'ಪೇಟಿಎಂ ಕ್ಯೂಆರ್' ಆಯ್ಕೆಯನ್ನು ನೀಡಿದೆ ಪೇಟಿಎಂ!!..ಏನೆಲ್ಲಾ ಲಾಭ ಗೊತ್ತಾ?

ಶುಲ್ಕರಹಿತವಾಗಿ ಗ್ರಾಹಕರಿಂದ ಹಣ ಸ್ವೀಕರಿಸುವ ಹಾಗೂ ಇಂಟರ್‌ನೆಟ್ ಸಂಪರ್ಕ ಇಲ್ಲದೇ ಗ್ರಾಹಕರಿಂದ ಹಣ ಪಡೆಯಲು ವರ್ತಕರಿಗೆ ಪೇಟಿಎಂ ಕ್ಯೂಆರ್ ಆಯ್ಕೆಯನ್ನು ನೀಡಲು ಪೇಟಿಎಂ ಮುಂದಾಗಿದೆ.

|

ಶುಲ್ಕರಹಿತವಾಗಿ ಗ್ರಾಹಕರಿಂದ ಹಣ ಸ್ವೀಕರಿಸುವ ಹಾಗೂ ಇಂಟರ್‌ನೆಟ್ ಸಂಪರ್ಕ ಇಲ್ಲದೇ ಗ್ರಾಹಕರಿಂದ ಹಣ ಪಡೆಯಲು ವರ್ತಕರಿಗೆ ಪೇಟಿಎಂ ಕ್ಯೂಆರ್ ಆಯ್ಕೆಯನ್ನು ನೀಡಲು ಪೇಟಿಎಂ ಮುಂದಾಗಿದೆ.! ಮೊಬೈಲ್‌ ಮೂಲಕ ಹಣಕಾಸು ಸೇವೆಗಳನ್ನು ಒದಗಿಸುತ್ತಿರುವ ಪೇಟಿಎಂ ಚಿಲ್ಲರೆ ವರ್ತಕರ ಬೆನ್ನಿಗೆ ನಿಂತಿದೆ.!!

ಮೊಬೈಲ್‌ ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ಗ್ರಾಹಕರು ಮತ್ತು ವರ್ತಕರಿಗೆ ಈ ಆಯ್ಕೆಯನ್ನು ಪೇಟಿಎಂ ಕಲ್ಪಿಸುತ್ತಿದ್ದು, ವರ್ತಕರಿಗೆ ವರ್ಗಾವಣೆ ಶುಲ್ಕ ಇಲ್ಲದೇ ಇರುವುದರಿಂದ ಅವರು ಗ್ರಾಹಕರಿಗೂ ಶುಲ್ಕ ವಿಧಿಸುವುದಿಲ್ಲ ಎಂದು ಪೇಟಿಎಂ ವಕ್ತಾರರು ಹೇಳಿದ್ದಾರೆ.!! ಹಾಗಾದರೆ, ಏನಿದು ಪೇಟಿಎಂ ಕ್ಯೂಆರ್ ಆಯ್ಕೆ? ಇದರಿಂದ ಗ್ರಾಹಕರಿಗೆ ಆಗುವ ಲಾಭಗಳೇನು ಎಂಬುದನ್ನು ಮುಂದೆ ತಿಳಿಯಿರಿ.!!

ಪೇಟಿಎಂ ಕ್ಯೂಆರ್!!

ಪೇಟಿಎಂ ಕ್ಯೂಆರ್!!

ಮೊದಲೇ ಹೇಳಿದಂತೆ ಶುಲ್ಕರಹಿತವಾಗಿ ಗ್ರಾಹಕರಿಂದ ಹಣ ಸ್ವೀಕರಿಸುವ ಹಾಗೂ ಅಂತರ್ಜಾಲದ ಸಂಪರ್ಕ ಇಲ್ಲದೇ ಗ್ರಾಹಕರಿಂದ ಹಣ ಪಡೆಯಲು ವರ್ತಕರಿಗೆ ಮತ್ತು ಗ್ರಾಹಕರಿಗೆ ಸಹಾಯವಾಗುವ ಆಯ್ಕೆ ಈ ಪೇಟಿಎಂ ಕ್ಯೂಆರ್.!! ಈ ಆಯ್ಕೆಯಿಂದ ಪೇಟಿಎಂ ಮೊಬೈಲ್‌ ಪಾವತಿ ವ್ಯವಸ್ಥೆ ಮತ್ತಷ್ಟು ಸರಳವಾಗಲಿದೆ.!!

ಪೇಟಿಎಂ ಕ್ಯೂಆರ್ ಕಾರ್ಯನಿರ್ವಹಣೆ?

ಪೇಟಿಎಂ ಕ್ಯೂಆರ್ ಕಾರ್ಯನಿರ್ವಹಣೆ?

ಗ್ರಾಹಕರು ತಾವು ಖರೀದಿಸುವ ವಸ್ತುಗಳಿಗೆ ಕ್ಯೂಆರ್‌ಕೋಡ್‌ ಸ್ಕ್ಯಾನ್‌ ಮಾಡಿ, ಪೇಟಿಎಂ, ಕಾರ್ಡ್‌, ನೆಟ್‌ ಬ್ಯಾಂಕಿಂಗ್‌ ಮತ್ತು ಯುಪಿಐ ಹೀಗೆ ಯಾವುದೇ ಪಾವತಿ ಆಯ್ಕೆಗಳ ಮೂಲಕವಾದರೂ ಹಣ ಪಾವತಿಸಬಹುದು. ಗ್ರಾಹಕರು ಪಾವತಿಸಿದ ಮೊತ್ತ ಶುಲ್ಕರಹಿತವಾಗಿರುತ್ತದೆ.!!

TEZ App : ಗೂಗಲ್ ಭಾರತೀಯರಿಗಾಗಿ ಗೂಗಲ್‌ನಿಂದ Tez ಪೇಮೆಂಟ್ ಆಪ್
ವರ್ತಕರಿಗೆ ಏನು ಲಾಭ?

ವರ್ತಕರಿಗೆ ಏನು ಲಾಭ?

ಕ್ಯೂಆರ್ ಕೋಡ್‌ ಮೂಲಕ ವರ್ತಕರು ಪಡೆಯುವ ಹಣಕ್ಕೆ ಯಾವುದೇ ಮಿತಿ ಇರುವುದಿಲ್ಲ. ಆದರೆ, ಹಣದ ಮೊತ್ತ ಹೆಚ್ಚಿದಂತೆಲ್ಲಾ ವರ್ತಕರು ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ! ಇನ್ನು ಗ್ರಾಹಕರು ಪಾವತಿಸುವ ಹಣ ನೇರವಾಗಿ ವರ್ತಕರ ಬ್ಯಾಂಕ್‌ ಖಾತೆಗೆ ಬಂದು ಸೇರಲಿದೆ.

500 ಕೋಟಿ ಹೂಡಿಕೆ!!

500 ಕೋಟಿ ಹೂಡಿಕೆ!!

ಅಂತರ್ಜಾಲದ ಸಂಪರ್ಕ ಇಲ್ಲದೇ ಹಣ ಪಡೆಯಲು ವರ್ತಕರಿಗೆ ಪೇಟಿಎಂ ಕ್ಯೂಆರ್ ಅತ್ಯುತ್ತಮ ಆಯ್ಕೆಯಾಗಿದೆ. ಈ ಬಗ್ಗೆ ಅಂಗಡಿ ವರ್ತಕರಿಗೆ ತರಬೇತಿ ಮೂಡಿಸುವ ಸಲುವಾಗಿಯೇ 500 ಕೋಟಿ ಹೂಡಿಕೆಯನ್ನು ಪೇಟಿಎಂ ಮಾಡುತ್ತಿದೆ ಎಂದು ಪೇಟಿಎಂ ಅಧಿಕಾರಿಗಳು ತಿಳಿಸಿದ್ದಾರೆ.!!

ಕ್ಯೂಆರ್ ಕೋಡ್ ಪಡೆಯುವುದು ಹೇಗೆ?

ಕ್ಯೂಆರ್ ಕೋಡ್ ಪಡೆಯುವುದು ಹೇಗೆ?

https://business.paytm.com/retail ಗೆ ಭೇಟಿ ನೀಡಿ ಉಚಿತವಾಗಿ ಕ್ಯೂಆರ್‌ ಕೋಡ್‌ ಸೌಲಭ್ಯ ಪಡೆಯಲು ನೋಂದಣಿ ಮಾಡಿಕೊಳ್ಳಬಹುದು. ವಹಿವಾಟು ಮತ್ತು ಬ್ಯಾಂಕ್‌ ವಿವರಗಳನ್ನು ನೀಡಿದ ನಂತರ ಕ್ಯೂಆರ್ ಕೋಡ್‌ ಸೃಷ್ಟಿಯಾಗುತ್ತದೆ. ಅದನ್ನು ಅಂಗಡಿ ಮುಂದೆ ಅಂಟಿಸಿದರೆ ಆಯಿತು.!!

</a></strong><a class=ಫೇಸ್‌ಬುಕ್‌ ಬಿಟ್ಟ ಭಾರತೀಯನಿಂದ ವಿಶ್ವದ ಮೊದಲ 'ವಿಡಿಯೊ ಸಾಮಾಜಿಕ ಜಾಲತಾಣ' ರಿಲೀಸ್!!" title="ಫೇಸ್‌ಬುಕ್‌ ಬಿಟ್ಟ ಭಾರತೀಯನಿಂದ ವಿಶ್ವದ ಮೊದಲ 'ವಿಡಿಯೊ ಸಾಮಾಜಿಕ ಜಾಲತಾಣ' ರಿಲೀಸ್!!" loading="lazy" width="100" height="56" />ಫೇಸ್‌ಬುಕ್‌ ಬಿಟ್ಟ ಭಾರತೀಯನಿಂದ ವಿಶ್ವದ ಮೊದಲ 'ವಿಡಿಯೊ ಸಾಮಾಜಿಕ ಜಾಲತಾಣ' ರಿಲೀಸ್!!

Best Mobiles in India

English summary
Now, Get one QR Code for accepting Paytm, UPI & Card Payments! Receive Payments directly into your bank account at 0% Fee.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X