ದೇಶದ ಗಡಿಯಲ್ಲಿ ಸ್ಮಾರ್ಟ್‌ಬೇಲಿ!..ಆಕಾಶ, ನೀರಲ್ಲೂ ಒಂದು ಸೊಳ್ಳೆ ಕೂಡ ನುಸುಳೋಕೆ ಆಗೊಲ್ಲಾ!!

|

ಬಹುತೇಕ ಮುಂದುವರೆದ ರಾಷ್ಟ್ರಗಳಷ್ಟೇ ಹೊಂದಿದ್ದ ಸ್ಮಾರ್ಟ್‌ಬೇಲಿ ತಂತ್ರಜ್ಞಾನವನ್ನು ಭಾರತ ಸೇನೆ ಇದೀಗ ಅಳವಡಿಸಿಕೊಂಡಿದೆ. ಭಾರತಕ್ಕೆ ನುಸುಳುವ ಉಗ್ರರ ಸಂಹಾರಕ್ಕೆ ಹಾಗೂ ಆಯತಪ್ಪಿ ಗಡಿದಾಟುವ ಯೋಧರನ್ನು ಗಡಿಯಲ್ಲೇ ಕಾಪಾಡುವ ಉದ್ದೇಶದಿಂದ ನಿರ್ವಿುಸಲಾಗಿರುವ 'ಸ್ಮಾರ್ಟ್ ಬೇಲಿ'ಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟಿಸಿದ್ದಾರೆ.

ಜಮ್ಮು ಸೆಕ್ಟರ್​ನ ಅಂತಾರಾಷ್ಟ್ರೀಯ ಗಡಿಯಲ್ಲಿ ಸಮಗ್ರ ಸಂಯೋಜಿತ ಗಡಿ ನಿರ್ವಹಣಾ ಯೋಜನೆ (ಸಿಐಬಿಎಂಎಸ್) ಎರಡು ಪ್ರಾಯೋಗಿಕ ಯೋಜನೆಯಡಿ ತಲಾ 5.5 ಕಿ.ಮೀ. ಉದ್ದದ 'ಸ್ಮಾರ್ಟ್ ಬೇಲಿ' ನಿರ್ವಿುಸಲಾಗಿದೆ. ಈ ಸ್ಮಾರ್ಟ್‌ ಬೇಲಿಯನ್ನು ನಿರ್ಮಿಸುವ ಮೂಲಕ ಭಯೋತ್ಪಾದನೆ ಕುಕೃತ್ಯಗಳನ್ನು ನಡೆಸುವ ನುಸುಳುಕೋರರಿಗೆ ಸರ್ಕಾರ ಭರ್ಜರಿ ಶಾಕ್ ನೀಡಿದೆ.

ಗಡಿಯಲ್ಲಿ ಸ್ಮಾರ್ಟ್‌ಬೇಲಿ!.ಆಕಾಶ, ನೀರಲ್ಲೂ ಒಂದು ಸೊಳ್ಳೆ ಕೂಡ ನುಸುಳೋಕೆ ಆಗೊಲ್ಲ!

ಸ್ಮಾರ್ಟ್​ ಬೇಲಿಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಸಚಿವರು ಈ 'ಸ್ಮಾರ್ಟ್‌ಬೇಲಿ'ಯನ್ನು ಅಳವಡಿಸಿದ ನಂತರ ಪಾಕಿಸ್ತಾನ ಗಡಿ ಮತ್ತಷ್ಟು ಸದೃಢವಾಗಲಿದೆ ಎಂಬ ತಿಳಿಸಿದ್ದಾರೆ. ಹಾಗಾದರೆ, ಭಾರತ ಅಳವಡಿಸಿಕೊಂಡಿರುವ ಸ್ಮಾರ್ಟ್‌ ಬೇಲಿ ಹೇಗಿದೆ? ಸ್ಮಾರ್ಟ್‌ಬೇಲಿಯ ತಂತ್ರಜ್ಞಾನ ಹಾಗೂ ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಸ್ಮಾರ್ಟ್​ ಬೇಲಿ?

ಏನಿದು ಸ್ಮಾರ್ಟ್​ ಬೇಲಿ?

ಸಮಗ್ರ ಸಂಯೋಜಿತ ಥರ್ಮಲ್ ಇಮೇಜಿಂಗ್, ಇನ್ಪ್ರಾ-ರೆಡ್ ಮತ್ತು ಲೇಸರ್ ಬೀಮ್​ಗಳ ತಡೆಬೇಲಿ ಇದಾಗಿದ್ದು, ಯೋಧರನ್ನು ನಿಯೋಜಿಸಲಾಗದಂತಹ ಕಠಿಣ ಭೌಗೋಳಿಕ ಸನ್ನಿವೇಶ, ಗಿರಿ, ಕಂದರ, ಕೂಡಿದ ಗಡಿ ಪ್ರದೇಶದಲ್ಲಿ ಈ ಬೇಲಿಯನ್ನು ಅಳವಡಿಸಬಹುದಾಗಿದೆ. ಇದು ಇತ್ತೀಚಿನ ಅತ್ಯುತ್ತಮ ತಂತ್ರಜ್ಞಾನದ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ.

ಸ್ಮಾರ್ಟ್‌ಬೇಲಿ ಉದ್ದೇಶ ಏನು?

ಸ್ಮಾರ್ಟ್‌ಬೇಲಿ ಉದ್ದೇಶ ಏನು?

ಗಡಿಯನ್ನು ದಾಟಿ ದೇಶಕ್ಕೆ ಕಾಲಿಡುವ ಉಗ್ರರ ಜೊತೆಗೆ ಮಾದಕ ವಸ್ತು ಸಾಗಾಣಿಕೆದಾರರು, ನಕಲಿ ನೋಟು ಜಾಲಗಳನ್ನು ನಿರ್ನಾಮಗೊಳಿಸುವ ಉದ್ದೇಶದಿಂದ ಈ ಸ್ಮಾರ್ಟ್‌ಬೇಲಿ ತಯಾರಾಗಿದೆ. ಭೂಗತ ಸುರಂಗಗಳನ್ನು ಕೊರೆದು, ನೀರಿನಲ್ಲಿ ಭಾರತವನ್ನು ಪ್ರವೇಶಿಸುವವರನ್ನು ಕುಳಿತಲ್ಲಿಯೇ ಕಂಡುಹಿಡಿಯಲು ಈ ಬೇಲಿಯನ್ನು ತಯಾರಿಸಿ ಅಳವಡಿಸಲಾಗುತ್ತಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?

ಹೇಗೆ ಕಾರ್ಯನಿರ್ವಹಿಸುತ್ತದೆ?

ಎಂಟು ದಿಕ್ಕುಗಳಲ್ಲಿಯೂ ವ್ಯಕ್ತಿಗಳ ಚಲನೆ ಗ್ರಹಿಸುವ ವಿಕಿರಣ ಸಾಧನಗಳು, ಭೂಗತ ಸೆನ್ಸರ್ ಗಳು, ಫೈಬರ್ ಆಪ್ಟಿಕಲ್ ಸೆನ್ಸರ್, ರಾಡಾರ್, ಸೋನಾರ್, ಅಲಾರಾಂ ವ್ಯವಸ್ಥೆಯಂತಹ ಉಪಕರಣಗಳನ್ನು ಈ ಸ್ಮಾರ್ಟ್‌ಬೇಲಿ ಹೊಂದಿದೆ. ಇದು ಒಂದು ಸೊಳ್ಳೆ ದಾಟಿದರೂ ಗ್ರಹಿಸುತ್ತದೆ. ಆದರೆ, ನಿಜವಾದ ಆಪತ್ತನ್ನು ಮಾತ್ರ ಅರಿತು ಎಚ್ಚರಿಕೆಯನ್ನು ನೀಡುತ್ತದೆ.

ಸಿಐಬಿಎಂಎಸ್ ವ್ಯವಸ್ಥೆ

ಸಿಐಬಿಎಂಎಸ್ ವ್ಯವಸ್ಥೆ

ಇದು ಕಾಂಪ್ರಹೆನ್ಸೀವ್ ಇಂಟಗ್ರೇಟೆಡ್ ಬಾರ್ಡರ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಸಿಐಬಿಎಂಎಸ್) ಹೆಸರಿನ ಪ್ರಾಯೋಗಿಕ ವ್ಯವಸ್ಥೆಯಾಗಿದೆ. ಭಾರತ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ತಲಾ 5.5 ಕಿ.ಮೀ ಉದ್ದದಲ್ಲಿ ಲೋಕಾರ್ಪಣೆಯಾಗಿರುವ ಈ 2 ಬೇಲಿಗಳ ತಂತ್ರಜ್ಞಾನವನ್ನು ಸ್ಲೊವೇನಿಯಾದ ಕಂಪೆನಿ ಹಾಗೂ ಭಾರತದ ಕಂಪೆನಿಗಳು ಸೇರಿ ಅಭಿವೃದ್ಧಿ ಪಡಿಸಿವೆ.

ಇದು ಅಗೋಚರ ಬೇಲಿ!

ಇದು ಅಗೋಚರ ಬೇಲಿ!

ಸಮಗ್ರ ಸಂಯೋಜಿತ ಥರ್ಮಲ್ ಇಮೇಜಿಂಗ್, ಇನ್ಪ್ರಾ-ರೆಡ್ ಮತ್ತು ಲೇಸರ್ ಬೀಮ್​ಗಳ ಈ ತಡೆಬೇಲಿ ಅಗೋಚರವಾಗಿದೆ. ಈ ಬೇಲಿಯನ್ನು ಯಾವುದೇ ರೀತಿಯಲ್ಲಿ (ಜಲ, ವಾಯು, ಸುರಂಗ ಮಾರ್ಗ) ಉಲ್ಲಂಘಿಸಲು ಪ್ರಯತ್ನಿಸಿದ ಕೂಡಲೇ ಎಚ್ಚರಿಕೆ ಗಂಟೆ ಮೊಳಗುತ್ತದೆ. ಇದು ಉಗ್ರರಿಗೂ ತಿಳಿಯದಂತೆ ಕೆಲಸ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಹಾಳಾಗದ ಸ್ಮಾರ್ಟ್‌ಬೇಲಿ.!

ಹಾಳಾಗದ ಸ್ಮಾರ್ಟ್‌ಬೇಲಿ.!

ಈಗ ಅಳವಡಿಸಿರುವ ಬೇಲಿಗಳು ನೈಸರ್ಗಿಕ ವಿಕೋಪ ಹಾಗೂ ಇತರೆ ಕಾರಣಗಳಿಂದ ಹಾಳಾಗುತ್ತಲೇ ಇರುತ್ತವೆ. ಇವುಗಳನ್ನು ಪದೇ ಪದೇ ನಿರ್ವಹಣೆ ಮಾಡಲೇಬೇಕಾಗುತ್ತದೆ. ಆದರೆ, ಈಗ ಅಳವಡಿಸಿರುವ ಸ್ಮಾರ್ಟ್‌ಬೇಲಿ ಯಾವುದೇ ಪ್ರಕೃತಿ ವಿಕೋಪಗಳಿಗೆ ಹಾನಿಯಾಗುವುದಿಲ್ಲ. ಒಂದೊಮ್ಮೆ ಹಾನಿಯಾದರೂ ಕ್ಷಣಗಳಲ್ಲಿ ಅದನ್ನು ಸರಿಪಡಿಸಬಹುದಾಗಿದೆ.

2,400 ಕಿ.ಮೀ ಸ್ಮಾರ್ಟ್ ಬೇಲಿ!

2,400 ಕಿ.ಮೀ ಸ್ಮಾರ್ಟ್ ಬೇಲಿ!

ಅಕ್ರಮ ನುಸುಳುಕೋರರನ್ನು ಮತ್ತು ಗಡಿ ದಾಟಿ ಬರುವ ಉಗ್ರರನ್ನು ಸಂಪೂರ್ಣ ಮಟ್ಟ ಹಾಕಲು ಭಾರತ ತನ್ನ ಗಡಿಯಲ್ಲಿ ಒಟ್ಟು 2,400 ಕಿ.ಮೀ ಉದ್ದದ ಈ ಸ್ಮಾರ್ಟ್ ಬೇಲಿ ಅಳವಡಿಸುವುದಾಗಿ ತಿಳಿಸಿದೆ. ಸಿಐಬಿಎಂಎಸ್ ಹೆಸರಿನ ಈ ಪ್ರಾಯೋಗಿಕ ವ್ಯವಸ್ಥೆ ಬ್ರಹ್ಮಪುತ್ರ ನದಿ ತೀರದ ಧುಬ್ರಿಯಲ್ಲಿನ ಗಡಿಭಾಗದ ಅಳವಡಿಸಲಾಗಿದೆ.

Best Mobiles in India

English summary
The two projects, each covering a 5.5 km-border stretch along the International Border in Jammu, are set to get a first-of-a-kind high-tech surveillance system that will create an invisible electronic barrier on land, water and even in air and underground.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X