ಹೊಸ 'ಕ್ವಾಲ್ಕಮ್ 710 Soc ಪ್ರೊಸೆಸರ್ ರಿಲೀಸ್!!..ಹೇಗಿವೆ ಗೊತ್ತಾ ಫೀಚರ್ಸ್?
ವಿಶ್ವದ ನಂ.1 ಮೊಬೈಲ್ ಚಿಪ್‌ಸೆಟ್ ತಯಾರಕ ದೈತ್ಯ ಕ್ವಾಲ್ಕಮ್ ಕಂಪೆನಿಯು ಈಗ ಮತ್ತೆ ಸುದ್ದಿಯಲ್ಲಿದೆ. ಹೌದು, ಕ್ವಾಲ್ಕಮ್ ಸುದ್ದಿಯಲ್ಲಿದೆ ಎಂದರೆ ನಿಮ್ಮ ಊಹೆ ನಿಜ. ಏಕೆಂದರೆ, ನಾವು ಶೀಘ್ರದಲ್ಲಿಯೇ ಕ್ವಾಲ್ಕಮ್ ಕಂಪೆನಿಯ ಮಲ್ಟಿಕೋರ್ ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಕ್ವಾಲ್ಕಮ್ 710 Soc ಪ್ರೊಸೆಸರ್ ಅನ್ನು ಶೀಘ್ರದಲ್ಲಿಯೇ ಪಡೆದುಕೊಳ್ಳುತ್ತಿದ್ದೇವೆ.!
ಈ ವರ್ಷದ ಫೆಬ್ರವರಿ ತಿಂಗಳೀನಲ್ಲಿ ಕ್ವಾಲ್ಕಮ್ ಕಂಪೆನಿ ಘೋಷಿಸಿದಂತೆ, ಸ್ನ್ಯಾಪ್‌ಡ್ರಾಗನ್ 710 Soc ಪ್ರೊಸೆಸರ್ ತಯಾರಿಕಾ ಕಾರ್ಯವು ಈಗಾಗಲೇ ಪೂರ್ಣವಾಗಿ ಅಭಿವೃದ್ದಿಗೊಂಡಿದೆ. 10nmನ ಈ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 710 Soc ಹೊಸ ಪ್ರೊಸೆಸರ್ ಮಧ್ಯಮ-ವ್ಯಾಪ್ತಿಯ ಸಾಧನಗಳಿಗೆ ಎಲ್ಲಾ ಅಂಶಗಳಲ್ಲೂ ಸುಧಾರಣೆಗಳನ್ನು ತರಲಿದೆ ಎಂದು ತಿಳಿದುಬಂದಿದೆ.

ಡಿಸ್‌ಪ್ಲೇ, ವರ್ಧಿತ ರಿಯಾಲಿಟಿ, ಕ್ಯಾಮೆರಾ ಸಾಮರ್ಥ್ಯ, 3D ಗೇಮಿಂಗ್, ಬ್ಯಾಟರಿ ಬಾಳಿಕೆ ಸೇರಿ ಹಲವು ಫೀಚರ್ಸ್ ಅಪ್‌ಡೇಟ್‌ಗಳನ್ನು ಪಡೆದುಕೊಂಡು ಚಿಪ್‌ಸೆಟ್ ಅಭಿವೃದ್ದಿಯಾಗಿದೆ. ಹಾಗಾದರೆ, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 710 Soc ಪ್ರೊಸೆಸರ್ ಯಾವೆಲ್ಲಾ ಸುಧಾರಣೆಗಳನ್ನು ತರಲಿದೆ? ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಆಗುವ ಬದಲಾವಣೆಗಳಾವುವು ಎಂಬುದನ್ನು ತಿಳಿಯಿರಿ.

ಸ್ನ್ಯಾಪ್‌ಡ್ರಾಗನ್ 710 Soc!!
ಸ್ನ್ಯಾಪ್‌ಡ್ರಾಗನ್ 660 ಕ್ಕಿಂತ ಹೆಚ್ಚು ಹಾಗೂ ಸ್ನ್ಯಾಪ್‌ಡ್ರಾಗನ್ 835 ಮತ್ತು 845 ಕ್ಕಿಂತ ಕಡಿಮೆ ಸಾಮರ್ಥ್ಯದ ಪ್ರೊಸೆಸರ್ ಆಗಿ ಸ್ನ್ಯಾಪ್‌ಡ್ರಾಗನ್ 710 Soc ಪ್ರೊಸೆಸರ್ ತಯಾರಾಗಿದೆ. ಹಾಗಾಗಿ, ಮಧ್ಯಮ-ವ್ಯಾಪ್ತಿಯ ಸ್ಮಾರ್ಟ್‌ಫೋನ್‌ಗಳಿಗಾಗಿ ಕ್ವಾಲ್ಕಮ್ ಕಂಪೆನಿ ಸ್ನ್ಯಾಪ್‌ಡ್ರಾಗನ್ 710 Soc ಪ್ರೊಸೆಸರ್ ಅನ್ನು ತಯಾರಿಸಿದೆ ಎಂದು ಹೇಳಬಹುದು.

4K ಹೆಚ್‌ಡಿಆರ್ ಪ್ಲೇಬ್ಯಾಕ್
ಸ್ನ್ಯಾಪ್‌ಡ್ರಾಗನ್ 710 Soc ಪ್ರೊಸೆಸರ್ ವೀಡಿಯೊಗಳು ಮತ್ತು ಅಪ್ಲಿಕೇಶನ್ಗಳನ್ನು ವೀಕ್ಷಿಸಲು 4K HDR ಪ್ಲೇಬ್ಯಾಕ್ ಹೊಂದಿರಲಿದೆ. 4K ಹೆಚ್‌ಡಿಆರ್ ಪ್ಲೇಬ್ಯಾಕ್ ಸೇರಿಸುವುದರಿಂದ ಸ್ನಾಪ್ಡ್ರಾಗನ್ 710 ಗೆ ಹೆಚ್ಚಿನ ಪ್ರಕಾಶಮಾನತೆ, ವ್ಯಾಪಕವಾದ ಬಣ್ಣದ ಹರಿವು ಮತ್ತು ಬಣ್ಣದ ಆಳವನ್ನು ತರುತ್ತದೆ. ಇದು ವರ್ಧಿತ ದೃಶ್ಯ ಗುಣಮಟ್ಟಕ್ಕೆ ಕಾರಣವಾಗುತ್ತದೆ.


ಮಲ್ಟಿಕೋರ್ ಎಐ ಎಂಜಿನ್!!
ಮೊಬೈಲ್ ಜಗತ್ತು ಯಾವಾಗಲೂ ಬದಲಾಗುತ್ತಲೇ ಇರುತ್ತದೆ ಎಂಬುದಕ್ಕೆ ಸ್ನ್ಯಾಪ್‌ಡ್ರಾಗನ್ 710 Soc ಪ್ರೊಸೆಸರ್ ಸಾಕ್ಷಿಯಾಗಲಿದೆ. ಮಲ್ಟಿಕೋರ್ ಕೃತಕ ಬುದ್ದಿಮತ್ತೆ ಎಂಜಿನ್ ಚಾಲಿತ ಸ್ನ್ಯಾಪ್‌ಡ್ರಾಗನ್ 710 Soc ಪ್ರೊಸೆಸರ್ ಬಳಕೆಗೆ ಬಂದರೆ, ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಬಳಕೆ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಸಾಮರ್ಥ್ಯ ಎರಡುಪಟ್ಟು ಹೆಚ್ಚಾಗಲಿದೆ.

ಗುಣಮಟ್ಟದ ಫೋಟೋಗಳು!
ಹೊಸ ಕ್ವಾಲ್ಕಾಮ್ ಸ್ಪೆಕ್ಟ್ರಾ ವೃತ್ತಿಪರ ದರ್ಜೆಯ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಲಿದೆ. ಕಡಿಮೆ ಬೆಳಕಿನ ಛಾಯಾಗ್ರಹಣ, ಶಬ್ದ ಕಡಿತ, ವೇಗದ ಆಟೋಫೋಕಸ್, ಇಮೇಜ್ ಸ್ಥಿರೀಕರಣ, ಮೃದುವಾದ ಜೂಮ್ ಮತ್ತು ನೈಜ-ಸಮಯ ಬೊಕೆ ಪರಿಣಾಮಗಳೊಂದಿಗೆ ಸೆರೆಹಿಡಿಯುವಲ್ಲಿ ವರ್ಧನೆಗಳನ್ನು ಬೆಂಬಲಿಸುತ್ತದೆ.

ಕಾರ್ಯಕ್ಷಮತೆ ಮತ್ತು ಬ್ಯಾಟರಿ!
ಉನ್ನತ ಸಾಮರ್ಥ್ಯದ ಸಾಮರ್ಥ್ಯ, ದೀರ್ಘಾವಧಿಯ ಬ್ಯಾಟರಿ ಅವಧಿಯನ್ನು ಸ್ನ್ಯಾಪ್‌ಡ್ರಾಗನ್ 710 Soc ಪ್ರೊಸೆಸರ್ ತರಲಿದೆ. ಕಾರ್ಟೆಕ್ಸ್ TM ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಹೊಸ ಕ್ರೊಯೋ 25% ವೇಗವಾದ ವೆಬ್ ಬ್ರೌಸಿಂಗ್ ಮತ್ತು 15% ವೇಗವಾದ ಅಪ್ಲಿಕೇಶನ್ ಬಿಡುಗಡೆ ಸಮಯವನ್ನು ಬೆಂಬಲಿಸಲು ಹೊಂದುವಂತೆ ಮಾಡಿದೆ. ಸ್ನ್ಯಾಪ್‌ಡ್ರಾಗನ್ 660ಕ್ಕೆ ಹೋಲಿಸಿದಾಗ ವಿದ್ಯುತ್ ಬಳಕೆಯಲ್ಲಿ ಶೇ.20% ರಷ್ಟು ಕಡಿತವಾಗಲಿದೆ.


Click it and Unblock the Notifications








