ಪಬ್‌ಜಿ ಗೇಮ್‌ಗೆ ಫೀದಾ ಆದ ಜನ..! ದಿನಕ್ಕೆ 2 ಕೋಟಿಗೂ ಹೆಚ್ಚು ಸಕ್ರಿಯ ಬಳಕೆದಾರರು..!
ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಸದ್ಯಕ್ಕೆ ಕ್ರೇಜ್ ಸೃಷ್ಟಿಸರುವ ಟೆನ್‌ಸೆಂಟ್ ಗೇಮ್ಸ್‌ನ PUBG Mobile ಗೇಮ್ ಮತ್ತೊಂದು ಇತಿಹಾಸ ಸೃಷ್ಟಿಸಿದೆ. PUBG Mobile ಗೇಮ್ PlayerUnknown's Battlegrounds ಗೇಮ್‌ನ ಮೊಬೈಲ್ ಆವೃತ್ತಿಯಾಗಿದ್ದು, ಈ ವರ್ಷ ಮಾರ್ಚ್‌ನಲ್ಲಿ ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ಬಿಡುಗಡೆಯಾಗಿತ್ತು. ಮೊಬೈಲ್ ಆವೃತ್ತಿ ಬಿಡುಗಡೆಯಾಗಿ 6 ತಿಂಗಳು ಪೂರ್ಣಗೊಳಿಸುವಷ್ಟರಲ್ಲಿಯೇ ದೊಡ್ಡ ಸಾಧನೆಯನ್ನು PUBG ಗೇಮ್ ಮಾಡಿರುವುದಂತೂ ನಿಜ.

PUBG Mobile ಗೇಮ್‌ನ್ನು ಸದ್ಯ ಪ್ರತಿದಿನ 20 ಮಿಲಿಯನ್ ಬಳಕೆದಾರರು ಬಳಸುತ್ತಿದ್ದಾರಂತೆ. ಹೌದು, PUBG Mobile ತನ್ನ ಸಾಧನೆಯ ಬಗ್ಗೆ ಟ್ವೀಟ್ ಮಾಡಿದ್ದು, ಟ್ವೀಟ್‌ನಲ್ಲಿ ಸಂಭ್ರಮದ ವಿಡಿಯೋವನ್ನು ಅಪ್‌ಲೋಡ್ ಮಾಡಿದೆ. ಅದಲ್ಲದೇ, PUBG ಗೇಮ್ ಎರಡನೇ ಆವೃತ್ತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

6 ತಿಂಗಳಷ್ಟೇ ಸಾಧನೆ ಬಹಳ
ಡೆಸ್ಕ್‌ಟಾಪ್ ಗೇಮಿಂಗ್ ಆವೃತ್ತಿಯಾಗಿದ್ದ PlayerUnknown's Battlegrounds ಗೇಮ್‌ನ ಮೊಬೈಲ್ ಆವೃತ್ತಿಯಾಗಿರುವ PUBG Mobile ಗೇಮ್‌ನ್ನು ಈ ವರ್ಷ ಮಾರ್ಚ್‌ನಲ್ಲಿ ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ಬಿಡುಗಡೆ ಮಾಡಲಾಗಿತ್ತು. ಕೇವಲ 6 ತಿಂಗಳಲ್ಲಿ ಪರಿಣಾಮಕಾರಿಯಾಗಿ ಜನರನ್ನು ತಲುಪಿರುವ PUBG Mobile ಗೇಮ್ ಜನರಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿದೆ.
ಟ್ವೀಟ್‌ನಲ್ಲಿ ಏನೀದೆ..?
PUBG Mobile ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವಿಡಿಯೋ ಒಂದನ್ನು ಪ್ರಕಟಿಸಿದ್ದು, PUBG ಬ್ಯಾಕ್‌ಗ್ರೌಂಡ್‌ನಲ್ಲಿ ನೃತ್ಯ ಮಾಡುತ್ತಾ ಸಂಭ್ರಮವನ್ನು ಆಚರಿಸುತ್ತಿರುವ ದೃಷ್ಯಾವಳಿಯನ್ನು ಅಪ್‌ಲೋಡ್ ಮಾಡಿದ್ದು, 6 ತಿಂಗಳಲ್ಲಿ 20 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. #pubgmobile ಗುಂಪಿನ ಜತೆ ಸೇರಿರುವುದಕ್ಕೆ ಬಳಕೆದಾರರಿಗೆ ಧನ್ಯವಾದಗಳನ್ನು PUBG Mobile ತಿಳಿಸಿದೆ.

ಎರಡನೇ ಆವೃತ್ತಿ ಫುಲ್ ಸಕ್ಸಸ್
PUBG Mobile ಗೇಮ್ ಸೀಸನ್ ವಿಧಗಳಲ್ಲಿ ಬರುತ್ತಿದ್ದು, ಎರಡನೇ ಸೀಸನ್ ಬಹಳಷ್ಟು ಯಶಸ್ವಿಯಾಗಿದ್ದು, ಸ್ಮಾರ್ಟ್‌ಫೋನ್ ಬಳಕೆದಾರರನ್ನು PUBG ಕಡೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎರಡನೇ ಸೀಸನ್‌ನಲ್ಲಿ 800 ಮಿಲಿಯನ್ ಚಿಕನ್ ಡಿನ್ನರ್ ಸರ್ವ್ ಮಾಡಲಾಗಿದೆಯಂತೆ. ಫೋರ್ಟ್‌ನೈಟ್ ಗೇಮ್‌ಗಿಂತಲೂ ಹೆಚ್ಚು ಯಶಸ್ವಿಯಾಗಿದೆ.

200 ದೇಶದ ಆಟಗಾರರು
PUBG Mobile ಗೇಮ್‌ನ ಎರಡನೇ ಸೀಸನ್‌ನಲ್ಲಿ 200 ದೇಶದ ಆಟಗಾರರು ಭಾಗವಹಿಸಿದ್ದರು ಎಂದರೇ ನಂಬಲೇಬೇಕು. ಅದಲ್ಲದೇ ಈ ಗೇಮ್‌ನ್ನು 100 ಮಿಲಿಯನ್‌ಗೂ ಹೆಚ್ಚಿನ ಬಳಕೆದಾರರು ತಮ್ಮ ಆಂಡ್ರಾಯ್ಡ್ ಮತ್ತು ಆಪಲ್ ಡಿವೈಸ್‌ಗಳಿಗೆ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ.

ಫೋರ್ಟ್‌ನೈಟ್‌ಗಿಂತ ಹೆಚ್ಚು ಯಶಸ್ವಿ
ಫೋರ್ಟ್‌ನೈಟ್ ಗೇಮ್‌ಗೆ ಹೋಲಿಸಿದರೆ PUBG Mobile ಗೇಮ್ ಯಶಸ್ವಿಯಾಗಿದೆ ಎನ್ನುಬಹುದು. ಇತ್ತೀಚೆಗೆ ತಾನೇ ಫೋರ್ಟ್‌ನೈಟ್ ತನ್ನ ಆಂಡ್ರಾಯ್ಡ್ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಇದು 15 ಮಿಲಿಯನ್ ಡೌನ್‌ಲೋಡ್ ಕಂಡಿದೆ. ಆದರೆ, ಫೋರ್ಟ್‌ನೈಟ್ ಗೇಮ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿಲ್ಲ. ಕೇವಲ ವೆಬ್‌ಸೈಟ್‌ನಲ್ಲಿ ದೊರೆಯುವ APK ಫೈಲ್‌ನಿಂದ ಮಾತ್ರ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಆದರೂ, 15 ಮಿಲಿಯನ್ ಇನ್‌ಸ್ಟಾಲ್ ಕಂಡಿರುವ ಫೋರ್ಟ್‌ನೈಟ್‌ನಲ್ಲಿ 23 ಮಿಲಿಯನ್ ಆಟಗಾರರು ಆಟವಾಡಿದ್ದಾರೆ.

iOSನಲ್ಲಿ ಫೋರ್ಟ್‌ನೈಟ್ ಮುಂದು
ಮಾರ್ಚ್ 15ರಂದು ಬಿಡುಗಡೆಯಾಗಿರುವ ಫೋರ್ಟ್‌ನೈಟ್ ಗೇಮ್ iOS ಒಂದರಲ್ಲಿಯೇ 100 ಮಿಲಿಯನ್ ಡಾಲರ್ ಗಳಿಸಿಕೊಂಡಿದೆ. ಸೆನ್ಸಾರ್ ಟವರ್ ವರದಿ ಅನ್ವಯ ಫೋರ್ಟ್‌ನೈಟ್ ಗೇಮ್ ಮೊದಲ ತಿಂಗಳಲ್ಲಿ 25 ಮಿಲಿಯನ್ ಡಾಲರ್ ಆದಾಯವನ್ನು ಗಳಿಸಿಕೊಂಡಿದೆ.

ಕ್ರೇಜ್‌ನ್ನು ಮತ್ತಷ್ಟು ಹೆಚ್ಚಿಸಲು ಸೀಸನ್ 3
PUBG Mobile ಗೇಮ್ ಬುಧವಾರ ಹೊಸ ಅಪ್‌ಡೇಟ್ ಪಡೆದುಕೊಂಡಿದ್ದು, 3ನೇ ಸೀಸನ್ ಪ್ರಾರಂಭವಾಗಿದೆ. iOS ಮತ್ತು ಆಂಡ್ರಾಯ್ಡ್‌ನಲ್ಲಿ 0.8.0 ಅಪ್‌ಡೇಟ್ ಬಂದಿದೆ. ಹೊಸ ಅಪ್‌ಡೇಟ್ ಹೊಸ ವಾಹನಗಳು, ಶಸ್ತ್ರಾಸ್ತ್ರಗಳ ಜತೆ ಶಾನ್‌ಹಾಕ್ ಮ್ಯಾಪ್‌ನ್ನು ಬಳಕೆದಾರರಿಗೆ ನೀಡಿದೆ. ಅದಲ್ಲದೇ PUBG Mobile ಆಂಟಿ ಚೀಟಿಂಗ್ ಮೇಸರ್‌ಗಳಲ್ಲಿ ಸುಧಾರಣೆ ಕಂಡಿದ್ದು, ಚೀಟಿಂಗ್ ಪ್ಲಗ್‌ಇನ್‌ಗಳಲ್ಲೂ ಮಹತ್ತರ ಸುಧಾರಣೆ ಕಂಡಿದ್ದು, ಹೊಸದಾಗಿ ಬಟನ್‌ಗಳನ್ನು ಸೇರಿಸಲಾಗಿದೆ.

ಹೊಸ ಅಪ್‌ಡೇಟ್‌ನಲ್ಲಿ ಮತ್ತೇನಿದೆ..?
ಹೊಸ ಅಪ್‌ಡೇಟ್ ಬಳಕೆದಾರರು ತಮ್ಮ ಪಿಕಪ್ ಪ್ರಮಾಣ ಸೆಟ್ಟಿಂಗ್‌ಗಳನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ನೀಡುತ್ತದೆ. ಹೊಸ ಆಯುಧಗಳು ಮತ್ತು ವಾಹನಗಳಲ್ಲಿ ಫ್ಲೇರ್ ಗನ್, ಆಟೋಮೆಟಿಕ್ ರೈಫಲ್ ಆಗಿರುವ QBZ, ಮಸಲ್ ಕಾರು ಮತ್ತು ಬುಲೆಟ್ ಪ್ರೂಫ್ UAZ ಕಾರುಗಳನ್ನು ಒಳಗೊಂಡಿದೆ. ಮಸಲ್ ಕಾರು ಹಾರ್ಡ್-ಟಾಪ್ ಮತ್ತು ಪರಿವರ್ತಿಸುವ ಆಯ್ಕೆಯಿದೆ. ಆದರೆ, ಬುಲೆಟ್ ಪ್ರೂಫ್ UAZ ಕಾರನ್ನು ಫ್ಲೇರ್ ಗನ್ ಬಳಸಿ ಸ್ಫೋಟಿಸಬಹುದು.


Click it and Unblock the Notifications








