ಬೆಂಗಳೂರು-ಮೈಸೂರು ರೈಲು ಪ್ರಯಾಣದ 138 ಕಿ.ಮೀ ವರೆಗೂ ಉಚಿತ ವೈಫೈ!!

|

ಮೈಸೂರು ಮತ್ತು ಬೆಂಗಳೂರು ನಡುವಿನ ರೈಲು ಪ್ರಯಾಣ ಮಾಡುವಾಗ ಇನ್ಮುಂದೆ ನಿಮಗೆ ಬೇಜಾರು ಆಗುವುದಿಲ್ಲ. ಏಕೆಂದರೆ, ಮೈಸೂರು-ಬೆಂಗಳೂರು ನಡುವೆ ರೈಲು ಪ್ರಯಾಣ ಮಾಡುವವರಿಗಾಗಿ ರೈಲ್ವೆ ಇಲಾಖೆ ಉಚಿತ ವೈ-ಫೈ ಸೌಲಭ್ಯ ಕಲ್ಪಿಸಿಶದೆ. ಈವರೆಗೆ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ಸಿಗುತ್ತಿದ್ದ ಉಚಿತ ವೈ-ಫೈ ಈಗ ಪ್ರಯಾಣದ ಉದ್ದಕ್ಕೂ ಸಿಗಲಿದೆ .

ಹೌದು, ಮೈಸೂರು ಮತ್ತು ಬೆಂಗಳೂರು ನಡುವಿನ ರೈಲು ಪ್ರಯಾಣದ ಉದ್ದಕ್ಕೂ ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸಿರುವುದನ್ನು ರೈಲ್ವೆ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದು, ಈವರೆಗೆ ಮಾರ್ಗದ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ಸಿಗುತ್ತಿದ್ದ ಉಚಿತ ವೈ-ಫೈ ಇನ್ನು ಮುಂದೆ ಈ ಮಾರ್ಗದ ಎಲ್ಲಾ ನಿಲ್ದಾಣಗಳಲ್ಲೂ ದೊರೆಯಲಿದೆ ಎಂದು ಸಾರ್ವಜನಿಕರಿಗೆ ತಿಳಿಸಿದೆ.

ಬೆಂಗಳೂರು-ಮೈಸೂರು ರೈಲು ಪ್ರಯಾಣದ 138 ಕಿ.ಮೀ ವರೆಗೂ ಉಚಿತ ವೈಫೈ!!

ಬೆಂಗಳೂರು ನಗರ ನಿಲ್ದಾಣದಿಂದ ಶುರುವಾಗುವ ಉಚಿತ ವೈಫೈ ಸೇವೆಯು ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು, ನಾಯಂಡಹಳ್ಳಿ, ಹೆಜ್ಜಾಲ, ಶೆಟ್ಟಿಹಳ್ಳಿ, ಹನಕೆರೆ, ಯಲಿಯೂರು, ಬ್ಯಾಡರಹಳ್ಳಿ, ಪಾಂಡವಪುರ, ನಾಗನಹಳ್ಳಿ ಸೇರಿದಂತೆ ಒಟ್ಟು 17 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಹೈಸ್ಪೀಡ್ ಉಚಿತ ವೈಫೈ ಅನ್ನು ಕಲ್ಪಿಸಲಾಗಿದೆ.

ರೈಲ್ವೆ ಮಂತ್ರಾಲಯದ ರೈಲ್‌ಟೆಲ್‌ ಕಾರ್ಪೋರೆಷನ್‌ ಆಫ್ ಇಂಡಿಯಾ ಲಿ. ಒದಗಿಸುತ್ತಿದ್ದು, ಜನವರಿಯಲ್ಲಿ ಆರಂಭವಾದ ಸೇವೆ ಇದೀಗ ಸಂಪೂರ್ಣಗೊಂಡಿದೆ. ಎಲ್ಲಾ ನಿಲ್ದಾಣಗಳಲ್ಲೂ ಉಚಿತ ವೈ-ಫೈ ಸೌಲಭ್ಯ ಕಲ್ಪಿಸಿದ್ದರಿಂದ 3,16,157 ಬಳಕೆದಾರರು ಒಟ್ಟು 109.757 ಟಿಬಿ ಡೇಟಾ ಬಳಸಿದ್ದಾರೆ ಎಂದು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಆರ್‌.ಎಸ್‌.ಸಕ್ಸೇನಾ ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ರೈಲು ಪ್ರಯಾಣದ 138 ಕಿ.ಮೀ ವರೆಗೂ ಉಚಿತ ವೈಫೈ!!

ಪ್ರಯಾಣಿಕರ ಬಳಿ ಡೇಟಾ ಇಲ್ಲದಿದ್ದರೂ ಸಹ ಡಿಜಿಟಲ್ ಕಾರ್ಯಗಳಿಗೆ ಸಹಾಯವಾಗುವ ಸಲುವಾಗಿಉಚಿತ ವೈಫೈ ಅನ್ನು ಕಲ್ಪಿಸಲಾಗಿದೆ. ಬೆಂಗಳೂರು- ಮೈಸೂರು ನಡುವೆ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹಾಗಾಗಿ, ರೈಲಿನಲ್ಲಿ ಪ್ರಯಾಣಿಸುವ 138 ಕಿ.ಮೀ ವರೆಗೂ ಸಹ ಪ್ರಯಾಣಿಕರಿಗೆ ಉಚಿತ ಹೈಸ್ಪೀಡ್ ವೈ-ಫೈ ಡೇಟಾ ಸೌಲಭ್ಯ ನೀಡಲಾಗಿದೆ.

Most Read Articles
Best Mobiles in India

English summary
Railways Free WiFi: Railways now offers free WiFi at over 17 bangalore to mysore stations. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X