ಗರ್ಲ್‌ಫ್ರೆಂಡ್ ನೋಡುವ ಹುಮ್ಮಸ್ಸಿನಲ್ಲಿ ಈತ ಕಳೆದುಕೊಂಡ ಹಣ ಎಷ್ಟು ಗೊತ್ತಾ?
ಆನ್‌ಲೈನ್ ಡೇಟಿಂಗ್‌ನಲ್ಲಿ ವಂಚನೆಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಆದರಲ್ಲೂ ಡೇಟಿಂಗ್ ಹೆಸರಿನಲ್ಲಿ ಗೆಳಯ/ಗೆಳತಿಯರಿಂದ ಹಣ ಪಡೆದುಕೊಂಡು ವಂಚನೆ ಮಾಡುವವರ ಸಂಖ್ಯೆ ಕೂಡ ಅಧಿಕವಾಗುತ್ತಿದೆ. ಇದೀಗ ಇಂತಹದ್ದೇ ಘಟನೆ ಪುಣೆಯಿಂದ ವರದಿಯಾಗಿದ್ದು, ಆನ್‌ಲೈನ್ ಗೆಳತಿಯಿಂದ ವ್ಯಕ್ತಿಯೊಬ್ಬ ವಂಚನೆಗೊಳಗಾದ ಘಟನೆ ನಡೆದಿದೆ.
ಹೌದು, ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ವ್ಯಕ್ತಿಯೊಬ್ಬರಿಗೆ ವಂಚಿಸಿದ ಘಟನೆ ಪುಣೆಯಲ್ಲಿ ನಡೆದಿದೆ. ಮದುವೆಯಾಗುವುದಾಗಿ ಭರವಸೆ ನೀಡಿದ ಮಹಿಳೆ 30 ವರ್ಷದ ವ್ಯಕ್ತಿಯೊಬ್ಬನಿಂದ 22 ಲಕ್ಷ ರೂಪಾಯಿ ವಂಚಿಸಿದ್ದಾಳೆ ಎನ್ನಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಬೆಂಗಳೂರು ಮೂಲದ ಯುವತಿಯೊಬ್ಬಳು ಟಿಂಡರ್ ಮ್ಯಾಚ್‌ನಿಂದ ಮೋಸ ಹೋದ ಘಟನೆ ಕೂಡ ವರದಿಯಾಗಿದೆ. ಹಾಗಾದ್ರೆ ಡೇಟಿಂಗ್ ಆ್ಯಪ್‌ನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುವುದಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆನ್‌ಲೈನ್ ಗೆಳತಿಯಿಂದ ವಂಚನೆಗೊಳಗಾದ ಪುಣೆ ವ್ಯಕ್ತಿ
ಪುಣೆ ಮೂಲದ ವ್ಯಕ್ತಿಯೊಬ್ಬ ಸೊಶೀಯಲ್ ಮೀಡಿಯಾದಲ್ಲಿ ಗಾಯತ್ರಿ ಎನ್ನುವ ಮಹಿಳೆಯನ್ನು ಪರಿಚಯಿಸಿಕೊಂಡಿದ್ದಾನೆ. ನಂತರ ಆ ಮಹಿಳೆಯ ಜೊತೆ ಚಾಟಿಂಗ್ ಶುರುಮಾಡಿದ್ದು, ಆ ಮಹಿಳೆಯು ಆತನಿಗೆ ಮದುವೆ ಆಗುವ ಭರವಸೆಯನ್ನು ನೀಡಿದ್ದಾಳೆ. ಇದರಿಂದ ಇನ್ನಷ್ಟು ಹತ್ತಿರವಾದ ವ್ಯಕ್ತಿಯು ಆಕೆಗೆ ಹಲವು ರೀತಿಯ ಆರ್ಥಿಕ ಸಹಾಯ ಮಾಡಿದ್ದಾನೆ. ಆ ಮಹಿಳೆಯು ಸಂತ್ರಸ್ಥ ವ್ಯಕ್ತಿಯಿಂದ 22ಲಕ್ಷ ರೂಪಾಯಿಗಳ ವರೆಗೆ ಹಣ ಪಡೆದು ಇದೀಗ ವಂಚಿಸಿದ್ದಾಳೆ.
ಸದ್ಯ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಯುವತಿ ಸೊಶೀಯಲ್ ಮೀಡಿಯಾದಲ್ಲಿ ಪರಿಚಯವಾದ ವ್ಯಕ್ತಿಗೆ ಮದುವೆಯಾಗುವ ಭರವಸೆ ನೀಡಿದ್ದಾಳೆ. ಅಲ್ಲದೆ ಇದನ್ನೇ ಬಂಡವಾಳ ಮಾಡಿಕೊಂಡ ಆತನಿಂದ ಹಣಕಾಸಿನ ಸಹಾಯ ಪಡೆದುಕೊಂಡಿದ್ದಾಲೆ. ನಂತರ ಆ ವ್ಯಕ್ತಿ ಹಣಕಾಸಿನ ಸಮಸ್ಯೆಗೆ ಒಳಗಾಗಿ ಹಣವನ್ನು ವಾಪಾಸು ಕೇಳಿದಾಗ ಆಕೆಯು ಹಣ ನೀಡದೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ. ಈ ಸಂಬಂಧ ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಯುವತಿಗೆ ಟಿಂಡರ್ ಮ್ಯಾಚ್ ನಿಂದ ಮೋಸ
ಪುಣೆಯಲ್ಲಿ ನಡೆದ ಘಟನೆ ಒಂದು ರೀತಿಯಾದರೆ ಬೆಂಗಳೂರಿನಲ್ಲಿ ನಡೆದಿರುವ ಘಟನೆ ಇದಕ್ಕಿಂತ ಭಿನ್ನವಾಗಿದೆ. ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ 37 ವರ್ಷದ ಮಹಿಳೆಯೊಬ್ಬರು ತಮ್ಮ ಟಿಂಡರ್ ಮ್ಯಾಚ್‌ನಿಂದ 4.5 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾಳೆ. ವಂಚಕನು ಮಹಿಳೆಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ, ಅಲ್ಲದೆ ತಾನು ಯುಕೆಯಲ್ಲಿ ವಾಸಿಸುತ್ತಿರುವುದಾಗಿಯೂ ನಿನ್ನನ್ನು ಬೇಟಿಯಾಗಲು ಭಾರತಕ್ಕೆ ಬರುವುದಾಗಿ ಹೇಳಿ ಮಹಿಳೆಯನ್ನು ಮೋಸ ಮಾಡಿದ್ದಾನೆ.

ಬಾಯ್‌ಫ್ರೆಂಡ್ ಅನ್ನು ನೋಡುವವ ಉತ್ಸಾಹದಲ್ಲಿ ಮಹಿಳೆ ಆತನ ಮಾತಿಗೆ ಮರುಳಾಗಿದ್ದಾಳೆ. ಅಲ್ಲದೆ ಆತ ಹೇಳಿದಂತೆ ಆತನಿಗೆ ಹಂತಹಂತವಾಗಿ 4.5 ಲಕ್ಷ ರೂ. ಹಣವನ್ನು ನೀಡಿದ್ದಾಳೆ. ನಂತರದ ದಿನಗಳಲ್ಲಿ ತಾನು ಮೋಸ ಹೋಗಿರುವುದು ಆಕೆಗೆ ಅರಿವಾಗಿದ್ದು, ಇದೀಗ ತನ್ನ ಹಣವನ್ನು ವಸೂಲಿ ಮಾಡಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾಳೆ.
ಆನ್‌ಲೈನ್ ಡೇಟಿಂಗ್ ಪ್ರಕರಣಗಳಲ್ಲಿ ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಹಲವು ರೀತಿಯ ಕಠಿಣ ಕ್ರಮಗಳನ್ನು ಆ್ಯಪ್‌ಗಳು ತೆಗೆದುಕೊಳ್ಳುತ್ತಿವೆ. ಆದರೂ ಕೂಡ ಡೇಟಿಂಗ್ ಆ್ಯಪ್‌ಗಳಲ್ಲಿ ತಮ್ಮ ನಿಜವಾದ ಗುರುತನ್ನ ಮರೆಮಾಚಿ ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಯಾವುದೇ ರೀತಿಯ ಕಡಿವಾಣ ಬಿದ್ದಿಲ್ಲ ಅನ್ನೋದು ವಿಪರ್ಯಾಸವೇ ಸರಿ. ಅದರಲ್ಲೂ ಡೇಟಿಂಗ್ ಆ್ಯಪ್‌ಗಳಲ್ಲಿ ಮೋಸ ಹೋಗುತ್ತಿರುವವರಲ್ಲಿ ಹೆಚ್ಚಿನವರು ವಿದ್ಯಾವಂತ ಯುವಜನತೆಯೆ ಹೆಚ್ಚು ಅನ್ನೋದು ಶಾಕಿಂಗ್ ಸಂಗತಿಯಾಗಿದೆ.

ಇದಲ್ಲದೆ ಸೊಶೀಯಲ್ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿಯು ಕೂಡ ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸೊಶೀಯಲ್ ಮೀಡಿಯಾದಲ್ಲಿ ಡೇಟಿಂಗ್ ಚಾಟಿಂಗ್ ಮಾಡುವ ಮುನ್ನ ಪ್ರೊಫೈಲ್‌ಗಳ ಪೂರ್ವಪರ ತಿಳಿದುಕೊಳ್ಳುವುದು ಸೂಕ್ತ. ಅಪರಿಚಿತ ಪ್ರೊಫೈಲ್‌ಗಳಿಂದ ಬರುವ ರಿಕ್ವೆಸ್ಟ್‌ಗಳನ್ನು ಇಗ್ನೋರ್ ಮಾಡುವುದು ಬೆಸ್ಟ್.


Click it and Unblock the Notifications








