Home
ಸುದ್ದಿಜಾಲ

ಉದ್ಯೋಗ ಹುಡಕುವವರೇ ಇವರ ಟಾರ್ಗೆಟ್‌! ಸೊಶೀಯಲ್‌ ಮೀಡಿಯಾದಲ್ಲಿ ಹೊಸ ಸ್ಕ್ಯಾಮ್‌!

ಇತ್ತೀಚಿನ ದಿನಗಳಲ್ಲಿ ಸೊಶೀಯಲ್‌ ಮೀಡಿಯಾ ಮೂಲಕ ಪಾರ್ಟ್‌ ಟೈಂ ಜಾಬ್‌ ಆಫರ್‌ ನೀಡುವುದಾಗಿ ಹೇಳಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೆಚ್ಚುವರಿ ಆದಾಯಕ್ಕಾಗಿ ಪಾರ್ಟ್‌ ಟೈಂ ಜಾಬ್‌ ಸರ್ಚ್‌ ಮಾಡುವವರೇ ವಂಚಕರ ಗುರಿಯಾಗಿದ್ದು, ಸುಲಭವಾಗಿ ಯಾಮಾರಿಸುವ ಮೂಲಕ ಲಕ್ಷ ಲಕ್ಷ ಹಣವನ್ನು ದೋಚುತ್ತಿದ್ದಾರೆ.

ಹೌದು, ಪಾರ್ಟ್‌ ಟೈಂ ಜಾಬ್‌ ಜಾಹಿರಾತನ್ನು ನೀಡಿ ಜನರನ್ನು ಯಾಮಾರಿಸಿ ಹಣ ದೋಚುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಪುಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಸಂತ್ರಸ್ತರು ಪಾರ್ಟ್‌ ಟೈಂ ಜಾಬ್‌ಗಾಗಿ ಒಟ್ಟು 33ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ಹಾಗಾದ್ರೆ ವಂಚಕನ ಜಾಲದಲ್ಲಿ ಸಂತ್ರಸ್ತರು ಸಿಲುಕಿಕೊಂಡಿದ್ದು ಹೇಗೆ? ವಂಚಕನಿಂದ ಸಂತ್ರಸ್ತರು ಮೋಸ ಹೋಗಿದ್ದು ಹೇಗೆ ಇದೆಲ್ಲದರ ಬಗ್ಗೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಉದ್ಯೋಗ ಹುಡಕುವವರೇ ಇವರ ಟಾರ್ಗೆಟ್‌! ಸೊಶೀಯಲ್‌ ಮೀಡಿಯಾದಲ್ಲಿ ಹೊಸ ಸ್ಕ್ಯಾಮ್‌!

ಸೊಶೀಯಲ್‌ ಮೀಡಿಯಾದಲ್ಲಿ ಪಾರ್ಟ್‌ ಟೈಂ ಜಾಬ್‌ ಜಾಹಿರಾತು ಲಿಂಕ್‌ ಕ್ಲಿಕ್‌ ಮಾಡಿ 33 ಲಕ್ಷ ಹಣ ಹಳೆದುಕೊಂಡ ಘಟನೆ ಪುಣೆಯಲ್ಲಿ ನಡೆದಿದೆ. ಪುಣೆಯಲ್ಲಿ ಈ ರೀತಿಯ ಪ್ರಕರಣಗಳು ದಿನನಿತ್ಯವೂ ವರದಿಯಾಗುತ್ತಿದ್ದು, ಜಾಬ್‌ಗಾಗಿ ಸರ್ಚ್‌ ಮಾಡೋರಿಗೆ ಬಿಗ್‌ ಶಾಕ್‌ ಎದುರಾಗುತ್ತಿದೆ. ಸದ್ಯ ಪುಣೆಯಲ್ಲಿ ನಡೆದಿರುವ ಈ ಎರಡು ಪ್ರಕರಣಗಳಲ್ಲಿ ಮೊದಲನೆಯ ಪ್ರಕರಣ ಎಫ್‌ಸಿ ರಸ್ತೆಯ ಐ ಸ್ಪೆಷಲಿಸ್ಟ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಿಗೆ ಮಾರ್ಚ್ 28 ಮತ್ತು ಏಪ್ರಿಲ್ 22 ರ ನಡುವೆ 23.83 ಲಕ್ಷರೂ ವಂಚಿಸಲಾಗಿದೆ.

ಈ ಪ್ರಕರಣದಲ್ಲಿ ಮಹಿಳೆ ಹೆಚ್ಚುವರಿ ಆದಾಯಕ್ಕಾಗಿ ಪಾರ್ಟ್‌ ಟೈಂ ಜಾಬ್‌ ಮಾಡುವ ಉದ್ದೇಶವಿಟ್ಟುಕೊಂಡಿದ್ದಾರೆ. ಇದಕ್ಕಾಗಿ ಆನ್‌ಲೈನ್‌ನಲ್ಲಿ ಕೂಡ ಸರ್ಚ್‌ ಮಾಡಿದ್ದಾರೆ. ಇದೇ ಸಮಯದಲ್ಲಿ ಸ್ಕ್ಯಾಮರ್‌ಗಳು ಮಹಿಳೆಗೆ ಮೆಸೇಜಿಂಗ್‌ ಅಪ್ಲಿಕೇಶನ್‌ನಲ್ಲಿ ಸಂದೇಶ ಕಳುಹಿಸಿದ್ದಾರೆ. ಅಲ್ಲದೆ ಮಹಿಳೆಗೆ ನೀವು ಆನ್‌ಲೈನ್‌ನಲ್ಲಿ ನಾವು ನೀಡುವ ಟಾಸ್ಕ್‌ಗಳನ್ನು ಪೂರೈಸಿದರೆ ಹೆಚ್ಚಿನ ಆದಾಯ ಸಿಗಲಿದೆ ಎಂದು ಹೇಳಿದ್ದಾರೆ. ನೀವು ಯೂಟ್ಯೂಬ್‌ ವೀಡಿಯೊಗಳನ್ನು ಲೈಕ್‌ ಮಾಡಬೇಕು, ಹೆಚ್ಚು ಲೈಕ್‌ ಸಿಕ್ಕಷ್ಟು ನಿಮಗೆ ಹೆಚ್ಚೆಚ್ಚು ಹಣ ಸಿಗಲಿದೆ ಎಂದು ಹೇಳಿದ್ದಾರೆ.

ಉದ್ಯೋಗ ಹುಡಕುವವರೇ ಇವರ ಟಾರ್ಗೆಟ್‌! ಸೊಶೀಯಲ್‌ ಮೀಡಿಯಾದಲ್ಲಿ ಹೊಸ ಸ್ಕ್ಯಾಮ್‌!

ಮಹಿಳೆ ಕೆಲಸ ಮಾಡುವುದಕ್ಕೆ ಒಪ್ಪಿಕೊಂಡ ನಂತರ ಆಕೆಯಿಂದ ಕೆಲವು ಅರ್ಜಿಗಳನ್ನು ತುಂಬುವಂತೆ ಹೇಳಲಾಗಿದೆ. ನಂತರ ವೀಡಿಯೊ ಶೇರ್‌ ಪ್ಲಾಟ್‌ಫಾರ್ಮ್‌ ಮೂಲಕ ಕೆಲವು ವೀಡಿಯೊಗಳನ್ನು ಕಳುಹಿಸಿದ್ದಾರೆ. ಆದರೆ ಈ ವೀಡಿಯೊಗಳನ್ನು ಲೈಕ್‌ ಮಾಡುವ ಮುನ್ನ 10,275 ರೂ. ಹಣವನ್ನು ಡೆಪಾಸಿಟ್‌ ಮಾಡುವಂತೆ ಸೂಚಿಸಿದ್ದಾರೆ. ನಂತರ ಮಹಿಳೆಯ ಸಂಪೂರ್ಣ ವಿಶ್ವಾಸ ಗಳಿಸಿದ ವಂಚಕರು ಆಕೆಯನ್ನು ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದಕ್ಕೆ ಹೇಳಿದ್ದಾರೆ. ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಆದಾಯ ದೊರೆಯಲ್ಲಿದೆ ಎಂಬ ಆಸೆ ಹುಟ್ಟಿಸಿದ್ದಾರೆ.

ಇದನ್ನು ನಂಬಿದ ಸಂತ್ರಸ್ತ ಮಹಿಳೆ ಒಟ್ಟು 23.83 ಲಕ್ಷ ರೂ.ಗಳನ್ನು ಎರಡು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾಳೆ. ನಂತರ ತನ್ನ ಕ್ರಿಪ್ಟೋಕರೆನ್ಸಿ ಬಗ್ಗೆ ಮಾಹಿತಿ ಕೇಳಿದಾಗ ವಂಚಕರು ಇಲ್ಲ ಸಲ್ಲದ ಮಾಹಿತಿ ನೀಡಿದ್ದಾರೆ. ಇದರಿಂದ ಸಂತ್ರಸ್ತೆ ತನ್ನ ಕ್ರಿಪ್ಟೋಕರೆನ್ಸಿ ಹೂಡಿಕೆ ಹಿಂಪಡೆಯಲು ಮುಂದಾಗಿದ್ದಾಳೆ. ಆದರೆ ಆ ಹಣ ವಾಪಾಸ್‌ ನೀಡುವುದಕ್ಕೆ 30 ಲಕ್ಷ ರೂ.ನೀಡಬೇಕೆಂದು ಹೇಳಿದ್ದಾರೆ. ಆಗ ಸಂತ್ರಸ್ತ ಮಹಿಳೆಗೆ ತಾನು ಮೋಸ ಹೋಗಿರುವುದು ಅರಿವಾಗಿದೆ.

ಉದ್ಯೋಗ ಹುಡಕುವವರೇ ಇವರ ಟಾರ್ಗೆಟ್‌! ಸೊಶೀಯಲ್‌ ಮೀಡಿಯಾದಲ್ಲಿ ಹೊಸ ಸ್ಕ್ಯಾಮ್‌!

ಇನ್ನು ಎರಡನೇ ಪ್ರಕರಣದಲ್ಲಿ ಕೂಡ ವ್ಯಕ್ತಿಯೊಬ್ಬ ಪಾರ್ಟ್‌ ಟೈಂ ಜಾಬ್‌ಗಾಗಿಯೇ ಸುಮಾರು 9 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಈ ಪ್ರಕರಣ ಪುಣೆಯ ಥೆರ್‌ಗಾಂವ್‌ನಲ್ಲಿ ನಡೆದಿದ್ದು, 33 ವರ್ಷದ ಎಂಜಿನಿಯರ್‌ಗೆ ವಂಚಕರು ಪಂಗನಾಮ ಹಾಕಿದ್ದಾರೆ. ಇದು ಏಪ್ರಿಲ್ 14 ಮತ್ತು 20 ರ ನಡುವೆ ನಡೆದಿರುವ ಪ್ರಕರಣವಾಗಿದ್ದು, ಇಲ್ಲಿಯೂ ಕೂಡ ವಂಚಕರು 'ಲೈಕ್ ವಿಡಿಯೋ ಮತ್ತು ಗಳಿಸಿ' ಎಂದು ಹೇಳುವ ಮೂಲಕ ವಂಚಿಸಿದ್ದಾರೆ.

Best Mobiles in India

English summary
Pune woman loses 24 lakh after falling for the part-time-job scam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+