ನೂತನ ಝೊಂಬಿ ಅಪ್‌ಡೇಟ್ ಪಡೆದ ಪಬ್‌ಜಿ ಗೇಮ್ ಈಗ ಹೇಗಿದೆ?

|

ಜನಪ್ರಿಯ ಆನ್‌ಲೈನ್ ಗೇಮ್ ಪಬ್‌ಜಿ ಗೇಮ್ ಆಟಗಾರರಿಗೆ ಹೊಸ 'ಪಬ್‌ಜಿ ಮೊಬೈಲ್ 0.11.0' ಆವೃತ್ತಿ ಲಭ್ಯವಾಗಿದೆ. ನಿನ್ನೆ ನಿರ್ವಹಣೆಯ ಉದ್ದೇಶಗಳಿಗಾಗಿ ಪಬ್‌ಜಿ ಮೊಬೈಲ್ ಸರ್ವರ್‌ಗಳನ್ನು ಡೌನ್ ಮಾಡಿದ್ದ ಟೆನ್ಸೆಂಟ್ ಸಂಸ್ಥೆಯು, ಪಬ್‌ಜಿ ಪ್ರಿಯರು ಬಹುಸಮಯದಿಂದ ಕಾಯುತ್ತಿದ್ದ ಝೊಂಬಿಗಳಿರುವ ನೂತನ ಅಪ್‌ಡೇಟ್ ಅನ್ನು ನೀಡಿ ಸಿಹಿಸುದ್ದಿಯನ್ನು ನೀಡಿದೆ.

'ಪಬ್‌ಜಿ ಮೊಬೈಲ್ 0.11.0' ಆವೃತ್ತಿ ಅಪ್‌ಡೇಟ್ ಬಿಡುಗಡೆ ಕುರಿತು ಪಬ್‌ಜಿ ಸೂಚನೆ ನೀಡಿದಂತೆಯೇ, ಸೋಮವಾರ ಮಧ್ಯಾಹ್ನದ ವೇಳೆಗೆ ಪಬ್‌ಜಿ ಗೇಮ್ ನೂತನ ಅಪ್‌ಡೇಟ್‌ ಪಡೆದಿದೆ. ಅಪ್‌ಡೇಟ್‌ನಲ್ಲಿ ಸರ್ವೈವ್ ಟಿಲ್ ಡಾವ್ನ್ ಮೋಡ್‌ ಮೂಲಕ ಝೊಂಬಿಗಳ ಜತೆ ಕಾದಾಡಲು ಅವಕಾಶ ಕಲ್ಪಿಸಿದ್ದು, ನಿಗದಿತ ಅವಧಿಯವರೆಗೆ ಮಾತ್ರ ಈ ಫೀಚರ್ ಲಭ್ಯವಿರಲಿದೆ.

ನೂತನ ಝೊಂಬಿ ಅಪ್‌ಡೇಟ್ ಪಡೆದ ಪಬ್‌ಜಿ ಗೇಮ್ ಈಗ ಹೇಗಿದೆ?

'ಸರ್ವೈವ್ ಟಿಲ್ ಡಾನ್' ಎಂದು ಕರೆಯಲಾಗುವ ಈ ಹೊಸ ಅಪ್‌ಡೇಟ್‌ನಲ್ಲಿ ವಿಕೆಂಡಿ ನೈಟ್ ಮ್ಯಾಪ್ ಕೂಡ ಸೇರ್ಪಡೆ ಮಾಡಿರುವ ಬಗ್ಗೆ ಟೆನ್ಸೆಂಟ್ ಗೇಮ್ಸ್ ಮಾಹಿತಿಯನ್ನು ನೀಡಿದೆ. ಝೊಂಬಿ ಮೋಡ್‌ ಲಭ್ಯವಿರುವ ಸರ್ವೈವ್‌ ಟಿಲ್ ಡಾವ್ನ್‌ನಲ್ಲಿ ಆಟಗಾರರು ಝೊಂಬಿ, ಮಾನ್‌ಸ್ಟರ್‌ಗಳನ್ನು ಎದುರಿಸಲಿದ್ದಾರೆ. ಇದು ಯುದ್ಧ, ಸ್ನೈಫರ್ ತರಬೇತಿಯನ್ನು ಹೋಲುತ್ತದೆ ಎಂದು ತಿಳಿಸಿದೆ.

ಸೀಮಿತ ಅವಧಿಯ PUBG Mobile 0.11.0 ಈವೆಂಟ್ ಮೋಡ್‌ನಡಿ ಝೊಂಬಿ ಸರ್ವೈವ್ ಟಿಲ್ ಡಾವ್ನ್ ಲಭ್ಯವಿದ್ದು, ವೆದರ್ ಆಯ್ಕೆ: ಮೂನ್‌ಲೈಟ್‌ನಿಂದ ವಿಕೆಂಡಿ, ಪ್ಲೇಯರ್‌ ಸ್ಪೇಸ್ ಸೇರ್ಪಡೆ, ರೆಸಿಡೆಂಟ್ ಎವಿಲ್ 2 ಮುಖ್ಯ ಮೆನು ಥೀಮ್ ಮತ್ತು ಮ್ಯೂಸಿಕ್ ಸೇರ್ಪಡೆ ಮತ್ತು ಅರ್ಕೇಡ್-ಕ್ವಿಕ್ ಮ್ಯಾಚ್‌ನಲ್ಲಿ ಸ್ಯಾನ್ಹೋಕ್ ಈಗ ಲಭ್ಯವಾಗುವುದನ್ನು ಅಪ್‌ಡೇಟ್ ಮೂಲಕ ತಿಳಿಯಬಹುದು.

ನೂತನ ಝೊಂಬಿ ಅಪ್‌ಡೇಟ್ ಪಡೆದ ಪಬ್‌ಜಿ ಗೇಮ್ ಈಗ ಹೇಗಿದೆ?

ಅಪ್‌ಡೇಟ್‌ನಲ್ಲಿ ಈ ಹಿಂದಿನ ಫಲಿತಾಂಶಗಳನ್ನು ಈಗ ಕೇವಲ 1 ತಿಂಗಳು ಮಾತ್ರ ಇರಿಸಲಾಗುತ್ತದೆ. ಮತ್ತು ಬಜೆಟ್ ಸಾಧನಗಳು ತೋರುತ್ತಿದ್ದ ಸ್ಥಿರ ಭೂಪ್ರದೇಶ ಪ್ರದರ್ಶನ ದೋಷಗಳನ್ನು ಸರಿಪಡಿಸಲಾಗಿದೆ. ಹಾಗಾಗಿ, ಇಷ್ಟು ದಿನ ಪಬ್‌ಜಿ ಗೇಮ್ ಅನ್ನು ಎಂಜಾಯ್ ಮಾಡುತ್ತಿದ್ದ ಸ್ಮಾರ್ಟ್‌ಫೋನ್ ಪ್ರಿಯರಿಗೆ ಈ ಹೊಸ ಅಪ್‌ಡೇಟ್ ಹೊಸ ಗೇಮಿಂಗ್ ಅನುಭವವನ್ನು ಸಿಗಲಿದೆ.

Best Mobiles in India

Read more about:
English summary
PUBG Mobile 0.11.0 update now online: Zombie mode, Vikendi Night Map, and top updates you should know about. to know more visit to knnada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X