Home
ಸುದ್ದಿಜಾಲ

ಕ್ವಾಲ್ಕಾಮ್‌ನಿಂದ ಹೊಸ ಪ್ರೊಸೆಸರ್‌ ಲಾಂಚ್‌! ವೇಗದ ದಕ್ಷತೆ ಎಷ್ಟಿದೆ ಗೊತ್ತಾ?

ಯಾವುದೇ ಸ್ಮಾರ್ಟ್‌ಫೋನ್‌ ಕಾರ್ಯದಕ್ಷತೆ ಉತ್ತಮವಾಗಿರಬೇಕೆಂದರೆ ಅದರ ಪ್ರೊಸೆಸರ್‌ ಸಾಮರ್ಥ್ಯ ಕೂಡ ಅಷ್ಟೇ ಮುಖ್ಯವಾಗಿದೆ. ಇದರಲ್ಲಿ ಕ್ವಾಲ್ಕಾಮ್‌ ಕಂಪೆನಿಯು ತನ್ನ ಗುಣಮಟ್ಟ ಹಾಗೂ ವೇಗದ ಕಾರ್ಯಕ್ಷಮತೆಯ ಪ್ರೊಸೆಸರ್‌ಗಳಿಗೆ ಹೆಸರುವಾಸಿಯಾಗಿದೆ. ಸದ್ಯ ಇದೀಗ ತನ್ನ ಮತ್ತೊಂದು ಹೊಸ ಸ್ನಾಪ್‌ಡ್ರಾಗನ್‌ 4 Gen 2 ಪ್ರೊಸೆಸರ್‌ ಅನ್ನು ಪರಿಚಯಿಸಿದೆ.

ಹೌದು, ಜನಪ್ರಿಯ ಚಿಪ್‌ಮೇಕರ್‌ ಕ್ವಾಲ್ಕಾಮ್‌ ಎಂಟ್ರಿ ಲೆವೆಲ್‌ 5G ಸ್ಮಾರ್ಟ್‌ಫೋನ್‌ಗಳಿಗಾಗಿ ಹೊಸ ಪ್ರೊಸೆಸರ್‌ ಅನ್ನು ಪರಿಚಯಿಸಿದೆ. ಇದು 2022 ರಲ್ಲಿ ಬಿಡುಗಡೆಯಾದ ಸ್ನಾಪ್‌ಡ್ರಾಗನ್‌ 4 Gen 1 SoC ಗೆ ಉತ್ತರಾಧಿಕಾರಿಯಾಗಿದೆ. ಇದು 4nm ಪ್ರಕ್ರಿಯೆ ನೋಡ್ ನಲ್ಲಿ ಬಿಲ್ಟ್‌ ಮಾಡಿದ ಮೊದಲ ಚಿಪ್‌ ಆಗಿದೆ. ಇನ್ನುಳಿದಂತೆ ಈ ಹೊಸ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ವಾಲ್ಕಾಮ್‌ನಿಂದ ಹೊಸ ಪ್ರೊಸೆಸರ್‌ ಲಾಂಚ್‌! ವೇಗದ ದಕ್ಷತೆ ಎಷ್ಟಿದೆ ಗೊತ್ತಾ?

ಸ್ನಾಪ್‌ಡ್ರಾಗನ್‌ 4 Gen 2 ಪ್ರೊಸೆಸರ್‌ ವಿಶೇಷತೆ ಏನು?
ಕ್ವಾಲ್ಕಾಮ್‌ ಕಂಪೆನಿ ಹೊಸ ಸ್ನಾಪ್‌ಡ್ರಾಗನ್‌ 4 Gen 2 ಪ್ರೊಸೆಸರ್‌ ಅನ್ನು ಬಿಡುಗಡೆ ಮಾಡಿದೆ. ಇದು ಈ ಹಿಂದಿನ ತಲೆಮಾರಿನ ಪ್ರೊಸೆಸರ್‌ಗಿಂತ 10% ಉತ್ತಮವಾದ ಕಾರ್ಯಕ್ಷಮತೆಯನ್ನು ಹೊಂದಿದೆ. ಇನ್ನು ಹೊಸ ಸ್ನಾಪ್‌ಡ್ರಾಗನ್‌ 4 Gen 2 SoC ಕ್ವಾಲ್ಕಾಮ್ X61 5G ಮೋಡೆಮ್ ಅನ್ನು ಹೊಂದಿದ್ದು ಅದು 2.5Gbps ವರೆಗೆ ಡೌನ್‌ಲೋಡ್ ವೇಗವನ್ನು ಹೊಂದಿದೆ. ಜೊತೆಗೆ ಇದು ನ್ಯಾವಿಗೇಷನ್‌ಗಾಗಿ NavIC ಮತ್ತು ಡ್ಯುಯಲ್ ಫ್ರೀಕ್ವೆನ್ಸಿ GNSS ಬೆಂಬಲವನ್ನು ಪಡೆದುಕೊಂಡಿದೆ.

ಇನ್ನು ಈ ಹೊಸ ಪ್ರೊಸೆಸರ್‌ 2.2GHz ನಲ್ಲಿ ಎರಡು ಕಾರ್ಯಕ್ಷಮತೆಯ ಕೋರ್‌ಗಳನ್ನು ಹೊಂದಿದ್ದು, 2GHz ನಲ್ಲಿ ಕ್ಲಾಕ್ ಮಾಡಲಾದ ಆರು ದಕ್ಷತೆಯ ಕೋರ್‌ಗಳನ್ನು ಒಳಗೊಂಡಿದೆ. ಇದಲ್ಲದೆ 3200MHz ನಲ್ಲಿ LPDDR5x RAM ವರೆಗೆ ಬೆಂಬಲಿಸಲಿದೆ. ಈ ಚಿಪ್‌ 120Hz ರಿಫ್ರೆಶ್ ರೇಟ್‌ನೊಂದಿಗೆ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಗಳಿಗೆ ಬೆಂಬಲವನ್ನು ನೀಡಲಿದೆ. ಇದರೊಂದಿಗೆ ಈ ಪ್ರೊಸೆಸರ್‌ನಲ್ಲಿ ಡಿವೈಸ್‌ನ AI ತಂತ್ರಜ್ಞಾನವನ್ನು ಸಹ ಪ್ರಚಾರ ಮಾಡಿದೆ. ಇದು ಧ್ವನಿ ಮತ್ತು ವೀಡಿಯೊ ಕರೆಗಳ ಸಮಯದಲ್ಲಿ ಬ್ಯಾಕ್‌ಗ್ರೌಂಡ್‌ ಸೌಂಡ್‌ ಕಡಿತ ಫೀಚರ್ಸ್‌ ನೀಡಲಿದೆ.

ಇದಲ್ಲದೆ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ X61 5G ಮೋಡೆಮ್ನೊಂದಿಗೆ ಸಜ್ಜುಗೊಂಡಿರುವ ಚಿಪ್‌ ಇದಾಗಿದೆ. ಈ ಮೋಡೆಮ್ 2.5Gbps ವರೆಗೆ ಡೌನ್‌ಲೋಡ್ ವೇಗವನ್ನು ಹೊಂದಿದ್ದು, ಬ್ಲೂಟೂತ್ 5.1 ಡ್ಯುಯಲ್-ಬ್ಯಾಂಡ್ ವೈ-ಫೈ 5 ಸಂಪರ್ಕಕ್ಕೆ ಬೆಂಬಲವನ್ನು ನೀಡಲಿದೆ ಎಂಬ ಮಾತನ್ನು ಕಂಪೆನಿ ಹೇಳಿಕೊಂಡಿದೆ. ಇದು ಡ್ಯುಯಲ್-ಫ್ರೀಕ್ವೆನ್ಸಿ GNSS (L1 + L5) ಬೆಂಬಲದೊಂದಿಗೆ GPS, GLONASS, Beidou, Galileo, NavIC, ಮತ್ತು QZSS ಸ್ಥಳ ಸೇವೆಗಳನ್ನು ಸಹ ಬೆಂಬಲಿಸುತ್ತದೆ.

ಕ್ವಾಲ್ಕಾಮ್‌ನಿಂದ ಹೊಸ ಪ್ರೊಸೆಸರ್‌ ಲಾಂಚ್‌! ವೇಗದ ದಕ್ಷತೆ ಎಷ್ಟಿದೆ ಗೊತ್ತಾ?

ಇದರೊಂದಿಗೆ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 4 Gen 2 SoC ಎರಡು 16 ಮೆಗಾಪಿಕ್ಸೆಲ್ ಕ್ಯಾಮೆರಾಗಳು ಅಥವಾ ಸಿಂಗಲ್‌ 32 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ 60fps ನಲ್ಲಿ ವೀಡಿಯೊ ರೆಕಾರ್ಡಿಂಗ್‌ ಸಾಮರ್ಥ್ಯವನ್ನು ಹೊಂದಿರಲಿದೆ. ಮಲ್ಟಿ ಕ್ಯಾಮೆರಾ ಟೆಂಪೊರಲ್ ಫಿಲ್ಟರಿಂಗ್ (MCTF) ಬಳಸಿಕೊಂಡು ಶಬ್ದ ಕಡಿತದೊಂದಿಗೆ ಸುಧಾರಿತ ಕಡಿಮೆ-ಬೆಳಕಿನ ಫೋಟೋಗಾಗಿ AI ಫೀಚರ್ಸ್‌ಗಳನ್ನು ನೀಡಲಿದೆ ಎಂದು ಕ್ವಾಲ್ಕಾಮ್‌ ಹೇಳಿಕೊಂಡಿದೆ.

ಸದ್ಯ ಕ್ವಾಲ್ಕಾಮ್‌ ಕಂಪೆನಿ ನೀಡಿರುವ ಮಾಹಿತಿಯ ಪ್ರಕಾರ ಈ ಪ್ರೊಸೆಸರ್‌ ರೆಡ್ಮಿ ಮತ್ತು ವಿವೋ ಕಂಪೆನಿಯ ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಲಬ್ಯವಾಗುವ ಸಾಧ್ಯತೆಯಿದೆ. ಅಂದರೆ ಈ ಪ್ರೊಸೆಸರ್‌ 2023 ರ ದ್ವಿತೀಯಾರ್ಧದಲ್ಲಿ ಖರೀದಿಗೆ ಲಭ್ಯವಾಗುವ ನಿರೀಕ್ಷೆಯಿದೆ.

Best Mobiles in India

English summary
Qualcomm Snapdragon 4 Gen 2 Mobile Platform Launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+