Just In
Don't Miss
- Movies
Odeya Review: ಅಣ್ಣತಮ್ಮಂದಿರ ಮಾಸ್, ಕ್ಲಾಸ್ ಮಸಾಲ
- News
ಯಡಿಯೂರಪ್ಪ ಕಾಲಿಗೆ ಬಿದ್ದ ಜೆಡಿಎಸ್ ಶಾಸಕ ಸುರೇಶ್ ಗೌಡ
- Automobiles
ಟಾಟಾ ಮೋಟಾರ್ಸ್ ಬಹುನೀಕ್ಷಿತ ನೆಕ್ಸಾನ್ ಎಲೆಕ್ಟ್ರಿಕ್ ಟೀಸರ್ ಬಿಡುಗಡೆ
- Finance
ಅಮೆರಿಕಾದ ಈ ಕಂಪನಿಯಿಂದ ಉದ್ಯೋಗಿಗಳಿಗೆ ಲಕ್ಷ, ಲಕ್ಷ ಕ್ರಿಸ್ಮಸ್ ಬೋನಸ್!
- Sports
ರಣಜಿ ಕರ್ನಾಟಕ vs ತಮಿಳುನಾಡು; ರೋಚಕ ಪಂದ್ಯದಲ್ಲಿ ಯಾರಿಗೆ ಗೆಲುವು?
- Lifestyle
ಈ ಮುದ್ದು ಪಾಂಡಾಗಳ ಆಟ ನೋಡಿದರೆ ನೀವು ಮನಸು ಬಿಚ್ಚಿ ನಗುವಿರಿ
- Education
UPSC ESE Admit Card 2020: ಇಂಜಿನಿಯರಿಂಗ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಮಹಿಳೆಯರಿಗೆ ಉಚಿತ ಸ್ಮಾರ್ಟ್‌ಫೋನ್, ವೈಫೈ ಘೋಷಿಸಿದ ಸರ್ಕಾರ!!
ಡಿಜಿಟಲ್ ಇಂಡಿಯಾ ಅಭಿಯಾನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜಸ್ತಾನ ಸರಕಾರ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಮೊಬೈಲ್ ಪೋನ್‌ಗಳನ್ನು ನೀಡುವುದಾಗಿ ಘೋಷಿಸಿದೆ. ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರ ಏಳಿಗೆಗಾಗಿ ಸ್ಮಾರ್ಟ್‌ಪೋನ್‌ಗಳನ್ನು ಶೀಘ್ರದಲ್ಲೇ ಒದಗಿಸುವ ಅಭಯವನ್ನು ರಾಜಸ್ತಾನ ಸರ್ಕಾರ ಪ್ರಕಟಿಸಿದೆ.
ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರನ್ನು ಡಿಜಿಟಲ್ ಯುಗಕ್ಕೆ ಕರೆದೊಯ್ಯಲು ಮುಂದಾಗಿರುವ ರಾಜಸ್ತಾನ ಸರ್ಕಾರವು, ಗ್ರಾಮೀಣ ಮಹಿಳೆಯರಿಗಾಗಿ ಉಚಿತ ಸ್ಮಾರ್ಟ್‌ಫೊನ್ ಮತ್ತು ಕೇವಲ ಪೋನ್ ಬಟನ್ ಒತ್ತುವ ಮೂಲಕ ಬಡವರು ಸಹ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತಹ ಹೊಸ ಅಪ್ಲಿಕೇಷನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ನೂತನ ಬಾಮಶಾ ಯೋಜನೆಯಡಿ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳ ಆರ್ಥಿಕ ಮತ್ತು ಆರ್ಥಿಕೇತರ ಅನುಕೂಲಗಳನ್ನು ಪ್ರಾಮಾಣಿಕವಾಗಿ ಫಲಾನುಭವಿಗಳಿಗೆ ದೊರಕಿಸುವುದು ನಮ್ಮ ಗುರಿಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು ಸ್ಮಾರ್ಟ್‌ಪೋನ್‌ಗಳನ್ನು ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ತಿಳಿಸಿದ್ದಾರೆ.
ಸ್ಮಾರ್ಟ್‌ಫೋನ್ ನೀಡು ಜೊತೆಗೆ ಇಂಟರ್‌ನೆಟ್ ಸಂಪರ್ಕವನ್ನು ನೀಡಲು ವ್ಯವಸ್ಥೆ ಕೈಗೊಂಡಿರುವ ರಾಜಸ್ತಾನ ಸರ್ಕಾರ, ರಾಜ್ಯದ ಜನರನ್ನು ಹೊರ ಜಗತ್ತಿಗೆ ಸಂಪರ್ಕಿಸುವ ನಿಟ್ಟಿನಲ್ಲಿ 5 ಸಾವಿರ ಗ್ರಾಮ ಪಂಚಾಯಿತಿಗಳಿಗೆ ಉಚಿತವಾಗಿ ವೈ ಪೈ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದೆ. ಸೆಪ್ಟೆಂಬರ್ 1 ರಿಂದ ಉಚಿತ ವೈ ಪೈ ಕಲ್ಪಿಸುವ ಸೌಲಭ್ಯ ಯೋಜನೆ ಆರಂಭವಾಗಿದೆ.
ಜನರನ್ನು ಡಿಜಿಟಲ್ ಪ್ರಪಂಚಕ್ಕೆ ಕರೆದೊಯ್ಯುವ ಸಲುವಾಗಿ ಭಾರೀ ಪ್ರಯತ್ನಿಸುತ್ತಿರುವ ರಾಜಸ್ತಾನ ಸರ್ಕಾರ ಇದೇ ಮೊದಲ ಬಾರಿಗೆ ಇಂತಹ ಕ್ರಮಕ್ಕೆ ಮುಂದಾಗಿಲ್ಲ. ಕಳೆದ ಆಗಸ್ಟ್ 29 ರಂದು ಡಿಜಿಟಲ್ ಪಾವತಿಗಾಗಿ ಬಾಮಶಾ ವ್ಯಾಲೆಟ್ ಮೊಬೈಲ್ ಅನ್ನು ವಸುಂಧರಾ ರಾಜೇ ಅವರು ಬಿಡುಗಡೆ ಮಾಡಿದ್ದರು. ತಂತ್ರಜ್ಞಾನವನ್ನು ಜನರ ಹತ್ತಿರ ತರಲು ಮುಂದಾಗಿದ್ದರು.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090