Home
ಸುದ್ದಿಜಾಲ

ಭಾರತಕ್ಕೆ ಲಗ್ಗೆ ಇಟ್ಟ ಪಬ್‍ಜಿ ಮೊಬೈಲ್ ಲೈಟ್!..2GB RAM ಇದ್ದರೂ ಸಾಕು!

ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಪಬ್‍ಜಿ ಮೊಬೈಲ್ ಗೇಮ್‌ನ ಪಬ್‍ಜಿ ಮೊಬೈಲ್ ಲೈಟ್ ಗೇಮ್ ಇಂದು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸುಲಭವಾದ ಮತ್ತು ಕ್ಷಿಪ್ರವಾದ ನೂತನ ಮಾದರಿಯ ಗೇಮ್ ಅನ್ನು ಭಾರತೀಯರಿಗಾಗಿ ತೆರೆದಿದ್ದು, ಗೂಗಲ್ ಪ್ಲೇ ಸ್ಟೋರ್‌ನಿಂದ ಸುಲಭವಾಗಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ಈ ನೂತನ ಪಬ್‍ಜಿ ಮೊಬೈಲ್ ಲೈಟ್ ಗೇಮ್ ಬಹುತೇಕ ಎಲ್ಲಾ ಡಿವೈಸ್‍ಗಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಹೊಂದಿಕೆಯಾಗಲಿದೆ ಎಂದು ಡೆವಲಪ್‍ರ್‍ಗಳು ತಿಳಿಸಿದ್ದಾರೆ.

ಭಾರತಕ್ಕೆ ಲಗ್ಗೆ ಇಟ್ಟ ಪಬ್‍ಜಿ ಮೊಬೈಲ್ ಲೈಟ್!..2GB RAM ಇದ್ದರೂ ಸಾಕು!

ಹೌದು, ಬಳಕೆದಾರರು ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಮತ್ತು ಯಾವುದೇ ಡಿವೈಸ್ ಮೂಲಕವಾದರೂ ಪಬ್‌ಜಿ ಲೈಟ್ ಗೇಮ್ ಡೌನ್‍ಲೋಡ್ ಮಾಡಿಕೊಂಡು ಗೇಮಿಂಗ್‍ನ ಅನುಭವವನ್ನು ಪಡೆಯಬಹುದಾಗಿದೆ. ಕಡಿಮೆ ಸಾಮಥ್ರ್ಯದ ರ್ಯಾಮ್‌ನೊಂದಿಗೆ ಇರುವ ಲೋ-ಎಂಡ್ ಡಿವೈಸ್‍ಗಳಲ್ಲಿಯೂ ಡೌನ್‍ಲೋಡ್ ಮಾಡಿಕೊಳ್ಳುವ ರೀತಿಯಲ್ಲಿ ಡೆವಲಪರ್‌ಗಳು ವಿನ್ಯಾಸಗೊಳಿಸಿದ್ದಾರೆ. ಯಾವುದೇ ರಾಜೀ ಇಲ್ಲದ ರೀತಿಯಲ್ಲಿ ಗರಿಷ್ಠ ಮಟ್ಟದ ಅನುಭವವನ್ನು ಈ ಮಾದರಿಯಲ್ಲಿ ಪಡೆಯಬಹುದು ಎಂದು ಗೇಮ್ ವಿನ್ಯಾಸಕರು ತಿಳಿಸಿದ್ದಾರೆ.

ಅನ್‍ರಿಯಲ್ ಇಂಜಿನ್ 4 ನೊಂದಿಗೆ ವಿನ್ಯಾಸಗೊಳಿಸಿರುವ ಈ ಪಬ್‍ಜಿ ಮೊಬೈಲ್ ಲೈಟ್ ಗೇಮ್ ಶ್ರೇಣಿಯು ಕಡಿಮೆ ರ್ಯಾಮ್ ಸಾಮಥ್ರ್ಯದ ಡಿವೈಸ್‍ಗಳಲ್ಲೂ ಸಹ ಅತ್ಯುತ್ತಮ ಅನುಭವ ನೀಡಲಿದೆ. ಪಬ್‍ಜಿ ಮೊಬೈಲ್ ಲೈಟ್ ಅನ್ನು 60 ಆಟಗಾರರ ಸಣ್ಣ ಮ್ಯಾಪ್‍ನಂತಹ ವೈಶಿಷ್ಟ್ಯತೆಯನ್ನು ಸಹ ಹೊಂದಿದೆ. ಹಾಗಾದರೆ, ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ಪಬ್‍ಜಿ ಮೊಬೈಲ್ ಲೈಟ್ ಗೇಮ್ ವಿಶೇಷತೆಗಳೇನು? ಡೌನ್‌ಲೋಡ್ ಮಾಡಲು ಇರುವ ಕಾರಣಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

 ಕೇವಲ 400 ಎಂಬಿ ಇನ್‍ಸ್ಟಾಲೇಶನ್!

ಕೇವಲ 400 ಎಂಬಿ ಇನ್‍ಸ್ಟಾಲೇಶನ್!

ಪಬ್‍ಜಿ ಮೊಬೈಲ್ ಲೈಟ್ ಅನ್ನು 60 ಆಟಗಾರರ ಸಣ್ಣ ಮ್ಯಾಪ್‍ನಂತಹ ವೈಶಿಷ್ಟ್ಯತೆಯನ್ನು ಹೊಂದಿದ್ದು, ಸಾಂಪ್ರದಾಯಿಕವಾದ ಪಬ್‍ಜಿ ಸ್ಟೈಲ್‍ನ ಆಟದ ಮಾದರಿಯಲ್ಲಿದೆ. ಕೇವಲ 400 ಎಂಬಿ ಪ್ಯಾಕ್ ಇನ್‍ಸ್ಟಾಲೇಶನ್ ಇದಾಗಿದೆ ಮತ್ತು 2ಜಿಬಿ ರ್ಯಾಂಗಿಂತ ಕಡಿಮೆ ಇರುವ ಡಿವೈಸ್‍ಗಳಲ್ಲಿಯೂ ಇದನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

ಮೃದುವಾದ ಆಟದ ಅನುಭವ

ಮೃದುವಾದ ಆಟದ ಅನುಭವ

ಪಬ್‍ಜಿ ಮೊಬೈಲ್ ಲೈಟ್ ಎಲ್ಲಾ ಆಟಗಾರರಿಗೆ ಮೃದುವಾದ ಆಟದ ಅನುಭವವನ್ನು ನೀಡಲಿದೆ. 400 ಎಂಬಿ ಡೌನ್‍ಲೋಡ್ ಮತ್ತು 2ಜಿಬಿ ರ್ಯಾಂಗಿಂತಲೂ ಕಡಿಮೆ ಇರುವ ಮೊಬೈಲ್ ಡಿವೈಸ್‍ಗಳಿಗೂ ಗೇಮ್ ಸಪೋರ್ಟ್ ಮಾಡುವುದರಿಂದ ಮೃದುವಾದ ಆಟದ ಅನುಭವವನ್ನು ನೋಡಬಹುದು. ಇದು ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ಹೇಳಿ ಮಾಡಿಸಿದಂತಿದೆ.

ಯಾವುದೇ ನೆಟ್‍ವರ್ಕ್‍ನ ಅಡ್ಡಿ ಇಲ್ಲ

ಯಾವುದೇ ನೆಟ್‍ವರ್ಕ್‍ನ ಅಡ್ಡಿ ಇಲ್ಲ

ನೆಟ್‍ವರ್ಕ್‍ನ ಸಾಮಥ್ರ್ಯ ತುಂಬಾ ಕಡಿಮೆ ಇರುವ ಸಂದರ್ಭದಲ್ಲೂ ಸಹ ಆಟದ ಗುಣಮಟ್ಟದಲ್ಲಿ ಯಾವುದೇ ಅಡ್ಡಿಗಳು ಎದುರಾಗದ ರೀತಿಯಲ್ಲಿ ಬಳಕೆದಾರರಿಗೆ ಆಟದ ಅನುಭವವನ್ನು ನೀಡುವುದು ಪಬ್‍ಜಿ ಮೊಬೈಲ್ ಲೈಟ್ ಗೇಮ್‌ನ ಪ್ರಮುಖ ಉದ್ದೇಶವಾಗಿದೆ. ಅತ್ಯಂತ ಸರಳವಾದ ನಿಯಂತ್ರಣಗಳೊಂದಿಗೆ ಪಬ್‍ಜಿ ಮೊಬೈಲ್ ಅನುಭವವನ್ನು ಇದು ನೀಡಲಿದೆ.

ಆಕರ್ಷಕ ರಿವಾರ್ಡ್ ಆಫರ್

ಆಕರ್ಷಕ ರಿವಾರ್ಡ್ ಆಫರ್

ರಾಯಲ್ ಪಾಸ್ ಅನ್ನು ವಿನ್ನರ್ ಪಾಸ್ ಬದಲಾಯಿಸುವ ಮತ್ತು ಅನ್‌ಲಾಕ್ ಸಾಧನೆಯನ್ನು ಕ್ಷಿಪ್ರಗತಿಯಲ್ಲಿ ಹೊಂದಬಹುದಾಗಿದೆ ಹಾಗೂ ಹಲವಾರು ಆಕರ್ಷಕ ರಿವಾರ್ಡ್ ಆಫರ್‍ಗಳನ್ನು ಇದೀಗ ಪಬ್‌ಜಿ ಪ್ರಿಯರು ಪಡೆಯಬಹುದಾಗಿದೆ. ಅಂದರೆ ಇದೀಗ ವಿನ್ನರ್ ಪಾಸ್ ಮೇಲ್ದರ್ಜೆಗೆ ಏರಿದ್ದು, ಗ್ರಾಹರಿಗೆ ಕೆಲ ಟೆಲಿಕಾಂ ಕಂಪೆನಿಗಳು ರೀವಾರ್ಡ್ಸ ಅನ್ನು ನೀಡಲು ಮುಂದೆ ಬಂದಿವೆ.

ಬುಲೆಟ್ ಡ್ರಾಪ್ ಪರಿಣಾಮ ಮುಕ್ತ!

ಬುಲೆಟ್ ಡ್ರಾಪ್ ಪರಿಣಾಮ ಮುಕ್ತ!

ನೂತನ ಪಬ್‍ಜಿ ಮೊಬೈಲ್ ಲೈಟ್ ಬುಲೆಟ್ ವೇಗವನ್ನು ಹೆಚ್ಚಿಸಲಿದೆ ಮತ್ತು ಬುಲೆಟ್ ಡ್ರಾಪ್ ಪರಿಣಾಮಗಳಿಂದ ಮುಕ್ತವಾಗಿದೆ. ನೆಟ್‍ವರ್ಕ್ ಸಾಮಥ್ರ್ಯ ಅತ್ಯಂತ ಕಡಿಮೆ ಇದ್ದ ಸಂದರ್ಭಗಳಲ್ಲೂ ನಿಖರವಾದ ಶಾಟ್‍ಗೆ ಅವಕಾಶ ಮಾಡಿಕೊಡುತ್ತದೆ. ಅಂದರೆ ಇದು ಬುಲೆಟ್ ಟ್ರೇಲ್ ಅಡ್ಜಸ್ಟ್‍ಮೆಂಟ್ ಫೀಚರ್ ಅನ್ನು ಹೊಂದಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಪಬ್‍ಜಿ ಮೊಬೈಲ್ ಲೈಟ್ ಗೇಮ್‌ನಲ್ಲಿ ಇವುಗಳಲ್ಲದೇ, ವೆಪನ್ ರೀಕಾಯಿಲ್ ಸಪ್ರೆಶನ್, ಟೈಮ್ ಟು ಕಿಲ್ ವಿಸ್ತರಣೆ, ಲೊಕೇಶನ್ ಡಿಸ್‍ಪ್ಲೇ ಸೇರಿದಂತೆ ಇನ್ನೂ ಹಲವಾರು ವೈಶಿಷ್ಟ್ಯತೆಗಳನ್ನು ತರಲಾಗಿದೆ. ಈ ಪಬ್‍ಜಿ ಮೊಬೈಲ್ ಲೈಟ್ ಗೇಮ್‌ಗಾಗಿ ಹೊಸದಾಗಿ ಸೇರ್ಪಡೆಗೊಳ್ಳುವ ಆಟಗಾರರಿಗೆ ಹಲವಾರು ರಿವಾರ್ಡ್‍ಗಳು ಇರಲಿವೆ ಎಂದು ಸಂಸ್ಥೆ ತಿಳಿಸಿದೆ.

Best Mobiles in India

English summary
PUBG Mobile Lite Launched in India for Low-End Smartphones: Everything You Need to Know. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+