ಕ್ವಾಲ್ಕಾಮ್‌ ಸಂಸ್ಥೆಯಿಂದ ಹೊಸ ತಲೆಮಾರಿನ ಪ್ರೊಸೆಸರ್‌ ಬಿಡುಗಡೆ!

|

ಸ್ಮಾರ್ಟ್‌ಫೋನ್‌ ಖರೀದಿಸುವಾಗ ಹಲವು ಅಂಶಗಳು ಪ್ರಮುಖವಾಗುತ್ತವೆ. ಅದರಲ್ಲಿ ಸ್ನಾಪ್‌ಡ್ರಾಗನ್‌ ದಕ್ಷತೆ ಕೂಡ ಪ್ರಮುಖವಾದ ಅಂಶವಾಗಿದೆ. ಇನ್ನು ಯಾವುದೇ ಒಂದು ಸ್ಮಾರ್ಟ್‌ಪೊನ್‌ ಕಾರ್ಯನಿರ್ವಹಿಸಬೇಕಾದರೂ ಸ್ನಾಪ್‌ಡ್ರಾಗನ್‌ ಅತಿ ಅವಶ್ಯಕವಾಗಿದೆ. ಇನ್ನು ಸ್ಮಾರ್ಟ್‌ಫೋನ್‌ ಕಾರ್ಯದಕ್ಷತೆ ಹೆಚ್ಚಿಸುವ ಸ್ನಾಪ್‌ಡ್ರಾಗನ್‌ ಅನ್ನು ಕೆಲವು ಕಂಪೆನಿಗಳು ಪರಿಚಯಿಸಿವೆ. ಇದರಲ್ಲಿ ಪ್ರಮುಖವಾಗಿ ಕ್ವಾಲ್ಕಾಮ್‌ ಕಂಪೆನಿ ಕೂಡ ಒಂದಾಗಿದೆ. ಸದ್ಯ ಇದೀಗ ಕ್ವಾಲ್ಕಾಮ್‌ ಕಂಪೆನಿ ಹೊಸ ಸ್ನಾಪ್‌ಡ್ರಾಗನ್‌ 8 Gen 1 ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಿದೆ.

ಕ್ವಾಲ್ಕಾಮ್‌

ಹೌದು, ಕ್ವಾಲ್ಕಾಮ್‌ ಹೊಸ ಸ್ನಾಪ್‌ಡ್ರಾಗನ್‌ 8 Gen 1 ಪ್ಲಾಟ್‌ಫಾರ್ಮ್ ಅಧಿಕೃತವಾಗಿ ಅನಾವರಣಗೊಳಿಸಿದೆ. ಪ್ರೀಮಿಯಂ ಆಂಡ್ರಾಯ್ಡ್‌ ಫೋನ್‌ಗಳಿಗಾಗಿ 5G ಮೋಡೆಮ್‌ನೊಂದಿಗೆ ಹೊಸ ಉನ್ನತ-ಮಟ್ಟದ ಮೊಬೈಲ್ ಪ್ರೊಸೆಸರ್ ಇದಾಗಿದೆ. ಇನ್ನು ಈ ಹೊಸ ಪ್ರೊಸೆಸರ್‌ ಸುಧಾರಿತ ಗ್ರಾಫಿಕ್ಸ್ ರೆಂಡರಿಂಗ್, ಉತ್ತಮ ಗೇಮಿಂಗ್ ಕಾರ್ಯಕ್ಷಮತೆ, ವೇಗವಾದ 5G ನೆಟ್‌ವರ್ಕಿಂಗ್ ಮತ್ತು ಸುಧಾರಿತ ಕ್ಯಾಮೆರಾ ಕಾರ್ಯಕ್ಷಮತೆಯೊಂದಿಗೆ ಅನೇಕ ಅಪ್ಡೇಟ್‌ಗಳನ್ನು ಒಳಗೊಂಡಿದೆ. ಹಾಗಾದ್ರೆ ಹೊಸ ಸ್ನಾಪ್‌ಡ್ರಾಗನ್‌ 8 Gen 1 ಪ್ಲಾಟ್‌ಫಾರ್ಮ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ವಾಲ್ಕಾಮ್‌

ಇನ್ನು ಕ್ವಾಲ್ಕಾಮ್‌ ಸಂಸ್ಥೆ ಹೊಸ ಮಾದರಿಯ ಪ್ರೊಸೆಸರ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಭವಿಷ್ಯದಲ್ಲಿ ಉನ್ನತ-ಮಟ್ಟದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಏನಾಗಬಹುದು ಅನ್ನೊದನ್ನ ಈಗಿನಿಂದಲೇ ಸೂಚಿಸುವ ಪ್ರಯತ್ನವನ್ನು ಕ್ವಾಲ್ಕಾಮ್‌ ಮಾಡುತ್ತಾ ಬಂದಿದೆ. ತನ್ನ ಸುಧಾರಿತ ಸ್ನಾಪ್‌ಡ್ರಾಗನ್ ಚಿಪ್‌ಗಳಲ್ಲಿನ ಫೀಚರ್ಸ್‌ಗಳು ಮತ್ತು ಕಾರ್ಯಕ್ಷಮತೆ ಸುಧಾರಣೆಗಳು ಅಪ್ಗ್ರೇಡ್‌ ಮೊಬೈಲ್‌ಗಳೊಂದಿಗೆ ಪೈಪೋಟಿ ನಡೆಸಲು ಸಹಾಯ ಮಾಡಲಿದೆ. ಇನ್ನು ಪ್ರತಿ ವರ್ಷ ಸ್ಯಾನ್ ಡಿಯಾಗೋ ಮೂಲದ ಚಿಪ್ ಟೈಟಾನ್ ತನ್ನ ಮುಂದಿನ ಪೀಳಿಗೆಯ ಮೊಬೈಲ್ ಚಿಪ್ ಅನ್ನು ವರ್ಷದ ಅಂತ್ಯದ ವೇಳೆಗೆ ಪ್ರಕಟಿಸುತ್ತದೆ. ಈ ವರ್ಷ, ಕ್ವಾಲ್ಕಾಮ್‌ ಪ್ರಸ್ತುತ USA ನ ಹವಾಯಿಯಲ್ಲಿ ನಡೆಯುತ್ತಿರುವ ತನ್ನ ವಾರ್ಷಿಕ ಶೃಂಗಸಭೆಯ ಹೈಬ್ರಿಡ್ ಆವೃತ್ತಿಯಲ್ಲಿ ಸ್ನಾಪ್‌ಡ್ರಾಗನ್‌ 8 Gen 1 ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಿದೆ.

ಸ್ನಾಪ್‌ಡ್ರಾಗನ್‌

ಇನ್ನು ಹೊಸದಾಗಿ ಪರಿಚಯಿಸಲಾಗಿರುವ ಸ್ನಾಪ್‌ಡ್ರಾಗನ್‌ 8 Gen 1 ಈ ವರ್ಷದ ಕೊನೆಯಲ್ಲಿ ಮತ್ತು ಮುಂದಿನ ವರ್ಷದ ಆರಂಭದಲ್ಲಿ ಬರುವ ಹೆಚ್ಚಿನ ಟಾಪ್ ಎಂಡ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಶಕ್ತಿ ನೀಡುತ್ತದೆ. ಶಿಯೋಮಿ, ಒಪ್ಪೋ,ಒನ್‌ಪ್ಲಸ್‌, ವಿವೋ ಮತ್ತು ಮೊಟೊರೊಲಾ ಸೇರಿದಂತೆ ಅನೇಕ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕರು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ನಾಪ್‌ಡ್ರಾಗನ್‌ 8 Gen 1 ಮೊಬೈಲ್ ಪ್ರೊಸೆಸರ್ ಅನ್ನು ಬಳಸಲು ಪ್ಲಾನ್‌ ಮಾಡಿದ್ದಾರೆ ಎಂದು ಕ್ವಾಲ್ಕಾಮ್‌ ಕಂಪೆನಿ ಹೇಳಿದೆ.

ಕ್ವಾಲ್ಕಾಮ್‌

ಮೊಬೈಲ್‌ ಸಿಸ್ಟಮ್‌ ಕಾರ್ಯದಕ್ಷತೆಯನ್ನು ಹೆಚ್ಚಿಸುವಲ್ಲಿ ಕ್ವಾಲ್ಕಾಮ್‌ನ ಪಾತ್ರ ಮಹತ್ವದಾಗಿದೆ. ಕ್ವಾಲ್ಕಾಮ್‌ ಸಂಸ್ತೆ ಪರಿಚಯಿಸಿರುವ ಪ್ರೊಸೆಸರ್‌ಗಳನ್ನು ಪ್ರಮುಖ ಬ್ರಾಡ್‌ಗಳು ಕೂಡ ಬಳಸುತ್ತಿದೆ. ಇದೀಗ ಪರಿಚಯಿಸಿರುವ ಹೊಸ ಪ್ರೊಸೆಸರ್‌ $ 1000 ಕ್ಕಿಂತ ಹೆಚ್ಚು ವೆಚ್ಚವಾಗಬಹುದು, ಇದು iPhone 13 Pro Max ಗೆ ಸೆಟ್‌ ಆಗಲಿದೆ ಎನ್ನಲಾಗಿದೆ. ಸದ್ಯ ಹೊಸ ಸ್ನಾಪ್‌ಡ್ರಾಗನ್ 8 ಜನ್ 1 ಮುಂದಿನ ಪೀಳಿಗೆಯ ಪ್ರಮುಖ ಮೊಬೈಲ್ ಸಾಧನಗಳಿಗೆ ಹೊಸ ಮಾನದಂಡವನ್ನು ಹೊಂದಿಸುತ್ತದೆ ಎಂದು ಮೊಬೈಲ್, ಕಂಪ್ಯೂಟ್‌ನ ಹಿರಿಯ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಅಲೆಕ್ಸ್ ಕಟೌಜಿಯನ್ ಅಭಿಪ್ರಾಯ ಪಟ್ಟಿದ್ದಾರೆ.

ಸ್ನಾಪ್‌ಡ್ರಾಗನ್

ಇನ್ನು ಸ್ನಾಪ್‌ಡ್ರಾಗನ್ 8 Gen 1 ಅನ್ನು 4nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ 4 ನೇ ಜನ್ ಸ್ನಾಪ್‌ಡ್ರಾಗನ್ X65 5G ಮೋಡೆಮ್ ಅನ್ನು ಒಳಗೊಂಡಿದೆ. ಇದು 10-ಗಿಗಾಬಿಟ್ ಡೌನ್‌ಲೋಡ್ ವೇಗವನ್ನು ಸಕ್ರಿಯಗೊಳಿಸುತ್ತದೆ. ಹಾಗೆಯೇ Wi-Fi 6 ಮತ್ತು 6E ಮೂಲಕ 3.6Gbps ವರೆಗಿನ Wi-Fi ವೇಗವನ್ನು ಸಹ ಬೆಂಬಲಿಸುತ್ತದೆ. ಈ ಹೊಸ ಅಪ್ಡೇಟ್‌ಗಳ ಜೊತೆಗೆ, ಕ್ವಾಲ್ಕಾಪ್‌ ಕಂಪನಿಯ ಏಳನೇ ತಲೆಮಾರಿನ AI ಎಂಜಿನ್ ಸೇರಿದಂತೆ ಸ್ನಾಪ್‌ಡ್ರಾಗನ್‌ 8 Gen 1 ಗೆ ಹಲವಾರು ಹೊಸ ಪ್ರಗತಿಗಳನ್ನು ಘೋಷಿಸಿದೆ. ಇದು AI ಕಾರ್ಯಗಳಿಗಾಗಿ ಕಾರ್ಯಕ್ಷಮತೆ ಮತ್ತು ಶಕ್ತಿಯ ದಕ್ಷತೆಯಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಸ್ನಾಪ್‌ಡ್ರಾಗನ್

ಈ ಹೊಸ ಚಿಪ್‌ಸೆಟ್ ಹೊಚ್ಚಹೊಸ ಅಡ್ರಿನೊ ಜಿಪಿಯು ಅನ್ನು ಸಹ ಹೊಂದಿದೆ. ಇದು ಹಿಂದಿನ ಪೀಳಿಗೆಗೆ ಹೋಲಿಸಿದರೆ ಗ್ರಾಫಿಕ್ಸ್ ರೆಂಡರಿಂಗ್ ಸಾಮರ್ಥ್ಯಗಳಲ್ಲಿ 30% ವರ್ಧಕ ಮತ್ತು ಪವರ್‌ ಸೇವಿಂಗ್‌ನಲ್ಲಿ 25% ರಷ್ಟು ಅಪ್ಡೇಟ್‌ ಅನ್ನು ನೀಡಲಿದೆ. ಜೊತೆಗೆ ಕ್ಯಾಮೆರಾ ವಿಭಾಗದಲ್ಲಿ ಹೆಚ್ಚಿನ ಬದಲಾವಣೆಯನ್ನು ನೀಡಲಿದೆ. ಈ ಹೊಸ ಸ್ನಾಪ್‌ಡ್ರಾಗನ್ 8 ಜನ್ 1 ಮೊಬೈಲ್ ಪ್ರೊಸೆಸರ್ ಮೊದಲ 18-ಬಿಟ್ ISP ಅನ್ನು ಒಳಗೊಂಡಿದ್ದು, ಸೆಕೆಂಡಿಗೆ 3.2 ಗಿಗಾಪಿಕ್ಸೆಲ್‌ಗಳ ವೇಗದಲ್ಲಿ ತೀವ್ರ ಡೈನಾಮಿಕ್ ಶ್ರೇಣಿ, ಬಣ್ಣ ಮತ್ತು ತೀಕ್ಷ್ಣತೆಗಾಗಿ 4000x ಹೆಚ್ಚು ಕ್ಯಾಮೆರಾ ಡೇಟಾವನ್ನು ಸೆರೆಹಿಡಿಯುತ್ತದೆ ಎಂದು ಹೇಳಲಾಗಿದೆ. ಇದರಲ್ಲಿ ಬಳಕೆದಾರರು 8K HDR ವೀಡಿಯೊಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗುತ್ತದೆ.

ಕ್ವಾಲ್ಕಾಮ್

ಇದಲ್ಲದೆ ಕ್ವಾಲ್ಕಾಮ್ ಕಂಪೆನಿ ಲ್ಯಾಪ್‌ಟಾಪ್‌ಗಳಿಗಾಗಿ ಹೊಸ ಚಿಪ್‌ಸೆಟ್‌ಗಳನ್ನು ಬಿಡುಗಡೆ ಮಾಡಿದೆ. ವಿಂಡೋಸ್‌ನಲ್ಲಿ ಚಾಲನೆಯಲ್ಲಿರುವ ಲ್ಯಾಪ್‌ಟಾಪ್‌ಗಳು ಮತ್ತು ಕ್ರೋಮ್‌ಬುಕ್‌ಗಳಿಗೂ ಹೊಸ ಪ್ರೊಸೆಸರ್‌ ಅನ್ನು ಪರಿಚಯಿಸಿದೆ. ಇದನ್ನು ಸ್ನಾಪ್‌ಡ್ರಾಗನ್ 8cx Gen 3 ಚಿಪ್‌ಸೆಟ್ ಎಂದು ಹೆಸರಿಸಲಾಗಿದೆ. ಈ ಹೊಸ ಸ್ನಾಪ್‌ಡ್ರಾಗನ್‌ 8cx Gen 3 ಮೊದಲ 5nm ವಿಂಡೋಸ್ PC ಪ್ಲಾಟ್‌ಫಾರ್ಮ್ ಆಗಿದೆ. ಇದು ಹೊಸ ಆರ್ಕಿಟೆಕ್ಚರ್ ಕ್ವಾಲ್ಕಾಮ್ ಕ್ರಿಯೋ ಸಿಪಿಯುನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂದು ಹೇಳುತ್ತದೆ.

ಸ್ನಾಪ್‌ಡ್ರಾಗನ್‌

ಇನ್ನು ಈ ಹೊಸ ಸ್ನಾಪ್‌ಡ್ರಾಗನ್‌ 8cx Gen 3 ಪ್ರೊಸೆಸರ್‌ ಅನ್ನು ಹಿಂದಿನ ಪೀಳಿಗೆಯ ಚಿಪ್‌ಸೆಟ್‌ಗೆ ಹೋಲಿಸಿದರೆ 85% ಕಾರ್ಯಕ್ಷಮತೆಯನ್ನು ಹೆಚ್ಚಿಗೆ ನೀಡಲಿದೆ. ಇದು ಇತರ x86 ಪ್ಲಾಟ್‌ಫಾರ್ಮ್‌ಗಳಿಗಿಂತ ಪ್ರತಿ ವ್ಯಾಟ್‌ಗೆ 60% ಹೆಚ್ಚಿನ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಈ ಹೊಸ ಆರ್ಕಿಟೆಕ್ಚರ್ ಬಹು ದಿನಗಳ ಬ್ಯಾಟರಿ ಅವಧಿಯನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕ್ವಾಲ್ಕಾಮ್‌ ಅಂಡ್ರೆನೋ GPU ಅನ್ನು ವೆಬ್-ಬ್ರೌಸಿಂಗ್, ವೀಡಿಯೊ ಮತ್ತು ಫೋಟೋ ಎಡಿಟಿಂಗ್ ಮತ್ತು ವೀಡಿಯೊ ಕಾನ್ಫರೆನ್ಸಿಂಗ್‌ಗಾಗಿ ಬಳಸಲಾಗುತ್ತದೆ. ಕಂಪನಿಯು ತಮ್ಮ ಹಿಂದಿನ ಪೀಳಿಗೆಗೆ ಹೋಲಿಸಿದರೆ 60% ವರೆಗಿನ ಕಾರ್ಯಕ್ಷಮತೆಯ ಸುಧಾರಣೆಯನ್ನು ನೀಡಲಿದೆ ಎಂದು ಹೇಳಿಕೊಂಡಿದೆ.

Most Read Articles
Best Mobiles in India

English summary
The Qualcomm Snapdragon 8 Gen 1 will power most top-end Android smartphones coming later this year and early next year.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X