ಹೊಸ ಪ್ರೊಸೆಸರ್ ಪರಿಚಯಿಸಿದ ಕ್ವಾಲ್ಕಾಮ್! ಅಬ್ಬಬ್ಬಾ ಏನ್ರಿ ಇದರ ಕಾರ್ಯಕ್ಷಮತೆ!
ಜನಪ್ರಿಯ ಪ್ರೊಸೆಸರ್ ತಯಾರಕ ಕಂಪೆನಿ ಕ್ವಾಲ್ಕಾಮ್ ತನ್ನ ಬಹುನಿರೀಕ್ಷಿತ ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್ ಬಿಡುಗಡೆ ಮಾಡಿದೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಪ್ರೊಸೆಸರ್ ಅಪ್‌ಗ್ರೇಡ್ ಮಾಡಿದ NPU ನೊಂದಿಗೆ AI ಮೇಲೆ ಗಮನವನ್ನು ಕೇಂದ್ರಿಕರಿಸಿದೆ. ಆಪಲ್‌ನ A-ಸಿಲಿಕಾನ್ ಕೌಂಟರ್‌ಪಾರ್ಟ್‌ನಿಂದ ಕಾರ್ಯಕ್ಷಮತೆಯ ಅಂತರವನ್ನು ಕಡಿಮೆ ಮಾಡಿದೆ.
ಹೌದು, ಕ್ವಾಲ್ಕಾಮ್ ಹೊಸ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್ ಪರಿಚಯಿಸಿದೆ. ಇನ್ನು ಈ ಪ್ರೊಸೆಸರ್‌ನಲ್ಲಿ 240FPS ಗೇಮಿಂಗ್‌ಗೆ ಬೆಂಬಲದೊಂದಿಗೆ ಕ್ವಾಲ್ಕಾಮ್ GPU ಕಾರ್ಯಕ್ಷಮತೆಯನ್ನು ಬಫ್ ಮಾಡಿದೆ. ಜೊತೆಗೆ ಜನರೇಟಿವ್ AI ಕಾರ್ಯಗಳಿಗಾಗಿ ಅತ್ಯಂತ ಶಕ್ತಿಶಾಲಿ ಪ್ರೊಸೆಸರ್ ಇದಾಗಿದೆ. ಇನ್ನುಳಿದಂತೆ ಈ ಹೊಸ ಪ್ರೊಸೆಸರ್ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್ ಕಾರ್ಯಕ್ಷಮತೆ ಹೇಗಿದೆ?
ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್ ಅನ್ನು TSMC ಯ 4nm ಆರ್ಕಿಟೆಕ್ಚರ್‌ನಲ್ಲಿ ಬಿಲ್ಟ್ ಮಾಡಲಾಗಿದೆ. ಇದು ಆಕ್ಟಾ-ಕೋರ್ ಪ್ರೊಸೆಸರ್ ಆಗಿದ್ದು, 1+3+2+2 ಕೋರ್ ಕಾನ್ಫಿಗರೇಶನ್ ಹೊಂದಿದೆ. ಅಂದರೆ ಈ ಕೆಳಗಿನ ವಿಧಾನವನ್ನು ಅನುಸರಿಸಲಾಗಿದೆ.
1 x ಕಾರ್ಟೆಕ್ಸ್ X4, 3.3GHz (ಪ್ರೈಮ್ ಕೋರ್)
3 x ಕಾರ್ಟೆಕ್ಸ್ A720, 3.2GHz (ಕಾರ್ಯಕ್ಷಮತೆ ಕೋರ್‌ಗಳು)
2 x ಕಾರ್ಟೆಕ್ಸ್ A720, 3.0GHz (ಕಾರ್ಯಕ್ಷಮತೆ ಕೋರ್‌ಗಳು)
2 x ಕಾರ್ಟೆಕ್ಸ್ A520, 2.3GHz (ದಕ್ಷತೆ ಕೋರ್‌ಗಳು)
ಈ ಹೊಸ ಪ್ರೊಸೆಸರ್ 30% ವೇಗವಾಗಿದ್ದು, ಹಿಂದಿನ ಸ್ನಾಪ್‌ಡ್ರಾಗನ್ 8 Gen 2 ಗಿಂತ 20% ಹೆಚ್ಚು ಪರಿಣಾಮಕಾರಿಯಾಗಿದೆ. ಇದು 24GB ವರೆಗೆ LPDDR5x RAM ಅನ್ನು ಬೆಂಬಲಿಸುತ್ತದೆ, ಅಲ್ಲದೆ 4800MHz ವರೆಗಿನ ಗರಿಷ್ಠ ಫ್ರಿಕ್ವೆನ್ಸಿಯನ್ನು ಬೆಂಬಲಿಸಲಿದೆ.
ಇನ್ನು ಈ ಹೊಸ ಸ್ನಾಪ್‌ಡ್ರಾಗನ್ 8 Gen 3 ನಲ್ಲಿ ಯಾವ GPU ಬಳಸಲಾಗಿದೆ ಅನ್ನೊದನ್ನ ಕ್ವಾಲ್ಕಾಮ್ ಬಹಿರಂಗಪಡಿಸಿಲ್ಲ. ಆದರೆ ಈ ಪ್ರೊಸೆಸರ್ GPU 25% ವೇಗವಾಗಿದ್ದು, ಗೇಮಿಂಗ್ ಮಾಡುವಾಗ ರೇ ಟ್ರೇಸಿಂಗ್‌ನಲ್ಲಿ 40% ಉತ್ತಮ ಕಾರ್ಯಕ್ಷಮತೆಯನ್ನು ನೀಡಲಿದೆ. ಇದಲ್ಲದೆ 240Hz ಸ್ಕ್ರೀನ್ ಮೇಲೆ 240FPS ನಲ್ಲಿ ಕನ್ಸೋಲ್ ಮಟ್ಟದ ಗೇಮಿಂಗ್ ಕಾರ್ಯಕ್ಷಮತೆಯನ್ನು ನೀಡಲು ಸಮರ್ಥವಾಗಿದೆ ಎಂದು ಕ್ವಾಲ್ಕಾಮ್ ಹೇಳಿದೆ.

ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್ ನೆಟ್‌ವರ್ಕ್ ಕನೆಕ್ಟಿವಿಟಿಗಾಗಿ ಸ್ನಾಪ್‌ಡ್ರಾಗನ್ X75 5G ಮೋಡೆಮ್ ಅನ್ನು ಒಳಗೊಂಡಿದೆ. ಇದು ಸೆಲ್ಯುಲಾರ್ ಕನೆಕ್ಟಿವಿಟಿಗಾಗಿ 2×2 MIMO ಜೊತೆಗೆ 5G (SA ಮತ್ತು NSA), mmWave ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಪ್ರೊಸೆಸರ್ ಸ್ಯಾಟ್‌ಲೈಟ್ ಕನೆಕ್ಟಿವಿಟಿಯನ್ನು ಸಹ ಬೆಂಬಲಿಸಲಿದೆ. ಇನ್ನು ಸ್ನಾಪ್‌ಡ್ರಾಗನ್ 8 Gen 3 SoC ನಲ್ಲಿರುವ ಮೋಡೆಮ್ 10Gbps ವರೆಗೆ ಡೌನ್‌ಲೋಡ್ ವೇಗವನ್ನು ಹೊಂದಿದ್ದು, 3.5Gbps ವರೆಗಿನ ವೇಗವನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗಲಿದೆ.
ಈ ಪ್ರೊಸೆಸರ್ 200MP ಸಾಮರ್ಥ್ಯದ ಕ್ಯಾಮೆರಾಗಳನ್ನು ಬೆಂಬಲಿಸುತ್ತದೆ. ಅಲ್ಲದೆ 8K HDR ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ 60Hz ನಲ್ಲಿ 4K ರೆಸಲ್ಯೂಶನ್‌ನ ಡಿಸ್‌ಪ್ಲೇಗಳನ್ನು ರನ್ ಆಗಲಿದೆ. ಇದು 144Hz ನಲ್ಲಿ QHD ಸ್ಕ್ರೀನ್‌ಗಳನ್ನು ಸಹ ಬೆಂಬಲಿಸಲಿದ್ದು, 30Hz ನಲ್ಲಿ 8K ರೆಸಲ್ಯೂಶನ್ ಮತ್ತು 240Hz ನಲ್ಲಿ 1080p ವರೆಗಿನ external ಡಿಸ್‌ಪ್ಲೇಯನ್ನು ಸಹ ಬೆಂಬಲಿಸಲಿದೆ ಎನ್ನಲಾಗಿದೆ.

ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್ ಸಹ AI ಕಾರ್ಯಕ್ಷಮತೆಯಲ್ಲಿ ಭಾರಿ ದಾಪುಗಾಲುಗಳನ್ನು ತೆಗೆದುಕೊಂಡಿದೆ. ಇನ್ನು ಈ ಪ್ರೊಸೆಸರ್ ಅಪ್ಡೇಟ್ ಮಾಡಿದ ಷಡ್ಭುಜಾಕೃತಿ NPU ಅನ್ನು ಬಳಸಿದೆ, ಜನರೇಟಿವ್ AI ಕಾರ್ಯಗಳಿಗಾಗಿ ವೇಗವಾಗಿ ಮೊಬೈಲ್ ಪ್ರೊಸೆಸರ್ ಮಾಡಿದೆ. ಪ್ರೊಸೆಸರ್ ಮೆಟಾದ ಲಾಮಾ 2 ಚಾಟ್‌ಬಾಟ್ ಅನ್ನು ಬೆಂಬಲಿಸುತ್ತದೆ, ಇದು ಬಳಕೆದಾರರಿಂದ ಪಠ್ಯ ಮತ್ತು ಇಮೇಜ್ ಇನ್‌ಪುಟ್‌ಗಳನ್ನು ಸ್ವೀಕರಿಸುತ್ತದೆ ಎಂದು ವರದಿಯಾಗಿದೆ.


Click it and Unblock the Notifications








