ಐಫೋನ್‌‌6 ದೊಡ್ಡ ಸ್ಕ್ರೀನ್‌,16 ಎಂಪಿ ಕ್ಯಾಮೆರಾದೊಂದಿಗೆ ಬರುತ್ತಂತೆ!

By Ashwath
|

ದೊಡ್ಡ ಸ್ಕ್ರೀನ್‌ ಫ್ಯಾಬ್ಲೆಟ್‌ಗಳ ಅಬ್ಬರದ ಮಧ್ಯೆ ಮಂಕಾದಂತಿದ್ದ ಆಪಲ್‌ ಈಗ ದೊಡ್ಡ ಸ್ಕ್ರೀನ್‌ ಹೊಂದಿರುವ ಫ್ಯಾಬ್ಲೆಟ್‌ ನಿರ್ಮಾಣಕ್ಕೆ ಮುಂದಾಗಿದೆ. ಈ ಸಂಬಂಧ ಅಪಲ್‌ ಐಫೋನ್‌ 6 ಕೆಲವು ಚಿತ್ರಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.

ಆಪಲ್‌ ಕಳೆದ ವರ್ಷ ಬಿಡುಗಡೆ ಮಾಡಿದ ದುಬಾರಿ ಬೆಲೆಯ ಐಫೋನ್‌ 5 ಎಸ್‌ 4 ಇಂಚಿನ ಸ್ಕ್ರೀನ್‌ ಹೊಂದಿತ್ತು. ಆದರೆ ಮುಂದೆ ಬಿಡುಗಡೆಯಾಗಲಿರುವ ಐಫೋನ್‌ 5 ಇಂಚಿನ ಸ್ಕ್ರೀನಲ್ಲಿ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ 16 ಎಂಪಿ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ ಎನ್ನುವ ವದಂತಿ ಸಹ ಹರಿದಾಡಲಾರಂಭಿಸಿದೆ.

ಐಫೋನ್‌ 6ಗೆ ಸಂಬಂಧಿಸಿದಂತೆ ಈ ರೀತಿಯ ವದಂತಿಯ ಸುದ್ದಿ ಬರುವುದು ಇದು ಮೊದಲಲ್ಲ. ಐಫೋನ್‌ 5ಎಸ್‌ ಬಿಡುಗಡೆಯಾಗುವುದಕ್ಕಿಂತ ಮೊದಲೇ ಐಫೋನ್‌ 6ಗೆ ಸಂಬಂಧಿಸಿದ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದವು. ಹೀಗಾಗಿ ಇಲ್ಲಿ ಈ ಹಿಂದೆ ಈ ಫೋನ್‌ಗೆ ವಿಶೇಷತೆಗೆ ಸಂಬಂಧಿಸಿದ ಉಳಿದ ವದಂತಿ ಸುದ್ದಿಗಳನ್ನು ಇಲ್ಲಿ ನೀಡಲಾಗಿದೆ.

1

1


ಐಫೋನ್‌6ನ್ನು ಉನ್ನತ ಗುಣಮಟ್ಟದ ತಂತ್ರಜ್ಞಾನದಿಂದ ತಯಾರಿಸಲು ಆಪಲ್‌ ಮುಂದಾಗುತ್ತಿದ್ದು ಅದಕ್ಕಾಗಿ ಐಫೋನ್‌ಗೆ ದುಬಾರಿ ಬೆಲೆಯ ಸಪ್‌ಹೈರ್‌(Sapphire) ಗ್ಲಾಸ್‌ ಅಳವಡಿಸಲು ಮುಂದಾಗಲಿದೆ. ಈಗ ಸ್ಮಾರ್ಟ್‌ಫೋನಲ್ಲಿ ಬಳಕೆಯಾಗಲಿರುವ ಕಾರ್ನಿಂಗ್ ಗೊರಿಲ್ಲ ಗ್ಲಾಸ್‌‌ಗಿಂತಲೂ ಮೂರು ಪಟ್ಟು ಗಟ್ಟಿ ಮತ್ತು ಗೀರು(ಸ್ಕ್ರಾಚ್) ನಿರೋಧಕ ಶಕ್ತಿ ಈ ಗ್ಲಾಸ್‌‌ನಲ್ಲಿ ಹೆಚ್ಚು ಇರುತ್ತದೆ. ಉದಾ:ಒಂದು ಗೊರಿಲ್ಲ ಗ್ಲಾಸ್‌ಗೆ 150 ರೂಪಾಯಿ ಆದರೆ, ಆದೇ ಗಾತ್ರದ ಸಪ್‌ಹೈರ್‌ ಗ್ಲಾಸ್‌ 1500 ರೂಪಾಯಿ ಆಗಲಿದೆ. ಹೀಗಾಗಿ ಐಫೋನ್‌6 ಬೆಲೆ ಮತ್ತಷ್ಟು ದುಬಾರಿಯಾಗಲಿದೆ.

2

2


ಐಫೋನ್‌ 5ಎಸ್‌ನ್ನು ಮೂರು ಆಂತರಿಕ ಮೆಮೊರಿಯಲ್ಲಿ(16/32/64ಜಿಬಿ) ಬಿಡುಗಡೆ ಮಾಡಿತ್ತು. ಆದರೆ ಹೊಸದಾಗಿ ಬರಲಿರುವ ಐಫೋನ್‌‌ 6ನ್ನು 128ಜಿಬಿ ಯಲ್ಲಿ ಆಪಲ್‌ ಬಿಡುಗಡೆ ಮಾಡಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

3

3


ಈಗಾಗಲೇ ಐಫೋನ್‌ 5 ಎಸ್‌ನಲ್ಲಿ8 ಎಂಪಿ ಕ್ಯಾಮೆರಾ ನೀಡಲಾಗಿದೆ. ಮುಂದಿನ ಐಫೋನ್‌‌ 6ನಲ್ಲಿ 13 ಎಂಪಿ ಕ್ಯಾಮೆರಾದ ಜೊತೆಗೆ ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋ ಕ್ಲಿಕ್ಕಿಸಲು ಮತ್ತಷ್ಟು ಸೆನ್ಸರ್‌ಗಳನ್ನು ಸೇರಿಸಲು ಆಪಲ್‌ ಮುಂದಾಗುತ್ತಿದೆ.

  ಸೋಲಾರ್‌ ಚಾರ್ಜಿಂಗ್‌ ಟಚ್‌ಸ್ಕ್ರೀನ್‌

ಸೋಲಾರ್‌ ಚಾರ್ಜಿಂಗ್‌ ಟಚ್‌ಸ್ಕ್ರೀನ್‌


ಆಪಲ್‌ನ ಐಫೋನ್‌ 6 ಸೋಲಾರ್‌ ಚಾರ್ಜಿಂಗ್‌‌ ಟಚ್‌ಸ್ಕ್ರೀನ್‌ ವಿಶೇಷತೆಯೊಂದಿಗೆ ಬರಲಿದೆಯಂತೆ. ಇದೇ ಫೆಬ್ರವರಿಯಲ್ಲಿ ಸೋಲಾರ್‌ ಚಾರ್ಜಿಂಗ್‌ ಟಚ್‌ಸ್ಕ್ರೀನ್‌ಗೆ ಸಂಬಂಧಿಸಿದಂತೆ ಪೆಟೆಂಟ್‌(ಹಕ್ಕು ಸ್ವಾಮ್ಯ)‌ ಪಡೆಯಲು ಆಪಲ್‌ ಅರ್ಜಿ ದಾಖಲಿಸಿದೆ. ಹೀಗಾಗಿ ಆಪಲ್‌ನ ಸೋಲಾರ್‌ ಟಚ್‌ಸ್ಕ್ರೀನ್‌ ಈ ವದಂತಿಗೆ ಈ ಸುದ್ದಿ ಮತ್ತಷ್ಟು ಪುಷ್ಠಿ ನೀಡಿದ್ದು ಆಪಲ್‌ ಈ ಟಚ್‌ಸ್ಕ್ರೀನ್‌ ತಯಾರಿಸಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X