Puma Smartwatch: ಭಾರತದಲ್ಲಿ ಪುಮಾ ಸ್ಮಾರ್ಟ್‌ವಾಚ್ ಬಿಡುಗಡೆ!
ಈಗಾಗ್ಲೆ ಟೆಕ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ವಾಚ್‌ಗಳು ತಮ್ಮ ಪ್ರಾಬಲ್ಯವನ್ನ ಸಾಧಿಸಿದ್ದು, ಸ್ಮಾರ್ಟ್‌ಫೋನ್‌ಗಳಂತೆಯೆ ತಮ್ಮ ಮಾರುಕಟ್ಟೆಯನ್ನ ಸಹ ವಿಸ್ತರಿಸಿಕೊಂಡಿವೆ. ವಿವಿಧ ಕಂಪೆನಿಗಳ ಸ್ಮಾರ್ಟ್‌ವಾಚ್‌ಗಳು ಲಭ್ಯವಿದ್ದರೂ ಬ್ರ್ಯಾಂಡ್ ಕಂಪೆನಿಗಳು ಆಕರ್ಷಕ ಫೀಚರ್ಸ್‌ಗಳ ಸ್ಮಾರ್ಟ್‌ವಾಚ್‌ಗಳನ್ನೇ ಗ್ರಾಹಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಇದೀಗ ಆಥ್ಲೆಟಿಕ್ ಹಾಗೂ ಕ್ಯಾಶ್ಯುಯಲ್ ಫೂಟ್‌ವೇರ್ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಪುಮಾ ಕಂಪೆನಿ ತನ್ನ ಮೊದಲ ಸ್ಮಾರ್ಟ್‌ವಾಚ್ ಅನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ.

ಹೌದು, ಜರ್ಮನಿ ಮೂಲದ ಜನಪ್ರಿಯ ಕಂಪೆನಿ ಪುಮಾ ಕಳೆದ ವರ್ಷ ತನ್ನ ಮೊದಲ ಸ್ಮಾರ್ಟ್‌ವಾಚ್ ಅನ್ನ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಈ ಮೂಲಕ ಸ್ಮಾರ್ಟ್‌ವಾಚ್ ಮಾಟುಕಟ್ಟೆ ಕ್ಷೇತ್ರದಲ್ಲೂ ತನ್ನ ಹೆಜ್ಜೆಯನ್ನ ಇರಿಸಿತ್ತು. ಫೊಸಿಲ್ ಕಂಪೆನಿ ಗ್ರೂಪ್‌ನ ಸಹಭಾಗಿತ್ವದೊಂದಿಗೆ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದ್ದ ಪುಮಾ ಕಂಪೆನಿ ಇದೀಗ ಭಾರತದ ಮಾರುಕಟ್ಟೆಯಲ್ಲಿ ತನ್ನ ಪುಮಾಸ್ಮಾರ್ಟ್‌ವಾಚ್ ಅನ್ನ ಪರಿಚಯಿಸಿದೆ.

ಪೂಮಾ ಕಂಪೆನಿಯು ಪೊಸಿಲ್ ಕಂಪೆನಿಯ ಸಹಭಾಗಿತ್ವದೊಂದಿಗೆ ತಯಾರಿಸಿದ ಪೂಮಾ ಸ್ಮಾರ್ಟ್‌ವಾಚ್ 390x390 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 1.19-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 3100 ಪ್ರೊಸೆಸರ್ ಹೊಂದಿದ್ದು, ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್ ವಾಚ್ 512MB RAM ಮತ್ತು 4GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನ ಒಳಗೊಂಡಿದೆ.

ಇನ್ನು ಈ ಸ್ಮಾರ್ಟ್‌ವಾಚ್ ಅಲ್ಯೂಮಿನಿಯಂ ಡಯಲ್ ಅನ್ನು ಹೊಂದಿದ್ದು, ಸಿಲಿಕೋನ್ ಪಟ್ಟಿಯಿಂದ ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ ಪೂಮಾ ಸ್ಮಾರ್ಟ್‌ವಾಚ್ ಗೂಗಲ್ ಫಿಟ್ ಮೂಲಕ ಪೈಲೇಟ್ಸ್, ರೋಯಿಂಗ್, ಸ್ಪಿನ್ನಿಂಗ್ ಮತ್ತು ವರ್ಕೌಟ್ ಟ್ರ್ಯಾಕಿಂಗ್ ಮಾಡುವ ವ್ಯವಸ್ಥೆಯನ್ನ ಒಳಗೊಂಡಿದೆ. ಇನ್ನ ವರ್ಕೌಟ್ ಮೋಡ್‌ನಲ್ಲಿ ಇದ್ದಾಗ ಇದು ಹಾರ್ಟ್‌ಬೀಟ್ ಸೆನ್ಸಾರ್ ಅನ್ನು ಮಾನಿಟರ್ ಮಾಡುತ್ತದೆ.

ಇದು ಗೂಗಲ್ ವೇರ್ ಒಎಸ್ ಡಿವೈಸ್ ಆಗಿರುವುದರಿಂದ ಇದರಲ್ಲಿ ಗೂಗಲ್ ಅಸಿಸ್ಟೆಂಟ್ ಅನ್ನು ನೀಡಲಾಗಿದೆ. ಇದರಿಂದ ನಿಮ್ಮ ಡಿವೈಸ್ ಅನ್ನ ನೀವು ನಿಂಯತ್ರಿಸಬಹುದಾಘಿದ್ದು,ಅಗತ್ಯ ಸಂದರ್ಭದಗಳಲ್ಲಿ ಗೂಗಲ್ ಅಸಿಸ್ಟೆಂಟ್ ಸಹಾಯವನ್ನ ನೀವು ಪಡೆಯಬಹುದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್ ವಾಟರ್ ಪ್ರೂಪ್ ವ್ಯವಸ್ಥೆಯನ್ನ ಹೊಂದಿದ್ದು, ನೀರಿನಾಳದಲ್ಲೂ ತನ್ನ ಕಾರ್ಯ ಚಟುವಟಿಕೆಯನ್ನ ಮಾಡಲಿದೆ. ಅಷ್ಟೇ ಅಲ್ಲ ಇದು ಗೂಗಲ್ ಪೇ ಮೂಲಕ NFC ಪಾವತಿಗಳನ್ನು ಸಹ ಮಾಡಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇನ್ನು ಪೂಮಾ ಸ್ಮಾರ್ಟ್‌ವಾಚ್‌ನ ಬ್ಯಾಟರಿ ಸಾಮರ್ಥ್ಯವು 1 ರಿಂದ 2 ದಿನಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್‌ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 4.2 ಮತ್ತು ಜಿಪಿಎಸ್ ಅನ್ನು ಬೆಂಬಲಿಸಲಿದೆ. ಸದ್ಯ ಭಾರತದಲ್ಲಿ ಇದರ ಬೆಲೆ ರೂ. 19,995 ರೂ.ಆಗಿದ್ದು. ಭಾರತದಲ್ಲಿರುವ ಪೂಮಾ ಅಂಗಡಿಗಳಲ್ಲಿ ಲಭ್ಯವಿರುತ್ತದೆ, ಅಲ್ಲದೆ ಆನ್‌ಲೈನ್‌ನಲ್ಲಿ ಖರೀದಿಸುವುದಾದರೆ ಫ್ಲಿಪ್‌ಕಾರ್ಟ್ ಮತ್ತು ಪೂಮಾ.ಕಾಂನಲ್ಲಿ ಲಭ್ಯವಿದೆ.


Click it and Unblock the Notifications








