Just In
- 25 min ago
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- 10 hrs ago
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- 13 hrs ago
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- 14 hrs ago
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
Don't Miss
- Movies
Lakshana Seria: ಶ್ವೇತಾಗೆ ಎಚ್ಚರಿಕೆ ಕೊಟ್ಟ ಭೂಪತಿ, ನಕ್ಷತ್ರ ಜೊತೆ ಚೆಲ್ಲಾಟ
- News
ಫೆಬ್ರವರಿ 4ರಂದು 313 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೂರು ದಿನಗಳಲ್ಲೇ 10 ಮಿಲಿಯನ್ ಡೌನ್‌ಲೋಡ್ ಆಯ್ತು 'ಪಬ್‌ಜಿ ಲೈಟ್'!
ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲೇ 10 ಮಿಲಿಯನ್ ಡೌನ್‌ಲೋಡ್‌ಗಳನ್ನು ಕಂಡಿರುವ 'ಪಬ್‌ಜಿ ಲೈಟ್' ಗೇಮ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮೊದಲ ಸ್ಥಾನಕ್ಕೇರಿದೆ. 2 ಜಿಬಿ RAM ಗಿಂತ ಕಡಿಮೆ ಇರುವ ಸಾಧನಗಳಿಗಾಗಿ ನಿರ್ಮಿಸಲಾದ, ಎಂಟ್ರಿ ಲೆವೆಲ್ ಫೋನ್‌ಗಳಿಗೆ ಸಪೋರ್ಟ್ ಆಗುವಂತಹ 'ಪಬ್‌ಜಿ ಲೈಟ್' ಜನಪ್ರಿಯವಾಗಿದೆ ಎಂದು ಟೆನ್ಸೆಂಟ್ ಗೇಮ್ಸ್ ಪ್ರಕಟಿಸಿದೆ.

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಗಣನೀಯ ಭಾಗವು ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರುವುದು ಪಬ್‌ಜಿ ಮೊಬೈಲ್ ಲೈಟ್ ಜಪ್ರಿಯತೆಗೆ ಕಾರಣವಾಗಿದೆ. ಅದು ತನ್ನ ವ್ಯಾಪ್ತಿಯನ್ನು ಮೀರಿದೆ. ಆಟವನ್ನು ಸುಗಮಗೊಳಿಸುವ ಈ ಆವೃತ್ತಿಯು ಸಾಂಪ್ರದಾಯಿಕ ಪಬ್‌ಜಿ ಶೈಲಿಯ ಆಟವನ್ನು ಇನ್ನೂ ಉಳಿಸಿಕೊಂಡಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಹಗುರವಾದ ಪಬ್‌ಜಿ ಮೊಬೈಲ್ ಲೈಟ್ ಆವೃತ್ತಿಯು 60 ಆಟಗಾರರನ್ನು ಒಳಗೊಳ್ಳಲು ಮಾಡಿದ ಸಣ್ಣ ನಕ್ಷೆಯನ್ನು ಹೊಂದಿದೆ, ಅದು ಕೇವಲ 10 ನಿಮಿಷಗಳ ಕಾಲ ವೇಗದ ಆಟಗಳನ್ನು ಆಡಲು ಅನುಮತಿಸುತ್ತದೆ. ಹಾಗಾದರೆ, ಪಬ್‌ಜಿ ಲೈಟ್ ಗೇಮ್ ವಿಶೇಷತೆಗಳೇನು?, ಈ ಹಗುರವಾದ ಗೇಮ್ ಅನ್ನು ಡೌನ್‌ಲೋಡ್ ಮಾಡಿಕೊಂಡರೆ ಏನು ಲಾಭ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಕೇವಲ 400 ಎಂಬಿ ಇನ್‍ಸ್ಟಾಲೇಶನ್!
ಪಬ್‍ಜಿ ಮೊಬೈಲ್ ಲೈಟ್ ಅನ್ನು 60 ಆಟಗಾರರ ಸಣ್ಣ ಮ್ಯಾಪ್‍ನಂತಹ ವೈಶಿಷ್ಟ್ಯತೆಯನ್ನು ಹೊಂದಿದ್ದು, ಸಾಂಪ್ರದಾಯಿಕವಾದ ಪಬ್‍ಜಿ ಸ್ಟೈಲ್‍ನ ಆಟದ ಮಾದರಿಯಲ್ಲಿದೆ. ಕೇವಲ 400 ಎಂಬಿ ಪ್ಯಾಕ್ ಇನ್‍ಸ್ಟಾಲೇಶನ್ ಇದಾಗಿದೆ ಮತ್ತು 2ಜಿಬಿ ರ್ಯಾಂಗಿಂತ ಕಡಿಮೆ ಇರುವ ಡಿವೈಸ್‍ಗಳಲ್ಲಿಯೂ ಇದನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

ಮೃದುವಾದ ಆಟದ ಅನುಭವ
ಪಬ್‍ಜಿ ಮೊಬೈಲ್ ಲೈಟ್ ಎಲ್ಲಾ ಆಟಗಾರರಿಗೆ ಮೃದುವಾದ ಆಟದ ಅನುಭವವನ್ನು ನೀಡಲಿದೆ. 400 ಎಂಬಿ ಡೌನ್‍ಲೋಡ್ ಮತ್ತು 2ಜಿಬಿ ರ್ಯಾಂಗಿಂತಲೂ ಕಡಿಮೆ ಇರುವ ಮೊಬೈಲ್ ಡಿವೈಸ್‍ಗಳಿಗೂ ಗೇಮ್ ಸಪೋರ್ಟ್ ಮಾಡುವುದರಿಂದ ಮೃದುವಾದ ಆಟದ ಅನುಭವವನ್ನು ನೋಡಬಹುದು. ಇದು ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ಹೇಳಿ ಮಾಡಿಸಿದಂತಿದೆ.

ಯಾವುದೇ ನೆಟ್‍ವರ್ಕ್‍ನ ಅಡ್ಡಿ ಇಲ್ಲ
ನೆಟ್‍ವರ್ಕ್‍ನ ಸಾಮಥ್ರ್ಯ ತುಂಬಾ ಕಡಿಮೆ ಇರುವ ಸಂದರ್ಭದಲ್ಲೂ ಸಹ ಆಟದ ಗುಣಮಟ್ಟದಲ್ಲಿ ಯಾವುದೇ ಅಡ್ಡಿಗಳು ಎದುರಾಗದ ರೀತಿಯಲ್ಲಿ ಬಳಕೆದಾರರಿಗೆ ಆಟದ ಅನುಭವವನ್ನು ನೀಡುವುದು ಪಬ್‍ಜಿ ಮೊಬೈಲ್ ಲೈಟ್ ಗೇಮ್‌ನ ಪ್ರಮುಖ ಉದ್ದೇಶವಾಗಿದೆ. ಅತ್ಯಂತ ಸರಳವಾದ ನಿಯಂತ್ರಣಗಳೊಂದಿಗೆ ಪಬ್‍ಜಿ ಮೊಬೈಲ್ ಅನುಭವವನ್ನು ಇದು ನೀಡಲಿದೆ.

ಆಕರ್ಷಕ ರಿವಾರ್ಡ್ ಆಫರ್
ರಾಯಲ್ ಪಾಸ್ ಅನ್ನು ವಿನ್ನರ್ ಪಾಸ್ ಬದಲಾಯಿಸುವ ಮತ್ತು ಅನ್‌ಲಾಕ್ ಸಾಧನೆಯನ್ನು ಕ್ಷಿಪ್ರಗತಿಯಲ್ಲಿ ಹೊಂದಬಹುದಾಗಿದೆ ಹಾಗೂ ಹಲವಾರು ಆಕರ್ಷಕ ರಿವಾರ್ಡ್ ಆಫರ್‍ಗಳನ್ನು ಇದೀಗ ಪಬ್‌ಜಿ ಪ್ರಿಯರು ಪಡೆಯಬಹುದಾಗಿದೆ. ಅಂದರೆ ಇದೀಗ ವಿನ್ನರ್ ಪಾಸ್ ಮೇಲ್ದರ್ಜೆಗೆ ಏರಿದ್ದು, ಗ್ರಾಹರಿಗೆ ಕೆಲ ಟೆಲಿಕಾಂ ಕಂಪೆನಿಗಳು ರೀವಾರ್ಡ್ಸ ಅನ್ನು ನೀಡಲು ಮುಂದೆ ಬಂದಿವೆ.

ಬುಲೆಟ್ ಡ್ರಾಪ್ ಪರಿಣಾಮ ಮುಕ್ತ!
ನೂತನ ಪಬ್‍ಜಿ ಮೊಬೈಲ್ ಲೈಟ್ ಬುಲೆಟ್ ವೇಗವನ್ನು ಹೆಚ್ಚಿಸಲಿದೆ ಮತ್ತು ಬುಲೆಟ್ ಡ್ರಾಪ್ ಪರಿಣಾಮಗಳಿಂದ ಮುಕ್ತವಾಗಿದೆ. ನೆಟ್‍ವರ್ಕ್ ಸಾಮಥ್ರ್ಯ ಅತ್ಯಂತ ಕಡಿಮೆ ಇದ್ದ ಸಂದರ್ಭಗಳಲ್ಲೂ ನಿಖರವಾದ ಶಾಟ್‍ಗೆ ಅವಕಾಶ ಮಾಡಿಕೊಡುತ್ತದೆ. ಅಂದರೆ ಇದು ಬುಲೆಟ್ ಟ್ರೇಲ್ ಅಡ್ಜಸ್ಟ್‍ಮೆಂಟ್ ಫೀಚರ್ ಅನ್ನು ಹೊಂದಿದೆ.

ಇತರೆ ಏನೆಲ್ಲಾ ಫೀಚರ್ಸ್?
ಪಬ್‍ಜಿ ಮೊಬೈಲ್ ಲೈಟ್ ಗೇಮ್‌ನಲ್ಲಿ ಇವುಗಳಲ್ಲದೇ, ವೆಪನ್ ರೀಕಾಯಿಲ್ ಸಪ್ರೆಶನ್, ಟೈಮ್ ಟು ಕಿಲ್ ವಿಸ್ತರಣೆ, ಲೊಕೇಶನ್ ಡಿಸ್‍ಪ್ಲೇ ಸೇರಿದಂತೆ ಇನ್ನೂ ಹಲವಾರು ವೈಶಿಷ್ಟ್ಯತೆಗಳನ್ನು ತರಲಾಗಿದೆ. ಈ ಪಬ್‍ಜಿ ಮೊಬೈಲ್ ಲೈಟ್ ಗೇಮ್‌ಗಾಗಿ ಹೊಸದಾಗಿ ಸೇರ್ಪಡೆಗೊಳ್ಳುವ ಆಟಗಾರರಿಗೆ ಹಲವಾರು ರಿವಾರ್ಡ್‍ಗಳು ಇರಲಿವೆ ಎಂದು ಸಂಸ್ಥೆ ತಿಳಿಸಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470