PVR ಐನಾಕ್ಸ್ ಸಿನಿಮಾಸ್ ನಿಂದ ಗುಡ್‌ನ್ಯೂಸ್!..ಈ ಸೇವೆಯಲ್ಲಿ 40% ಕಡಿತ!
ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ವೀಕ್ಷಿಸುವವರಿಗೆ ಜನಪ್ರಿಯ ಮಲ್ಟಿಪ್ಲೆಕ್ಸ್ ಸರಣಿ PVR ಐನಾಕ್ಸ್ ಗುಡ್‌ನ್ಯೂಸ್ ನೀಡಿದೆ. ಸಿನಿಮಾ ಪ್ರಿಯರಿಗಾಗಿ PVR ಐನಾಕ್ಸ್ನಲ್ಲಿ ಫುಡ್ ಮತ್ತು ಕೂಲ್ ಡ್ರಿಂಕ್ಸ್‌ಗಳ ಬೆಲೆಯನ್ನು 40% ವರೆಗೆ ಕಡಿತಗೊಳಿಸಿದೆ. ಇದು ಸೋಮವಾರದಿಂದ ಗುರುವಾರದವರೆಗೆ ಬೆಳಿಗ್ಗೆ 9 ರಿಂದ ಸಂಜೆ 6 ರ ನಡುವೆ ಇರಲಿದೆ ಎಂದು ಹೇಳಲಾಗಿದೆ.
ಹೌದು, PVR ಐನಾಕ್ಸ್ ಸಿನಿಮಾ ಹಾಲ್‌ಗಳಲ್ಲಿ ಫುಡ್ ಆಂಡ್ ಕೂಲ್ ಡ್ರಿಂಕ್ಸ್ ಬೆಲೆಯನ್ನು ಕಡಿಮೆ ಮಾಡಿದೆ. ಅದರಲ್ಲೂ ವಿಕೆಂಡ್ ಟೈಂನಲ್ಲಿನ ಅನ್‌ಲಿಮಿಟೆಡ್ ರಿಫಿಲ್ ಮತ್ತು ಬಾಟಮ್‌ಲೆಸ್ ಪೆಪ್ಸಿ ಜೊತೆಗೆ ಬಾಟಮ್‌ಲೆಸ್ ಪಾಪ್‌ಕಾರ್ನ್ ಅನ್ನು ನೀಡುವುದಾಗಿ PVR ಐನಾಕ್ಸ್ ಹೇಳಿದೆ. ಹಾಗಾದ್ರೆ PVR ಐನಾಕ್ಸ್ನ ಈ ಹೊಸ ನಿರ್ಧಾರಕ್ಕೆ ಕಾರಣಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಾಲ್‌ಗಳಲ್ಲಿ ಸಿನಿಮಾ ವೀಕ್ಷಣೆಗೆ ಹೋದಾಗ ಪಾಪ್‌ಕಾರ್ನ್ ಖರೀದಿಸಬೇಕೆಂದುಕೊಂಡವರಿಗೆ ಇದು ಖಂಡಿತ ಗುಡ್‌ನ್ಯೂಸ್. ಯಾಕಂದ್ರೆ ಭಾರಿ ಹಣ ಕೊಟ್ಟ ಪಾಪ್‌ಕಾರ್ನ್ ಖರೀದಿಸುತ್ತಿದ್ದ ಸಿನಿ ಪ್ರಯರಿಗೆ ಇದೀಗ 40% ಡಿಸ್ಕೌಂಟ್ ಸಿಗಲಿದೆ. ಅಂದರೆ ಫುಡ್ ಆಂಡ್ ಡ್ರಿಂಕ್ಸ್ ಬೆಲೆಯಲ್ಲಿ 40% ಕಡಿತಗೊಳಿಸಲಾಗಿದೆ. ಇದರೊಂದಿಗೆ ಬಾಟಮ್‌ಲೆಸ್ ಪಾಪ್‌ಕಾರ್ನ್ ಮತ್ತು ಬಾಟಮ್‌ಲೆಸ್ ಪೆಪ್ಸಿ ಅನ್ನು ಪಡೆದುಕೊಳ್ಳುವುದಕ್ಕೆ ಸಾದ್ಯವಾಗಲಿದೆ.
ವಿಕೆಂಡ್ ಟೈಂನಲ್ಲಿ ಅನ್‌ಲಿಮಿಟೆಡ್ ಟಬ್ ರೀಫಿಲ್‌ಗಳನ್ನು ಒಳಗೊಂಡ ಬಾಟಂಲೆಸ್ ಪಾಪ್‌ಕಾರ್ನ್ ಕ್ಲೈಮ್ ಮಾಡುವುದಕ್ಕೆ ಅವಕಾಶ ನೀಡಿದೆ. ಜೊತೆಗೆ ಆಕರ್ಷಕ ಬೆಲೆಯ ಫ್ಯಾಮಿಲಿ ಮೀಲ್ ಕಾಂಬೊಸ್, ಆಹಾರ ಮತ್ತು ಪಾನೀಯಗಳ ವೆಚ್ಚವನ್ನು 40% ರಷ್ಟು ಕಡಿಮೆ ಮಾಡುವುದಾಗಿ PVR ಐನಾಕ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅದರ "ಬೆಸ್ಟ್ ಸೆಲ್ಲರ್ @99" ಆಫರ್ ವಿವರಗಳ ಪ್ರಕಾರ, ಆಫರ್ ಗ್ರೂಪ್ ಬುಕಿಂಗ್ ಅಥವಾ ಸ್ಪೆಷಲ್ ಶೋಗಳಿಗೆ ಅನ್ವಯಿಸುವುದಿಲ್ಲ. ಇದನ್ನು ಆಫ್‌ಲೈನ್‌ನಲ್ಲಿ ಮಾತ್ರ ಖರೀದಿಸಬಹುದಾಗಿದೆ.
ಈ ಹಿಂದೆ, ಪಿವಿಆರ್ ಐನಾಕ್ಸ್‌ನಲ್ಲಿ ಟಬ್ ಚೀಸ್ ಪಾಪ್‌ಕಾರ್ನ್ 450 ರೂ. ಬೆಲೆಯನ್ನು ಹೊಂದಿತ್ತು. ಅಲ್ಲದೆ 55gm ಚೀಸ್ ಪಾಪ್‌ಕಾರ್ನ್‌ಗೆ 460ರೂ, 600ml ಪೆಪ್ಸಿಗೆ 360ರೂ. ಬೆಲೆ ಹೊಂದಿತ್ತು. ಇದರ ಬಗ್ಗೆ ಸೊಶೀಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದರ ವಿರುದ್ದ ಸೊಶೀಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗ್ತಿದ್ದ ಹಾಗೇ ಪಿವಿಆರ್ ಐನಾಕ್ಸ್ ಸಾಕಷ್ಟು ಹಿನ್ನಡೆಯನ್ನು ಕೂಡ ಅನುಭವಿಸಿತ್ತು. ಇದರ ಪರಿಣಾಮವಾಗಿ ಇದೀಗ ಆಹಾರ ಮತ್ತು ತಂಪು ಪಾನಿಯಗಳ ಬೆಲೆಯಲ್ಲಿ 40% ಕಡಿತಗೊಳಿಸಿರುವುದಾಗಿ ಹೇಳಿದೆ.
ಇನ್ನು ಟ್ವಿಟರ್‌ನಲ್ಲಿ ಪಿವಿಆರ್ ಐನಾಕ್ಸ್‌ನಲ್ಲಿ ತಿಂಡಿ ತಿನಿಸುಗಳ ಬೆಲೆಯ ಬಗ್ಗೆ ಟ್ವೀಟ್‌ಗೆ 10 ದಿನಗಳ ನಂತರ ಉತ್ತರಿಸಿರುವ ಪಿವಿಆರ್, ಪಿವಿಆರ್‌ನಲ್ಲಿ ನಾವು ಪ್ರತಿ ಅಭಿಪ್ರಾಯವೂ ಮುಖ್ಯವಾಗಿದೆ ಮತ್ತು ಅದನ್ನು ಗೌರವಿಸಬೇಕು ಎಂದು ನಾವು ನಂಬುತ್ತೇವೆ. ನಿಮಗಾಗಿ ಮತ್ತು ಭಾರತದ ಪ್ರತಿಯೊಬ್ಬ ಚಲನಚಿತ್ರ ಪ್ರೇಕ್ಷಕರಿಗಾಗಿ ನಾವು ಈ ಅಪ್ಡೇಟ್ ಮಾಡಿದ್ದೇವೆ ಎಂದು ಹೇಳಿಕೊಂಡಿದೆ. ಜೊತೆಗೆ ಚಲನಚಿತ್ರ ಪ್ರೇಕ್ಷಕರಿಗೆ ಮನವಿ ಮಾಡುವ ಮತ್ತು ಅವರ ಕಾಳಜಿಯನ್ನು ಪರಿಹರಿಸುವ ಕ್ರಮ ಕೈಗೊಂಡಿರುವುದಾಗಿ ಹೇಳಿದೆ.
ಇನ್ನು ಈ ವಾರದ ಆರಂಭದಲ್ಲಿ, ಸರ್ಕಾರವು ಸರಕು ಮತ್ತು ಸೇವಾ ತೆರಿಗೆ ದರಗಳನ್ನು ಕಡಿಮೆಗೊಳಿಸಿದೆ. ಅಲ್ಲದೆ ಚಿತ್ರಮಂದಿರಗಳಲ್ಲಿ F&B ಮೇಲಿನ ಸೇವಾ ತೆರಿಗೆಯನ್ನು 18% ರಿಂದ 5% ಕ್ಕೆ ಇಳಿಸಿತು. ಇದಕ್ಕೆ ಸ್ಪಷ್ಟನೆ ನೀಡಿರುವ ಪಿವಿಆರ್ ಐನಾಕ್ಸ್ ಈಗಾಗಲೇ ಚಿತ್ರಮಂದಿರಗಳಲ್ಲಿ ಮಾರಾಟವಾಗುವ ಎಲ್ಲಾ ಎಫ್ & ಬಿ ವಸ್ತುಗಳ ಮೇಲೆ 5% ರಷ್ಟು ಜಿಎಸ್‌ಟಿ ವಿಧಿಸುತ್ತಿದೆ ಎಂದು ಹೇಳಿಕೊಂಡಿದೆ.


Click it and Unblock the Notifications








