ಕ್ವಾಲ್ಕಾಮ್‌ನಿಂದ ಸ್ನಾಪ್‌ಡ್ರಾಗನ್ 780G 5G ಮೊಬೈಲ್ ಪ್ಲಾಟ್‌ಫಾರ್ಮ್ ಅನಾವರಣ!

|

ಟೆಕ್ನಾಲಜಿ ಮುಂದುವರೆದಂತೆ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿವೆ. ಈ ವೈವಿದ್ಯಮಯ ಸ್ಮಾರ್ಟ್‌ಫೋನ್‌ಗಳ ಕಾರ್ಯದಕ್ಷತೆ ಮತ್ತು ವೇಗವನ್ನು ಸುಧಾರಿಸುವಲ್ಲಿ ಪ್ರೊಸೆಸರ್‌ಗಳ ಪಾತ್ರ ಮಹತ್ವದ್ದಾಗಿದೆ. ಇನ್ನು ಸ್ಮಾರ್ಟ್‌ಫೋನ್‌ಗಳ ನಡುವೆ ಭಿನ್ನ ಮಾದರಿಗೆ ಕಾರಣವಾಗಿರೋದು ಕೂಡ ಇವುಗಳಲ್ಲಿ ಅಡಕವಾಗಿರುವ ಪ್ರೊಸೆಸರ್‌ ಅಂತಾನೇ ಹೇಳಬಹುದು. ಸದ್ಯ ಪ್ರೊಸೆಸರ್‌ಗಳನ್ನು ಪರಿಚಯಿಸುವಲ್ಲಿ ಹೆಸರುವಾಸಿಯಾಗಿರುವ ಕ್ವಾಲ್ಕಾಮ್‌ ತನ್ನ ಹೊಸ ಸ್ನಪ್‌ಡ್ರಾಗನ್‌ 780G 5G ಮೊಬೈಲ್‌ ಪ್ಲಾಟ್‌ಫಾರ್ಮ್‌ ಅನ್ನು ಅನಾವರಣ ಗೊಳಿಸಿದೆ.

ಕ್ವಾಲ್ಕಾಮ್‌

ಹೌದು, ಕ್ವಾಲ್ಕಾಮ್ ತನ್ನ ಹೊಸ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 780G 5G ಮೊಬೈಲ್ ಪ್ಲಾಟ್‌ಫಾರ್ಮ್ ಅನ್ನು ಘೋಷಿಸಿದೆ. ಇದು ಸದ್ಯ ಅಸ್ತಿತ್ವದಲ್ಲಿರುವ 7-ಸರಣಿಗಳಿಗೆ ಇತ್ತೀಚಿನ ಸೇರ್ಪಡೆಯಾಗಿದೆ. ಇನ್ನು ಈ ಹೊಸ SoC (ಸಿಸ್ಟಮ್-ಆನ್-ಚಿಪ್) 5nm ಪ್ರೊಸೆಸರ್‌ ಟೆಕ್ನಾಲಜಿಯನ್ನು ಆಧರಿಸಿದೆ. ಇನ್ನುಳಿದಂತೆ ಹೊಸ ಸ್ನಾಪ್‌ಡ್ರಗನ್‌ 780G 5G ಮೊಬೈಲ್‌ ಪ್ಲಾಟ್‌ಫಾರ್ಮ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ನಾಪ್‌ಡ್ರಾಗನ್‌

ಕ್ವಾಲ್ಕಾಮ್‌ ಪರಿಚಯಿಸಿರುವ ಸ್ನಾಪ್‌ಡ್ರಾಗನ್‌ 780G 5G ಮೊಬೈಲ್‌ ಪ್ಲಾಟ್‌ಫಾರ್ಮ್‌ ಟ್ರಿಪಲ್ ಇಮೇಜ್ ಸಿಗ್ನಲ್ ಪ್ರೊಸೆಸರ್ ಜೊತೆಗೆ ಬರುವ ಮೊದಲ ಸ್ನಾಪ್‌ಡ್ರಾಗನ್ 7-ಸರಣಿ ಇದಾಗಿದೆ. ಇದು ಕಂಪ್ಯೂಟೇಶನಲ್ ಹೆಚ್‌ಡಿಆರ್ ಮತ್ತು ಹೆಚ್‌ಡಿಆರ್ 10 ವಿಡಿಯೋ ಕ್ಯಾಪ್ಚರ್ ಜೊತೆಗೆ 4ಕೆ ಹೆಚ್‌ಡಿಆರ್ ಬೆಂಬಲವನ್ನು ಒಳಗೊಂಡಿದೆ. ಇನ್ನು ಮೊದಲ ಬಾರಿಗೆ 2018 ರಲ್ಲಿ ಪ್ರಾರಂಭವಾದ ಸ್ನಾಪ್‌ಡ್ರಾಗನ್ 7-ಸರಣಿ SoC ಗಳು ಈಗ 350ಕ್ಕೂ ಹೆಚ್ಚು ಸಾಧನಗಳಲ್ಲಿ ಲಭ್ಯವಿದೆ.

ಸ್ನಾಪ್‌ಡ್ರಾಗನ್

ಸದ್ಯ ಈ ಹೊಸ ಸ್ನಾಪ್‌ಡ್ರಾಗನ್ 780G 5G ಆಧಾರಿತ ಡಿವೈಸ್‌ಗಳು ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಲಭ್ಯವಿರುತ್ತವೆ. ಆದಾಗ್ಯೂ, ಯಾವುದೇ ಹ್ಯಾಂಡ್‌ಸೆಟ್ ತಯಾರಕರು ತಮ್ಮ ಡಿವೈಸ್‌ಗಳಿಗೆ ಸ್ನಾಪ್‌ಡ್ರಾಗನ್‌ 780G 5G ಅನ್ನು ಅಳವಡಿಸಿರುವುದರ ಬಗ್ಗೆ ಇನ್ನೂ ಘೋಷಿಸಿಲ್ಲ. ಇನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 780G 5G ಅನ್ನು ಈಗಿರುವ ಸ್ನಾಪ್‌ಡ್ರಾಗನ್ 765 G ಮತ್ತು ಸ್ನಾಪ್‌ಡ್ರಾಗನ್ 750G ಗೆ ಅಪ್‌ಗ್ರೇಡ್ ಆಗಿ ವಿನ್ಯಾಸಗೊಳಿಸಲಾಗಿದೆ. ಇದು ಕೈರೋ 670 ಸಿಪಿಯುನೊಂದಿಗೆ ಬರಲಿದ್ದು, ಇದರ ಪೂರ್ವವರ್ತಿಗಿಂತ 40% ರಷ್ಟು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.

ಸ್ನಾಪ್‌ಡ್ರಾಗನ್

ಇನ್ನು ಸ್ನಾಪ್‌ಡ್ರಾಗನ್ 780G 5 G ನಲ್ಲಿ ಅಡ್ರಿನೊ 642 ಜಿಪಿಯು ಮತ್ತು ಷಡ್ಭುಜಾಕೃತಿ 770 ಪ್ರೊಸೆಸರ್ ಇದ್ದು, ಇದು ಆರನೇ ಜನ್ ಕ್ವಾಲ್ಕಾಮ್ ಎಐ ಎಂಜಿನ್‌ನೊಂದಿಗೆ ಜೋಡಿಯಾಗಿದೆ. ಅಲ್ಲದೆ ಸೆಕೆಂಡಿಗೆ 12 ಟೆರಾ ಕಾರ್ಯಾಚರಣೆಗಳನ್ನು (TOP ಗಳು) AI ಕಾರ್ಯಕ್ಷಮತೆಯನ್ನು ನೀಡುತ್ತದೆ. ಎರಡನೇ ತಲೆಮಾರಿನ ಕ್ವಾಲ್ಕಾಮ್ ಸೆನ್ಸಿಂಗ್ ಹಬ್ ಜೊತೆಗೆ ಆಡಿಯೊ ಸಂಸ್ಕರಣೆಗಾಗಿ ಮೀಸಲಾದ ಕಡಿಮೆ-ಶಕ್ತಿಯ ಎಐ ಪ್ರೊಸೆಸರ್ ಸಹ ಇದೆ. ಅಲ್ಲದೆ ಇದು ಆರ್ಎಫ್ ಸಿಸ್ಟಮ್‌ನೊಂದಿಗೆ ಬರುತ್ತದೆ, ಇದು ಸಬ್‌-6GHz ಫ್ರಿಕ್ವೆನ್ಸಿಗಳಲ್ಲಿ 3.3ಜಿಬಿಪಿಎಸ್ ವರೆಗೆ ಡೌನ್‌ಲೋಡ್ ವೇಗವನ್ನು ತಲುಪಿಸುತ್ತದೆ.

ಬ್ಲೂಟೂತ್

ಇದಲ್ಲದೆ ಈ ಚಿಪ್‌ಸೆಟ್ ಬ್ಲೂಟೂತ್ ವಿ 5.2 ಸಂಪರ್ಕವನ್ನು ಸಹ ಹೊಂದಿದೆ. ಇದು ಇತ್ತೀಚೆಗೆ ಪ್ರಾರಂಭಿಸಲಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಸೌಂಡ್ ತಂತ್ರಜ್ಞಾನ ಮತ್ತು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಎಲೈಟ್ ಗೇಮಿಂಗ್ ಏಕೀಕರಣವನ್ನು ಒಳಗೊಂಡಿದೆ. ಜೊತೆಗೆ ಸ್ನಾಪ್‌ ಡ್ರಾಗನ್ 780 G 5G ಸಹ ಫುಲ್-ಹೆಚ್‌ಡಿ ಡಿಸ್‌ಪ್ಲೇಗೆ ಬೆಂಬಲವನ್ನು ನೀಡುತ್ತದೆ ಮತ್ತು 144Hz ವರೆಗೆ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದರೊಂದಿಗೆ ಚಿಪ್‌ ಕ್ವಾಲ್ಕಾಮ್ ಸ್ಪೆಕ್ಟ್ರಾ 570ISP ಹೊಂದಿದ್ದು, ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು 25 ಮೆಗಾಪಿಕ್ಸೆಲ್ ಸೆನ್ಸಾರ್ ಅಥವಾ 84 ಮೆಗಾಪಿಕ್ಸೆಲ್ ಸಿಂಗಲ್ ಸೆನ್ಸಾರ್ ವರೆಗೆ ಬೆಂಬಲಿಸುತ್ತದೆ.

Best Mobiles in India

English summary
Qualcomm announced the Snapdragon 780G 5G mobile platform.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X