Subscribe to Gizbot

ಕ್ವಾಲಕಂನಿಂದ ಅಕ್ಟಾ ಕೋರ್‌ ಚಿಪ್‌ ಬಿಡುಗಡೆ

Posted By:

ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಮಾರ್ಟ್‌ಫೋನ್‌ ಕಂಪೆನಿಗಳು ಅಕ್ಟಾಕೋರ್‌(ಎಂಟು ಕೋರ್‌) ಹೆಕ್ಸಾ ಕೋರ್‌(ಆರು ಕೋರ್‌) ಪ್ರೊಸೆಸರ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಅಮೆರಿಕದ ಚಿಪ್‌ ತಯಾರಕಾ ಕಂಪೆನಿ ಕ್ವಾಲಕಂ ಅಕ್ಟಾಕೋರ್‌ ಮತ್ತು ಹೆಕ್ಸಾಕೋರ್‌ ಸ್ನಾಪ್‌ಡ್ರಾಗನ್‌ ಚಿಪ್‌ನ್ನು ಬಿಡುಗಡೆ ಮಾಡಿದೆ. ಸುಧಾರಿತ ಎರಡು 64 ಬಿಟ್‌ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌‌‌ ಕಡಿಮೆ ವಿದ್ಯುತ್ ಬಳಕೆ ಮಾಡಿ ಉತ್ತಮ ಕಾರ್ಯ‌ಕ್ಷಮತೆ ನೀಡಲಿದೆ ಎಂದು ಕ್ವಾಲಕಂ ತಿಳಿಸಿದೆ.ಮುಂದಿನ ವರ್ಷದ ಆರಂಭದಲ್ಲಿಈ ಚಿಪ್‌‌ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಕ್ವಾಲಕಂ ಹೇಳಿದೆ.

 ಕ್ವಾಲಕಂನಿಂದ ಅಕ್ಟಾ ಕೋರ್‌ ಚಿಪ್‌ ಬಿಡುಗಡೆ

ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುವ ಚೀನಾ ಮತ್ತು ದೇಶೀಯ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಹೆಚ್ಚಾಗಿ ಮೀಡಿಯಾ ಟೆಕ್‌ ಕಂಪೆನಿ ಅಭಿವೃದ್ಧಿ ಪಡಿಸಿರುವ ಪ್ರೊಸೆಸರ್‌ಗಳನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನೀಡುತ್ತವೆ.ಮೀಡಿಯಾ ಟೆಕ್‌ ಕಂಪೆನಿ ಕಂಪೆನಿ 2013 ನವೆಂಬರ್‌ನಲ್ಲಿ ಅಕ್ಟಾ ಕೋರ್‍ ಪ್ರೊಸೆಸರ್‌ನ್ನು ಬಿಡುಗಡೆ ಮಾಡಿತ್ತು. ಮೀಡಿಯಾ ಟೆಕ್‌ ಬಿಡುಗಡೆ ಮಾಡಿದ ಬಳಿಕ ಪ್ರಸ್ತುತ ದಿನಗಳಲ್ಲಿ ಕಾರ್ಬ‌ನ್‌,ಮೈಕ್ರೋಮ್ಯಾಕ್ಸ್‌,ಇಂಟೆಕ್ಸ್‌,ಜಿಯೋನೀ ಕಂಪೆನಿ ಮಾರುಕಟ್ಟೆಗೆ ಅಕ್ಟಾ ಕೋರ್‍ ಪ್ರೊಸೆಸರ್‌‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.

ಮೀಡಿಯಾಟೆಕ್‌ ಹೊರತು ಪಡಿಸಿ ಸ್ಯಾಮ್‌ಸಂಗ್‌ ಒಂದೇ ಅಕ್ಟಾ ಕೋರ್‌ ಮತ್ತು ಹೆಕ್ಸಾ ಕೋರ್‌ ಪ್ರೊಸೆಸರ್‌ನ್ನು ತಯಾರಿಸಿದೆ. ಸ್ಯಾಮ್‌ಸಂಗ್‌ ತನ್ನ ಸ್ಮಾರ್ಟ್‌ಫೋನ್‌ ಮತ್ತು ಫ್ಯಾಬ್ಲೆಟ್‌‌ಗಳಿಗೆ Exynos 5 ಅಕ್ಟಾಕೋರ್‌ ಪ್ರೊಸೆಸರ್‌‌ನ್ನು ತಯಾರಿಸಿದ್ದು,ಗೆಲಾಕ್ಸಿ ಎಸ್‌ 4,ನೋಟ್‌3 ಅಕ್ಟಾ ಕೋರ್‌ ಪ್ರೊಸೆಸರ್‌ನಲ್ಲಿ ಬಿಡುಗಡೆಯಾಗಿದ್ದರೆ, ಗೆಲಾಕ್ಸಿ ನೋಟ್‌ 3 ನಿಯೋಗೆ ಹೆಕ್ಸಾ ಕೋರ್‌ ಪ್ರೊಸೆಸರ್‌ ನೀಡಿತ್ತು.

ಕ್ವಾಲಕಂ ಕಂಪೆನಿಯ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ನ್ನು ಎಲ್‌ಜಿ,ಸೋನಿ,ಮೋಟೋರೋಲಾ,ಎಚ್‌ಟಿಸಿ, ನೋಕಿಯಾ,ಬ್ಲ್ಯಾಕ್‌ಬೆರಿಯಂತ ಬ್ರ್ಯಾಂಡೆಡ್‌ ಕಂಪೆನಿಗಳು ತಮ್ಮ ಸ್ಮಾರ್ಟ್‌ಫೋನ್‌‌‌ಗಳಲ್ಲಿ ಬಳಸುತ್ತವೆ.ಈ ಪ್ರೊಸೆಸರ್‌ನ ಕಾರ್ಯ‌ಕ್ಷಮತೆ ಉತ್ತಮವಾಗಿದ್ದು ಮೀಡಿಯಾ ಟೆಕ್‌‌ಗೆ ಹೋಲಿಸಿದ್ದಲ್ಲಿ ಬೆಲೆ ಹೆಚ್ಚಿಗೆ ಇರುವುದರಿಂದ ಈ ಪ್ರೊಸೆಸರ್‌ ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳ ಬೆಲೆ ಮಾರುಕಟ್ಟೆಯಲ್ಲಿ ದುಬಾರಿಯಾಗಿರುತ್ತದೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot