PUBGಯಲ್ಲಿ ಶುರುವಾದ ಪ್ರೀತಿ ಪಡೆಯಲು 4 ಮಕ್ಕಳ ಜೊತೆ ಭಾರತಕ್ಕೆ ಬಂದ ಪಾಕ್ ಮಹಿಳೆ!
PUBG ಗೇಮ್ ಯುವಜನರ ಹಾಟ್‍ಫೇವರಿಟ್ ಗೇಮ್ ಎನಿಸಿಕೊಂಡಿದೆ. ಆದರೆ ಈ ಗೇಮ್ ಮೂಲಕವೇ ಪ್ರೀತಿಯೊಂದು ಶುರುವಾಗಿ ಎರಡು ದೇಶಗಳ ನಡುವಿನ ಗಡಿ ದಾಟಿ ಬಂದಿದೆ. ಅದು ಕೂಡ ನಾಲ್ಕು ಮಕ್ಕಳ ಮಹಿಳೆ ಪಬ್‌ಜಿ ಯಲ್ಲಿ ಪರಿಚಯವಾದ ಪ್ರಿಯಕರಿನಿಗಾಗಿ ದೇಶ ದಾಟಿ ಬಂದಿರೋದು ಇದೀಗ ಎಲ್ಲೆಡೆ ಚರ್ಚೆಯಾಗುವಂತೆ ಮಾಡಿದೆ.
ಹೌದು, ಪಾಕಿಸ್ತಾನದ ಮಹಿಳೆಯೊಬ್ಬಳು ಪಬ್‌ಜಿ ಗೇಮ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಅರಸಿಕೊಂಡು ಭಾರತಕ್ಕೆ ಬಂದಿದ್ದಾಳೆ. ಅದು ಕೂಡ ತನ್ನ ನಾಲ್ಕು ಮಕ್ಕಳ ಜೊತೆ ಪ್ರಿಯಕರನನ್ನು ಅರಸುತ್ತಾ ಬಂದಿದ್ದಾಳೆ. ಕೇವಲ ಪಬ್‌ಜಿ ಗೇಮ್ ಪ್ರಿಯಕರಿನಿಗಾಗಿ ಇಷ್ಟೇಲ್ಲಾ ರಿಸ್ಕ್ ತೆಗೆದುಕೊಂಡಿರೋದು ಭಾರಿ ವೈರಲ್ ಆಗಿದೆ. ಅಷ್ಟಕ್ಕೂ ಆ ಮಹಿಳೆ ಭಾರತದ ಯಾವ ನಗರಕ್ಕೆ ಬಂದಿದ್ದಾಳೆ. ಏನಿದು ಈ ಆನ್‌ಲೈನ್ ಗೇಮ್ ಪ್ರಕರಣ ಇದೆಲ್ಲದರ ಕಂಪ್ಲೀಟ್ ಡಿಟೇಲ್ಸ್ ಅನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆನ್‌ಲೈನ್ ಗೇಮ್ ಪಬ್‌ಜಿ ಮೂಲಕ ಪರಿಚಯವಾದ ವ್ಯಕ್ತಿಗಾಗಿ ಪಾಕಿಸ್ತಾನದ ಮಹಿಳೆ ತನ್ನ ನಾಲ್ಕು ಮಕ್ಕಳ ಜೊತೆ ಭಾರತಕ್ಕೆ ಬಂದಿದ್ದಾಳೆ. ಅದು ಕೂಡ ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶವನ್ನು ಮಾಡಿದ್ದಾಳೆ. ಸದ್ಯ ಲಭ್ಯವಿರುವ ವರದಿಯ ಪ್ರಕಾರ ಪಾಕಿಸ್ತಾನ ಮೂಲಕ 27 ವರ್ಷದ ಮಹಿಳೆ ಸೀಮಾ ಭಾರತದ ಗ್ರೇಟರ್ ನೋಯ್ಡಾದ 22 ವರ್ಷದ ಯುವಕ ಸಚಿನ್‌ಗಾಗಿ ಭಾರತಕ್ಕೆ ಬಂದಿದ್ದಾಳೆ. ಅಷ್ಟೇ ಅಲ್ಲ ಭಾರತದಲ್ಲಿ ಇವರಿಬ್ಬರು ಕೂಡ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದರು ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.
ಪಾಕಿಸ್ತಾನದ ಮಹಿಳೆಗೆ ಪಬ್‌ಜಿ ಗೇಮ್ ಎಂದರೆ ಎಲ್ಲಿಲ್ಲದ ಪ್ರೀತಿ. ಪ್ರತಿನಿತ್ಯವೂ ಪಬ್‌ಜಿ ಗೇಮ್‌ನಲ್ಲಿ ಕಾಲ ಕಳೆಯುತ್ತಿದ್ದ ಆಕೆಗೆ ಭಾರತದ ಸಚಿನ್ ಪಬ್‌ಜಿ ಗೇಮ್ ಆಡುವಾಗ ಪರಿಚಯವಾಗಿದ್ದಾನೆ. ಪ್ರತಿನಿತ್ಯ ಆನ್‌ಲೈನ್‌ನಲ್ಲಿ ಪಬ್‌ಜಿ ಆಡುತ್ತಿದ್ದ ಇವರಿಬ್ಬರ ನಡುವೆ ಪ್ರೀತಿ ಚಿಗುರಿದೆ. ಕೊನೆಗೆ ಇಬವರಿಬ್ಬರು ಕೂಡ ಒಬ್ಬರನ್ನೊಬ್ಬರು ಬಿಟ್ಟು ಇರಲಾರೆವು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕಾಗಿ ಪಾಕಿಸ್ತಾನವನ್ನು ಬಿಟ್ಟು ಬರಲಿ ಸೀಮಾ ಮುಂದಾಗಿದ್ದಾಳೆ. ಇದಕ್ಕೆ ಅವರ ಪತಿ ಕೂಡ ಕೈ ಜೋಡಿಸಿದ್ದಾರೆ ಅನ್ನೊದು ಇಂಟ್ರೆಸ್ಟಿಂಗ್ ವಿಚಾರ.

ಪ್ರೀತಿಸಿದ ಹುಡುಗನಿಗಾಗಿ ದೇಶ ತೊರೆಯಲು ಮುಂದಾದ ಸೀಮಾ ಮೊದಲಿ ಕರಾಚಿಯಿಂದ ದುಬೈಗೆ, ನಂತರ ಅಲ್ಲಿಂದ ನೇಪಾಳಕ್ಕೆ ಬಂದು ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದಾಳೆ. ಅಕ್ರಮವಾಗಿ ಭಾರತ ಪ್ರವೇಶಿಸಿರುವ ಮಹಿಳೆ ಇಲ್ಲಿಯೇ ಸಚಿನ್ ಜೊತೆಗೆ ವಾಸ ಮಾಡುತ್ತಿದ್ದಳು ಎನ್ನಲಾಗಿದೆ. ಸದ್ಯ ಸ್ಥಳೀಯ ಪೊಲೀಸರ ಮಾಹಿತಿಯ ಪ್ರಕಾರ ಮಹಿಳೆಯು ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿರುವ ಬಾಡಿಗೆ ವಸತಿಗೃಹದಲ್ಲಿ ತನ್ನ ಮಕ್ಕಳೊಂದಿಗೆ ನೆಲೆಸಿದ್ದಳು ಎಂದು ಅಧಿಕಾರಿ ಹೇಳಿದ್ದಾರೆ.
ಇನ್ನು ನಿಮಗೆಲ್ಲಾ ತಿಳಿದಿರುವಂತೆ ಕ್ರಾಫ್ಟನ್ ಕಂಪೆನಿ ಅಭಿವೃದ್ದಿಪಡಿಸಿದ್ದ ಪಬ್‌ಜಿ ಗೇಮ್ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಅದರಲ್ಲೂ ಪ್ರಮುಖವಾಗಿ ಹೆಚ್ಚಿನ ಸಂಖ್ಯೆಯ ಯುವಜನತೆ ಪಬ್‌ಜಿ ಗೇಮ್‌ಗೆ ಅಡಿಕ್ಟ್ ಆಗಿದ್ದರು. ಆದರೆ 2020ರಲ್ಲಿ ಪಬ್‌ಜಿ ಗೇಮ್ ಅನ್ನು ಭಾರತದಲ್ಲಿ ಬ್ಯಾನ್ ಮಾಡಲಾಯ್ತು. ಆದರೆ ನಂತರದ ದಿನಗಳಲ್ಲಿ ಹೊಸ ರೂಪದಲ್ಲಿ ಪಬ್‌ಜಿ ಗೇಮ್‌ನ ಹೊಸ ರೂಪಾಂತರ ಭಾರತಕ್ಕೆ ಎಂಟ್ರಿ ನೀಡಿತ್ತು. ಇದು ಕೂಡ ಪಬ್‌ಜಿ ಗೇಮ್ ಪ್ರಿಯರನ್ನು ಸೆಳೆದಿದೆ. ಅಲ್ಲದೆ ಯುವಜನತೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಇದಕ್ಕೆ ಲೇಟೆಸ್ಟ್ ಉದಾಹರಣ ಎಂದರೆ ಪಾಕಿಸ್ತಾನದ ಮಹಿಳೆ ಭಾರತಕ್ಕೆ ಅಕ್ರಮವಾಗಿ ಎಂಟ್ರಿ ನೀಡಿರೋದು ಅಂತಾನೇ ಹೇಳಬಹುದು.
ಸದ್ಯ ಪಾಕಿಸ್ತಾನಿ ಮಹಿಳೆ ಸೀಮಾಳನ್ನು ತಾನು ಮದುವೆಯಾಗುವುದಾಗಿ ಭಾರತದ ಸಚಿನ್ ತನ್ನ ವಕೀಲರಿಗೆ ತಿಳಿಸಿರುವುದು ಬೆಳಕಿಗೆ ಬಂದಿದೆ. ಆದರೆ ನೋಯ್ಡಾ ಪೊಲೀಸರ ಬಂದನದಲ್ಲಿರುವ ಮಹಿಳೆಯನ್ನು ಪಾಕಿಸ್ತಾನಕ್ಕೆ ವಾಪಾಸ್ ಕಳಿಸಲಾಗುತ್ತದೆಯೆ ಇಲ್ಲವೇ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.


Click it and Unblock the Notifications








