Home
ಸುದ್ದಿಜಾಲ

ಆನ್‌ಲೈನ್ ವಂಚಕನ ಮಾತಿಗೆ ಮರುಳಾಗಿ 22.54 ಲಕ್ಷ ರೂ.ಕಳೆದುಕೊಂಡ ಮಹಿಳಾ ಟೆಕ್ಕಿ!!

By Bhaskar N J

ಆನ್‌ಲೈನ್ ವಂಚಕರಿಗೆ ಮೋಸ ಹೋಗುವವರು ಯಾರಾದರೇನು? ಅವರಿಗೆ ಕೇವಲ ಜನರನ್ನು ವಂಚಿಸಿ ಹಣವನ್ನು ಗಳಿಸುವುದಷ್ಟೆ ಕೆಲಸ. ಆದರೆ, ವಂಚಕರು ಇಲ್ಲಿ ಆನ್‌ಲೈನ್ ಪ್ರಪಂಚದ ಬಗ್ಗೆ ಏನನ್ನೂ ತಿಳಿಯದವರಿಗೆ ಒಂದು ರೀತಿಯಲ್ಲಿ ಮೋಸ ಮಾಡಿದರೆ, ಆನ್‌ಲೈನ್ ಪ್ರಪಂಚದ ಉದ್ದಗಲಗಳನ್ನು ತಿಳಿದುಕೊಂಡಿರುವವರಿಗೆ ಒಂದು ರೀತಿಯಲ್ಲಿ ಮೋಸ ಮಾಡುತ್ತಾರೆ.

ಇದಕ್ಕೆ ಇತ್ತೀಚಿನ ಒಂದು ಉದಾಹರಣೆ ಎಂದರೆ, ಆನ್‌ಲೈನ್ ಮ್ಯಾಟ್ರಿಮೊನಿಯಲ್ ಸೈಟ್‌ ಮೂಲಕ ಪರಿಚಯವಾಗಿದ ವಂಚಕ ಯುವಕನೋರ್ವ ಮಹಿಳಾ ಟೆಕ್ಕಿಯೋರ್ವರಿಗೆ ಲಕ್ಷಾಂತರ ಹಣವನ್ನು ವಂಚಿಸಿದ್ದಾನೆ. ನಯವಾದ ಮಾತುಗಳನ್ನೇ ಬಂಡವಾಳವಾಗಿಸಿಕೊಂಡು ಆಕೆಯಿಂದ 22.54 ಲಕ್ಷ ರೂ. ಲಪಟಾಯಿಸಿ ಪರಾರಿಯಾಗಿದ್ದಾನೆ ಎಂದರೆ ಎಲ್ಲರಿಗೂ ಆಶ್ಚರ್ಯವೇ ಸರಿ.

ಆನ್‌ಲೈನ್ ವಂಚಕನ ಮಾತಿಗೆ ಮರುಳಾಗಿ 22.54 ಲಕ್ಷ ರೂ.ಕಳೆದುಕೊಂಡ ಮಹಿಳಾ ಟೆಕ್ಕಿ!!

ಪುಣೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ರವೆತ್‌ ನಿವಾಸಿಯೋರ್ವ ಯುವತಿ ಇಂತಹ ಬಲೆಗೆ ಬಿದ್ದಿದ್ದಾರೆ. ಹಾಗಾದರೆ, ಮ್ಯಾಟ್ರಿಮೊನಿಯಲ್ ಸೈಟ್‌ ಮೂಲಕ ಪರಿಚಯವಾಗಿದ ವಂಚಕನು ಮಹಿಳಾ ಟೆಕ್ಕಿಗೆ ವಂಚಿಸಿದ್ದು ಹೇಗೆ? ನೀವೇಕೆ ಎಚ್ಚರದಿಂದ ಇರಬೇಕು ಎಂಬುದನ್ನು ಮುಂದೆ ತಿಳಿಯಿರಿ.

ವಂಚಕ ಬಲೆ ಬೀಸಿದ್ದು ಹೇಗೆ?

ವಂಚಕ ಬಲೆ ಬೀಸಿದ್ದು ಹೇಗೆ?

ರವೆತ್ ನಿವಾಸಿಯಾಗಿರುವ ಮೊಸಹೋದ ಟೆಕ್ಕಿ ಯುವತಿಯು ಮ್ಯಾಟ್ರಿಮೊನಿಯಲ್ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿದ್ದರು. ಇದನ್ನು ಗಮನಿಸಿದ್ದ ವಂಚಕ ಲಂಡನ್‌ನಲ್ಲಿ ವಾಸವಿರುವ ವೈದ್ಯ ಎಂದು ಪರಿಚಯಿಸಿಕೊಂಡು ಮದುವೆ ಪ್ರಸ್ತಾಪವಿಟ್ಟಿದ್ದ. ಯುವತಿಗೂ ಈ ಪ್ರಸ್ತಾಪ ಇಷ್ಟವಾದ ನಂತರ ಇವರೀರ್ವರ ಬಳಿ ಸ್ನೇಹ ಸಲುಗೆ ಬೆಳೆದಿತ್ತು.

ನಿಧಾನವಾಗಿ ಬಲೆ ಹೆಣೆದ!

ನಿಧಾನವಾಗಿ ಬಲೆ ಹೆಣೆದ!

ವೈದ್ಯ ಎಂದು ಪರಿಚಯಿಸಿಕೊಂಡು ಮದುವೆ ಪ್ರಸ್ತಾಪವಿಟ್ಟ ವಂಚಕನು ಒಮ್ಮೆಲೆ ಹಣವನ್ನು ವಂಚಿಸಲು ಮುಂದಾಗಲಿಲ್ಲ. ಬದಲಾಗಿ ಕೆಲವು ತಿಂಗಳುಗಳ ಕಾಲ ಆ ಯುವತಿಯ ಜೊತೆ ಸ್ನೇಹ ಸಲುಗೆಯಿಂದ ವರ್ತಿಸಿ ನಂಬಿಕೆ ಹುಟ್ಟುವಂತೆ ಮಾಡಿದ್ದ. ನಂತರ ಲಂಡನ್ ನಿಂದ ಭಾರತಕ್ಕೆ ಬರುವ ನಾಟಕವಾಡಿ ವಂಚನೆಯ ಬಲೆಯನ್ನು ನಿಧಾನವಾಗಿ ಎಳೆದ.

ಜುಲೈ 23ರಂದು ಭಾರತಕ್ಕೆ!

ಜುಲೈ 23ರಂದು ಭಾರತಕ್ಕೆ!

ಮದುವೆ ಬಗ್ಗೆ ಮಾತನಾಡಲು ಜುಲೈ 23ರಂದು ಭಾರತಕ್ಕೆ ಬರುತ್ತಿದ್ದೇನೆ ಎಂದು ಆರೋಪಿ ಟೆಕ್ಕಿಗೆ ತಿಳಿಸಿದ್ದ. ಅದೇ ದಿನ ಮುಂಬಯಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ ಎಂದು ಹೇಳಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ನಿಮ್ಮ ಪರಿಚಯಸ್ಥರು ಲಂಡನ್‌ನಿಂದ ಅಕ್ರಮವಾಗಿ 72,000 ಪೌಂಡ್ ತಂದಿದ್ದಾರೆ, ಅವರು ದಂಡ ಕಟ್ಟಿದರೆ ಮಾತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದ.

ಕರೆ ಮಾಡಿ ನಂಬಿಸಿದ ಭೂಪ!

ಕರೆ ಮಾಡಿ ನಂಬಿಸಿದ ಭೂಪ!

ಪ್ರೀತಿಯ ನಾಟಕವನ್ನಾಡಿದ್ದ ವಂಚಕನು ಮುಂಬಯಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನನ್ನನ್ನು ಬಂದಿಸಿದ್ದಾರೆ. ನನ್ನ ಬಳಿ ಅಕ್ರಮ ಹಣವಿರುವುದಾಗಿ ಅವರು ನನ್ನನ್ನು ಬಿಡುತ್ತಿಲ್ಲ. ಹಾಗಾಗಿ, ಹೊರ ಬರಲು ಹಣ ಬೇಕಿದೆ ಎಂದು ಆಕೆಗೆ ಕರೆ ಮಾಡಿ ಕೇಳಿಕೊಂಡಿದ್ದ. ಆತನ ಮಾತಿಗೆ ಮರುಳಾಗಿ ಟೆಕ್ಕಿ ಹಣವನ್ನು ಸಂದಾಯ ಮಾಡಲು ಒಪ್ಪಿದರು.

22.54 ಲಕ್ಷ ರೂ.ಹಣ ಪಾವತಿ!

22.54 ಲಕ್ಷ ರೂ.ಹಣ ಪಾವತಿ!

ಅದೇ ದಿನ ಸ್ವಲ್ಪ ಹೊತ್ತಿನ ಬಳಿಕ ಆರ್‌ಬಿಐ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿ ಹಣ ಪಾವತಿಸಬೇಕಾಗಿರುವ ಬ್ಯಾಂಕ್‌ ಖಾತೆ ನಂಬರ್‌ ಹೇಳಿದ್ದಾನೆ. ಅದರಂತೆ ಟೆಕ್ಕಿ ತನ್ನೆಲ್ಲ ಉಳಿತಾಯದ ಹಣದ ಜತೆಗೆ ಸ್ನೇಹಿತರಿಂದ ಹಣ ಪಡೆದು ಒಟ್ಟು 22.54 ಲಕ್ಷ ರೂ. ಹಣವನ್ನು ಆ ಖಾತೆಗೆ ಹಣ ತುಂಬಿದ್ದಾರೆ.

ಎಲ್ಲವೂ ವಂಚನೆ!

ಎಲ್ಲವೂ ವಂಚನೆ!

ಈ ಘಟನೆಯ ನಂತರ ಯುವತಿ ಮಾಡುವ ಕರೆಗಳಿಗೆ ಆತ ಪ್ರತಿಕ್ರಿಯಿಸುತ್ತಿರಲಿಲ್ಲ. ನಂತರ ಅನುಮಾನದಿಂದ ಮುಂಬಯಿ ವಿಮಾನ ನಿಲ್ದಾಣದ ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಮೋಸ ಹೋಗಿರುವುದು ಗೊತ್ತಾಗಿ, ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.

Best Mobiles in India

English summary
A 35-year-old techie fell for the lies of a sweet-talking conman, who cheated her out of more than Rs 20 lakh on the promise of marriage. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+