ ಈ ಗೇಮಿಂಗ್ ಲೋಕದ ಬಗ್ಗೆ ಮುಂದೆ ಓದಿ ತಿಳಿಯಿರಿ.

‘ಸೆಕ್ಸ್‌’ಗಿಂತ ಜನಪ್ರಿಯ ಈ ಗೇಮ್!

ಆನ್‌ಲೈನಿನಲ್ಲಿ ಹೆಚ್ಚು ಮಾರಾಟವಾಗುವುದು ‘ಸೆಕ್ಸ್‌' ಎಂಬ ಜನಪ್ರಿಯ ಮಾತೊಂದಿದೆ. ಇದನ್ನು ಎಲ್ಲಾ ವಯೋಮಾನದವರು ಆನ್‌ಲೈನಿನಲ್ಲಿ ಬಯಸುವ ಕಂಟೆಂಟ್ ಅನ್ನಿಸಿಕೊಂಡಿದೆ. ಆದರೆ, 16-25ರ ನಡುವಿನ ಯುವ ಜನತೆಯ ವಿಚಾರಕ್ಕೆ ಬಂದರೆ ಅವರು ಹೆಚ್ಚು ಕಾಲ ಕಳೆಯುವುದು ಗೇಮಿಂಗ್‌ ಎಂಬ ಕೆಟಗರಿಯಲ್ಲಿ ಎಂಬುದನ್ನು ನಂಬಲು ನೀವು ತಯಾರಾಗಬೇಕಿದೆ.

ಯುಜನತೆಗೆ ಬೇಕೇ ಬೇಕು ಗೇಮ್!

ಪೋಷಕರಿಗೆ ತಮ್ಮ ಮಕ್ಕಳು ಎಲ್ಲಾ ಈ ಸೆಕ್ಸ್ ಎಂಬ ಮಾಯೆಗೆ ಸಿಲುಕುತ್ತಾರೆ ಎಂಬ ಭಯ ಯಾವಾಗಲೂ ಕಾಡುತ್ತಿರುತ್ತದೆ. ಚಿಕ್ಕವಯಸ್ಸು ಸೆಕ್ಸ್‌ಗೆ ಆಕರ್ಷಣೆ ಎಂದುಕೊಳ್ಳುತ್ತಾರೆ. ಆದರೆ, ಅಂಕಿಅಂಶಗಳು 16-25ರ ನಡುವಿನ ಯುವ ಜನತೆಯ ಆಕರ್ಷಣೆಯನ್ನು ಗೇಮಿಂಗ್ ಎಂದು ದೃಢಪಡಿಸಿವೆ. 16 ರಿಂದ 25 ನೇ ವಯಸ್ಸು ಹೆಚ್ಚು ಗೇಮಿಂಗ್ ಪ್ರಪಂಚಕ್ಕೆ ಆಕರ್ಷಿತವಾಗುತ್ತದೆ.

ವಾರದಲ್ಲಿ ಕನಿಷ್ಟ 6 ಗಂಟೆ ಗೇಮಿಂಗ್‌ನಲ್ಲಿ.

ಹಲವು ಅಧ್ಯಯನಗಳು ಆನ್‌ಲೈನ್‌ ಗೇಮಿಂಗ್ ಎಂಬ ಕೆಟಗರಿಯ ಕುರಿತು ಅಂಕಿ ಅಂಶಗಳನ್ನು ಮುಂದಿಟ್ಟಿವೆ. ಸುಮಾರು 1.2 ಬಿಲಿಯನ್ ಜನ ಗೇಮಿಂಗ್‌ನಲ್ಲಿ ಮುಳುಗಿ ಹೋಗಿದ್ದಾರೆ ಎಂದು ಹೇಳುತ್ತವೆ ಅಧ್ಯಯನಗಳು. ವಾರದಲ್ಲಿ ಕನಿಷ್ಟ 6 ಗಂಟೆಗಳನ್ನು ಗೇಮಿಂಗ್‌ನಲ್ಲಿಯೇ ಕಳೆಯುವ ಸಂಖ್ಯೆ ಇದಾಗಿದೆ. ಹೊಸ ಹೊಸ ಗೇಮ್‌ಗಳು ಅವರನ್ನು ಮತ್ತಷ್ಟು ಆಕರ್ಷಿಸುತ್ತಿವೆ.

ಕೋಟ್ಯಾಂತರ ಮಾರುಕಟ್ಟೆ!

1970ರಲ್ಲಿ ಆರಂಭವಾದ ಆನ್‌ಲೈನ್‌ ಗೇಮ್ ಸುತ್ತ ಕೋಟ್ಯಾಂತರ ರೂಪಾಯಿಗಳ ಮಾರುಕಟ್ಟೆಯೊಂದು ಹುಟ್ಟಿಕೊಂಡಿದೆ. ಮಹತ್ವದ ವಿಚಾರದಿಂದ ಜನರನ್ನು ದೂರ ಇಟ್ಟು, ಕೃತಕ ಪರಿಸರದಲ್ಲಿ ಅವರನ್ನು ಎಂಗೇಜ್ ಮಾಡಿ ಇಡುವ ಕೆಲಸವನ್ನು ಈ ಗೇಮ್‌ಗಳು ಮಾಡುತ್ತಿವೆ. ಹೀಗೆ ತಾವು ಹಣಗಳಿಸಿಕೊಳ್ಳಲು ಹೊಸ ಹೊಸ ಗೇಮ್‌ಗಳನ್ನು ಸೃಷ್ಟಿಮಾಡುತ್ತಾರೆ.

ಗೇಮಿಂಗ್ ಎಂಬ ಕರಾಳ ಲೋಕ!

ನೇರವಾಗಿ ಇದನ್ನು ಒಂದು ಸಮಸ್ಯೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ನೀವೊಮ್ಮೆ ಗೂಗಲ್ ಮಾಡಿದರೆ ಆನ್‌ಲೈನ್‌ ಗೇಮಿಂಗ್ ಗಂಭೀರತೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಅವು ಬೀರುತ್ತಿರುವ ಸಾಮಾಜಿಕ ಸಮಸ್ಯೆಯ ಚಿತ್ರಣ ಕಣ್ಣನ್ನು ರಾಚುತ್ತದೆ. ಜನರನ್ನು ಆಕರ್ಷಿಸುವ ಸಲುವಾಗಿಯೇ ಇಂತಹ ಹೊಸ ಹೊಸ ಗೇಮ್‌ಗಳು ಪ್ರತಿ ವರ್ಷ ಮಾರುಕಟ್ಟೆಗೆ ಬರುತ್ತಿವೆ.

ಆನ್‌ಲೈನ್‌ ಗೇಮ್ ಈಗ ಗೇಮ್ ಅಲ್ಲ!

ಈ ಗೇಮ್‌ಗಳು ಮನರಂಜನೆಗೆ ಸೀಮಿತವಾಗಬೇಕಿತ್ತು. ಆದರೆ, ಗೇಮ್‌ಗಳು ಈಗ ಜನರ, ಯುವಕರ ಮನಸ್ಸನ್ನು ಕದಡುತ್ತಿವೆ. ಜನರು ಕಲ್ಪನೆಯನ್ನು ತಮ್ಮ ಗೇಮ್‌ ಮೂಲಕ ಸಾಕಾರಪಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ತಮ್ಮನ್ನು ತಾವು ಮರೆಯುತ್ತಿದ್ದಾರೆ. ಗೇಮ್ ಅಲ್ಲದ ಗೇಮ್ ಈಗ ಅವರನ್ನು ಬಹುದೂರ ಕರೆದೊಯ್ಯುತ್ತಿದೆ.

ಸಮಸ್ಯೆ ಬಹಳಷ್ಟಿದೆ.

ಕೋಟ್ಯಾಂತರ ಜನ ನಿರರ್ಥಕವಾಗಿ ಸಮಯ ಕಳೆಯಲು ಗೇಮ್‌ಗಳು ಪ್ರೇರೇಪಿಸುತ್ತಿವೆ. ಹೆಚ್ಚಾಗಿ ಮಧ್ಯಮ ವರ್ಗದ ಜನ ಮಕ್ಕಳು ಗೇಮ್‌ಗಳಿಗೆ ಅಡಿಕ್ಟ್ ಆಗುತ್ತಿದ್ದಾರೆ. ಮಕ್ಕಳಿಗೆ ಪ್ರೀತಿಯಿಂದ ಬುದ್ದಿಹೇಳದ ಪೋಷಕರು ಅವರ ಕೈಗೆ ಕಂಪ್ಯೂಟರ್, ಮೊಬೈಲ್‌ ಕೊಟ್ಟು ಅವರನ್ನು ಹಾಳುಮಾಡುತ್ತಿದ್ದಾರೆ. ಇದಕ್ಕೆಲ್ಲಾ ಫುಲ್‌ಸ್ಟಾಪ್ ಇಡಬೇಕಿದೆ. ಆದರೆ, ಇದು ಸಾಧ್ಯವೇ.?

Best Mobiles in India

English summary
There are many cases of PUBG addiction. In the latest report, it has been reported that a 19-year-old boy from Hyderabad was admitted to hospital because of the mobile game. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X