ಇಂಟರ್ನೆಟ್ ಇಲ್ಲದೆಯೇ 3 ಡಿ ಚಿತ್ರಗಳ ವೀಕ್ಷಣೆ

By Shwetha
|

ಕ್ವಿಕ್ ರೆಸ್ಪಾನ್ಸ್ ಕೋಡ್ಸ್ ಅಂದರೆ ಬಾಕ್ಸ್ ಮಾದರಿಯಲ್ಲಿರುವ ಸಿಂಬಲ್‌ಗಳು ಅಂದರೆ ಪೋಸ್ಟರ್‌ಗಳಲ್ಲಿ ಕಂಡುಬರುವ ಈ ಚಿಹ್ನೆಗಳನ್ನು ನಿಮ್ಮ ಫೋನ್‌ನಲ್ಲಿ 3 ಡಿ ಇಮೇಜ್‌ಗಳನ್ನು ಪ್ರದರ್ಶಿಸಲು ಬಳಸಬಹುದಾಗಿದೆ. ಇಂಟರ್ನೆಟ್ ಇಲ್ಲದೆಯೇ ಈ ವ್ಯವಸ್ಥೆಯನ್ನು ಉಪಯೋಗಿಸಬಹುದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸ್ಮಾರ್ಟ್‌ಫೋನ್ ಅಥವಾ ಇತರ ಮೊಬೈಲ್ ಡಿವೈಸ್‌ನೊಂದಿಗೆ ಕ್ಯುಆರ್ ಕೋಡ್‌ಗಳನ್ನು ಬಳಸಿಕೊಂಡು ನಿರ್ದಿಷ್ಟ ವೆಬ್ ಪುಟಗಳನ್ನು ಪ್ರವೇಶಿಸುವ ಸುಲಭ ಮಾರ್ಗ ಇದಾಗಿದೆ.

ಸಣ್ಣ ಲೆನ್ಸ್‌ಗಳನ್ನು ನಿಮ್ಮ ಸಾಮನ್ಯ ಸ್ಮಾರ್ಟ್‌ಫೋನ್‌ಗೆ ಅಳವಡಿಸುವುದರ ಮೂಲಕ, ಕನೆಕ್ಟಿಕಟ್‌ನ ಆಪ್ಟಿಕಲ್ ಇಂಜಿನಿಯರ್ಸ್ ತಂಡವು 3 ಡಿ ಚಿತ್ರಗಳನ್ನು ಇಂಟರ್ನೆಟ್ ಬಳಸದೆಯೇ ನೋಡಬಹುದಾಗಿದೆ ಎಂದು ತಿಳಿಸಿದೆ.

ಫೋನ್‌ನಲ್ಲಿ ಇನ್ನು 3ಡಿಗಾಗಿ ಇಂಟರ್ನೆಟ್ ಬೇಡ

ವೈಯಕ್ತಿಕ 3 ಡಿ ಮನೋರಂಜನೆಗಾಗಿ, ಈ ಡೇಟಾ ಸಂಗ್ರಹ ಮತ್ತು ಡಿಸ್‌ಪ್ಲೇ ಸ್ಕೀಮ್ ಅತ್ಯಾಕರ್ಷಕ ಅಳವಡಿಕೆಗಳನ್ನು ಹೊಂದಿದೆ, ಇನ್ನು ಈ ಚಿತ್ರಗಳನ್ನು ಇಂಟರ್ನೆಟ್ ಇಲ್ಲದೆಯೇ ಬಳಸುವುದು ಹೆಚ್ಚಿನ ಭದ್ರತೆಯನ್ನು ಒದಗಿಸಲಿದೆ ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ.

ಸ್ಮಾರ್ಟ್‌ಫೋನ್‌ನಲ್ಲಿ ಕ್ಯುಆರ್ ಕೋಡ್‌ಗಳನ್ನು ಬಳಸುವ ಹೊಸ ವಿಧಾನವನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ನಮ್ಮ ಮುಖ್ಯ ಉದ್ದೇಶ 3 ಡಿ ಚಿತ್ರಗಳನ್ನು ಮಾಹಿತಿಗಳನ್ನು ಭದ್ರವಾಗಿ ಮೊಬೈಲ್ ಡಿವೈಸ್‌ಗಳಲ್ಲಿ ಪ್ರದರ್ಶಿಸುವುದಾಗಿದೆ ಎಂದು ಪ್ರಾಜೆಕ್ಟ್ ತಂಡದ ಮುಖ್ಯಸ್ಥರಾದ ಬಹ್ರಾಮ್ ಜವೀದಿ ತಿಳಿಸಿದ್ದಾರೆ.

ನಾವು ಅಭಿವೃದ್ಧಿಪಡಿಸಿರುವ ಕ್ಯುಆರ್ ಕೋಡ್‌ಗಳು ಕಂಪ್ರೆಸ್ ಮತ್ತು ಎನ್‌ಕ್ರಿಪ್ಟ್ ಮಾಡಿರುವ ಚಿತ್ರಗಳನ್ನು ಸಂಗ್ರಹಿಸುತ್ತದೆ, ಇವುಗಳನ್ನು ಸುಲಭವಾಗಿ ಸ್ಕ್ಯಾನ್ ಮಾಡಬಹುದಾಗಿದೆ, ಡಿಕ್ರಿಪ್ಟ್ ಮಾಡಬಹುದಾಗಿದೆ ಎಂದು ಜವೀದಿ ತಿಳಿಸಿದ್ದಾರೆ.

ಅವರ ಸಂಶೋಧನೆಯ ಮೂಲಕ, ಕ್ಯುಆರ್ ಕೋಡ್‌ಗಳ ಭದ್ರತಾ ಹರಿವನ್ನು ಕೂಡ ಅವರಿಲ್ಲಿ ತಿಳಿಸಿದ್ದಾರೆ. ಪ್ರಸ್ತುತ, ವೆಬ್‌ಸೈಟ್‌ ಲಿಂಕ್ ಅನ್ನು ಕ್ಯುಆರ್ ಕೋಡ್‌ಗೆ ಸಂಗ್ರಹಿಸಿದಲ್ಲಿ, ಸ್ಮಾರ್ಟ್‌ಫೋನ್ ಸ್ವಯಂಚಾಲಿತವಾಗಿ ವೆಬ್‌ಸೈಟ್‌ಗೆ ಲಿಂಕ್ ಮಾಡುತ್ತದೆ ಮತ್ತು ಅಲ್ಲಿ ಸಂಗ್ರಹಿಸಿರುವ ಡೇಟಾವನ್ನು ಪ್ರವೇಶಿಸುತ್ತದೆ, ಆದರೆ ಆ ವೆಬ್‌ಸೈಟ್ ಹೆಚ್ಚಿನ ಪ್ರೊಗ್ರಾಮ್ ಅನ್ನು ಹೊಂದಿರಬೇಕು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X