Home
ಸುದ್ದಿಜಾಲ

ಕೋವಿಡ್‌-19 ವಿರುದ್ದ ಹೋರಾಟದಲ್ಲಿ ಕ್ವಿಕರ್‌ ಸಂಸ್ಥೆಯಿಂದ ಹೊಸ ಹೆಜ್ಜೆ!

ಕೊರೊನಾ ವೈರಸ್‌ನಿಂದಾಗಿ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಇಂತಹ ಸಮಯದಲ್ಲಿ ಎಲ್ಲಾ ವಲಯಗಳು ಸಹಕಾರಕ್ಕೆ ನಿಲ್ಲಲೇಬೇಕಾಗಿದೆ. ಸದ್ಯ ಟೆಕ್‌ ವಲಯದ ಉದ್ಯಮಗಳು ಕೂಡ ಕೊರೊನಾ ವೈರಸ್‌ ವಿರುದ್ದದ ಹೋರಾಟದಲ್ಲಿ ಸರ್ಕಾರಗಳ ಜೊತೆ ಕೈ ಜೋಡಿಸಿವೆ. ಅಷ್ಟ ಅಲ್ಲ ಸಾಧ್ಯವಾದಷ್ಟು ತಮ್ಮ ಟ್ರಸ್ಟ್‌ ಮತ್ತು ಕಂಪೆನಿಗಳ ಮೂಲಕ ಸಹಾಯ ಹಸ್ತವನ್ನ ಚಾಚಿವೆ. ಇನ್ನು ಕೆಲ ಉದ್ಯಮಗಳು ಕೊರೊನಾ ವಿರುದ್ದದ ಹೊರಾಟಕ್ಕೆ ಬೇಕಾದ ಅಗತ್ಯ ಉಪಕರಣಗಳ ಉತ್ಪಾದನೆಗೆ ಮುಂದಾಗಿವೆ. ಇವುಗಳಲ್ಲಿ ಕ್ವಿಕರ್‌ ಕಂಪೆನಿ ಕೂಡ ಒಂದಾಗಿದ್ದು, ಕೊರೊನಾ ವಿರುದ್ದದ ಹೋರಾಟಕ್ಕೆ ಕೈ ಜೋಡಿಸಿದೆ.

ಹೌದು

ಹೌದು, ಜನಪ್ರಿಯ ಆನ್‌ಲೈನ್‌ ಮಾರುಕಟ್ಟೆಯೆಮದು ಪ್ರಸಿದ್ದಿ ಪಡೆದುಕೊ0ಡಿರುವ ಕ್ವಿಕರ್‌ ಕೊರೊನಾ ವೈರಸ್‌ ವಿರುದ್ದದ ಹೋರಾಟದಲ್ಲಿ ವೈದ್ಯಕೀಯ ಸೇವೆ ಮಾಡಲು ಮುಂದೆ ಬಂದಿದೆ. ಈಗಾಗಲೇ ಹಲವು ವಲಯದ ಕಂಪೆನಿಗಳು ಕಯ ಜೋಡಿಸಿದ್ದು ಇದಕ್ಕೆ ಕ್ವಿಕರ್‌ ಹೊಸ ಸೇಪರ್ಡೆ ಆಗಿದೆ. ಸದ್ಯ ಕ್ವಿಕರ್‌ ತುರ್ತು ಸಂದರ್ಭದಲ್ಲಿ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನ ಪೂರೈಕೆ ಮಾಡುವುದಕ್ಕೆ ಮುಂದಾಗಿದೆ. ಹಾಗಾದ್ರೆ ಕ್ವಿಕರ್ ಸಹಾಯ ಮಾಡಲು ಯಾವ ಮಾದರಿಯ ಕ್ರಮ ಅನುಸರಿಸಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಕೊರೊನಾ

ಸದ್ಯ ಕೊರೊನಾ ವಿರುದ್ದದ ಹೋರಾಟದಲ್ಲಿ ವಯದ್ಯಕೀಯ ಉಪಕರಣಗಲ ಅಗತ್ಯ ಅತ್ಯವಶ್ಯಕವಾಗಿದೆ. ಕ್ಷಣ ಮಾತ್ರ ಯಾಮಾರಿದರೂ ಜೀವವನ್ನೇ ತೆಗೆಯಬಲ್ಲ ಮಾರಕ ವೈರಸ್‌ ಕೊರೊನಾ ವಿರುದ್ದ ಹೊರಾಡಲು ವೈದ್ಯಕೀಯ ಸೇವೆ ಹಗಲು ರಾತ್ರಿ ಶ್ರಮ ಪಡುತ್ತಿದೆ. ಇದೀಗ ಮೂಲ ವೈದ್ಯಕೀಯ ಉಪಕರಣಗಳು ಮತ್ತು ಸಾಮಗ್ರಿಗಳಿಗೆ ವೈದ್ಯಕೀಯ ಸಮುದಾಯಗಳು ಸಂಬಂಧಿತ ಪೂರೈಕೆದಾರರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಲು, ಆನ್‌ಲೈನ್ ಮಾರುಕಟ್ಟೆ ಕ್ವಿಕರ್‌ ಸಹಾಯವಾಣಿ.ಇನ್ ಅನ್ನು ಪ್ರಾರಂಭಿಸಿದೆ.

ಸಹಾಯವಾಣಿ

ಕ್ವಿಕರ್‌ ಸಹಾಯವಾಣಿ.ಇನ್‌ ಇದು ಕ್ವಿಕರ್‌ ಪ್ರಾರಂಬಿಸಿರುವ ಸಹಾಯವಾಣಿ ಆಗಿದ್ದು, ಈ ಸಹಾಯವಾಣಿಯ ಮೂಲಕ ಅಗತ್ಯ ವೈದ್ಯಕೀಯ ಉಪಕರಣಗಳು ವೈದ್ಯಕೀಯ ಮೂಲಗಳಿಂದ ಪಡೆಯಲು ಉಪಯೋಗವಾಗಲಿದೆ ಅಂದರೆ ಒಂದು ಸ್ಥಳದಲ್ಲಿರುವ ವೈದ್ಯಕೀಯ ಸಮೂಹ ಮತ್ತೊಂದು ಕಡೆ ಇರುವ ವೈದ್ಯಕೀಯ ಸಮೂಹದಿಂದ ಉಪಕರಣಗಳನ್ನ ಪೂರೈಸಿಕೊಳ್ಳಲು ಈ ಸಹಾಯವಾಣಿ ಸಹಾಯ ಮಾಡಲಿದೆ. ಕೋವಿಡ್ -19 ಹರಡುವುದನ್ನು ತಡೆಯಲು ಸದ್ಯ ಭಾರತದಲ್ಲಿ ಲಾಕ್‌ಡೌನ್‌ ಆದೇಶ ಇರುವುದರಿಂದ ವೈದ್ಯಕೀಯ ಸರಬರಾಜುಗಳ ಕೊರತೆ ಉಂಟಾಗಬಹುದು ಇದನ್ನು ನಿವಾರಿಸಲು ಕ್ವಿಕರ್‌ ಈ ಪ್ಲ್ಯಾನ್‌ ಅನ್ನು ಮಾಡಿದೆ.

ಉಪಕ್ರಮವು

ಇನ್ನು ಈ ಸಹಾಯವಾಣಿ.ಇನ್ ಉಪಕ್ರಮವು ತುರ್ತು ಆಧಾರದ ಮೇಲೆ ಅಗತ್ಯವಿರುವ ವೈದ್ಯಕೀಯ ಅವಶ್ಯಕತೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅಲ್ಲದೆ ಆಸ್ಪತ್ರೆಗಳು ವೈದ್ಯರನ್ನು ಪೂರೈಸುವ ಪೂರೈಕೆದಾರರೊಂದಿಗೆ ಕನೆಕ್ಟಿವಿಟಿಯನ್ನ ಸಾಧ್ಯವಾಗಿಸುತ್ತದೆ. ಪ್ರಸ್ತುತ ಲಭ್ಯವಿರುವ ಪ್ಯಾನ್ ಇಂಡಿಯಾ, ಹೆಲ್ಪ್ ಹಾಸ್ಪಿಟಲ್ಸ್.ಇನ್ 3-ಪ್ಲೈ ಮಾಸ್ಕ್, ಗ್ಲೌಸ್, ಬಫಂಟ್ ಕ್ಯಾಪ್ಸ್, ಕವರಲ್ ಸೂಟ್, ವೆಂಟಿಲೇಟರ್, ಹ್ಯಾಂಡ್ ಸ್ಯಾನಿಟೈಜರ್ಸ್, ಬ್ಲೀಚ್ ಸೋಂಕುನಿವಾರಕ, ಇನ್ಫ್ರಾರೆಡ್ ಥರ್ಮಾಮೀಟರ್, ಸೂಜಿ ಕಟ್ಟರ್ ಮತ್ತು ಎಚ್‌ಎಂಇ ಬ್ಯಾಕ್ಟೀರಿಯಾದ ವೈರಲ್ ಉಸಿರಾಟದ ಫಿಲ್ಟರ್‌ಗಳಂತಹ ವಸ್ತುಗಳನ್ನು ಒಂದೆಡೆ ಸಂಘಟಿಸಲು ಸಹಾಯ ಮಾಡುತ್ತಿದೆ.

ವಲಯದ

ಅಲ್ಲದೆ ಟೆಕ್‌ ವಲಯದ ಕಂಪೆನಿಯಿಂದ ಇದೇ ಮೊದಲ ಭಾರಿಗೆ ಈ ಮಾದರಿಯ ಸಹಾಯವಾಣಿಯನ್ನ ಪ್ರಾರಂಬಿಸಿರೊದು ದಿಟ್ಟ ಹೆಜ್ಜೆ ಆಗಿದೆ. ಲಾಕ್‌ಡೌನ್‌ನಂತಹ ಸಮಯದಲ್ಲಿ ಇಂತಹ ಕ್ರಮದ ಅವಶ್ಯಕತೆ ಇತ್ತು. ಇದನ್ನು ಜಾರಿಗೆ ತರುವಲ್ಲಿ ಕ್ವಿಕರ್‌ ಯಶಸ್ವಿಯಾಗಿದೆ ಅನ್ನೊದು ಉದ್ಯಮ ವಲಯದ ಅಭಿಪ್ರಾಯವಾಗಿದೆ. ಇದನ್ನು ದೇಶಾದ್ಯಂತ ಕೋವಿಡ್ -19 ಸವಾಲುಗಳನ್ನು ಎದುರಿಸಲು ಬಳಸಿಕೊಳ್ಳಬಹುದಾಗಿದೆ. ಸದ್ಯ ಈ ಮಾದರಿ ಹೊಸ ಆವಿಷ್ಕಾರಗಳನ್ನು ಬೆಂಬಲಿಸಲು ಭಾರತ ಸದಾ ಪ್ರೋತ್ಸಾಹಿಸುತ್ತದೆ.

Best Mobiles in India

English summary
To facilitate easy sourcing of vital life-saving equipment, protective gear etc amid the lockdown.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+