ಭಾರತಕ್ಕೆ ರೀ ಎಂಟ್ರಿ ನೀಡಿದ ಪಬ್‌ಜಿ ಗೇಮ್‌ನಲ್ಲಿ ಏನೆಲ್ಲಾ ಬದಲಾಗಿದೆ?

|

ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದ ಪಬ್‌ಜಿ ಗೇಮ್‌ ಕಳೆದ ವರ್ಷ ಬ್ಯಾನ್‌ ಆಗಿತ್ತು. ಸೆಪ್ಟೆಂಬರ್ 2020 ರಲ್ಲಿ ನಿಷೇಧಿಸಲ್ಪಟ್ಟ ನಂತರ ಇದೀಗ ಹೊಸ ಸ್ವರೂಪದಲ್ಲಿ ಬ್ಯಾಟಲ್ ಗ್ರೌಂಡ್‌ ಮೊಬೈಲ್‌ ಇಂಡಿಯಾ ಹೆಸರಿನಲ್ಲಿ ಭಾರತಕ್ಕೆ ರೀ ಎಂಟ್ರಿ ನೀಡಿದೆ. ಸದ್ಯ ಈ ಅಪ್ಲಿಕೇಶನ್ ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಬೀಟಾ ಪರೀಕ್ಷಕರಿಗೆ ಡೌನ್‌ಲೋಡ್‌ ಮಾಡಲು ಲಭ್ಯವಿದೆ. ಅಲ್ಲದೆ ಗೇಮ್‌ನಲ್ಲಿ ಕೂಡ ಬದಲಾವಣೆ ಮಾಡಲಾಗಿದ್ದು, ಗ್ರೀನ್‌ ಬ್ಲಡ್‌ ಮತ್ತು ನ್ಯೂ ಅಕೌಂಟ್‌ ಸಿಸ್ಟಂ ನಲ್ಲಿ ಹೊಸ ಬದಲಾವಣೆ ತರಲಾಗಿದೆ.

ಪಬ್‌ಜಿ ಗೇಮ್‌

ಹೌದು, ಪಬ್‌ಜಿ ಗೇಮ್‌ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಯುವಜನತೆಯ ನೆಚ್ಚಿನ ಗೇಮಿಂಗ್‌ ಅಪ್ಲಿಕೇಶನ್‌ ಆಗಿತ್ತು. ಆದರೆ ಪಬ್‌ಜಿ ಗೇಮ್‌ ಭಾರತ ದೇಶದ ಸಾರ್ವಭಮತೆಗೆ ದಕ್ಕೆ ತರುವ ಕೆಲಸದಲ್ಲಿ ತೊಡಗಿದೆ ಎಂದು ಕೇಂದ್ರ ಸರ್ಕಾರ ಈ ಗೇಮ್‌ ಅನ್ನು ಬ್ಯಾನ್‌ ಮಾಡಲಾಗಿತ್ತು. ಏಕೆಂದರೆ ಇದರ ಪ್ರಮುಖ ವಿಡಿಯೋ ಗೇಮ್ ಹೂಡಿಕೆದಾರ ಟೆನ್ಸೆಂಟ್ ಆಗಿತ್ತು. ಸದ್ಯ ಇದೀಗ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಹೊಸ ಮಾದರಿಯಲ್ಲಿ ರೀ ಎಂಟ್ರಿ ನೀಡಿದೆ. ಹಾಗಾದ್ರೆ ಬ್ಯಾಟಲ್‌ ಗ್ರೌಂಡ್‌ ಮೊಬೈಲ್‌ ಇಂಡಿಯಾದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪಬ್‌ಜಿ

ಪಬ್‌ಜಿ ಗೇಮ್‌ ಭಾರತಕ್ಕೆ ಬ್ಯಾಟಲ್‌ ಗ್ರೌಂಡ್‌ ರೂಪದಲ್ಲಿ ರೀ ಎಂಟ್ರಿ ನೀಡಿರೊದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಭಾರತೀಯ ಗೇಮರುಗಳಿಗಾಗಿ ಕಸ್ಟಮೈಸ್ ಮಾಡಿದ ಹೊಸ ಫೀಚರ್ಸ್‌ಗಳೊಂದಿಗೆ ಈ ಗೇಮ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಬ್ಲಡ್‌ ಕಲರ್‌ ಅನ್ನು ಬದಲಾವಣೆ ಮಾಡಲಾಗಿದೆ. ಬ್ಲಡ್‌ ಗೇಮ್‌ ಅನ್ನು ಹೊಸದಾಗಿ ರೂಪಿಸಲಾಗಿದೆ. ಆಟವನ್ನು ಸ್ಪಷ್ಟವಾಗಿ ರೂಪಿಸುವುದು ವರ್ಚುವಲ್ ಸಿಮ್ಯುಲೇಶನ್ ತರಬೇತಿ ಮೈದಾನವನ್ನು ಸಹ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಬ್ಯಾಟಲ್‌ಗ್ರೌಂಡ್‌

ಇನ್ನು ಗೇಮ್‌ನಲ್ಲಿ ಮಾಡಲಾಗಿರುವ ಹಲವು ಮಾರ್ಪಡಿಸಿದ ದೈಹಿಕ ದ್ರವಗಳನ್ನು ಮೀರಿ ಆಟಗಳಲ್ಲಿನ ಹಿಂಸಾಚಾರದ ಚಿತ್ರಣಗಳನ್ನು ಸೆನ್ಸಾರ್ ಮಾಡುವುದು ಹಾಗೆ ಉಳಿದುಕೊಂಡಿದೆ. ಇನ್ನು ಬ್ಯಾಟಲ್‌ಗ್ರೌಂಡ್‌ PUBG ಮೊಬೈಲ್‌ನಂತೆಯೇ ಇದೆ. ನಿಮ್ಮ ಖಾತೆಯನ್ನು ಹಳೆಯ ಆಟದಿಂದ ಹೊಸದಕ್ಕೆ ಸುಲಭವಾಗಿ ವರ್ಗಾಯಿಸುವ ಮಾರ್ಗವೂ ಇದೆ. ಈ ಹೊಸ ಗೇಮ್‌ನಲ್ಲಿ ಆಗಿರುವ ಬದಲಾವಣೆಗಳು ಮೆಲ್ನೋಟಕ್ಕೆ ಯಾರಿಗೂ ತಿಳಿಯುವುದೇ ಇಲ್ಲ. ಥೇಟ್‌ ಪಬ್‌ಜಿ ಗೇಮ್‌ ಮಾದರಿಯೇ ಎಂದೆನಿಸುತ್ತದೆ. ಆದರೆ ಗೇಮ್‌ನ ಒಳಗೆ ಇಳಿದಂತೆ ಹೊಸ ಹೊಸ ಬದಲಾವಣೆಗಳು ತಿಳಿಯಲಿದೆ.

ಪಬ್‌ಜಿ ಗೇಮ್‌

ಇದಲ್ಲದೆ ಪಬ್‌ಜಿ ಗೇಮ್‌ ಅನ್ನು ಭಾರತ ಸರ್ಕಾರ ಬ್ಯಾನ್‌ ಮಾಡಲು ಮುಖ್ಯ ಕಾರಣ ಬಳಕೆದಾರರ ಡೇಟಾವನ್ನು ಎಲ್ಲಿ ರವಾನಿಸಲಾಗುತ್ತದೆ ಎಂಬ ಕಳವಳ. ಇದೇ ಕಾರಣಕ್ಕೆ PUBG ಸ್ಟುಡಿಯೋ ಭಾರತದಲ್ಲಿ ಟೆನ್ಸೆಂಟ್‌ನೊಂದಿಗಿನ ಸಂಬಂಧವನ್ನು ಬೇರ್ಪಡಿಸುತ್ತಿದೆ. ಅಲ್ಲದೆ ಈ ಹೊಸ ಗೇಮ್‌ ಹೋಸ್ಟಿಂಗ್ ಅನ್ನು ದೇಶದ ಮೈಕ್ರೋಸಾಫ್ಟ್ ಅಜೂರ್ ಡೇಟಾ ಕೇಂದ್ರಗಳಿಗೆ ಸ್ಥಳಾಂತರಿಸುವುದಾಗಿ ಘೋಷಿಸಿದೆ. ಇದು ಗೇಮ್‌ ಪ್ರಿಯರಿಗೆ ಇನ್ನಷ್ಟು ಸಂತೋಷಕ್ಕೆ ಕಾರಣವಾಗಿದೆ.

Best Mobiles in India

English summary
PUBG Mobile returns to India after ban with green blood and a new name.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X