ಪಬ್‌ಜಿಯಲ್ಲಿ ಹಣ ಕಳೆದುಕೊಂಡ ಇಂಜಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು; ಅಸಲಿಗೆ ಇಲ್ಲಿ ನಡೆದಿದ್ದೇನು?
ಆನ್‌ಲೈನ್ ಗೇಮಿಂಗ್ ಗೀಳಿಗೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವಕನನ್ನು ಪ್ರವೀಣ್ ಪಾಟೀಲ್ (20 ವರ್ಷ) ಎಂದು ಗುರುತಿಸಲಾಗಿದ್ದು, ಈತ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಎನ್ನಲಾಗಿದೆ. ಪಬ್‌ಜಿ ಗೇಮ್‌ನಲ್ಲಿ ಹಣ ಕಳೆದುಕೊಂಡಿದ್ದೇ ಈತ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣ ಎಂದು ಹೇಳಲಾಗಿದೆ.
ಹೌದು, ಪ್ರವೀಣ ಪಾಟೀಲ್ ಪಬ್‌ಜಿ ಗೇಮ್‌ನಲ್ಲಿ ಹಣವನ್ನು ಕಳೆದುಕೊಂಡಿದ್ದಾನೆ. ಪಬ್‌ಜಿ ಗೇಮ್ ಮೂಲಕ ಹಣ ಸಂಪಾದಿಸುವ ಆಸೆಗೆ ಬಿದ್ದು ಸ್ನೇಹಿತರೆಲ್ಲರ ಬಳಿ ಸಾಲ ಮಾಡಿಕೊಂಡಿದ್ದ, ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ಪಬ್‌ಜಿ ಗೇಮ್‌ನಲ್ಲಿ ಬೆಟ್ಟಿಂಗ್ ಕಟ್ಟುವುದಕ್ಕೆ ಅವಕಾಶವಿದೆಯಾ? ಇದೆಲ್ಲದರ ಡಿಟೇಲ್ಸ್ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪಬ್‌ಜಿ ಗೇಮ್‌ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಲಹಳ್ಳಿ ಗ್ರಾಮದ ನಿವಾಸಿ ಎನ್ನಲಾಗಿದೆ. ಈತ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಆನ್‌ಲೈನ್ ಗೇಮಿಂಗ್ ಗೀಳಿಗೆ ಬಲಿಯಾಗಿದ್ದಾನೆ. ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಆನ್‌ಲೈನ್ ಗೇಮಿಂಗ್‌ನಲ್ಲಿ ಬೆಟ್ಟಿಂಗ್ ಕಟ್ಟಿ ಹಣ ಕಳೆದುಕೊಂಡಿದ್ದಾನೆ. ಅಷ್ಟೇ ಅಲ್ಲ ಇದಕ್ಕಾಗಿ ಗೆಳಯರಿಂದ ಹಣವನ್ನು ಸಾಲ ಪಡೆದಿದ್ದು, ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಬ್‌ಜಿಯಲ್ಲಿ ಬೆಟ್ಟಿಂಗ್ ಕಟ್ಟಿದ್ದು ಹೇಗೆ?
ಮೂಲತಃ ಪಬ್‌ಜಿ ಗೇಮ್ ಬೆಟ್ಟಿಂಗ್ ಕಟ್ಟುವುದಕ್ಕೆ ಅವಕಾಶವಿಲ್ಲ. ಆದರೆ ಈ ಗೇಮ್‌ನಲ್ಲಿ ಕೆಲ ವಿಶಿಷ್ಟ ವರ್ಚ್ಯುವಲ್ ಪ್ರಾಡಕ್ಟ್‌ಗಳನ್ನು ಖರೀದಿ ಮಾಡಬಹುದು. ಈ ರೀತಿಯ ಪ್ರಾಡಕ್ಟ್‌ಗಳನ್ನು ಖರೀದಿಸಿರುವ ಗೇಮರ್‌ಗೆ ಪವರ್‌ಪುಲ್ ಎಂಬ ಸಂದೇಶ ಇತರ ಆಟಗಾರರಿಗೆ ಸಿಗುತ್ತದೆ. ಅಂತಹ ವಸ್ತುಗಳನ್ನು ಖರೀದಿಸಲು ಈ ಯುವಕ ಸಾಲವನ್ನು ಮಾಡಿದ್ದಾನೆ. ಹೀಗೆ ಸಾಲ ಮಾಡಿದ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸುವ ಮೂಲಕ ವರ್ಚುವಲ್ ಪ್ರಾಡಕ್ಟ್‌ಗಳನ್ನು ಖರೀದಿಸಿ ಹಣ ಕಳೆದುಕೊಂಡಿದ್ದಾನೆ.
ಹೀಗೆ ಪಬ್‌ಜಿ ಗೇಮ್‌ನಲ್ಲಿ ಹಣ ಕಳೆದುಕೊಂಡು ಸಾಲ ತೀರಿಸುವುದಕ್ಕೆ ಸಾದ್ಯವಾಗದ ಸ್ಥಿತಿ ತಲುಪಿದ್ದಾನೆ. ಇದರಿಂದ ಮನನೊಂದು ಮನೆಯಲ್ಲಿಯೇ ನೇಣಿ ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಈ ವಿದ್ಯಾರ್ಥಿ ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ಸೆಮಿಸ್ಟರ್ ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮಷೀನ್ ಲರ್ನಿಂಗ್ ಫೋರ್ಸ್ ನಲ್ಲಿ ಅಭ್ಯಾಸ ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಆನ್‌ಲೈನ್‌ನಲ್ಲಿ ಗೇಮಿಂಗ್‌ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ವರದಿಯಾಗಿರುವುದು ಇದೇ ಮೊದಲೇನಲ್ಲ. ದೇಶದ ಹಲವು ಕಡೆಗಳಲ್ಲಿ ಹೀಗೆ ಆನ್‌ಲೈನ್ ಗೇಮ್ ಮೂಲಕ ಹಣ ಗಳಿಸುವ ಭರದಲ್ಲಿ ತಮ್ಮ ಜೀವನವನ್ನೇ ಕೊನೆಗಾಣಿಸಿದ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಈ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರದ್ದೇ ಹೆಚ್ಚಿನ ಸಂಖ್ಯೆ ಅನ್ನೋದು ವಿಪರ್ಯಾಸ ಸಂಗತಿಯಾಗಿದೆ.

ಹೆಚ್ಚುತ್ತಿರುವ ಆನ್‌ಲೈನ್ ಗೇಮಿಂಗ್ ಬೆಟ್ಟಿಂಗ್ ಪ್ರಕರಣಗಳಿಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆಯಿದೆ. ಇದಲ್ಲದೆ ಆನ್‌ಲೈನ್ ಗೇಮ್ ಬೆಟ್ಟಿಂಗ್ ಪರಿಣಾಮಗಳ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಬೇಕಾದ ಅನಿವಾರ್ಯತೆ ಕೂಡ ಎದುರಾಗಿದೆ. ಇಲ್ಲದಿದ್ದರೆ ಇಂದಿನ ಯುವಜನತೆ ಆನ್‌ಲೈನ್ ಗೇಮಿಂಗ್ ಗೀಳಿನಿಂದ ಹೊರಬರುವುದು ಸುಲಭ ಸಾಧ್ಯವಲ್ಲ.
ಈಗಾಗಲೇ ಆನ್‌ಲೈನ್ ಗೇಮ್, ಆನ್‌ಲೈನ್ ಲೋನ್ ಆ್ಯಪ್ ಹೀಗೆ ನಾನಾ ರೀತಿಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಕಿರುಕುಳ ಹಾಗೂ ಇನ್ನಿತರ ಕಾರಣಗಳಿಂದ ಯುವಜನತೆ ಆತ್ಮಹತ್ಯೆಯಂತಹ ದಾರಿ ಹಿಡಿದಿರುವುದು ನಿಜಕ್ಕೂ ಶಾಕಿಂಗ್ ಸಂಗತಿ. ಆದರಿಂದ ಈ ನಿಟ್ಟಿನಲ್ಲಿ ಯುವಜನತೆ ಆನ್‌ಲೈನ್ ಗೇಮ್‌ಗಳಲ್ಲಿ ಬೆಟ್ಟಿಂಗ್ ಆಡುವುದಕ್ಕಿಂತ ಆಟವನ್ನು ಆಟವನ್ನಾಗಿಯಷ್ಟೇ ಆನಂದಿಸುವುದು ಸೂಕ್ತವಾಗಿದೆ. ಇಲ್ಲದಿದ್ದರೆ ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಗಮನಹರಿಸಬೇಕಾದ ಅನಿರ್ವಾಯತೆ ಕೂಡ ಇದೆ.


Click it and Unblock the Notifications








