ಪಬ್‌ಜಿ ಗೇಮ್ ಪ್ರಿಯರಿಗೆ ಮತ್ತೊಂದು ಸಿಹಿಸುದ್ದಿ!

|

ಪಬ್‌ಜಿ ಪ್ರಿಯರಿಗೆ ಇದೀಗ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ವಿಶ್ವದ ಟಾಪ್​ ಮೊಬೈಲ್ ಗೇಮ್​ ಸ್ಥಾನ ಪಡೆದಿರುವ ಪಬ್​ಜಿ ಹೊಸ ಮ್ಯಾಪ್ ಅನ್ನು ಪರಿಚಯಿಸುವ ಮೂಲಕ ಬ್ಲೂ ಹೋಲ್ ಕಂಪೆನಿ ಆಟಗಾರರಲ್ಲಿ ಮತ್ತಷ್ಟು ಆಸಕ್ತಿ ಕೆರಳಿಸಿದೆ. ಈಗಾಗಲೇ ಮೂರು ಮ್ಯಾಪ್​ಗಳಲ್ಲಿ ಆಡಿರುವ ಗೇಮರ್‌ಗಳಿಗೆ ಹೊಸ ಮ್ಯಾಪ್ ಕೌತುಕದ ರಣರಂಗವನ್ನೇ ಸೃಷ್ಟಿಸಲು ತಯಾರಾಗಿದೆ.

ಹೌದು, ಈ ಮೊದಲಿದ್ದ ಇರಾಂಗಲ್ ,ಮಿರಾಮರ್ ಮತ್ತು ಶಾನ್ಹೊಕ್ ಅಧ್ಯಾಯಗಳೊಂದಿಗೆ ಇದೀಗ ನಾಲ್ಕನೇ ಮ್ಯಾಪ್​ ಪಬ್​ಜಿಗೆ ಅಪ್‌ಡೇಟ್ ಆಗಿದೆ. ವಿಕೆಂಡಿ ಸ್ನೋ​ ಹೆಸರಿನಲ್ಲಿ ಹೊಸ ಮ್ಯಾಪ್ ಅನ್ನು ಪರಿಚಯಿಸಲಾಗಿದ್ದು, ತನ್ನ ನೂತನ ವರ್ಷನ್ 0.10 .0 ಅಪ್​ಡೇಟ್​ ಮಾಡಿಕೊಳ್ಳುವ ಮೂಲಕ ವಿಕೆಂಡಿ ಸ್ನೋ​ ಮ್ಯಾಪ್​ನ್ನು ಪಡೆದುಕೊಳ್ಳಬಹುದು ಎಂದು ಕಂಪೆನಿ ತಿಳಿಸಿದೆ.

ಪಬ್‌ಜಿ ಗೇಮ್ ಪ್ರಿಯರಿಗೆ ಮತ್ತೊಂದು ಸಿಹಿಸುದ್ದಿ!

ಈ ಹೊಸತಾದ 4ನೇ ಅಧ್ಯಾಯವು 6x6 ಕಿ.ಮೀ ಸೈಜ್​ನಷ್ಟಿದ್ದು ಹಿಮಾವೃತವಾದ ಆರ್ಕಟಿಕ್ ಲ್ಯಾಂಡ್ಸ್ಕೇಪ್​ನಲ್ಲಿ ಆಟದ ಚಿತ್ರಣವನ್ನು ಹೊಂದಿದೆ. ಇದರ ವಿಶೇಷವೆಂದರೆ ಮ್ಯಾಪ್​ನಲ್ಲಿ ಜಿ36ಸಿ ರೈಫಲ್​ ಎಂಬ ಹೊಸ ಆಯ್ಕೆ ನೀಡಲಾಗಿದ್ದು, ಆ ಮೂಲಕ 3.56 ಎಮೊವನ್ನ ಬಳಸುವ ಅವಕಾಶ ಒದಗಿಸಿದೆ. ಮ್ಯಾಪ್ನಲ್ಲಿ​ ಮಂಜುಮುಸುಕಿದ ವಾತವರಣದ ಚಿತ್ರಣವನ್ನ ಕಲ್ಪಿಸಿಸಲಾಗಿದೆ.

ಶಾನ್ಹೋಕ್ 4x4 ಕಿ.ಮೀ ಗಾತ್ರವಿದ್ದರೆ ಇರಾಂಗಲ್ ಮತ್ತು ಮಿರಾಮಿರ್ 8x8 ಕಿ.ಮೀ ಗಾತ್ರವನ್ನು ಹೊಂದಿದೆ. ಈ ಕಾರಣದಿಂದ ಉಳಿದ ಮೂರು ಅಧ್ಯಾಯಗಳಿಗಿಂತ ಹೊಸ ಮ್ಯಾಪ್​ ಅನ್ನು ಭಿನ್ನವಾಗಿಸಿದೆ. ಹಾಗೆಯೇ ವಿಕೆಂಡಿ ಸ್ನೋ ಆಡುವ ಗೇಮ್​ ಪ್ರಿಯರು ಮಿರಾಮರ್ ಮತ್ತು ಶಾನ್ಹೊಕ್ ಗೇಮ್​ಗಳನ್ನು ಪುನಃ ಡೌನ್ಲೋಡ್ ಮಾಡುವ ಅಗತ್ಯತೆಗಳು ಬರಬಹುದು ಎನ್ನಲಾಗಿದೆ.

ಪಬ್‌ಜಿ ಗೇಮ್ ಪ್ರಿಯರಿಗೆ ಮತ್ತೊಂದು ಸಿಹಿಸುದ್ದಿ!

ಹೊಸ ಮ್ಯಾಪ್ ಅಧ್ಯಾಯವು 134 ಎಂ.ಬಿಯಷ್ಟಿದ್ದು, ಒಟ್ಟಾರೆ ಪಬ್​ಜಿಯ ಅಪ್​ಡೇಟ್​ 1.2 ಜಿ.ಬಿಯನ್ನು ಆವರಿಸಿಕೊಳ್ಳಲಿದೆ. ಈ ಹಿಂದಿದ್ದ ಇರಾಂಗಲ್ ,ಮಿರಾಮರ್ ಮತ್ತು ಶಾನ್ಹೊಕ್ ಅಧ್ಯಾಯಗಳೊಂದಿಗೆ ನಾಲ್ಕನೇ ಮ್ಯಾಪ್​ ಕೂಡ ಗೇಮರುಗಳ ಮನತಣಿಸಲಿದೆ ಎಂಬ ವಿಶ್ವಾಸವನ್ನು ಬ್ಲೂ ಹೋಲ್ ಕಂಪೆನಿ ವ್ಯಕ್ತಪಡಿಸಿದ್ದು, ಹೊಸ ಮ್ಯಾಪ್​ನಲ್ಲಿ ಆಕರ್ಷಕ ಆನಿಮೇಟೆಡ್​ಗಳನ್ನು ಬಳಸಲಾಗಿದೆ ಎಂದು ತಿಳಿಸಿದೆ.

Best Mobiles in India

English summary
PUBG Mobile Vikendi Snow Map Now Available For Android And iOS in India: Everything You Need To Now. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X